ಅಲ್ಲಾಹನ ಸಿಂಹ ಹಂಝತ್ ಇಬ್ನು ಅಬ್ದುಲ್ ಮುತ್ತಲೀಬ್ (ರ.ಅ) ಚರಿತ್ರೆಯ ಪುಟಗಳಿಂದ
ಕಾಬಾಲಯದ ಕೆಳಗೆ ಕುರೈಶಿ ಪ್ರಮುಖರು ಕುಳಿತುಕೊಂಡಿದ್ದಾರೆ.. ಅಬೂಜಹಲ್ (ಲ.ಅ) ಆಗಿದ್ದ ಅಲ್ಲಿ ಸೇರಿದ್ದ ಸಧಸ್ಯರ ನಾಯಕ.. ಅವರ ಅಂದಿನ ಚರ್ಚಾ ವಿಷಯ ಹೊಸಾ ಪ್ರವಾದಿ ಮತ್ತು ಅವರ ಪ್ರಭೋದನೆಯಾಗಿತ್ತು.. ಊರನ್ನು ಬಾಧಿಸಿದ ಹೊಸಾ ವಿಪ್ಲವದ ಭಯಾನಕತೆಯ ಕುರಿತು ಅವರು ಆಳವಾಗಿ ಮಾತನಾಡುತ್ತಿದ್ದರು.. ಹಂಝ(ರ.ಅ) ಇದನ್ನು ಕೇಳುತ್ತಾ ಅಲ್ಲೇ ಸಮೀಪದಲ್ಲಿ ಕುಳಿತುಕೊಂಡಿದ್ದರು.. ಅಬೂಜಲ್(ಲ.ಅ) ಹಂಝ (ರ.ಅ)ರವರ ಮುಖದತ್ತ ನೋಡಿ ಹೀಗೆಂದ: "ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಈ ಪ್ರವರ್ತನೆಯಿಂದ ಉಂಟಾಗುವ ಆಪತ್ತು ಹಂಝ (ರ.ಅ)ರವರು ತಿಳಿಯದಿರುವುದಾಗಿದೆಯಾ! ಸಹೋದರನ ಮಗನಿಗೆ ಅಧಿಕಾರ ಸಿಕ್ಕುವುದನ್ನು ಕಾಯುತ್ತಿರಬಹುದಾಗಿರಬಹುದು"
ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಈ ದೌತ್ಯವೂ ಅಪತ್ತಾಗಿದೆಯಾ. ಆಗಿರಬಹುದು.. ಆದರೂ ಆ ದೌತ್ಯವೂ ಸತ್ಯವಾಗಿದೆ.. ಮುಹಮ್ಮದ್ ಸಲ್ಲಲ್ಲಾಹು ಅಲೈವಸಲ್ಲಮರು ಕಳ್ಳನಾಗಲು ಸಾಧ್ಯವಿಲ್ಲ.. ಆ ಜೀವನದಲ್ಲಿ ಕಳಂಕದ ಒಂದಂಶವು ಕಾಣಲು ಸಾಧ್ಯವಾಗಿಲ್ಲ..ಸೂರ್ಯನ ಕಿರಣಗಳಂತೆ ಅದು ಪರಿಶುದ್ದವಾಗಿದೆ.. ಜೀವನದಲ್ಲಿ ಒಮ್ಮೆಯಾದರೂ ತಮಾಷೆಗಾಗಿ ಕೂಡ ಸುಳ್ಳನ್ನು ನುಡಿಯದ ಮನುಷ್ಯನಲ್ಲಿ ವಿಶ್ವಾಸವಿಡದಿರುವುದಾದರೂ ಹೇಗೆ! ಹಂಝ(ರ.ಅ) ದಿನಾಲೂ ಯೋಚನಾಮಗ್ನರಾಗುತ್ತಿದ್ದರು..
ಹಂಝ(ರ.ಅ) ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಚಿಕ್ಕಪ್ಪನವರಾದರೂ ಸಹೋದರರಂತೆ ಬೆಳೆದದ್ದು.. ಒಂದಾಗಿ ಆಡುತ್ತಾ.. ಜೊತೆಯಾಗಿ ಬೆಳೆದರು.. ಚಿಕ್ಕವರಿರುವಾಗಲೇ ತನ್ನ ಸಹೋದರನ ಪುತ್ರನಿಗೆ ಇದ್ದ ಪ್ರಾಪ್ತಿಯು, ಪಕ್ವತೆಯು ಹಂಝ(ರ.ಅ) ತಿಳಿದುಕೊಂಡಿದ್ದರು.. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಚಿಂತೆಯೂ, ಪ್ರವರ್ತಿಯೂ ದೈವೀಕಾ ಸಾನಿಧ್ಯದತ್ತವಿರುವ ಆತ್ಮೀಯ ಪ್ರಕಾಶವು ದಾರಿ ತೋರಿಸುವ ವಿದಧಲ್ಲಿ ಮುಂದೆ ಸಾಗಿದಾಗ, ಹಂಝ (ರ.ಅ)ಕುರೈಶಿ ಪ್ರಮುಖರು ಮತ್ತು ನಾಯಕರುಗಳ ಮಧ್ಯೆ ಉನ್ನತ ಸ್ಥಾನವನ್ನು ಪಡೆದಿದ್ದರು. ಪರಿಶುದ್ದವಾದ ಒಂದು ಜೀವನ ಶೈಲಿಯನ್ನಾಗಿತ್ತು ಬಯಸುತ್ತಿದ್ದದ್ದು.. ಇಬ್ಬರ ಯವ್ವೌನವೂ ವಿಭಿನ್ನ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾದರೂ ಹಂಝ(ರ.ಅ) ತನ್ನ ಸಹೋದನ ಪುತ್ರನ ಮಹತ್ವವನ್ನು ಸರಿಯಾಗಿಯು ಅರ್ಥ ಮಾಡಿಕೊಂಡಿದ್ದರು..
