Skip to main content

ಗಾಳಿಯು ವಾಹನವಾದದ್ದು ಹೇಗೆ..

ಗಾಳಿಯು ವಾಹನವಾದದ್ದು ಹೇಗೆ..!?

ದಾವೂದ್ ನಬಿ ಅಲೈಹಿಸ್ಸಲಾಮರ ಅನುಗ್ರಹೀತ ಮಗನಾದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಒಮ್ಮೆ ಯುದ್ಧ ಕ್ಕಾಗಿ ಕುದುರೆಗಳ ಅವಶ್ಯಕತೆ ಎದುರಾದಾಗ ತನ್ನ ಸಮುದಾಯದೊಡನೆ ಕುದುರೆಗಳ ಸಂಗ್ರಹಣೆಗೆ ಆದೇಶ ನೀಡುತ್ತಾರೆ.
ಹಾಗೆಯೇ ಆ ಸಮುದಾಯದ ಜನರು ಕುದುರೆಗಳನ್ನು ಸಂಗ್ರಹಿಸಿ ಪರಿಶೀಲನೆಗಾಗಿ ಸುಲೈಮಾನ್ ನಬಿ ಅಲೈಹಿಸ್ಸಲಾಮರ ಮುಂದೆ ತಂದರು.

ತಂದ ಕುದುರೆಗಳಲ್ಲಿ ಸಾವಿರ ಕುದುರೆಗಳಿದ್ದವು. ಅವುಗಳನ್ನು ಪರಿಶೀಲಿಸಲು ಸುಲೈಮಾನ್ ನಬಿ ಅಲೈಹಿಸ್ಸಲಾಮರು ಆರಂಭಿಸಿದರು. ಲುಹ್ರ್ ನಮಾಝ್ ನಿರ್ವಹಿಸಿ ಆರಂಭಿಸಿದ ಪರಿಶೀಲನೆಯು 900 ಕುದುರೆಗಳ ಪರಿಶೀಲನೆಗೆ ತಲುಪುವಾಗ ಸೂರ್ಯನು ಅಸ್ತಮಿಸುತ್ತಾನೆ.
ಮಗ್ರಿಬ್ ಸಮಯವಾಯಿತು. ಪರಿಶೀಲನೆಯಲ್ಲೇ ಮುಳುಗಿದ್ದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಸರ್ ನಮಾಝೇ ನಷ್ಟ ಹೊಂದಿತು. ಮರೆವು ಅವರನ್ನು ಸುತ್ತಿದ ಕಾರಣ ಅಸರ್ ನಮಾಝ್ ಕಳಾಹ್ ಹಾಗೋಯಿತು.
ಇದರಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರು ತುಂಬಾ ಬೇಸರಿತರಾದರು ಮಾತ್ರವಲ್ಲದೆ ಆ ಕ್ಷಣವೇ ಕುಸಿದು ಬಿಟ್ಟರು.

ತಕ್ಷಣವೇ ಪರಿಶೀಲಿಸಿದ 900 ಕುದುರೆಗಳನ್ನು ಕೂಡ ತಮ್ಮೆಡೆ ಮರಳಿಸುವಂತೆ ಅನುಯಾಯಿಗಳೊಡನೆ ಹೇಳುತ್ತಾ, ಅಲ್ಲಾಹನೊಂದಿಗೆ ಹೇಳುತ್ತಾರೆ
" ನಾನು ಇಷ್ಟ ಪಟ್ಟೆನು, ಕುದುರೆಗಳನ್ನು ತುಂಬಾನೆ ಇಷ್ಟಪಟ್ಟು ಬಿಟ್ಟೆನು, ಕುದುರೆಯ ಮೇಲಿನ ಮೋಹದಿಂದ ಅಸರ್ ನಮಾಝನ್ನು ಕೂಡ ನಾನು ಮರೆತು ಬಿಟ್ಟೆನು..!"
ಎಂದು ಬೇಸರದಿಂದ ಹೇಳುತ್ತಾ ಮರಳಿಸಿದ ಆ ೯೦೦ ಕುದುರೆಗಳನ್ನು ಕೂಡ ಝಬಹ್ ಮಾಡಿ ಎಲ್ಲವನ್ನೂ ದಾನ ಮಾಡಿ ಬಿಡುತ್ತಾರೆ.
ಆ ರೀತಿ ಮಾಡಿದ ಕಾರಣದಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಲ್ಲಾಹನು ಅಪಾರ ಅನುಗ್ರಹಗಳನ್ನು ಸುರಿಯುತ್ತಾನೆ.

ಯುದ್ಧಕ್ಕೆ ಬೇಕಾಗಿ ಕುದುರೆಯನ್ನು ಆಶಿಸಿದ್ದ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಅಲ್ಲಾಹನು ಕುದುರೆಗಳ ಬದಲು ಗಾಳಿಯನ್ನು ಸುಲೈಮಾನ್ ನಬಿ ಅಲೈಹಿಸ್ಸಲಾಮರ ಆದೇಶಕ್ಕೆ ಒಳಪಡುವಂತಾಗಿಸಿದನು.
ಸುಲೈಮಾನ್ ನಬಿ ಅಲೈಹಿಸ್ಸಲಾಮರು ಹೇಳಿದಂತೆ ಗಾಳಿಯು ಕೇಳತೊಡಗಿತು, ಕ್ಷಣಮಾತ್ರದಿ ಎಷ್ಟು ಕಿಲೋಮೀಟರ್ ಬೇಕಾದರು ತಲುಪುವಂತೆ ಸುಲೈಮಾನ್ ನಬಿ ಅಲೈಹಿಸ್ಸಲಾಮರಿಗೆ ಗಾಳಿಯು ವಾಹನವಾಯಿತು. ತದ ನಂತರದಿಂದ ಸುಲೈಮಾನ್ ನಬಿ ಅಲೈಹಿಸ್ಸಲಾಮರು ಎತ್ತ ಸಾಗುವುದಾದರು ಗಾಳಿಯ ಮುಖಾಂತರವೇ ಸಾಗುತ್ತಿದ್ದರು. ( ತಪ್ಸೀರ್ )

💚 *الصــلوة والسلام عليك يارسول الله ﷺ*
💜 *الصــلوة والسلام عليك يارسول الله ﷺ*
💙 *الصــلوة والسلام عليك يارسول الله ﷺ*


ತಂದೆ ತಾಯಿ ಕುಟುಂಬಸ್ಥರಿಗಾಗಿ
ಪ್ರತ್ಯೇಕ ದುಆಃ ಇರಲಿ ಇನ್ಶಾ ಅಲ್ಲಾಹ್..,
➖➖➖➖➖➖➖
✍🏻 *ಅಶ್ಫಾಕ್ ಕಟ್ಟತ್ತಾರ್*
➖➖➖➖➖➖➖


Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...