Skip to main content

ಪವಿತ್ರ ರೌಲಾ ಶರೀಫಿನಿಂದ ಕೈ ಹೊರ ಚಾಚಿದ ಪ್ರವಾದಿ ಮುಹಮ್ಮದ್ (ಸ)

ಪವಿತ್ರ ರೌಲಾ ಶರೀಫಿನಿಂದ ಕೈ ಹೊರ ಚಾಚಿದ ಪ್ರವಾದಿ ಮುಹಮ್ಮದ್ (ಸ)

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119


  ▪ *ಪ್ರಖ್ಯಾತ* ಪಂಡಿತ ಮತ್ತು ಸೂಫಿವರ್ಯರಾದ ಶೈಖ್ *ಅಹ್‌ಮದ್ ಅಲ್ ಕಬೀರುರ್ರಿಫಾಯೀ* (ರ) ಇರಾಕಿನಿಂದ ಹಜ್ಜಿಗೆ ತೆರಳುವ ಎಲ್ಲರಲ್ಲೂ *"ನೀವು ಮದೀನ ತಲುಪಿದರೆ  ನನ್ನ ಪಿತಾಮಹನಿಗೆ (ಅಜ್ಜ) ನನ್ನ ಸಲಾಮ್ ಹೇಳಬೇಕು. ನನಗೆ ಯಾವಾಗ ಆ ಸನ್ನಿಧಿಗೆ ಹೋಗುವ ಭಾಗ್ಯ ದೊರೆಯುತ್ತದೋ ಗೊತ್ತಿಲ್ಲ."* ಎಂದು ಹೇಳುತ್ತಿದ್ದರು.
   ▪ *ಕೊನೆಗೆ* ಒಮ್ಮೆ ಇರಾಕಿನಲ್ಲಿದ್ದ ಶೈಖ್ ರಿಫಾಯಿಯವರಿಗೆ ಹಜ್ಜಿಗೆ ಹೋಗುವ ಭಾಗ್ಯ ಲಭಿಸಿತು. ಹಜ್ಜ್ ಮುಗಿದು ಮದೀನಾ ತಲುಪಿದ ಶೈಖ್ ರಿಫಾಯಿಯವರು ಮದೀನಾ ಮುನವ್ವರದ ರೌಲಾ ಶರೀಫಿನ ಹೊರಗಡೆ ಅದರ ಬಾಗಿಲಿನ ಹತ್ತಿರ ನಿಂತು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಅಳುತ್ತಾ ಹೇಳಿದರು. *"ಹಲವಾರು ಅಡೆತಡೆ ತೊಂದರೆಗಳಿದ್ದ ಕಾರಣ ಈ ಮಹಾ ಸನ್ನಿಧಿಗೆ ಈ ತನಕ ನನಗೆ ಬರಲು ಸಾಧ್ಯವಾಗಿದೆ ಹೋಯಿತು. ಈಗ ತೊಂದರೆಗಳಿಗೆ ಪರಿಹಾರವಾದಾಗ ನಿಮ್ಮ ಈ ಮಹಾ ಸನ್ನಿಧಿಗೆ ತಲುಪಿದ್ದೇನೆ. ನಿಮ್ಮ ಜೀವಂತ ಕಾಲದಲ್ಲಿ ನನಗೆ ಹುಟ್ಟಿ ನಿಮ್ಮನ್ನು ಕಾಣುವ ಬಾಗ್ಯ ಸಿಗಲಿಲ್ಲ. ಆದ್ದರಿಂದ ನನಗೆ ನಿಮ್ಮ ಆ ಪವಿತ್ರ ಕೈಯನ್ನಾದರೂ ಒಮ್ಮೆ ಚಾಚಿ ಕೊಡುವಿರೇ..? ನಾನದನ್ನು ಒಮ್ಮೆ ತನ್ನ ತುಟಿಯಿಂದ ಚುಂಬಿಸುತ್ತೇನೆ. ಯಾವತ್ತೂ ನನ್ನನ್ನು ನಿರಾಶೆ ಮಾಡದಿರಿ."*
   ▪ *ಸುಬ್‌ಹಾನಲ್ಲಾಹ್* ಅಷ್ಟು ಬೇಡಿದ್ದೇ ತಡ ಪವಿತ್ರ ರೌಲಾ ಶರೀಫಿನ ಒಳಗಿನನಿಂದ ಅದರ ಕಿಂಡಿಯ ಮುಖಾಂತರ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಪವಿತ್ರ ಕೈಯನ್ನು ಚಾಚಿ ಕೊಟ್ಟರು. ಶೈಖ್ ರಿಫಾಯಿ (ರ) ರವರು ಬೇಕಾದಷ್ಟು ಚುಂಬಿಸಿದರು.

ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...