ಮರದೊಳಗೆ ನುಗ್ಗಿದ ಪ್ರವಾದಿ ಝಕರಿಯ್ಯಾ (ಅ)
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಪ್ರವಾದಿ* ಝಕರಿಯ್ಯಾ (ಅ) ರನ್ನು ಹತ್ಯೆ ಮಾಡಲು ಅವರ ಅಂದಿನ ಜನಾಂಗವಾದ ಇಸ್ರೇಲೀ ಸಂತತಿಗಳು ಖಡ್ಗ, ಕತ್ತಿ , ದೊಣ್ಣೆಯೊಂದಿಗೆ ಅವರ ವಾಸಸ್ಥಳಕ್ಕೆ ಬಂದರು.
▪ *ಶತ್ರುಗಳು* ಕೊಲ್ಲಲು ಬರುತ್ತಾರೆಂದು ತಿಳಿದಾಗ ಅವರು ಮನೆಯಿಂದ ಹತ್ತಿರದ ಕಾಡಿನೊಳಗೆ ನುಗ್ಗಿದರು. ಇದನ್ನರಿತ ಶತ್ರುಗಳು ನಾಲ್ಕು ದಿಕ್ಕಿನಿಂದಲೂ ಆಯುಧಗಳೊಂದಿಗೆ ಕಾಡಿಗೆ ಪ್ರವೇಶಿಸಿದರು.
▪ *ಏನು* ಮಾಡಬೇಕೆಂದು ತಿಳಿಯದೆ ಕಾಡಿನಲ್ಲಿ ತನ್ನ ಜೀವವನ್ನು ಒಂದು ಕೈಯಲ್ಲಿ ಹಿಡಿದು ಓಡುತ್ತಿದ್ದ ಹಝ್ರತ್ ಝಕರಿಯ್ಯಾ (ಅ) ರನ್ನು ಕಾಡಿನಲ್ಲಿ ಒಂದು ದೊಡ್ಡ ಮರವು ಕರೆದು ಹೇಳಿತು. *"ಹಝ್ರತ್ ಝಕರಿಯ್ಯಾರವರೇ., ಈ ಕಡೆ ಬನ್ನಿ . ನಾನು ನನ್ನ ಕಾಂಡದ ಭಾಗವನ್ನು ಸೀಳಿ ಕೊಡುತ್ತೇನೆ. ನೀವು ಅದರೊಳಗೆ ಅವಿತುಕೊಳ್ಳಿ.*"
▪ *ಅಂತೆಯೇ* ಬೃಹದಾಕಾರದ ಮರದ ಕಾಂಡವು ಇಭ್ಭಾಗವಾಯಿತು. ಕೂಡಲೇ ಪ್ರವಾದಿ ಝಕರಿಯ್ಯಾ (ಅ) ಅದರೊಳಗೆ ನುಗ್ಗಿದರು. ಅಷ್ಟರಲ್ಲಿ ಕಾಂಡವು ಜೋಡಿಕೊಂಡಿತು.
▪ *ಇತ್ತ* ಅವರು ಮರದ ಒಳಗೆ ನುಗ್ಗಲು ಶ್ರಮಿಸುತ್ತಿರುವಾಗ ಅದನ್ನು ನೋಡಿದ ಇಬ್‌ಲೀಸನು (ಲ) ಅವರ ಹಿಂದಿನಿಂದ ಓಡಿಹೋಗಿ ಅವರ ವಸ್ತ್ರವನ್ನು ಕೈಯಿಂದ ಹಿಡಿದು ಎಳೆದನು. ಇಭ್ಭಾಗವಾದ ಮರದ ಕಾಂಡವು ಪರಸ್ಪರ ಜೋಡನೆಯಾದರೂ ಅವರು ಧರಿಸಿದ್ದ ಬಟ್ಟೆಯ ಒಂದು ತುದಿ ಮರದ ಕಾಂಡದಲ್ಲಿ ಹೊರಗೆ ಚೆನ್ನಾಗಿ ಕಾಣುತ್ತಿತ್ತು.
