ಅಝ್‌ರಾಯೀಲ್ (ಅ) ರನ್ನು ಕನಸಲ್ಲಿ ಕಂಡ ಇಮಾಮ್ ಮಾಲಿಕ್ (ರ)
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119
▪ *ಮಾಲಿಕೀ* ಮಝ್‌ಹಬಿನ ನೇತಾರ ಇಮಾಮ್ ಮಾಲಿಕ್ ಬಿನ್ ಅನಸ್ (ರ) ರವರು ಒಮ್ಮೆ ಮಲಕ್ ಅಝ್‌ರಾಯೀಲ್ (ಅ) ರನ್ನು ಕನಸಲ್ಲಿ ಕಂಡರು. ಮನುಷ್ಯ, ಪ್ರಾಣಿ , ಪಕ್ಷಿ, ಎಲ್ಲದರ ರೂಹ್ ತೆಗೆಯುವ ಹೊಣೆಗಾರಿಕೆ ಇರುವ ಮಲಕನ್ನು ಕನಸಲ್ಲಿ ಕಂಡಾಗ, ದೊರೆತ ಒಂದು ಸುವರ್ಣಾವಕಾಶವೆಂದು ಭಾವಿಸಿ ಕೂಡಲೇ *"ತನ್ನ ಆಯುಷ್ಯ ಎಷ್ಟೆಂದು ಹೇಳುವಿರಾ"* ಎಂದು ಅಝ್‌ರಾಯೀಲರಲ್ಲಿ ಇಮಾಮ್ ಮಾಲಿಕ್ (ರ) ಕೇಳಿದರು.
▪ *ಇಮಾಮ್* ಮಾಲಿಕರ ಈ ಪ್ರಶ್ನೆಗೆ ಅಝ್‌ರಾಯೀಲರು (ಅ) ತನ್ನ ಕೈಯ ಐದು ಬೆರಳನ್ನು ಬಿಡಿಸಿ ಕೈಯೆತ್ತಿ ತೋರಿಸಿದರು. ಇಮಾಮ್ ಮಾಲಿಕರಿಗೆ ಇದು ಐದು ವರ್ಷವೋ, ಐದು ತಿಂಗಳೋ, ಐದು ವಾರವೋ, ಐದು ದಿನವೋ ಇತ್ಯಾದಿ ಅನುಮಾನವಾಯಿತು. ಮಾತ್ರವಲ್ಲ ಸಂಶಯ ಕೇಳುವಷ್ಟರಲ್ಲಿ ನಿದ್ದೆಯಿಂದ ಎಚ್ಚರವಾಯಿತು...
▪ *ಇಮಾಮ್* ಮಾಲಿಕರು ಬಹಳ ಚಿಂತೆಗೊಳಗಾದರು. ಆಯುಷ್ಯದ ಬಗ್ಗೆ ಪ್ರಶ್ನೆ ಕೇಳದಿದ್ದರೆ ತಲೆಬಿಸಿಯಾಗುತ್ತಿರಲಿಲ್ಲ. ಈಗ ಕೇಳಿದಾಗ ಈ ಉತ್ತರ ದೊರೆಯಿತು. ಏನು ಮಾಡುವುದೆಂದು ಆಲೋಚಿಸುತ್ತಿರುವಾಗ ಸಮಕಾಲಿನ ಪಂಡಿತ, ಜ್ಞಾನಸೂರ್ಯ, ಮತ್ತು ಕನಸು ವ್ಯಾಖ್ಯಾನದ ಮಹಾಪಿತ ಅಲ್ಲಾಮಾ *ಮುಹಮ್ಮದ್ ಬಿನ್ ಸೀರೀನ್ (ರ)* ರ ನೆನಪಾಯಿತು.
▪ *ಮರುದಿನ* ಬೆಳಿಗ್ಗೆ ಮದೀನದಲ್ಲಿ ತನ್ನ ಹತ್ತಿರವೇ ವಾಸ್ತವ್ಯವಿರುವ ಇಮಾಮ್ ಬಿನ್ ಸೀರೀನರತ್ತ ವ್ಯಾಖ್ಯಾನ ಕೇಳಲು ಹೋದರು. ಮನೆ ತಲುಪಿದ ಇಮಾಮ್ ಮಾಲಿಕರಿಂದ ಅವರು ಕಂಡ ಕನಸನ್ನು ಆಲಿಸಿದ ಬಿನ್ ಸೀರೀನ್ (ರ) ರು ಹೇಳಿದರು. *"ಗಾಬಾರಿಯಾಗಬೇಡಿ. ಐದು ಎಂದು ಕೈ ತೋರಿಸಿ ಸೂಚಿಸಿದ್ದು ನಿಮ್ಮ ಆಯುಷ್ಯದ ಬಗ್ಗೆ ಅಲ್ಲ. ಯಾರಲ್ಲೂ ಯಾವಾಗಲೂ ಐದು ವಿಷಯಗಳ ಬಗ್ಗೆ ಕೇಳಬಾರದೆಂಬ ತಾಕೀತು ಕೊಟ್ಟದ್ದಾಗಿದೆ ಅದು. ಆ ಐದು ಸಂಗತಿಗಳು ಅಲ್ಲಾಹನಿಗೆ ಮತ್ತು ಅವನು ತಿಳಿಸಿ ಕೊಡುವವರಿಗೆ ಮಾತ್ರ ಗೊತ್ತು."*
1. ಅಂತ್ಯದಿನ ಯಾವಾಗ..?
2. ಯಾವಾಗ ಮಳೆ ಬರುತ್ತದೆ..?
3. ಗರ್ಭದಲ್ಲಿರುವ ಮಗು ಗಂಡಾ ಅಥವಾ ಹೆಣ್ಣಾ..?
4. ನಾಳೆ ಏನು ನಡೆಯುತ್ತದೆ...?
5. ಯಾವಾಗ ಎಲ್ಲಿ ಮರಣ ಹೊಂದುವುದು..?
▪ *ಬೇರೊಂದು* ಗಮನಾರ್ಹ ಸಂಗತಿಯೆಂದರೆ, ಮಾಲಿಕ್ ಇಮಾಮರ ಸಮಕಾಲೀನ ಪಂಡಿತರಾದ ಬಿನ್ ಸೀನರು ಇಮಾಮ್ ಮಾಲಿಕರ ಮದ್‌ಹಬ್ ಸ್ವೀಕಾರ ಮಾಡಿರಲಿಲ್ಲ. ಖುರ್‌ಆನ್ ಮತ್ತು ಹದೀಸಿನಲ್ಲಿ ಆಳವಾದ ಪಾಂಡಿತ್ಯವಿದ್ದ ಅವರಿಗೆ ಅವರದ್ದೇ ಆದ ಒಂದು ಸ್ವಂತ ಮದ್‌ಹಬ್ ಇತ್ತು.
ಸಂಗ್ರಹ; ಇಮಾಮ್ ನಾಬುಲ್ಸಿಯ *ಸೀರತುಲ್ ಅಯಿಮ್ಮತಿಲ್ ಅರ್‌ಬಅ* ಎಂಬ ಗ್ರಂಥ.

Comments