*ಹಾRiಸ್ಅli ಹಾk@ತ್ತೂR*☮
ಭೂಮಿಯಲ್ಲಿ ಮಾನವ ಉಗಮಗೊಂಡಾಗಲೇ ಮನುಕುಲದ ಆದಿಪಿತ ಪ್ರವಾದಿ ಆದಂ ಅಲೈಹಿಸಲಾಂರ ಮುಖಾಂತರ ಸಕಲಲೋಕ ಸೃಷ್ಟಿಪರಿಪಾಲಕ ಅಲ್ಲಾಹುವಿನ ಆಜ್ಞೆಯಂತೆ ಸ್ಥಾಪಿತಗೊಂಡ ಜೀವನದರ್ಶನ ಪವಿತ್ರ ಇಸ್ಲಾಂ.ಅದರ ಸ್ಥಾಪಕ ಏಕೈಕದೇವ ಅಲ್ಲಾಹು.ಪ್ರವಾದಿಗಳು ಭುವಿಯಲ್ಲಿ ಅದರ ಪ್ರಚಾರಕರು.ಮನುಷ್ಯಕುಲದಲ್ಲಿ ಉನ್ನತರು ಪ್ರವಾದಿಗಳು.ಅಲ್ಲಾಹು ಸರ್ವಶಕ್ತನು ಮನುಕುಲದ ಇಹಪರ ಮೋಕ್ಷಕ್ಕಾಗಿ ನಿರ್ಣಯಿಸಿದ ಧರ್ಮ ಪವಿತ್ರ ಇಸ್ಲಾಂ.
ಮನುಕುಲವು ಸಂಖ್ಯೆಯಲ್ಲಿ ಹೆಚ್ಚಳವಾಗಿ ಭೂಮಿಯ ವಿವಿಧ ಕಡೆಗಳಲ್ಲಿ ಹರಡಿದಾಗ ಆಯಾಯ ಪ್ರದೇಶದ ಪ್ರಕೃತಿಗನುವಾಗಿ ಸ್ವಭಾವ ವ್ಯತ್ಯಾಸಗಳು ದೈಹಿಕ ರಚನೆಗಳು ಬದಲಾವಣೆಗೊಂಡವು.ವಿವಿಧ ಜನಾಂಗಗಳಾಗಿ ಕುಲಗೋತ್ರಗಳಾಗಿ ಮನುಷ್ಯರು ಗುರುತಿಸಲಾರಂಭಿಸಿದರು.ಅವರ ನಡುವೆ ಮನುಕುಲದ ಆದಿಸಿದ್ದಾಂತವಾದ ಇಸ್ಲಾಂನ್ನು ಜೀವನದಲ್ಲಿ ಆಚರಿಸಿ ಅನುಷ್ಟಿಸಿಕೊಂಡು ಬರುತ್ತಿದ್ದ ಒಂದು ಪರಂಪರೆಯ ಶೃಂಖಲೆ ಜನವಿಭಾಗ ಅಭೇಧ್ಯವಾಗಿ ನೆಲೆಗೊಂಡು ಮುಂದುವರೆಯಿತು.ಅದರಲ್ಲಿ ಕಾಲಾಂತರಗಳಲ್ಲಿ ಬೇರೆ ಬೇರೆ ಪ್ರವಾದಿಗಳ ಉಗಮವಾಯಿತು.