ಶುಕ್ರವಾರ ಮಸೀದಿಗೆ ಯಾವಾಗ ಹೋಗಬೇಕು
**********************************
ಇಬ್ರಾಹಿಮ್ ಇಬ್ನು ಅದ್ಹಮ್ (ರ) ಪ್ರವಾದಿ (ಸ)ರವರ ಮಾತಿನಂತೆ ಶುಕ್ರವಾರ ಎಲ್ಲರಿಗಿಂತಲೂ ಮಂಚಿತವಾಗಿ ಮಸೀದಿಗೆ ತಲುಪಿದ್ದರು.
ಜುಮಾ ನಮಾಜಿನ ಬಳಿಕ ಮಸೀದಿಯಿಂದ ಹೊರಗಿಳಿಯುವಾಗ ಒಂದು ಅಶರೀರವಾಣಿ ಕೇಳಿಸಿತು.
ಓ ಇಬ್ರಾಹಿಮ್ ... ನಿಮಗಿಂತಲೂ ಮುನ್ನ ಬೇರೊಬ್ಬರು ಮಸೀದಿಗೆ ಬಂದಿದ್ದರು..
ಮುಂದಿನ ಶುಕ್ರವಾರ ಕಳೆದ ಬಾರಿಗಿಂತಲೂ ಮುಂಚಿತವಾಗಿ ಮಸೀದಿಗೆ ತಲುಪಿದರು.
ಅಂದೂ ಕೂಡ ಅಶರೀರವಾಣಿ ಕೇಳಿಸಿತು.
ನಿಮಗಿಂತಲೂ ಮುಂಚೆ ಬೇರೊಬ್ಬರು ಬಂದಿದ್ದಾರೆ.
ಮುಂದಿನ ಶುಕ್ರವಾರ ಬೆಳಗ್ಗೆ ಸುಬಹ್ ನಮಾಜಿನ ನಂತರ ಮನೆಗೆ ಹೋಗದೆ ಅಲ್ಲೇ ಕೂತುಬಿಟ್ಟರು.
ಅಂದು ಕೂಡಾ ಅಶರೀರವಾಣಿ ಕೇಳಿಸಿತು.
ಇವತ್ತೂ ನಿಮಗಿಂತ ಮೊದಲು ಒಬ್ಬರು ಬಂದಿದ್ದರು.
ಆಶ್ಚರ್ಯಚಕಿತರಾದ ಇಬ್ರಾಹಿಂ ಬಿನ್ ಅದ್ಹಂ (ರ) ಅಲ್ಲಾಹನೊಂದಿಗೆ ವಿನಯಾನ್ವಿತರಾಗಿ ಬೇಡಿಕೊಂಡರು.
ಅಲ್ಲಾಹನೇ.. ಅದು ಯಾರೆಂದು ಹೇಳಿದರೆ ಅವರ ತೃಪ್ತಿ ಸಂಪಾದಿಸುವುದರೊಂದಿಗೆ ಅವರಂತೆ ನನಗೂ ಅದೇ ವೇಳೆಯಲ್ಲಿ ಮಸೀದಿಗೆ ಬರಬಹುದು ತಾನೇ..?
ಆಗ ಅಶರೀರವಾಣಿ ಕೇಳಿಸಿತು.
ಬರುವ ಶುಕ್ರವಾರ ಮಸೀದಿಯಿಂದ ಅತ್ಯಂತ ಕೊನೆಯಲ್ಲಿ ಮಸೀದಿಯಿಂದ ಹೊರ ಹೋಗುವವರೊಂದಿಗೆ ಕೇಳಿ ನೋಡಿ.
ಅದರಂತೆ ಮುಂದಿನ ಶುಕ್ರವಾರ ಜುಮಾ ಮುಗಿದ ಬಳಿಕ ಎಲ್ಲರೂ ಹೋಗಿ ಮುಗಿಯುವ ತನಕ ಕಾದು ಕುಳಿತರು.
ಕೊನೆಯಲ್ಲಿ ಹೋಗುವವರನ್ನು ನೋಡಿ ನಿಂತರು.
ಅವಾಗ ವೃದ್ದ ವ್ಯಕ್ತಿಯೊಬ್ಬರು ಮೆಲ್ಲಗೆ ನಡೆಯುತ್ತಾ ಹೊರಗಿಳಿಯುತ್ತಿರುವುದು ಕಂಡಿತು.
ಓಡಿಹೋಗಿ ಅವರೊಂದಿಗೆ ಕೇಳಿದರು.
ಇಂದು ಬೇಗನೇ ಮಸೀದಿಗೆ ಬಂದದ್ದು ಯಾರು..?