▪ *ಆಯುಧಗಳೊಂದಿಗೆ* ಕಾಡಿನಲ್ಲಿ ಸುತ್ತಾಡುತ್ತಿದ್ದ ಶತ್ರುಗಳಲ್ಲಿ ಇಬ್‌ಲೀಸನು ಹೇಳಿದನು. *"ನೀವು ಹುಡುಕುತ್ತಿರುವ ವ್ಯಕ್ತಿ ಇದರೊಳಗಿದ್ದಾನೆ. ಈ ಕಾಣುವ ಬಟ್ಟೆಯ ತುದಿಯೇ ಅದಕ್ಕೆ ಸಾಕ್ಷಿ. ತಡಮಾಡಬೇಡಿ. ಮರದ ಮೇಲಿನ ರೆಂಬೆಗಳನ್ನು ಕಡಿದು ನಂತರ ಕಾಂಡದ ಮೇಲ್ಭಾಗದಿಂದ ಗರಗಸದಲ್ಲಿ ಕೊಯ್ಯುತ್ತಾ ಬನ್ನಿ. ಮೊದಲಿಗೆ ಅವನ ತಲೆಗೆ ಅದರ ನೋವು ಸಿಗುತ್ತದೆ."*
▪ *ಇಬ್‌ಲೀಸನ* (ಲ) ಉಪಾಯವು ಬಹಳ ಸೂಕ್ತವಾದದ್ದೆಂದು ತಿಳಿದ ಅವರು ರೆಂಬೆಗಳನ್ನು ಕಡಿದು ನಂತರ ಮರದ ಕಾಂಡದ ಮೇಲ್ಭಾಗದಿಂದ ಗರಗಸದಲ್ಲಿ ಕೊಯ್ಯುತ್ತಾ ಬಂದರು. ಸುಬ್‌ಹಾನಲ್ಲಾಹ್.. ಹರಿತವಾದ ಗರಗಸದ ಹಲ್ಲು ಅವರ ತಲೆಯ ಮೇಲೆ ಸ್ಪರ್ಶವಾದಾಗ ನೋವು ತಡೆಯಲಾಗದೆ *"ಯಾ ಅಲ್ಲಾ.. ಅಬ್ಬಾ...ಅಬ್ಬಾ.."* ಇತ್ಯಾದಿ ಸಾಮಾನ್ಯವಾಗಿ ನಾವು ನೋವು ಉಂಟಾಗುವಾಗ ಹೇಳುವ ಮಾತು ಹೇಳಿ ಬೊಬ್ಬೆ ಹಾಕಿದರು.
▪ *ಅಷ್ಟು* ಹೇಳಿ ಬೊಬ್ಬೆ ಹಾಕಿದ್ದೇ ತಡ ಅಲ್ಲಾಹನ ಕಡೆಯಿಂದ ಅವರಿಗೆ ಸಂದೇಶ ಬಂತು. *"ನೀವು ನೋವು ತಡೆಯಲಾಗದೆ ಒಮ್ಮೆ ಬೊಬ್ಬೆ ಹಾಕಿದ್ದು ಪರವಾಗಿಲ್ಲ. ಹೀಗೆಯೇ ಎರಡನೇ ಬಾರಿ ಬೊಬ್ಬೆ ಹಾಕಿದ್ದರೆ ಅಂಬಿಯಾಗಳ (ಪ್ರವಾದಿಗಳ) ಪಟ್ಟಿಯಿಂದ ನಿಮ್ಮ ಹೆಸರನ್ನೇ ತೆಗೆಯುತ್ತಿದ್ದೆನು."*
▪ *ನಂತರ* ಅವರ ಶರೀರವನ್ನು ತಲೆಯಿಂದ ಹಿಡಿದು ಕಾಲಿನ ತನಕ ಗರಗಸದಲ್ಲಿ ಎರಡು ಸೀಳು ಮಾಡಿದರು.
ಸಂಗ್ರಹ; ಇಮಾಮ್
ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments