ಬುರ್ಖಾ ನಿಷೇಧಿಸುವಾಗ ಇರುವ ಈಮಾನ್ ಬುರ್ಖಾ ಫಿಟ್ಟಿಂಗ್ ಮಾಡುವಾಗ ಇಲ್ಲವಾಯಿತೆ...?
@ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಗೆಳೆಯರೆ ನಾವು ಇದು ಯಾಕೆ ಚಿಂತಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ...
ಕೆಲವು ದಿವಸಗಳ ಹಿಂದೆ ಕೇಂದ್ರ ಸರ್ಕಾರ *ಬುರ್ಖಾ* ನಿಷೇದಮಾಡುವ ತೀರ್ಮಾನ ಕೈಗೊಂಡಿತು ಆ ಸಮಯದಲ್ಲಿ ಇಡಿ ಭಾರತ ದೇಶವೆ ಇದರ ವಿರುದ್ಧ ಹೋರಾಟ ನಡೆಸಿತು ಕೊನೆಯ ಉಸಿರು ತನಕ ನಾವು ಈ ಕಾಯ್ದೆಯನ್ನು ಜಾರಿ ಮಾಡಲು ಬಿಡುದಿಲ್ಲ ಎಂದು ಕೆಲವರು ಗಂಟಘೋಷವಾಗಿ ಹೇಳಿದರು.
ಗೆಳೆಯರೇ ನಾವಿಲ್ಲಿ ಬಹಳ ಆಳವಾಗಿ ಚಿಂತಿಸಬೇಕಾದ ವಿಷಯ ಇದೆ ಬುರ್ಖಾ ಎನ್ನುವುದು ಒಂದು ರಕ್ಷಾ ಕವಚ ಆಗಬೇಕೆ ವಿನಃ ಪಾಶ್ಚಾತ್ಯ ಸಂಸ್ಕೃತಿ ಆಗಬಾರದು ಈ ಅತ್ಯಾಧುನಿಕ ಯುಗದಲ್ಲಿ ಹಲವಾರು ಬಣ್ಣ ಬಣ್ಣದ ತರಹ ತರಹದ ಬುರ್ಖಾಗಳಿವೆ ಕೆಲವೊಮ್ಮೆ ಈ ಬಣ್ಣದ ಬುರ್ಖಾಗಳೇ ನಮ್ಮ ಸಹೋದರಿಯರನ್ನು ಸಮಾಜದಲ್ಲಿ ಎತ್ತಿ ತೋರಿಸುತ್ತದೆ ಆದರೆ ಅದಕ್ಕಿಂತ ದೊಡ್ಡ ದುರಂತ ಅಂದರೆ *ರಕ್ಷಾ ಕವಚವಾಗಿ* ಉಪಯೋಗಿಸುವ ಈ ಬುರ್ಕಾವನ್ನು ಫಿಟ್ಟಿಂಗ್ ಮಾಡಿ ತಮ್ಮ ಶರೀರದ ಸೌಂದರ್ಯವು ಪ್ರಪಂಚಕ್ಕೆ ಎದ್ದು ಕಾಣುವ ರೀತಿಯಲ್ಲಿ ಹೊಲಿಸುತ್ತಾರೆ, ಇನ್ನು ಕೆಲವರು ಬಹಳ ಸಡಿಲವಾಗಿ (loose) ಹೋಲಿಸಿದರೂ ಅದನ್ನು ಎತ್ತಿ ಕೈಯಲ್ಲಿ ಹಿಡಿದು ನಡೆಯುತ್ತಾರೆ ಕಾರಣ ಕೇಳಿದರೆ ಬರುವ ಉತ್ತರ ಅದು ನೆಲಕ್ಕೆ ತಾಗಿದರೆ ನಜಸ್ ಆಗುತ್ತೆ ಅಲ್ಲವೇ.? ಎಂದು ಆದರೆ ಅವರ ಔರತ್ (ಔರತ್ ಅಂದರೆ ಅನ್ಯ ಸ್ತ್ರೀಯರ ಹಿಂಭಾಗದಲ್ಲಿ ಕಾಣುವ ಕೂದಲು ಕೂಡ ಅನ್ಯರಿಗೆ ಔರತ್ ಆಗಿರುತ್ತದೆ) ಪ್ರಪಂಚಕ್ಕೆ ಕಾಣುವುದು ಯಾರಿಗೂ ತಿಳಿದೇ ಇರುದಿಲ್ಲ.
