Skip to main content

ಕೇರಂ ಆಟ ಆಡುವುದರ ಇಸ್ಲಾಮಿನಲ್ಲಿನ ವಿಧಿ ಏನು ಮಲಯಾಳಂ, ✍ *ಇಕ್ಬಾಲ್ ಜಿ.ಕೆ.ಗುಲ್ವಾಡಿ*


ಕೇರಂ ಅಂದರೆ ಏನು?*
ಒಂದು ಹಲಗೆಯಲ್ಲಿ ನಾಲ್ಕು ದ್ವಾರಗಳು. ಅದರ ಮೇಲೆ ನಾಣ್ಯದ ರೀತಿಯಲ್ಲಿರುವ ಕೆಲ ಸಾಧನಗಳು. ಅದನ್ನು ಬೆರಳಿನಿಂದ ಚಲಿಸುವಂತೆ ಮಾಡುವುದು. ಅದು ದ್ವಾರಗಳಲ್ಲಿ ಬೀಳುವುದರ ಅನುಸಾರವಾಗಿ ವಿಜಯ/ಪರಾಜಯಗಳು ಯಾರೆಂದು ತೀರ್ಮಾನಿಸಲಾಗುವುದು.

ಇಮಾಮರು ಸಕಲ ಕಾರ್ಯಗಳಲ್ಲೂ ವಿಧಿ ತೀರ್ಮಾನಗಳನ್ನು ನಿರ್ಧರಿಸಿದಂತೆ ಆಟ-ವಿನೋದ ಗಳಲ್ಲೂ ಕೂಡಾ ಇಸ್ಲಾಮಿಕವಾದ ನಿಯಮಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಅದಕ್ಕೆ ಪವಿತ್ರ ಖುರಾನಿನ ಹದೀಸಿನ ನೆರವು ಅವರಿಗಿದೆ.
ನಬಿﷺ ರವರ ಕಾಲದಲ್ಲಿ ಕೇರಂ ಎಂಬ ಆಟವಿತ್ತಾ ಎಂದು ಕೇಳದಿರಿ..! ಅದಕ್ಕೆ ಸರಿಸಮಾನವಾದ ಆಟವನ್ನು ಹದೀಸ್ ನಲ್ಲಿ ನಿರ್ದಾಕ್ಷಿಣ್ಯವಾಗಿ ನಿಷೇಧಿಸಲಾಗಿದೆ.

ನಬಿﷺ ರವರು ಹೇಳಿದರು,
📚 *قَالَ النَّبِيَّ صَلَّى اللهُ عَلَيْهِ وَسَلَّمَ : «مَنْ لَعِبَ بِالنَّرْدَشِيرِ،فَكَأَنَّمَا صَبَغَ يَدَهُ فِي لَحْمِ خِنْزِيرٍ وَدَمِهِ»*

[ أخرجه مسلم (٢٢٦٠) وأبو داود (٤٩٣٩) وابن ماجَهْ (٣٧٦٣) وأحمد (٥/ ٣٥٢) والبخاري في الأدب المفرد(١٢٧١)]

ಯಾರಾದರೂ  ನರ್ದಶೀರ್ ಆಡಿದರೆ ಅವನು ಹಂದಿಮಾಸಕ್ಕೆ, ಅದರ ರಕ್ತಕ್ಕೆ ಕೈ ಮುಳುಗಿಸಿದವನ ರೀತಿ ಆಗಿದ್ದಾನೆ. (ಮುಸ್ಲಿಂ 2260, ಅಬುದಾವೂದ್ 4939, ಇಬ್ನುಮಾಜ 3763, ಅಹ್ಮದ್ 5/352, ಅದಬುನ್ ಮುಫ್ರದ್ 1271)
ಸಮಾನವಾಗಿ ಬಹಳ ಹದೀಸ್ ಗಳಿದೆ. ಇಬ್ನು ಹಜರುಲ್ ಹೈತಮಿ ಈ ರೀತಿಯ ವಿನೋದಗಳ ಇಸ್ಲಾಮಿಕ್ ವಿಧಿ ಹೇಳಲಿಕ್ಕಾಗಿಯೇ ರಚಿಸಿದ ಕಫ್ಫುರಿಆದಲ್ಲಿ ಹೇಳಿದ್ದಾರೆಂದು ಹಲವಾರು ಹದೀಸ್ ಗಳಲ್ಲಿ ಕಾಣಬಹುದು.

*ನರ್ದಶೀರ್ ಎಂದರೆ ಏನು.?*
📚قَالَ الْعُلَمَاءُ النردشير هو النرد فالنرد عجمي معرب
وشير مَعْنَاهُ حُلو
شرح مسلم ١٥/١٥
ಇಮಾಂ ನವವಿ(ರ) ಹೇಳುತ್ತಾರೆ. ನರ್ದಶೀರ್ ಎಂದು ನರ್ದ್ ನ್ನಾಗಿದೆ ನಬಿﷺ ಹೇಳಿರುವುದು. (ಶರಹುಮುಸ್ಲಿಂ 15/15)

ನರ್ದ್ ವಿವರಿಸುವ ಭಾಷೆ, ಪಂಡಿತ ವಚನಗಳೆಲ್ಲವೂ ಕೇರಂ ಎನ್ನುವುದೇ ಆಗಿದೆ.
📚لعبة ذات صندوق وحجارة وفصَّيْن تعتمد على الحظ وتنقل فيها الحجارة على حسَب ما يأتي به الفص (الزهر) وتعرف عند العامة بالطاولة يُقال: لعب بالنرد
المعجم الوسيط (نرد).

📚لُعْبَةٌ تُعْرَفُ بِلُعْبَةِ الطَّاوِلَةِ أَوْ طَاوِلَةِ الزَّهْرِ وَهِيَ ذَاتُ صُنْدُوقٍ وَحِجَارَةٍ وَفَصَّيْنِ تَعْتَمِدُ عَلَى الْحَظِّ
المعجم الشامل (نرد)
ಪೆಟ್ಟಿಗೆ ಕಲ್ಲುಗಳು ಸರಿಸಿ ಆಡುವ ಆಟ. ಭಾಗ್ಯ ನಿರ್ಭಾಗ್ಯಗಳ ಮೇಲೆ ಅವಲಂಭಿಸುವ ಈ ಆಟಕ್ಕೆ ಡೋಬಿಲ್ ಆಟವೆಂದೂ ಹೇಳುತ್ತಾರೆ.
(ಅಲ್ ಮುಅ್ ಜಮುಲ್ ವಾಸಿತ್, ಅಲ್ ಮುಅ್ ಜಮುಶ್ಶಾಮಿಲ್, ಲಿಸಾನುಲ್ ಅರಬ್)

ಇಬ್ನು ಹಜರ್(ರ) ಹೇಳುತ್ತಾರೆ.
📚وهو حَرامٌ كما نصَّ عليه الشَّافِعِي فِي الأم وجرى عليه أكثَرُ أصحابه واعتمَدَه الشيخان وغيرهما
كف الرعاء ١/١٤٧

ಇಮಾಂ ಶಾಫೀ(ರ) ವ್ಯಕ್ತವಾಗಿ ಹೇಳುತ್ತಾರೆ..
ಈ ಆಟ ನಿಷಿದ್ಧವಾಗಿದೆ. ಅದಾಗಿದೆ ಮುಅ್ ತಮದ್ ಆದ ಅಭಿಪ್ರಾಯವೆಂದು ಇಮಾಂ ರಾಫೀ(ರ) ನವವೀ(ರ) ಹೇಳಿದ್ದಾರೆ. (ಕಫ್ಫುರಿಆಅ್ 1/147)

ಇಮಾಂ ನವವೀ(ರ) ಹೇಳುತ್ತಾರೆ.
📚 قَالَ الْعُلَمَاءُ وَهَذَا الْحَدِيثُ حُجَّةٌ لِلشَّافِعِيِّ وَالْجُمْهُورِ فِي تَحْرِيمِ اللَّعِبِ بِالنَّرْدِ
شرح مسلم
ಈ ಹದೀಸ್ ಪ್ರಸ್ತುತ ಆಟ ನಿಷಿದ್ಧವೆಂದು ಹೇಳಲು ಇಮಾಂ ಶಾಫೀ(ರ) ರವರು ಹಲವರು ಸಾಕ್ಷಿಯಾಗಿಸಿದ್ದಾರೆ.
                _ಇಕ್ಬಾಲ್ ಜಿ.ಕೆ.ಗುಲ್ವಾಡಿ_
*ಸಮುದಾಯವೇ...!? ನಬಿﷺ ನಿಷೇಧಿಸಿದ ಒಂದು ವಿನೋದವನ್ನು ನಾವು ಯಾಕಾಗಿ ಕೈಬಿಡಲು ಹಿಂದೇಟು ಹಾಕಬೇಕು.!?*
ಅಲ್ಲಾಹು ನಮಗೆಲ್ಲರಿಗೂ ನೇರಹಾದಿಯಲ್ಲಿ ಮುನ್ನಡೆಯಲು ತೌಫೀಖ್ ನೀಡಲಿ, ಆಮೀನ್.
🍁🍁🍁🍁🍁🍁🍁🍁🍁🍁
🔹ನಬಿ ﷺ ರವರ ಮೇಲೆ ಸ್ವಲಾತ್.
💫اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله🌹
〰〰〰〰〰〰〰〰〰〰

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...