ಬಾರಿ ನಿಪುಣತೆಯನ್ನು ಪಡೆದ ಬೇಟೆಗಾರರಾಗಿದ್ದರು ಹಂಝ(ರ.ಅ).. ಒಂದು ದಿವಸ ಬಿಲ್ಲು ಬಾಣಗಳನ್ನು ಹೊತ್ತು ಹೊರಟರು.. ಮರುಭೂಮಿಯಲ್ಲಿ ಬೇಟೆಯಾಡುತ್ತಾ ದಿವಸಗಳನ್ನು ಕಳೆದು ಅವರು ಊರಿನತ್ತ ಮರಳಿದರು.. ಮನೆ ತಲುಪುವುದಕ್ಕಿಂತ ಮೊದಲು ಕಾಬಾಲಯದ ಹತ್ತಿರ ಹೋಗಿ ತವಾಫ್ ನಿರ್ವಹಿಸಿ ನಂತರ ಮನೆಯನ್ನು ಪ್ರವೇಶಿಸಿದರಾಯಿತು ಎಂದು ಭಾವಿಸಿ ಕಾಬಾಲಯದತ್ತ ಹೆಜ್ಜೆ ಹಾಕಿದರು.. ಕಾಬಾಲಯದ ಸಮೀಪ ತಲುಪಿದಾಗ ಅಬ್ದುಲ್ಲಾ ಇಬ್ನು ಜದುಹನಾ ಮಡದಿ ಹಂಝ(ರ.ಅ)ರವರಲ್ಲಿ ಹೀಗೆಂದಳು: "ನಿನ್ನ ಸಹೋದರನ ಮಗ ಮುಹಮ್ಮದ್ ಸಲ್ಲಲ್ಲಾಹು ಅಲೈವಸಲ್ಲಮರೊಂದಿಗೆ ನಿನ್ನ ಗೆಳೆಯ ಅಬೂಜಹಲ್(ಲ.ಅ) ಅವರಿಗೆ ತುಂಬಾ ಕಿರುಕುಳಗಳನ್ನು ನೀಡಿದ ಇಲ್ಲಿ! ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಸುಮ್ಮನೆ ಅಲ್ಲಿ ಕುಳಿತುಕೊಂಡಿದ್ದರು ಪಾಪ, ಮರ್ಧನೆಯೂ, ಬೈಗುಳವೂ" ಇದು ಕೇಳಿದ ಹಂಝ(ರ.ಅ)ರವರ ಬಿಸಿ ರಕ್ತವು ಕುದಿಯತೊಡಗಿತು. ಅವರು ತೋಳನ್ನೊಮ್ಮೆ ಕೊಡವಿಕೊಳ್ಳುತ್ತಾ ಎದ್ದು ನಿಂತರು.. ತನ್ನ ಬಿಲ್ಲು ಮತ್ತು ಬಾಣವನ್ನು ತಮ್ಮ ಬೆನ್ನ ಹಿಂದೆ ತೂಗು ಹಾಕಿ ಮುಂದೆ ನಡೆಯತೊಡಗಿದರು.. ಅಬೂಜಹಲ್(ಲ.ಅ)ಯನ್ನು ಹುಡುಕತೊಡಗಿದರು.. ಅವನು ಕುರೈಶಿ ಪ್ರಮುಖರೊಂದಿಗೆ ಕಾಬಾಲಯದ ಹತ್ತಿರನೇ ತನ್ನ ವಾಸಸ್ಥಳದ ಹೊರಗೆ ಕುಳಿತಿದ್ದ ಆವಾಗ.. ಹಂಝ (ರ.ಅ) ತಮ್ಮ ಹೆಗಲಿನಲ್ಲಿದ್ದ ಬಿಲ್ಲನ್ನು ತೆಗೆದು ಅಬೂಜಹಲ(ಲ.ಅ)ನ ತಲೆಗೆ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಒಂದೇಟು ಕೊಟ್ಟರು.. ಸಭೆಯಲ್ಲಿದ್ದವರೆಲ್ಲರೂ ಸ್ತಂಭಿತರಾದರು.. ಹಂಝ(ರ.ಅ) ಕೋಪದಿಂದ ಬೊಬ್ಬಿಡುತ್ತಾ ಕೇಳಿದರು "ಮುಹಮ್ಮದ್ ಸಲ್ಲಲ್ಲಾಹು ಅಲೈವಸಲ್ಲಮರನ್ನು ಅಕ್ರಮಿಸುವಷ್ಟು ಎತ್ತರಕ್ಕೆ ನೀನು ಬೆಳೆದಿಯಾ. ಅದನ್ನೋಮ್ಮೆ ನನಗೆ ನೋಡಬೇಕು.. ನಾನು ಕೂಡ ಅವರ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ನಿನ್ನಿಂದೇನು ಮಾಡಲು ಸಾಧ್ಯ"
ಅಬೂಜಹಲ್(ಲ.ಅ)ಯ ತೆಲೆಯಿಂದ ರಕ್ತ ಸೊರುತ್ತಿದ್ದರೂ ಅಲ್ಲಿ ನೆರೆದಿದ್ದವರನ್ನು ಆಶ್ಚರ್ಯಚಕಿತಗೊಳಿಸಿದ್ದು ಹಂಝ(ರ.ಅ)ರವರ ಪ್ರಖ್ಯಾಪನವಾಗಿತ್ತು.. "ನಾನೂ ಅವನ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ".. ಹಂಝ (ರ.ಅ) ಮುಸ್ಲೀಮರಾಗುತ್ತಾರ. ಹಂಝ(ರ.ಅ)ವಿನಂತವರು ಮುಹಮ್ಮದ್ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಸಹಾಯಿಗಳಾಗಿ ಸಿಕ್ಕಿದರೆ, ಕುರೈಶಿಗಳಿಗೆ ಅದನ್ನು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ.. ಅಲ್ಲಿಂದ ತನ್ನ ಬಿಲ್ಲು,ಬಾಣವನ್ನು ಎತ್ತಿಕೊಂಡು ಹಂಝ(ರ.ಅ) ಮನೆಯತ್ತ ನಡೆದರು.
ಚಿಂತಾಶೀಲನೂ, ಬುದ್ದಿವಂತನೂ ಆಗಿದ್ದ ಹಂಝ (ರ.ಅ)ರವರು.. ಪ್ರಸ್ತುಶಃ ಸಂಭವದ ಕುರಿತು ಚಿಂತಾಮಗ್ನರಾದರು.. ಕಳೆದ ಸಂಭವವು ಅವರನ್ನು ಬಲವಾಗಿ ಕಾಡತೊಡಗಿತ್ತು..
ಮುಹಮ್ಮದ್ ಸಲ್ಲಲ್ಲಾಹು ಅಲೈವಸಲಮರ ಧರ್ಮ ಅದು ಸತ್ಯವಾಗಿದೆ.. ಆದರೆ ಪಾರಂಪರ್ಯವಾಗಿ ಆಚರಿಸಿಕೊಂಡು ಬರುತ್ತಿರುವ ನಮ್ಮ ಪೂರ್ವಿಕರ ವಿಶ್ವಾಸವನ್ನು ಕೈ ಬಿಡುವುದಾದರೂ ಹೇಗೆ. ಪರಿಶುದ್ದ ಕಾಬಾಲಯ ಅಲ್ಲಿ ಪ್ರತಿಷ್ಠಾಪಿಸಿರುವ ದೇವರುಗಳು. ಎಲ್ಲವನ್ನೂ ಉಪೇಕ್ಷಿಸಿ ಬರಬೇಕಲ್ವ ಎಂದು ನೆನೆಸಿದಾಗ ಅವರು ಒಮ್ಮೆ ಬೆಚ್ಚಿದರು.. ಆದರೆ ತನಗೆ ಸತ್ಯವೆಂದು ಮನದಟ್ಟಾದ ಒಂದು ಧರ್ಮಕ್ಕಾಗಿಯಲ್ಲವೇ ಎಂದು ಅಲೋಚಿಸಿದಾಗ ಅವರ ಮನಸ್ಸಿಗೆ ಸಮಾಧಾನವಾಯಿತು.. ಇದರ ಕುರಿತು ಹಂಝ (ರ.ಅ) ಒಮ್ಮೆ ಹೇಳಿದರು: *"ನನ್ನ ಜನತೆಯ, ಪೂರ್ವಿಕರ ಧರ್ಮವನ್ನು ತೊರೆದಾಗ ನನಗೆ ಅತೀವಾ ದುಖವುಂಟಾಯಿತು.. ಒಂಚೂರು ಕಣ್ಣು ಮುಚ್ಚದೆ ಸಂಶಯಗಳ ಅಲೆಗಳಲ್ಲಿ ತೇಲಾಡುತ್ತಾ ನಾನು ಹಲವು ಹಗಲು ರಾತ್ರಿಗಳನ್ನು ಕಳೆದೆ.. ನನ್ನ ಸಂಶಯಗಳನ್ನು ನಿವಾರಿಸಿಕೊಡಲು ಮತ್ತು ಸತ್ಯವಿಶ್ವಾಸದಲ್ಲಿ ನನ್ನ ಮನಸ್ಸನ್ನು ದೃಡಪಡಿಸಲು ಕಾಬಾಲಯದ ಹತ್ತಿರ ಹೋಗಿ ಅಲ್ಲಾಹನಲ್ಲಿ ಪ್ರಾರ್ಥಿಸಿದೆ..