ಮಗೂ ನಾನು ನನ್ನ ಬಾಲ್ಯ ಕಾಲದಲ್ಲಿ ಎಲ್ಲರಿಗಿಂತಲೂ ಮೊದನೇಯದಾಗಿ ಮಸೀದಿಗೆ ಬರುತ್ತಿದ್ದೆ ಈಗಲೂ ಬರಬೇಕೆಂಬ ಹಂಬಲವಿದೆ ಆದರೆ.. ಸಾದ್ಯವಾಗುತ್ತಿಲ್ಲ.
ವಯಸ್ಸಾಯಿತು.. ಅಂಗಾಂಗಗಳು ಉದ್ದೇಶಿಸಿದಂತೆ ಬಳಸಲಾಗುತ್ತಿಲ್ಲ.
ಈಗ ಯಾರೆಂದು ನನಗೆ ಗೊತ್ತಿಲ್ಲ.
ಅವರೊಂದಿಗೆ ಪ್ರಾರ್ಥಿಸಲು ಹೇಳಿ ಹೊರಟುಬಿಟ್ಟರು.
ಆವಾಗ ಅಶರೀರವಾಣಿ ಮೊಳಗಿತು.
ಅವರ ಆಗ್ರಹದಂತೆ ಮೊದಲ ಸ್ಥಾನ ಅವರಿಗೇ ನೀಡಬೇಕಾಗಿದೆ.
ನಿಮಗೆ ನೀಡಬೇಕಾದರೆ ಅವರ ವಿಯೋಗ ಬಳಿಕವೇ ಸಾದ್ಯ.
ಆ ತನಕ ನಿಮಗೆ ಎರಡನೇ ಸ್ಥಾನ.
ಪ್ರವಾದಿ(ಸ)ಹೇಳಿದ್ದರು.
ಶುಕ್ರವಾರ ಒಂದನೇಯದಾಗಿ (ಅಂದರೆ 7ರಿಂದ8 ಗಂಟೆಯ ಒಳಗೆ ಬರುವ ಎಲ್ಲರಿಗೂ) ಮಸೀದಿಗೆ ಬರುವವನಿಗೆ ಒಂದು ಒಂಟೆ ದ್ಸಬಹ್ ಮಾಡಿ ದಾನ ನೀಡಿದ ಪ್ರತಿಫಲ ನೀಡಲಾಗುತ್ತದೆ.
ಎರಡನೇಯದಾಗಿ(8 ರಿಂದ 9) ಬರುವವನಿಗೆ ಹಸು,ಎಮ್ಮೆ ಕೋಣ(ಯಾವುದಾದರೊಂದು)ದಾನ ನೀಡಿದ ಪುಣ್ಯ ನೀಡಲಾಗುತ್ತದೆ.
ಮೂರನೇಯದಾಗಿ ಬರುವಾತನಿಗೆ(9ರಿಂದ10)ಆಡು ದಾನ ನೀಡಿದ ಪ್ರತಿಫಲ.
ನಾಲ್ಕನೇಯದಾಗಿ(10ರಿಂದ11) ಬರುವಾತನಿಗೆ ಕೋಳಿ ದಾನ ನೀಡಿದ ಪುಣ್ಯ .
ಐದನೇಯದಾಗಿ(11ರಿಂದ12) ಬರವ ವನಿಗೆ ಕೋಳಿಮೊಟ್ಟೆ ದಾನ ನೀಡಿ ದ ಪ್ರತಿಫಲ ನೀಡಲಾಗುತ್ತದೆ.
ನಂತರ ಖತೀಬ್ ಖುತುಬಾಕ್ಕೆ ಹತ್ತುವ ಮುಂಚೆ ಬರುವವನಿಗೆ ಕೇವಲ ಜುಮಾದ ಪ್ರತಿಫಲ ಸಿಗುತ್ತದೆಯಷ್ಟೇ..
ಖತೀಬ್ ಮಿಂಬರಿಗೆ ಹತ್ತಿದ ಬಳಿಕ ಬರುವವನಿಗೆ ಏನೂ ಸಿಗುವುದಿಲ್ಲ.
ಅವನ ಹೆಸರೇ ಜುಮಾದ ಲಿಸ್ಟ್ ನಲ್ಲಿ ಕಾಣಲಸಾದ್ಯ.
*ಇನ್ನಾದರೂ ಮುಸ್ಲಿಮರು ಶುಕ್ರವಾರ ಮಸೀದಿಗೆ 12 ಗಂಟೆಗಿಂತ ಮೊದಲಾಗಿ ಬಂದು ಕನಿಷ್ಠ ಒಂದು ಕೋಳಿ ಮೊಟ್ಟೆಯ ಪ್ರತಿಫಲವನ್ನಾದರೂ ಪಡೆಯಲು ಶ್ರಮಿಸಿರಿ...!*
ಅಲ್ಲಾಹನು ಅನುಗ್ರಹಿಸಲಿ..ಆಮೀನ್.
ಅರಕ

Comments