ಇನ್ನೂ ಕೆಲವರಿಗೆ ತಮ್ಮ ಮಕ್ಕಳು ಮದರಸಕ್ಕೆ ಹೋಗುವಾಗ ಬುರ್ಖಾ ಬೇಕು ಆದರೆ ಪಾರ್ಕ್ ಮಾಲ್ ಬೀಚಿಗಳಿಗೆ ಪ್ರವಾಸಕ್ಕೆ ಹೋಗುವಾಗ ಯಾವುದೇ ಬುರ್ಖಾ ಬೇಡ. (ವಿಪರ್ಯಾಸ ಅಂದರೆ ಉಸ್ತಾದರ ಭಯ ಇರುವ ಸ್ಥಳದಲ್ಲಿ ಅಲ್ಲಾಹನ ಭಯ ಇಲ್ಲವಾಯಿತು)
ಅದರ ಕುರಿತು ಸಲಹೆ ನೀಡಿದರೆ ಬರುವ ಉತ್ತರ ಕೇಳಿದರೆ ಬಹಳ ದುಃಖ ತರಿಸುತ್ತದೆ (ನಮ್ಮ ಮನೆಯವರೇ ಮಾತಾಡುದಿಲ್ಲ ಮತ್ತೆ ನೀವು ಯಾಕೆ ಕೇಳುವುದು, ಅದನ್ನು ಕೇಳಲು ನೀವು ಯಾರು, ನೀವು ನಿಮ್ಮ ಕೆಲಸ ನೋಡಿ, ಸಾಕು ನಿಲ್ಲಿಸಿ ನಿಮ್ಮ ಉಪದೇಶ ನೀವು ಬಾರಿ ಒಳ್ಳೆಯವರ.?)
ಬಹುಶಃ ನಾವು ಮರೆತಿರಬಹುದು ನಮ್ಮ ಸಹೋದರಿಯಾರು ಆದರ್ಶ ಮಾಡಬೇಕಾದ್ದು ಅಲ್ಲಾಹನ ಭಯವಿಲ್ಲದ ನಾಮದರಿಗಳಾದ *ಸಿನಿಮಾ ತಾರೆಗಳನ್ನೋ ಅಥವಾ ಟೆನ್ನಿಸ್ ತಾರೆಗಳನ್ನೋ ಅಲ್ಲಾ* ಬದಲಾಗಿ ತನ್ನ ಒಂದು ತಲೆ ಕೂದಲನ್ನು ತನ್ನ ಪತಿಗಲ್ಲದೆ ಅನ್ಯ ಪುರುಷರನ್ನು ಕಾಣಲು ಬಿಡದ ಸೂಕ್ಷ್ಮತೆಯ ಜೀವನ ಕಳೆದ (ಎಲ್ಲಿಯವರೆಗೆ ಅಂದರೆ ತನ್ನ ಜನಾಝವನ್ನು ರಾತ್ರಿ ದಫನ್ ಮಾಡಬೇಕು ಅದು ಕೂಡ ಸಂಪೂರ್ಣವಾಗಿ ಹೊದಿಸಿಕೊಂಡು ಮಾಡಬೇಕು) *ಫಾತಿಮ ಬೀವಿ ರಲಿಯಲ್ಲಾಹು ಅನ್ಹ* ಅವರನ್ನಾಗಿರಬೇಕು ಅದೇ ರೀತಿ ಅದೆಷ್ಟೋ ಹದೀಸುಗಳನ್ನು ಸನದ್ ಸಮೇತ ಕಂಠಪಾಠದ *ಇಮಾಮ್ ಶಾಫಿ* ರಲಿಯಲ್ಲಾಹ್ ಅವರಂತಹ ಮಹಾನರಿಗೆ ಕೋಣೆಯ ಒಳಗೆಯಿಂದ ಕೇವಲ ಶಬ್ದವನ್ನು ಆಲಿಸಿ ಹದೀಸುಗಳ ತಪ್ಪುಗಳನ್ನು ತಿದ್ದಿ ಕೊಡುತ್ತಿದ್ದ ತನ್ನ ಉಸ್ತಾದ್ ಆದ *ಇಮಾಮ್ ಅಭೂ ಹನೀಫಾ ರಲಿಯಲ್ಲಾಹು* ಅವರ ಮಗಳು *ಹನೀಫಾ ರಲಿಯಲ್ಲಾಹು ಅನ್ಹ* ಆಗಬೇಕು ನಮ್ಮ ಸಹೋದರಿಯರಿಗೆ ಆದರ್ಶ.
ಇಸ್ಲಾಂ *ಬುರ್ಖಾವನ್ನು* ಕಡ್ಡಾಯ ಮಾಡಿದ್ದು ಸಹೋದರಿಯರ ರಕ್ಷೆಗೆ ಆಗಿದೆ ಕಾಯಬೇಕಾದ ಬುರ್ಖಾವೇ *ಹರಾಮುಗಳಿಗೆ* ಸೆಳೆದು ತರುತ್ತಿರುವಾಗ ಬುರ್ಖಾ ಹಾಕಿದ್ದೇವೆ ಎನ್ನುವ ಹೆಸರು ಆದರೂ ಯಾಕೆ.? ಪ್ರಕೃತಿಯೇ ಅಸಹ್ಯ ಪಡುವ ರೀತಿಯ ವರ್ತನೆಗಳನ್ನು *ಬುರ್ಖಾ* ಎನ್ನುವ ಪವಿತ್ರ ಕವಚವನ್ನು ಧರಿಸಿ ಅದನ್ನು ಮಲಿನ ಮಾಡಿ ಇಸ್ಲಾಂ ಧರ್ಮಕ್ಕೆ ಕಳಂಕ ತರುದಾದರೆ ಬುರ್ಖಾ ಧರಿಸುದಾದರು ಯಾಕೆ.? ಧರಿಸದೆ ಇದ್ದರೆ ಇಸ್ಲಾಮಿನ ಇಝ್ಝತ್ ಆದರೂ ಉಳಿದಿತು.