"ಆ ನಂತರ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಹತ್ತಿರಕ್ಕೆ ತೆರಳಿದೆ.. ನನ್ನ ಮಾನಸಿಕಾವಸ್ಥೆಯ ಕುರಿತು ಅವರಿಗೆ ವಿವರಿಸಿದೆ.. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ನನಗಾಗಿ ಪ್ರಾರ್ಥಿಸಿದರು.. ಅಲ್ಲಾಹನು ಪ್ರಾರ್ಥನೆಯನ್ನು ಸ್ವೀಕರಿಸಿದನು.. ಹೀಗೆ ನನಗೆ ವಿಶ್ವಾಸದಲ್ಲಿ ದೃಡತೆಯು ಮೂಡಿತು."
ಹಂಝ(ರ.ಅ) ಪರಿಪೂರ್ಣ ಮುಸ್ಲೀಮರಾಗಿದ್ದರು.. ನೆಬಿ ಸಲ್ಲಲ್ಲಾಹು ಅಲೈವಸಲ್ಲಮರಿಗೂ ಅಲ್ಲಿನ ನಿಸ್ಸಾಹಾಯಕರಾದ ಅನುಯಾಯಿಗಳಿಗೂ ಅವರು ದೊಡ್ಡ ಸಹಾಯಿಯಾಗಿ ಬದಲಾದರು.. ಮುಸ್ಲೀಮರ ನಡುವೆ ಹಂಝ(ರ.ಅ)ರನ್ನು ಕಾಣುವುದು ಅಬೂಜಹಲನಿಗೆ ಸಹಿಸಲಾಗುತ್ತಿರಲಿಲ್ಲ.. ಅವನು ಕುರೈಶಿಗಳನ್ನು ಸಧಾ ಅಕ್ರಮಣಕ್ಕಾಗಿ ಪ್ರರೇಪಿಸುತ್ತಿದ್ದ.. ಎಲ್ಲಾ ಅಕ್ರಮಗಳನ್ನು ಮೆಟ್ಟಿ ನಿಲ್ಲಲು ಹಂಝ(ರ.ಅ)ರಿಗೆ ಸ್ವಾಭಾವಿಕವಾಗಿ ಸಾಧ್ಯವಾಗಲಿಲ್ಲ...
ಆದರೂ ಅವರ ಮತ್ತು ಉಮರ್ (ರ.ಅ)ರವರ ಇಸ್ಲಾಮ್ ಧರ್ಮ ಸ್ವೀಕಾರದ ನಂತರ ಬಲಹೀನರಾದ ಮುಸ್ಲಿಮರಿಗೆ ಸ್ವಲ್ಪ ಆಶ್ವಾಸನೆಯು ಲಭಿಸಿತ್ತು.. ಹಂಝ(ರ.ಅ)ತನ್ನ ಎಲ್ಲಾ ಸಾಮರ್ಥ್ಯವನ್ನು ಇಸ್ಲಾಮಿಗಾಗಿ ನಿಯೋಗಿಸಿದರು. "ಅಲ್ಲಾಹಸನ ಸಿಂಹ ಎಂಬ ಬಿರುದನ್ನು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಅವರಿಗೆ ನೀಡಿದರು...
ಬದ್ರ್ ಯುದ್ದದಲ್ಲಿ ಇನ್ನಿಲ್ಲದಂತೆ ನೆಲಕಚ್ಚಿದ ಕುರೈಶಿಗಳು ಮಕ್ಕಾದತ್ತ ಮರಳಿದರು.. ಅವರ ಹಲವು ನಾಯಕರು ಆ ಯುದ್ದದಲ್ಲಿ ಕೊಲ್ಲಲ್ಪಟ್ಟಿದ್ದರು.. ಅಬೂಜಹಲ್, ಉತ್'ಬತ್ತ್, ಉಕ್ಬತ್ತ್, ಸೈಬತ್ತ್, ಉಮಯ್ಯತ್ತ್, ವಲೀದ್..... ಇವರೆಲ್ಲರನ್ನೂ ಮಕ್ಕಾ ಕುರೈಶಿಗಳು ಕಳೆದುಕೊಂಡಿದ್ದರು..