ಅವರ ಏಕೈದೈವ ಮೂಲ ಸಿಧ್ಧಾಂತದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ:ಜನಾಂಗದ ಪ್ರದೇಶದ ವೈವಿಧ್ಯತೆಗಳಿಗೆ ಅನುಗುಣವಾಗಿ ಕೆಲವೊಂದು ಕರ್ಮದಲ್ಲಿ ಶಾಖಾಪರವಾದ ಧರ್ಮಬಧ್ಧ ಭಿನ್ನತೆ ಮಾತ್ರವಿತ್ತು.ಹಾಗೆ ಪ್ರತಿಯೊಂದು ಪ್ರವಾದಿಗಳ ಕಾಲಘಟ್ಟದಲ್ಲಿ ಅವರ ನೈಜ ದೈವಿಕ ದರ್ಶನಗಳಿಗೆ ವಿರುದ್ಧರಾಗಿ ಹೊರಗಡೆಯವರು ಹಾಗು ಒಳಗೆ ಕೆಲವು ಕಪಟಿಗಳು ಇದ್ದರು.ಅವರಿಂದ ಜನರ ಮಧ್ಯೆ ಅನೈಕ್ಯತೆ ಗೊಂದಲ ಸೃಷ್ಟಿಯಾಗ್ತಿತ್ತು.ಸಮಾಜದಲ್ಲಿ ಅಶಾಂತಿ ಉಧ್ಫವಾಗ್ತಿತ್ತು.ಪ್ರವಾದಿಗಳು ಅವುಗಳನ್ನು ಧಾರ್ಮಿಕವಾಗಿ ಬಗೆಹರಿಸಿ ಲೋಕಶಾಂತಿಗಾಗಿ ಜನರ ಇಹಪರ ಮೋಕ್ಷಕ್ಕಾಗಿ ಶತಾಯಗತ ಶ್ರಮಿಸಿ ಧರ್ಮದ ಮಹಾತ್ಮ್ಯತೆಯನ್ನು ಉಳಿಸಿದರು.ಅವರ ಮೂಲಕ ಏಕದೇವನಲ್ಲಿ ನಂಬಿಕೆ ಇರಿಸಿದ ಜನತೆ ವಿಜಯಿಗಳಾದರು.ಕಪಟಿಗಳು ಮತ್ತು ಕೆಲವು ವ್ಯಕ್ತಿಗತ ಸಿಧ್ಧಾಂತವಾದಿಗಳು ಜನರೆಡೆಯಲ್ಲಿ ಧರ್ಮದ ಹೆಸರಿನಲ್ಲಿ ವಿತಂಡವಾದ ತಂದು ಸಾಮುದಾಯಿಕ ಐಕ್ಯತೆಯನ್ನು ಹೊಡೆದರು:ಕಾಲಗರ್ಭದಲ್ಲಿ ಧಾರ್ಮಿಕ ದಿಗ್ಗಜರಾದ ಪಂಡಿತರ ಮುಂದೆ ನಿಲ್ಲಲಾಗದೆ ನಾಮಾವಶೇಷ ವಾದರು.
ಕಾಲಗಳುರುಳಿದಂತೆ ಬಗೆ ಬಗೆಯ ಹೆಸರಿನಲ್ಲಿ ಪುನಃ ಪುನಃ ಪ್ರತ್ಯಕ್ಷರಾದರು.ತಮ್ಮ ಧರ್ಮದ ಹೆಸರಿನ ವಿತಂಡವಾದಗಳಲ್ಲಿದ್ದ ಹಳೆಯ ತೀರ್ಮಾನಗಳಲ್ಲಿ ಬದಲಾವಣೆ ತರುತ್ತಾ ಹೊಸತು ಸೇರಿಸುತ್ತಾ ಕಲಬೆರಕೆ ಮಾಡುತ್ತಾ ಮುಂದುವರೆದರು.