ನಮ್ಮ ಸಹೋದರರಿಗೆ *ಬುರ್ಖಾ* ನಿಷೇದ ಮಾಡುವ ಕಾಯ್ದೆ ಬಂದಾಗ *ಈಮಾನ್ ಬಿಸಿ ಆಯಿತು* ಆದರೆ ಬುರ್ಖಾ ಎನ್ನುವ ಪವಿತ್ರ ಕವಚವನ್ನು *ಪಾಶ್ಚಾತ್ಯ ಸಂಸ್ಕೃತಿಯೊಂದಿಗೆ* ವಿಲಿನ ಮಾಡಿ ಮಲಿನ ಮಾಡುವಾಗ ಯಾರ ಈಮಾನ್ ಕೂಡ ಬಿಸಿ ಆಗಲಿಲ್ಲ ಯಾರ ಕಣ್ಣಲ್ಲಿಯು ನೀರು ಬರಲಿಲ್ಲ ಎನ್ನುವುದು ವಿಪರ್ಯಾಸ.
ಇಂದು ಇಸ್ಲಾಂ ಧರ್ಮವನ್ನು ಅಷ್ಟ ದಿಕ್ಕುಗಳಿಂದ ಎಳೆದು ತಿನ್ನಲು ನಾವೇ..! ಕಾರಣ ಮಹಿಳೆಯರ ಕವಚವಾಗಬೇಕಾದ *ಬುರ್ಖಾ* ಸೌಂದರ್ಯ ಪ್ರಕಟಣೆ ಆಯಿತು, ಫಾತಿಮಾ ಬೀವಿಯವರ ಆದರ್ಶ ಕೇವಲ ಭಾಷಣ ಮಾಡಲು ಮಾತ್ರ ಸೀಮಿತ ಆಯಿತು, ಬಹಳ ಮುಖ್ಯವಾಗಿ ಇರಬೇಕಾದ ಲಜ್ಜೆ ಮಾಯವಾಯಿತು ನಮ್ಮವರೇ ನಮ್ಮ ಸಂಸ್ಕೃತಿಯನ್ನು ಬೇಟೆ ಆಡಿ ತಿನ್ನುತ್ತಿರುವಾಗ ಆಗದ ನೋವು..! ಹೊರಗಿನವರು ಬೇಟೆ ಆಡುವ ತಂತ್ರ ಮಾಡಿದಾಗ ಬಹಳ ನೋವಾಯಿತು. ಎನ್ನುದು ಕೂಡ ವಿಪರ್ಯಾಸ..
*ಇದರ ಕುರಿತು ಅಲ್ಲಾಹನಲ್ಲಿ ಒಬ್ಬೊಬ್ಬರು ಉತ್ತರ ಹೇಳಲೇ ಬೇಕು ಯಾರನ್ನು ಅಲ್ಲಾಹನು ಸುಮ್ಮನೆ ಬಿಡುದಿಲ್ಲ* ಯಾಕಂದರೆ ಈ ಪವಿತ್ರ ದೀನ್ *ಬೀವಿ ಆಸೀಯ, ಬೀವಿ ಮಾಶಿತ ರಲಿಯಲ್ಲಾಹೂ ಅನ್ಹುಮ ಅವರ ರಕ್ತ ಸುರಿಸಿ* ಅದೆಷ್ಟೋ ಮಹನಿಯರ ತ್ಯಾಗ ಬಲಿದಾನಗಳನ್ನು ನೀಡಿ ಪಾರಂಪರಿಕವಾಗಿ ಸಿಕ್ಕಿದ ಮುತ್ತು ಆಗಿದೆ. ನಾವು ಇದರ ಪವಿತ್ರತೆಯನ್ನು ಮಲಿನ ಮಾಡಿ ಬೇಕಾ ಬಿಟ್ಟಿ ಜೀವಿಸಿದರೆ ಅಲ್ಲಾಹನು ಅಕ್ರಮಿಯಾದ ಅಧಿಕಾರಿಗಳನ್ನು ಇಟ್ಟು ಘೋರ ಶಿಕ್ಷೆಯನ್ನು ನೀಡಿ ಪಾಠ ಕಲಿಸಿಯೇ ನಮ್ಮನ್ನು ಈ ದುನಿಯದಿಂದ ಮರಳಿಸುತ್ತಾನೆ ಜೋಕೆ...
*ಚಿಂತಿಸುವವಣಿಗೆ ದೃಷ್ಟಾಂತವಿದೆ*

Comments
http://brtaslim.com/wp-content/uploads/2018/02/%E0%B2%AC%E0%B2%A3%E0%B3%8D%E0%B2%A3%E0%B2%A6-%E0%B2%AC%E0%B3%81%E0%B2%B0%E0%B3%8D%E0%B2%96%E0%B2%BE.mp3
PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com