ಅಬೂ ಸೂಪಿಯಾನ್ ಪ್ರತಿಕಾರದ ಜ್ವಾಲೆಯನ್ನು ಮಕ್ಕಾದಲ್ಲಿ ಹೊತ್ತಿಸಿ ಬಿಟ್ಟಿದ್ದ.. ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಮತ್ತು ಹಂಝ(ರ.ಅ)ರವರ ಕಥೆಯನ್ನು ಮುಗಿಸಬೇಕು!. ಬದ್ರ್ ರಣರಂಗದಲ್ಲಿ ಹಂಝ(ರ.ಅ) ರವರು ತೋರಿಸಿದ ಪರಾಕ್ರಮವು ಕುರೈಶಿಗಳ ನಿದ್ದೆಯನ್ನು ಕೆಡಿಸಿತ್ತು.. ಕುರೈಶಿಗಳು ತಮ್ಮಲ್ಲಿದ್ದ ಎಲ್ಲಾ ಶಕ್ತಿಯನ್ನು ಒಂದುಗೂಡಿಸಿದರು.. ಮುಂದಿನ ವರುಷ ಮದೀನಾ ನಗರವನ್ನು ಗುರಿಯಾಗಿಸಿಕೊಂಡು ಹೊರಡಲು ತೀರ್ಮಾನಿಸಿದರು..
ಹಂಝ(ರ.ಅ) ಕಥೆಯನ್ನು ಮುಗಿಸಲು ಜುಬೈರ್ ಇಬ್ನು ಮುತ್'ಹೀಮನ ಗುಲಾಮನಾದ ವಹ್ಸೀಗೆ ವಹಿಸಿಕೊಟ್ಟರು.. ಜುಬೈರನ ಚಿಕ್ಕಪ್ಪನನ್ನು ಬದ್ರ್ ಯುದ್ದ ಭೂಮಿಯಲ್ಲಿ ಕೊಂದದ್ದು ಹಂಝ(ರ.ಅ) ರವರಾಗಿದ್ದರು.. ಹಂಝ(ರ.ಅ) ರವರನ್ನು ವಧಿಸಿದರೆ ನಿನ್ನನ್ನು ನಾನು ಸ್ವತಂತ್ರಗೊಳಿಸುವೆನು ಎಂದು ಜುಬೈರ್ ವಹ್ಸೀಯ ಹತ್ತಿರ ವಾಗ್ದಾನ ಮಾಡಿದ.. ಅಬೂ ಸೂಫಿಯಾನನ ಮಡದಿ ಹಿಂದ್'ಳಿಗೆ ತಂದೆ, ಚಿಕ್ಕಪ್ಪ, ಸಹೋದರ, ಸಹೋದರ ಪುತ್ರ ಇವರೆಲ್ಲರನ್ನೂ ಬದ್ರ್ ಭೂಮಿಯಲ್ಲಿ ವಧಿಸಲ್ಪಟ್ಟಿದ್ದರು.. ಇವರಲ್ಲಿ ಹಲವರನ್ನು ಎದುರಿಸಿದ್ದು ಹಂಝ(ರ.ಅ)ರವರಾಗಿದ್ದರು.. ಪ್ರತಿಕಾರದಿಂದ ಅಂಧಳಾದ ಆ ಹೆಣ್ಣು ವಹ್ಸೀಯನ್ನು ಕರೆದು ತನ್ನ ರತ್ನಾಭರಣಗಳನ್ನು ತೋರಿಸುತ್ತಾ ಹೇಳಿದಳು: "ನೋಡು, ನೀನು ಹಂಝ (ರ.ಅ)ರವರನ್ನು ಕೊಂದರೆ ಈ ಕಾಣುತ್ತಿರುವ ರತ್ನಾಭರಣಗಳೆಲ್ಲವನ್ನೂ ನಾನು ನಿನಗೆ ಕಾಣಿಕೆಯಾಗಿ ಕೊಡುತ್ತೇನೆ"
ಹೋ, ಅಮೂಲ್ಯವಾದ ಪ್ರತಿಫಲ ಸ್ವಾತಂತ್ರ್ಯ ವಹ್ಸೀ ಸಂತೋಷದಿಂದ ಕುಣಿದು ಕುಪ್ಪಳಿಸಿದ.. ಉಹ್ದ್ ರಣರಂಗವು ಬಿಸಿರಕ್ತಗಳಿಂದ ಅಭಿಷೇಕ ಮಾಡಲ್ಪಟ್ಟಿತ್ತು.. ಶತ್ರುಗಳು ಪರಾಜಯದ ಹಾದಿಯತ್ತ ತಲುಪಿದರು, ಮುಸ್ಲೀಮರು ವಿಜಯದ ಹಾದಿಯತ್ತವೂ
ಉಹ್ದ್ ಪರ್ವತದ ಶಿಖರದಲ್ಲಿ ನಿಲ್ಲಿಸಿದ್ದ ಸೈನಿಕರು ನೆಬಿ ಸಲ್ಲಲ್ಲಾಹು ಅಲೈವಸಲ್ಲಮರ ಅಜ್ಞೆಯನ್ನು ಉಲ್ಲಂಘಿಸಿದ ಸಮಯ ನೋಡಿ ಶತ್ರುಗಳು ಮುಂದೆ ಬಂದು ಅಕ್ರಮಿಸಿದ್ದರಿಂದ ಯುದ್ದಗತಿಯು ಬದಲಾಯಿತು.. ಮುಸ್ಲೀಮ್ ಸೈನ್ಯಕ್ಕೆ ತಿರುಗೇಟು ಬೀಳತೊಡಗಿತು..