ಈಗಲೂ ಕೂಡ ಅಂಥ ಕಪಟಸಿದ್ದಾಂತಿಗಳು ತಮ್ಮ ಹಳೆಯ ಅಸಹಿಷ್ಣು ಚರಿತ್ರೆಗೆ ಆವರ್ತನೆಯನ್ನು ನೀಡ್ತಾ ಪ್ರತ್ಯಕ್ಷವಾಗಿಯು ಪರೋಕ್ಷವಾಗಿಯು ಇಸ್ಲಾಂಧರ್ಮಕ್ಕೆ ಕಳಂಕ ತರುತ್ತಿದ್ದಾರೆ.ಇಸ್ಲಾಂನ ಪ್ರಾಯೋಗಿಕ ಪರಂಪರಾಗತ ಶೃಂಖಲೆಯಾದ ಅಹ್ಲುಸುನ್ನತ್ ವಲ್ ಜಮಾಅತ್ ಗೆ ಕಟುವಿರೋಧಿಗಳಾಗಿ ಅಶಾಂತಿಯ ವಾಹಕರಾಗಿ ವರ್ತಿಸುತ್ತಿದ್ದಾರೆ.ನರಕಕ್ಕೆ ಸೇರುವ ವಿಭಾಗವಾಗಿ ಹೇಳಲ್ಪಟ್ಟ 72 ನಾಮಧಾರಿ ಗುಂಪುಗಳಲ್ಲಿ ಯಾವುದಾದರೊಂದಕ್ಕೆ ಸೇರಿಕೊಂಡು ಇಸ್ಲಾಂನ ಪಾರಂಪರ್ಯವನ್ನು ಪ್ರಶ್ನೆ ಮಾಡ್ತಾ ಮುಂದುವರೀತಿದ್ದಾರೆ.ಹಾಗಿರುವಾಗ ನೈಜ ಇಸ್ಲಾಂನ ವಾಹಕರಾದ ಸುನ್ನತ್ ಜಮಾಅತ್ ನ ಉಲಮಾಗಳ ಹಾಗು ಅವರ ಧಾರ್ಮಿಕ ಮುನ್ನಡೆಗೆ ಜತೆಗೂಡುವ ಉಮರಾಗಳಿಂದ, ವಿತಂಡ ನೂತನವಾದಿಗಳ ಉಪಟಳಕ್ಕೆ ಆದರ್ಶಪರವಾದ ಕಡಿವಾಣ ಬಿದ್ದಿದೆ.ಇನ್ನು ಮುಂದಕ್ಕೂ ಅಂಥ ಕಡಿವಾಣ ಬಲಗೊಳ್ಳಬೇಕಿದೆ.ದೀನೀ ವಿಶ್ವಾಸದ ಮೇಲೆ ಅದಕ್ಕೆ ಪೂರಕವಾದ ಕರ್ಮಗಳ ಧರ್ಮಬಧ್ಧ ಆಚಾರಗಳಲ್ಲಿ ಐಕ್ಯಗೊಳ್ಳದೇ ಬರೀ ರಾಜಕೀಯದ ಹೆಸರಿನಲ್ಲಿ ಅಥವಾ ಯಾವುದಾದರೊಂದು ನಾಮಧಾರಿ ಗುಂಪಿನ ಹೆಸರಿನಲ್ಲಿ ಗುರುತಿಸಿಕೊಂಡು ಹೊರಡುವಾಗ ಆ ಐಕ್ಯತೆಯ ಕಾಪಟ್ಯವು ಅಲ್ಲಾಹುವಿಗೆ ತಿಳಿಯದ ವಿಷಯವೇ?!ಯಾಕೆ?ಈ ಹೇಸಿಗೆ ಬೂಟಾಟಿಕೆ?!ಧರ್ಮದ ಸಂರಕ್ಷಣೆಯ ಹೆಸರಿನಲ್ಲಿ!!
ಅದರ ಜವಾಬ್ದಾರಿಯನ್ನು ಅಲ್ಲಾಹು ಈ ಭೂಮಿಯಲ್ಲಿ ಸರ್ವಲೋಕಗಳಿಗುಂಟಾಗಲು ಇರುವ ಅಂತ್ಯಕಾಲದವರೆಗೂ ವಹಿಸಿಕೊಂಡಿದ್ದಾನೆ.
ಅದಕ್ಕೆ ಬೇಕಿರುವವರನ್ನು ದೀನೀ ಪರಂಪರೆಯಲ್ಲಿ ಸ್ವತಃ ಅಲ್ಲಾಹು ನಿಯಮಿಸಿ ಕಾರ್ಯಪ್ರವೃತ್ತರನ್ನಾಗಿಸಿ ಇಸ್ಲಾಂ ಎಂಬ ಸತ್ಯದರ್ಶನಕ್ಕೆ ಜೀವಂತಿಕೆ ಮತ್ತು ಗೆಲುವನ್ನು ಉಳಿಸಿಕೊಂಡು ಬಂದಿದ್ದಾನೆ.
