*"ಸಪ್ಟೆಂಬರ್ 19 SSF ಧ್ವಜ ದಿನ" ಕರ್ನಾಟಕದಲ್ಲಿ 1989 ಸಪ್ಟೆಂಬರ್ 19 ರಂದು SSF ರೂಪುಗೊಂಡಿತು. ಕನ್ನಡ ಮಣ್ಣಿನಲ್ಲಿ SSF ಗೆ 28 ವರ್ಷ ದಾಟಿದೆ. ವಿಧ್ಯಾರ್ಥಿ ಮತ್ತು ಯುವ ಜನತೆಗೆ ಧಾರ್ಮಿಕತೆಯ ಬೆಳಕನ್ನು ನೀಡಿ ಇವರನ್ನು ಇಸ್ಲಾಮಿನ ಪರಂಪರಾಗತ ವಿಶ್ವಾಸದಲ್ಲೆ ನೆಲೆನಿಲ್ಲಿಸಿ, ಸುನ್ನೀ ಆಶಯ ಆದರ್ಶಗಳ ಸಂರಕ್ಷಣೆ ಮತ್ತು ಸಂಸ್ಥಾಪಣೆಗಾಗಿ ಸಮರ ನಡೆಸಿದ ಕ್ರಾಂತಿಕಾರಿ ಸಂಘಟನೆಯಾಗಿದೆ SSF. ಕನ್ನಡ ಮಣ್ಣಿನಲ್ಲಿ 28 ವರ್ಷಗಳ ಕಾರ್ಯಾಚರಣೆಯಲ್ಲಿ ಸಂಘಟನೆಯು ಹಲವು ಕಷ್ಟಗಳನ್ನು ಸಹಿಸಬೇಕಾಗಿ ಬಂದಿದೆ. ಕಳೆದ ಕಾಲಾವಧಿಯನ್ನು ಅವಲೋಕಿಸಿದಾಗ ಇದೊಂದು ದೀರ್ಘಾವಧಿಯ ಹೋರಾಟವೇ ಸರಿ. ಸಂಘಟನೆ,ನಾಯಕರು, ಕಾರ್ಯಕರ್ತರು ಮತ್ತು ಕಾರ್ಯಾಚರಣೆಯ ವಿರುದ್ಧ ಹಲವು ಆರೋಪಗಳು, ನಿಂದನೆಗಳು, ಅಪಹಾಸ್ಯಗಳು, ಟೀಕೆ ವಿಮರ್ಶೆಗಳೆಲ್ಲವೂ ಸಂಘಟನೆಗೆ ಅಗ್ನಿ ಪರೀಕ್ಷೆಯಾಗಿತ್ತು. ಆದರೆ ಇದೆಲ್ಲವನ್ನೂ ಎದೆಗಾರಿಕೆಯಿಂದ ಮೆಟ್ಟಿ ನಿಂತು ಆರೋಪವೆಲ್ಲವನ್ನೂ ಶೂನ್ಯಗೊಳಿಸಿ ಕ್ರಾಂತಿಯುತ ಕಾರ್ಯಾಚರಣೆ ಮೂಲಕ ಸಮೂಹದ ಬ್ರಹತ್ ಯುವ ಶಕ್ತಿಯಾಗಿ SSF ಇವತ್ತು ರೂಪುಗೊಂಡಿದೆ.ಪವಿತ್ರ ಇಸ್ಲಾಮಿನ ನೈಜ ಆಶಯವನ್ನು ಪ್ರಚಾರ ಮಾಡುವುದರೊಂದಿಗೆ ಕಾರ್ಯಕರ್ತರ ಮನಸ್ಸಿನಲ್ಲಿ ಧಾರ್ಮಿಕ ಜಾಗ್ರತಿಯ ನವ ಆವೇಶವನ್ನು ಮೂಡಿಸಿದ್ದು ಸಂಘಟನೆಯ ಆತ್ಮೀಯ ಶಕ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಕರ್ನಾಟಕದ ಉದ್ದಗಲಕ್ಕೂ ಶೈಕ್ಷಣಿಕವಾಗಿಯೂ ಸಾಮಾಜಿಕವಾಗಿಯೂ ಹಲವು ಪರಿವರ್ತನೆಗೆ ನಾಂದಿಯಾಡಿದೆ. ಸಂಘಟನೆಯ ಚರಿತ್ರೆಯಲ್ಲಿ ಇದುವರೆಗೆ ಮಾಡಿದ ಯಾವುದೇ ತೀರ್ಮಾನ ಇಸ್ಲಾಮಿನ ವಿಧಿ ವಿಧಾನಕ್ಕೋ, ಭಾರತೀಯ ಸಂವಿಧಾನಕ್ಕೋ ವಿರುದ್ದವಾಗಿಲ್ಲ. ಇಸ್ಲಾಮಿನ ಆತ್ಮೀಯತೆಗೆ ಸವಾಲಾಗಿ ವಿಶುದ್ದ ಪರಂಪರೆಯನ್ನೇ ಪ್ರಶ್ನಿಸುವ ರೀತಿಯಲ್ಲಿ ಕೆಲವೊಂದು ಸಂಘಟನೆಗಳು ಕಾರ್ಯಾಚರಣೆಗಿಳಿದಾಗ ಇವೆಲ್ಲದರ ವಿರುದ್ಧ ಶಬ್ದವೆತ್ತಿ ಜನರಿಗೆ ಸತ್ಯವನ್ನು ತಿಳಿಸಿಕೊಡುವಲ್ಲಿ SSF ಯಶಸ್ವಿಯಾಗಿದೆ. ಕಾಲೇಜ್ ಕ್ಯಾಂಪಸ್ ಗಳಲ್ಲಿ ಅನಾಚಾರಗಳು ಅಧಿಕವಾದಾಗ, ನೈತಿಕತೆಯು ಮಾಯವಾದಾಗ ವಿಧ್ಯಾರ್ಥಿಗಳನ್ನು ಶಿಸ್ತುಬದ್ಧರನ್ನಾಗಿ ರೂಪೀಕರಿಸಲು ಕ್ಯಾಂಪಸ್ SSF ಸಕ್ರೀಯವಾಗಿ ಕಾರ್ಯಾಚರಿಸುತ್ತಿದೆ. ಸತ್ಯಕ್ಕಾಗಿ ಎಲ್ಲವನ್ನೂ ಸಹಿಸಬೇಕಾಗಿದೆ. ಇನ್ಶಾಅಲ್ಲಾಹ್.. ನಾವು ಎಲ್ಲವನ್ನೂ ಸಹಿಸುವೆವು. ನಾವು ದಾಟಿ ಬಂದ ಹಾದಿಗಳು ಸುಗಮವಾಗಿರಲಿಲ್ಲ. ಆದರೆ ಎಲ್ಲೂ ಯಾರಿಗೂ ತಲೆ ಬಾಗಿಸಲಿಲ್ಲ, ಕಾರಣ ನಮ್ಮ ನೇತ್ರತ್ವ ಅದು ಉಲಮಾ ಸಾದಾತ್ ಗಳು. ಸಾವಿರಾರು ನಿಷ್ಕಲಂಕ ಕಾರ್ಯಕರ್ತರೇ ನಮ್ಮ ಶಕ್ತಿ. ನಾಳೆಗಳ ಸಮರ ಹಾದಿಯಲ್ಲಿ ಒಮ್ಮೆಯೂ ನಾವು ಸೋಲುವವರಲ್ಲ, ಕಾರಣ ನಾವು ಸಾಗುತ್ತಿರುವ ಹಾದಿಯಲ್ಲಿ ಎಷ್ಟು ದೊಡ್ಡ ಅಡೆತಡೆಗಳಿದ್ದರೂ ಅದನ್ನು ಭೇದಿಸಿ ಮುನ್ನುಗ್ಗುವ ಶಕ್ತಿ ನಮಗಿದೆ. ನಮ್ಮ ಕಳೆದ 28 ವರ್ಷಗಳ ಕಾರ್ಯಾಚರಣೆಯುದ್ದಕ್ಕೂ ಸಂಘಟನೆಗಾಗಿ ತ್ಯಾಗ ಮನೋಭಾವದೊಂದಿಗೆ ದುಡಿದ ನಾಯಕರನ್ನು ಕಾರ್ಯಕರ್ತರನ್ನು ಪ್ರಸ್ಥಾನಕ್ಕಾಗಿ ಸರ್ವವನ್ನು ಸಹಿಸಿದ ಎಲ್ಲರಿಗೂ ಅಲ್ಲಾಹು ತಕ್ಕುದಾದ ಪ್ರತಿಫಲವನ್ನು ನೀಡಲಿ, ನಮ್ಮಿಂದ ಅಗಲಿದ ನಾಯಕರು, ಕಾರ್ಯಕರ್ತರಿಗೆ ಅಲ್ಲಾಹು ಸ್ವರ್ಗವನ್ನು ನೀಡಲಿ. ನಾಳೆಯ ಸಂಘಟನಾ ಕಾರ್ಯಾಚರಣೆ ಮತ್ತಷ್ಟು ಶಕ್ತಿಗೊಳಿಸುವ ಇನ್ಶಾಅಲ್ಲಾಹ್...... ಅಲ್ಲಾಹು ತೌಫೀಕ್ ನೀಡಲಿ. ಎಂಬ ಪ್ರಾರ್ಥನೆಗಳೊಂದಿಗೆ ಸರ್ವರಿಗೂ SSF ಧ್ವಜ ದಿನದ ಧರ್ಮ ಜಾಗ್ರತಿಯ ಅಭಿನಂದನೆಗಳು by✍ ಮುಹಮ್ಮದ್ ಅಲಿ ತುರ್ಕಳಿಕೆ (ಕಾರ್ಯದರ್ಶಿ SSF ದ.ಕನ್ನಡ ಜಿಲ್ಲೆ)*
ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...
Comments