ಪ್ರಸ್ತುಶಃ ಘಟ್ಟದಲ್ಲಿ ಹಂಝ (ರ.ಅ) ತನ್ನ ಎಲ್ಲಾ ಬಲವನ್ನು ಉಪಯೋಗಿಸಿ ಯುದ್ದ ಮಾಡಿದರು.. ಶತ್ರುಗಳ ತಲೆಯನ್ನು ಅವರು ಒಂದೊಂದಾಗಿ ಹೊಡೆದುರುಳಿಸುತ್ತಿದ್ದರು..
ವಹ್ಸೀಯು ಹೇಳುತ್ತಾರೆ:
"ನಾನು ಭರ್ಜಿಯನ್ನು ಎಸೆಯುವುದರಲ್ಲಿ ನಿಪುಣನಾಗಿದ್ದೇನೆ.. ನನ್ನ ಪ್ರಯೋಗವು ಗುರಿ ತಪ್ಪುತ್ತಿರಲಿಲ್ಲ.. ನಾನು ತಕ್ಕ ಸಮಯಕ್ಕಾಗಿ ಕಾದು ಕುಳಿತಿದ್ದೆ.. ಯುದ್ದ ಭೂಮಿಯಲ್ಲಿ ಹಂಝ (ರ.ಅ) ವೀರಾವೇಶದಿಂದ ಹೋರಾಡುತ್ತಿದ್ದರು.. ಅವರನ್ನು ಎದುರಿಸಲು ಯಾರೂ ದೈರ್ಯವನ್ನು ತೋರುತ್ತಿರಲಿಲ್ಲ. ಸಬಹ್ ಇಬ್ನು ಅಬ್ದುಲ್ ಉಸ್ಸಾ ಅವರ ಸಮೀಪಕ್ಕೆ ತೆರಳಿದ.. ಕ್ಷಣಾರ್ಧದಲ್ಲಿಯೇ ಸಹಬನ ತಲೆಯು ನೆಲಕ್ಕುರುಳಿತು.. ನಾನು ಒಂದು ಖರ್ಜೂರದ ಮರದ ಮರೆವಿನಲ್ಲಿ ಹೊಂಚು ಹಾಕುತ್ತಾ ಹಂಝ(ರ.ಅ)ರವರ ಸಮೀಪಕ್ಕೆ ತೆರಳಿದೆ.. ನನ್ನ ಭರ್ಜಿಯನ್ನು ತೆಗೆದು ಬೀಸಿ ಎಸೆದೆ.. ಅದು ಗುರಿ ತಪ್ಪಲಿಲ್ಲ.. ಅದು ಅವರ ನಾಭಿಯ ಮೇಲಿಂದ ಅವರ ಉದರವನ್ನು ಹೊಕ್ಕು ಹಿಂದಿನಿಂದ ಹೊರ ಬಂದಿತು.. ಅವರು ಕೋಪದಿಂದ ನನ್ನ ನೇರಕ್ಕೆ ದುಮುಕಿದರು.. ಆದರೆ ಅಷ್ಟೋತ್ತಿಗಾಗಲೇ ಅವರು ಕೆಳಗೆ ಉರುಳಿ ಬಿದ್ದಾಗಿತ್ತು.. ಹಂಝ(ರ.ಅ) ಅಲ್ಲಿಯೇ ಶಹೀದಾದರು.. ನಾನು ಹತ್ತಿರ ನಡೆದು ಹೋದೆ.. ನನ್ನ ಭರ್ಜಿಯನ್ನು ಬಿದ್ದಲ್ಲಿಂದ ತೆಗೆದುಕೊಂಡು ಟೆಂಟ್ ನ ಹತ್ತಿರ ನಡೆದೆ.. ನನಗೆ ವಹಿಸಿದ ಕೆಲಸವನ್ನು ನಾನು ಯಶಸ್ವಿಯಾಗಿ ಪೂರ್ತಿಕರಿಸಿದ್ದೆ."..