ಆ ಜೀವಂತ ಇಸ್ಲಾಂ ಅಹ್ಲುಸುನ್ನತ್ ವಲ್ ಜಮಾಅತ್ ಆಗಿದೆ.ಅದರಲ್ಲಿ ಪರಸ್ಪರ ಗೌರವವಿದೆ.ಅಂಬಿಯಾಗಳ ಔಲಿಯಾಗಳ ಸ್ಮರಣೆಗಳಿವೆ.ಅವರನ್ನು ತವಸ್ಸುಲ್ ಮಾಡಿಕೊಂಡು ಏಕದೇವನಾದ ಅಲ್ಲಾಹುವಿಗೆ ಶರಣಾಗಿ ಸಕಲ ಅನುಗ್ರಹಗಳ ಸಫಲೀಕರಣಕ್ಕೆ ಪಾತ್ರರಾಗುವ ಚೈತನ್ಯವಿದೆ.ಮರಣ ಹೊಂದಿದ ಮಹಾತ್ಮರ ಹೆಸರಿನಲ್ಲಿಯೂ ನಮ್ಮೆಡೆಯಲ್ಲಿ ಬದುಕಿರುವ ಮಹಾತ್ಮರ ಹೆಸರಿನಲ್ಲಿಯೂ ಜನರನ್ನು ಒಗ್ಗೂಡಿಸುವ ಆಧ್ಯಾತ್ಮಿಕ ಸಂಗಮಗಳಿವೆ.ಅಲ್ಲಿ ಜಗದೊಡೆಯನಾದ,ಯಾವತ್ತೂ ಮರಣಿಸದ ಸದಾ ಹಯಾತ್ ಇರುವವನಾದ ಅಲ್ಲಾಹುವನ್ನು ಮತ್ತು ಅವನು ಸೃಷ್ಟಿಸಿ ಸಮಯವಾದಾಗ ಮರಣ ನೀಡಿದ ಸೃಷ್ಟಿಶ್ರೇಷ್ಟರನ್ನು ಪರಿಚಯಿಸಲಾಗ್ತದೆ:ಹಿದಾಯತ್ ಬಲಗೊಳ್ಳುವ ಹಾಗು ಇತರರನ್ನು ಹಿದಾಯತ್ ಗೆ ಆಕರ್ಷಿಸುವ ಸಂದೇಶಗಳ ಪ್ರಚಾರ ಮಾಡಲಾಗ್ತದೆ.ಅದರಲ್ಲಿ ನೀಚ ಐಸಿಸ್ ಇಲ್ಲ;ಗಳಿಗೆಗೆ ಬಣ್ಣ ಬದಲಾಯಿಸುವ ನೂತನವಾದಿ ಜಮ ಮುಜ ತಬ್ಲಾ ಕಾದಿಯಾನಿ ಚೇಗನ್ನೂರಿ ಸೊಳಪಿ ಕಳ್ಳಬಾಬಾ ತರೀಕತ್ ವಗೈರೆಗಳಿಗೆ ಆಸ್ಪದವಿಲ್ಲ.ಹಝ್ರತ್ ಉಮರ್ (ರ)ರು ಮುತ್ತ್ ನಬಿ ಮುಹಮ್ಮದ(ಸಅ)ರಿಂದ ನೇರವಾಗಿ ಕಲಿತ ಇಸ್ಲಾಂನಲ್ಲಿ ಏಕ ಇಮಾಮರ ಹಿಂದೆ ನಿರ್ವಹಿಸಿ ತೋರಿಸಿದ ರಂಝಾನ್ ತಿಂಗಳಲ್ಲಿ ಮಾತ್ರ ಇರುವ ರಾತ್ರಿಯ 20ರಕಅತ್ ತರಾವಿಹ್ ಗೆ 11,8ರಕಡಿತವಿಲ್ಲ.