Skip to main content

ಇಸ್ಲಾಮಿನಲ್ಲಿ ಸ್ತ್ರೀ.


ನಬಿ(ಸ)ರು ಹೇಳಿದರು: "ಮೊದಲ ಮಗು ಹೆಣ್ಣು ಮಗು ಎನ್ನುವುದು, ವಿವಾಹವಾದ ಸ್ತ್ರೀಯ ಬರ್ಕತ್ ನಲ್ಲಿ ಸೇರಿದ್ದಾಗಿದೆ."

ಅಲ್ಲಾಹು ಹೇಳುತ್ತಾನೆ: "ಅವನು ಉದ್ದೇಶಿಸಿದವರಿಗೆ ಹೆಣ್ಣು ಮಕ್ಕಳನ್ನು ನೀಡುವನು. ಅವನು ಉದ್ದೇಶಿಸಿದವರಿಗೆ ಗಂಡುಮಕ್ಕಳನ್ನೂ ನೀಡುವನು."
ಇಲ್ಲಿ ಮೊದಲು ಹೆಣ್ಣುಮಕ್ಕಳನ್ನಾಗಿದೆ ಅಲ್ಲಾಹು ಆರಂಭಿಸಿದ್ದು.(ಆದ್ದರಿಂದಾಗಿದೆ ಮೊದಲು ಹೆಣ್ಣು ಮಗುವಾಗುವುದು ಬರ್ಕತ್ತಾಗಿದೆ ಎಂದು ಹೇಳಲು ಕಾರಣ).
ನಬಿ(ಸ) ಹೇಳಿದರು: "ಯಾರಿಗಾದರೂ ಹೆಣ್ಣುಮಕ್ಕಳನ್ನು ನೀಡಿದರೆ, ಅವರಿಗೆ ಬೇಕಾದುದನ್ನು ನೀಡಿ ಪೋಷಣೆ ಮಾಡಿದರೆ, ಅವರು(ಹೆಣ್ಣುಮಕ್ಕಳು) ನರಕಕ್ಕೆ ಕಾವಲಾಗುವರು."

*ಹೆಣ್ಣಿಗೆ/ಸ್ತ್ರೀಯರಿಗೆ ಇಸ್ಲಾಂ ನೀಡುವ ಸ್ಥಾನ*
ಹುಟ್ಟಿದ್ದು ಹೆಣ್ಣು ಎಂದು ತಿಳಿದರೆ ಜೀವನೊಡನೆ ಹೂತು ಹಾಕುವ ಕತ್ತಲ ಯುಗಕ್ಕೆ ಆಸರೆಯಾಗಿ ಆಗಮಿಸಿದ್ದಾಗಿದೆ ನಬಿ(ಸ)ರ ಆಗಮನ.
ಅಲ್ಲಿಂದ ಎತ್ತಿಹಿಡಿದ ಇಸ್ಲಾಮಿನ ಮಾನವೀಯ ಮೌಲ್ಯಗಳ ಸಾಕ್ಷಾತ್ಕಾರವಾಗಿದೆ ಅಕ್ರಮಗಳನ್ನು ಇಲ್ಲವಾಗಿಸಿದ್ದು.
ಹೆಣ್ಣುಮಕ್ಕಳಿಗೆ ಸಂರಕ್ಷಣೆ ಮಾಡುವುದು, ಉನ್ನತ ಸ್ಥಾನವನ್ನು ನೀಡಿದ ಧರ್ಮ ಇದ್ದರೆ ಅದು ಇಸ್ಲಾಂ ಧರ್ಮ ಮಾತ್ರವಾಗಿದೆ.

*ಕುಟುಂಬದ ಹೆಣ್ಣುಮಕ್ಕಳನ್ನು ಸಂತೋಷಪಡಿಸಿದರೆ..*
ನಬಿ(ಸ) ಹೇಳಿದರು:
"ಯಾರಾದರೂ ತನ್ನ ಕುಟುಂಬದಲ್ಲಿರುವ ಹೆಣ್ಣು ಮಕ್ಕಳಿಗೆ ಒಂದು ವಸ್ತುವನ್ನು ನೀಡಿ ಅವರ ಹೃದಯ ಸಂತೋಷ ಪಡಿಸಿದರೆ, ಅಲ್ಲಾಹು ಅವನ ಶರೀರವನ್ನು ನರಕಕ್ಕೆ ನಿಷಿದ್ಧಗೊಳಿಸಿದ್ದಾನೆ."
ಇದನ್ನು ವಿವರಿಸಿ ಇಮಾಂ ಗಳು ಹೇಳಿದರು:
"ಏನಾದರೂ ವಸ್ತುಗಳನ್ನು ಅಂಗಡಿಯಿಂದ ಖರೀದಿಸಿದರೆ ಮೊದಲು ಅದನ್ನು ಹೆಣ್ಣುಮಕ್ಕಳಿಗೆ ನೀಡಬೇಕು."
ನಬಿ(ಸ) ಹೇಳಿದರು:
"ಯಾರಾದರೂ ಹೆಣ್ಣು ಮಕ್ಕಳನ್ನು ಸಂತೋಷಪಡಿಸಿದರೆ ನಾಳೆ ಖಿಯಾಮತ್ ದಿನದಲ್ಲಿ ಅವನನ್ನು ಸಂತೋಷಪಡಿಸಲಾಗುವುದು."

*ಸ್ತ್ರೀಗಳೊಂದಿಗಿನ ದಯೆ..*
ಅಲ್ಲಾಹನು ಸ್ತ್ರೀಗಳೊಂದಿಗೆ ಬಹಳ ದೊಡ್ಡ ದಯೆಯಾಗಿದೆ ತೋರಿಸಿದ್ದು.
ನಬಿ(ಸ) ಹೇಳಿದರು: "ಯಾರಾದರೂ ಸ್ತ್ರೀಗಳೊಡನೆ ದಯೆ ತೋರಿಸಿದರೆ, ಅಲ್ಲಾಹನ ಭಯದೊಂದಿಗೆ ಕಣ್ಣೀರಿಟ್ಟವನ ರೀತಿಯಾಗಿದೆ."
"ನೀನು ನಿನ್ನ ಮಕ್ಕಳನ್ನು ಒಂದು ನೋಟ ಬೀರಿದರೆ, ನಿನಗೆ ಒಂದು ಪುಣ್ಯವನ್ನು ದಾಖಲಿಸಲಾಗುವುದು."

*ಹೆಣ್ಣು ಮಗುವಿನ ಜನನವನ್ನು ಸಂತೋಷಪಡುವುದು..*
ಇಮಾಮ್ ಗಳು ಹೇಳುತ್ತಾರೆ:
"ಹೆಣ್ಣು ಮಕ್ಕಳು ಜನಿಸುವಾಗ ಸಂತೋಷಪಡಬೇಕು. ನಬಿ(ಸ)ರ ಕಾಲದಲ್ಲಿ ಹೆಣ್ಣುಮಕ್ಕಳನ್ನು ಜೀವನೊಡನೆ ಹೂತುಹಾಕುವ ನೀಚ ಕೃತ್ಯವನ್ನು ಖಂಡಿಸಲೋಸುಗ. ಆದ್ದರಿಂದ ಹೆಣ್ಣುಮಕ್ಕಳು ಜನಿಸಿದರೆ ದುಃಖ ಪಡುವ ಅವಸ್ಥೆ ಉಂಟಾಗಬಾರದು."
ಈ ಒಂದು ಸಂತೋಷ ನಬಿ(ಸ)ರೊಂದಿಗಿನ ಪ್ರೀತಿಯ ಒಂದು ಭಾಗವಾಗಿದೆ ಎಂದು ನಾವು ಅರಿಯಬೇಕು.

ಸ್ತ್ರೀಯರನ್ನು ಕಸದಂತೆ ಕಾಣುವ ಕೆಲ ಪುರುಷರಿಗೆ ಮೇಲಿನ ಹದೀಸ್ ಗಳು ತಾಕೀತಾಗಿದೆ.
ಹೆಣ್ಣು ಮಕ್ಕಳು ಜನಿಸಿದರೆ ನಿರಾಸೆ ಪಡುವ ಕುಟುಂಬಗಳೂ ಕೂಡಾ ಹೆಣ್ಣುಮಕ್ಕಳ ಮಹತ್ವವನ್ನು ತಿಳಿಯಬೇಕು.
            ✍ *ಇಕ್ಬಾಲ್ ಜಿ.ಕೆ.ಗುಲ್ವಾಡಿ*
🍁🍁🍁🍁🍁🍁🍁🍁🍁🍁
🔹ನಬಿ ﷺ ರವರ ಮೇಲೆ ಒಂದು ಸ್ವಲಾತ್
💫اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله🌹
〰〰〰〰〰〰〰〰〰〰

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...