ವಹ್ಸೀ ಆ ನಂತರ ಹೇಳುತ್ತಿದ್ದರು: "ಯಮಾಮ ಯುದ್ದದಲ್ಲಿ ಕಳ್ಳ ಪ್ರವಾದಿಯಾದ ಮುಸೈಲಿಮಾ ಒಂದು ಕೈಯಲ್ಲಿ ತಲವಾರು ಹಿಡಿದು ಮುಸ್ಲೀಮರೊಂದಿಗೆ ಹೊರಾಡುತ್ತಿದ್ದ.. ಉತ್ತಮರಾದ ಹಂಝ(ರ.ಅ)ರವರನ್ನು ಕೊಲ್ಲಲು ಅದೇ ಆಯುಧದಿಂದ ನೀಚನಾದ ಮುಸೈಲಿಮಾನನ್ನು ನಾನು ಎಸೆದು ಕೊಂದೆ." ಉಹ್ದ್ ರಣರಂಗದಲ್ಲಿ ನಾನು ಮಾಡಿದ ಪಾಪಕ್ಕೆ ಇದು ಪ್ರಾಯಶ್ಚಿತವಾಗಿರುತ್ತಿದ್ದರೆ ಎಂದು ನಾನು ಆಗ್ರಹಿಸಿದೆ..
ಪ್ರತಿಕಾರದ ಜ್ವಾಲೆಯಿಂದ ಕುದಿಯುತ್ತಿದ್ದ ಹಿಂದ್ ಕ್ರೂರ ಮೃಗಕ್ಕಿಂತಲೂ ಕ್ರೂರಿಯಾಗಿದ್ದಳು.. ವಹ್ಸೀ ಹಂಝ(ರ.ಅ)ರವರ ಎದೆ ಸೀಳಿ ಕರಳನ್ನು ಕಿತ್ತು ತೆಗದು ಹಿಂದ್ ಳ ಮುಂದೆ ಚಾಚಿದ.. ಅದನ್ನು ಕೈಯಲ್ಲಿಡಿದು ಒಬ್ಬಳು ರಕ್ತರಾಕ್ಷಸಿಯಂತೆ ಹಿಂದ್ ನಾಟ್ಯವಾಡಿದರು! ಅದನ್ನು ಬಾಯಿಯಲ್ಲಿಟ್ಟು ಕಡಿದು ಅಗಿಯುತ್ತಾ ತನ್ನ ಕೋಪವನ್ನು ತೀರಿಸಿದಳು..
ಹಿಂದ್ ಹಾಡಿದರು..
"ಬದ್ರ್ ಯುದ್ದದಲ್ಲಿನ ಪ್ರತಿಕಾರವನ್ನು ತೀರಿಸಿರುವೆನು. ನನ್ನ ಹರಕೆಯನ್ನು ಪೂರ್ತಿಕರಿಸಿರುತ್ತೇನೆ. ವಹ್ಸೀ ನನ್ನ ಹೃದಯವನ್ನು ತಣಿಸಿರುವನು"
ಯುದ್ದವು ಮುಗಿಯಿತು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮ ಮತ್ತು ಅನುಯಾಯಿಗಳು ಪರ್ವತ ಶ್ರೇಣಿಗಳಲ್ಲಿ ರಕ್ತಸಾಕ್ಷಿಗಳ ಮೃತದೇಹವನ್ನು ಹುಡುಕುತ್ತಾ ನಡೆದರು.. ತನ್ನ ಚಿಕ್ಕಪ್ಪರ ಮೃತದೇಹ ವಿಕಾರವಾಗಿ ಮಲಗಿರುವುದನ್ನು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಕಂಡರು.. ಕಣ್ಣೀರನ್ನು ಒರೆಸುತ್ತಾ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು: "ಇಂತಹ ಒಂದು ಆಪತ್ತು ನನಗೆ ಇಲ್ಲಿಯ ತನಕ ಉಂಟಾಗಲಿಲ್ಲ.. ಇದಕ್ಕಿಂತಲೂ ದುಃಖಮಯವಾದ ಒಂದು ಸಂಭವವನ್ನು ನಾನು ಎದುರಿಸಲಿಲ್ಲ.. ಹಂಝ(ರ.ಅ) ರವರ ಸಹೋದರಿ ಸಫಿಯಾ ದುಃಖಿತರಾಗದಿರುತ್ತಿದ್ದರೆ ಈ ಮೃತದೇಹವನ್ನು ನಾನು ವನ್ಯಮೃಗಗಳು ಮತ್ತು ಪಕ್ಷಿಗಳಿಗೆ ಆಹಾರವಾಗಿ ಇಲ್ಲಿಯೇ ಬಿಟ್ಟು ಬಿಡುತ್ತಿದ್ದೆ.. ಯಾವತ್ತಾದರೂ ಒಂದು ದಿನ ನನಗೆ ಕುರೈಶಿಗಳನ್ನು ಸೋಲಿಸಲು ಸಾಧ್ಯವಾದರೆ ಹಂಝ(ರ.ಅ)ರವರಿಗೆ ಬದಲಾಗಿ ಮುವತ್ತು ಜನರನ್ನು ಕೊಂದು ವಿಕೃತಗೊಳಿಸುವೆನು ಇದು ನಿಶ್ಚಯ"