ಇಸ್ಲಾಂನ ಮಹಾತ್ಮರ ಮಕ್ಬರಗಳನ್ನು ನಾಶಮಾಡುವ ಆಕ್ರೋಶವಿಲ್ಲ;ಸ್ವಹಾಬಿಗಳನ್ನು ಪ್ರಶ್ನಿಸಿ ಮೂರ್ಖತನದ ಪರಮಾವಧಿಗೆ ಜನರನ್ನು ತಲುಪಿಸಿ ಈಮಾನನ್ನು ನಷ್ಟಪಡಿಸುವ ದುರುಳರು ಸುನ್ನತ್ ಜಮಾಅತ್ ಎಂಬ ನೈಜ ಇಸ್ಲಾಂನಲ್ಲಿಲ್ಲ.ಹಾಗೆ ಯಾವುದೇ ಗೊಂದಲಗಳಿಲ್ಲ.ಅದು ಸಮಗ್ರ ಸಂಪೂರ್ಣ;.ಕಾರಣ ಕಡ್ಡಾಯ ಕರ್ಮಗಳ ಜತೆ ಸುನ್ನತ್ ಆದ ನಬಿ ಚರ್ಯೆಯನ್ನು ಮೈಗೂಡಿಸಿಕೊಂಡ ಜನ್ನತ್ ಗೆ ಅರ್ಹರಾದ ಆಗ್ರೇಸರಿರುವ ಗುಂಪಾಗಿ ಸ್ವತಃ ಪ್ರವಾದಿ ಮುಹಮ್ಮದ್ (ಸಅ)ರಿಂದ ನಾಮಾಂಕಿತಗೊಂಡ ಸತ್ಯಸರಣಿ
*"ಸುನ್ನತ್ ಜಮಾಅತ್ "*ಅದರ ಅನುಯಾಯಿಗಳು ಮಾತ್ರ ಸ್ವರ್ಗಪ್ರಾಪ್ತಿಗೆ ಅರ್ಹತೆ ಉಳ್ಳವರು ಎಂಬುದಾಗಿ ತಿರುನಬಿಯ ತಿರುನುಡಿ*.
ಅದರ ವಿರುದ್ಧ ಕಿಚ್ಚು ಹಚ್ಚಲು ನೋಡ್ತಾ ಧರ್ಮದ ಹೆಸರಿನಲ್ಲಿ ಪ್ರತ್ಯಕ್ಷರಾದ ವಿತಂಡರು ನಿಜಾರ್ಥದಲ್ಲಿ ಯಾವಾಗಲೂ ಐಕ್ಯತೆಯ ಧ್ವಂಸಕರು.
ಸತ್ಪಥಕ್ಕೆ ಅವರನ್ನೂ ಕರೆಯುತ್ತಾ ಸಂದೇಶ ನೀಡ್ತಿರುವ ಸುನ್ನತ್ ಜಮಾಅತ್ನ ಸರ್ವಪಂಡಿತರಿಗೆ ಸಾತ್ ನೀಡೋಣ.ಅದನ್ನು ಮನಗಾಣದೆ ಕುತರ್ಕಿಗಳಾಗಿ ಮುಂದುವರೆಯುವ ಸಕಲ ನಾಮಧಾರಿಗಳಿಂದ ದೂರ ಇರೋಣ:
ಈಮಾನ್ ಇಹಪರದ ಕಡ್ಡಾಯ ವಿಚಾರ;ಅದು ನಷ್ಟವಾದರೆ ಈ ನಶ್ವರ ಲೋಕದಲ್ಲಿ ದೊಡ್ಡ ರಾಜಮಹಾರಾಜನಾಗಿ ಬದುಕಿಯೂ ಪ್ರಯೋಜನವಿಲ್ಲ.
*ಪಾರತ್ರಿಕ ಮೋಕ್ಷ ಮುಸ್ಲಿಮನ ಅಂತಿಮ ಗುರಿ.ಸುನ್ನತ್ ಜಮಾಅತ್ ಅದಕ್ಕಿರುವ ದಾರಿ.*
*ಅರಿಯದವರು ಕೇಳಿ ಕಲಿಯಿರಿ;ಅರಿತವರು ಹೇಳಿ ಕಲಿಸಿರಿ.*
********************
❣
*ಹಾRiಸ್ಅli ಹಾk@ತ್ತೂR*☮
Comments