ಜುಮಾದಿಲ್ ಆಖಿರ್ -- 13.
ಅಹ್ಮದ್ ಇಬ್ನು ಅತ್ವಾಹಿಲ್ಲಾಹಿ ಸಿಕಂದರಿ (ರ ) ವಫಾತಾದ ದಿನ
ಇವರು ಶಾದುಲಿ ತ್ವರೀಕತ್‌ನ ಪ್ರಮುಖ ಶೈಖ್ ಆಗಿದ್ದು, ಪ್ರಗಲ್ಭ ವಿದ್ವಾಂಸರೂ, ಸೂಫಿವರ್ಯರೂ ಆಗಿದ್ದಾರೆ. ಜಗತ್ಪ್ರಸಿದ್ಧ ತಸವ್ವುಫ್ ಗ್ರಂಥ "ಹಿಕಂ " ಇವರ ರಚನೆಯಾಗಿದೆ.
ಶಾದುಲೀ ಇಮಾಮರ ಸಂದೇಶಗಳನ್ನು , ತ್ವರೀಕತ್ತನ್ನು ವಿಶ್ವ ಪ್ರಸಿದ್ದಿ ಮಾಡುವುದರಲ್ಲಿ ಇವರ ಸೇವೆ ಗಮನಾರ್ಹ.
ಅಲೆಕ್ಸಾಂಡ್ರಿಯ ಎಂಬ ಪ್ರದೇಶದಲ್ಲಿ ಮಹಾತ್ಮರು ಜನಿಸಿದರು. ತಂದೆ, ತಾತಂದಿರು ಮಾಲಿಕಿ ಮದ್‌ಹಬ್‌ನ ವಿದ್ವಾಂಸರಾಗಿದ್ದು ಅವರ ಹಾದಿಯಲ್ಲಿಯೇ ಸಿಖಂದರ್ (ರ )ರವರು ಸಾಗಿದರು. ಅಗಾಧವಾದ ಪಾಂಡಿತ್ಯವನ್ನು ಕರಗತ ಮಾಡಿಕೊಂಡರು.
ಹಿಜ್ರಾ 674 ಕೈರೋದಲ್ಲಿ ಫಕೀರರಾಗಿ ಜೀವನ ನಡೆಸುತ್ತಿದ್ದ ಸಂದರ್ಭ. ಶಾದುಲೀ ತ್ವರೀಕತ್‌ನ ಶೈಖ್ ಆಗಿದ್ದ ಅಬ್ಬಾಸಿಲ್ ಮುರ್ಸೀ ( ರ ) ರವರ ಸಭೆಗೆ ಒಮ್ಮೆ ಹೋಗಿದ್ದರು. ಅಲ್ಲಿ ಶೈಖ್‌ರವರ ಉಪದೇಶ ಮಹಾತ್ಮರ ಜೀವನದಲ್ಲಿ ಆತ್ಮೀಯ ಬದಲಾವಣೆ ಉಂಟು ಮಾಡಿತು.
*ಸೂಫಿಗಳ ಮಾತೆಂದರೆ ಮಾತು. ಅವರು ಅಲ್ಲಾಹುವಿನ ವಿಶೇಷ ಅನುಗ್ರಹ ಪಡೆದವರು. ಅವರ ಮಾತು ಎಂತಹ ಕಲ್ಲು ಹ್ರದಯವನ್ನು ಕರಗಿಸಬಲ್ಲದು*.
ಮಹಾತ್ಮರಾದ ಸಿಖಂದರ್ (ರ) ರವರಿಗೆ ಇಂತಹ ಮಧುರ ಅನುಭವವಾಯಿತು. ಅವರು ಹೆಚ್ಚು ಚಿಂತಿಸಲಿಲ್ಲ. ನೇರವಾಗಿ ಶೈಖ್‌ರವರ ಶಿಷ್ಯತ್ವ ಸ್ವೀಕರಿಸಿದರು. ಸುಧೀರ್ಘ 12 ವರ್ಷಗಳ ಕಾಲ ಅವರಲ್ಲಿ ಕಲಿತರು. ಮುಂದೆ ಅಗ್ರಗಣ್ಯ ವಿದ್ವಾಂಸರಾಗಿ, ಸೂಫಿವರ್ಯರಾಗಿ ಮಾರ್ಪಟ್ಟರು. ಮಾತ್ರವಲ್ಲ ಶಾದುಲೀ ತ್ವರೀಕತ್‌ನ ಖಲೀಫರಾದರು.
ಹಿಜರಿ 709 ರಲ್ಲಿ ಮಹಾತ್ಮರು ವಫಾತಾದರು. ಈಜಿಪ್ಟ್ ನ ಕೈರೋದಲ್ಲಿ ಮಹಾತ್ಮರ ದರ್ಗವಿದೆ.
*ಅಲ್ಲಾಹು ನಮ್ಮೆಲ್ಲರನ್ನು ಮಹಾತ್ಮರ ಜೊತೆ ಸ್ವರ್ಗದಲ್ಲಿ ಒಗ್ಗೂಡಿಸಲಿ. ಆಮೀನ್*
*ಎಂ ಎಂ ಸಖಾಫಿ*

Comments