ಸಹಾಬಿಗಳು ಈ ಪ್ರಖ್ಯಾಪನವನ್ನು ಪುನರಾವರ್ತಿಸತೊಡಗಿದರು.. ಆದರೆ, ಇದನ್ನು ತಿದ್ದಿಕೊಳ್ಳುತ್ತಾ ಪರಿಶುದ್ದ ಕುರ್'ಆನನಿನ ವಚನವು ಅವತೀರ್ಣವಾಯಿತು. "ನೀವು ಪ್ರತಿಕಾರವನ್ನು ಮಾಡುವುದಾದರೆ ಅವರು ಮಾಡಿದಂತೆ ನೀವು ಮಾಡಿರಿ, ಕ್ಷಮೆಯನ್ನು ಪಾಲಿಸುವುದಾದರೆ ಕ್ಷಮಿಸುವವರಿಗೆ ನಲ್ಮೆ ಇದೆ.. ನೀವು ಕ್ಷಮೆಯನ್ನು ಪಾಲಿಸಿರಿ, ಅದರ ಪ್ರತಿಫಲವು ಅಲ್ಲಾಹನಿಂದಾಗಿದೆ.. ನೀವು ಅವರನ್ನು ನೆನಸಿ ದುಃಖಿತರಾಗದಿರಿ.. ಶತ್ರುಗಳ ವಂಚನೆಯ ಕುರಿತು ನಿರಾಶರಾಗದಿರಿ.. ಅಲ್ಲಾಹನು ಅವನ ಇಷ್ಟ ದಾಸರೊಂದಿಗಿದ್ದಾನೆ."
ರಕ್ತಸಾಕ್ಷಿಗಳ ಮೃತದೇಹವನ್ನು ಕಫನ್ ಬಟ್ಟೆಯಲ್ಲಿ ಸುತ್ತಲಾಯಿತು.. ಮೊದಲಿಗೆ ಹಂಝ(ರ.ಅ)ರವರ ಮೃತದೇಹವನ್ನು ತೆಗೆದು ಪ್ರಾರ್ಥಿಸಲು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಮುಂದಿಡಲಾಯಿತು.. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಪ್ರಾರ್ಥನೆಗೆ ನೇತೃತ್ವವನ್ನು ನೀಡಿದರು.. ಅದು ಮುಗಿದು ಬೇರೊಬ್ಬ ಶಹೀದರ ಮೃತಶರೀರವನ್ನು ತಂದಿಟ್ಟು ಪ್ರಾರ್ಥಿಸಲಾಯಿತು.. ಅದನ್ನು ಪಕ್ಕದಲ್ಲಿಟ್ಟು ಇನ್ನೋಬ್ಬರ ಮೃತಶರೀರವನ್ನು ತಂಡಿಟ್ಟರು.. ಅದು ಕಳೆದು ಮಗದೊಬ್ಬರು ರಕ್ತಸಾಕ್ಷಿಯವರ ಮೃತದೇಹವನ್ನು ತಂದಿಟ್ಟು ಪ್ರಾರ್ಥಿಸಲಾಯಿತು.. ಹೀಗೆ ಎಪ್ಪತ್ತು ರಕ್ತಸಾಕ್ಷಿಗಳಿಗೆ ಪ್ರತ್ಯೇಕವಾಗಿ ಪ್ರಾರ್ಥಿಸಲಾಯಿತು.. ಆವಾಗಲೆಲ್ಲಾ ಹಂಝ(ರ.ಅ)ರವರ ಮೃತಶರೀರ ಪ್ರಾರ್ಥನಾ ಸ್ಥಳದಲ್ಲಿತ್ತು.. ಶಹೀದರ ಪ್ರತಿಫಲದಲ್ಲಿ ಹಂಝ(ರ.ಅ) ರವರಿಗೆ ಎಪ್ಪತ್ತು ಸಲ ಪ್ರಾರ್ಥನೆ ನಡೆಯಿತು..
ಓರ್ವ ಯೋಧರಂತೆ ಜೀವಿಸಿ ಇಸ್ಲಾಮಿಗಾಗಿ ತನ್ನನ್ನು ತಾನು ಬಲಿಯರ್ಪಿಸಿದ ಹಂಝ(ರ.ಅ) ರವರೊಂದಿಗೆ ಅಲ್ಲಾಹನೂ ನಾಳೆ ಅವನ ಜನ್ನತ್ತುಲ್ ಪಿರ್'ದೌ'ಸಿನಲ್ಲಿ ಒಂದುಗೂಡಿಸಲಿ.. ಆಮೀನ್. ಅಲ್ಲಾಹನು ಸತ್ಕರ್ಮಗಳ ಪುಣ್ಯಫಲವನ್ನು ಎಂದೂ ವ್ಯರ್ಥಗೊಳಿಸುವುದಿಲ್ಲ..
ನಿಮಗಾಗಿ
ಹಸ್ನಾಮೋಳ್.ಕೆ.ಸಿ.ನಗರ
Comments