ಪ್ರವಾದಿ ಯಅ್‌ಕೂಬ್ (ಅ) ಮತ್ತು ತೋಳ
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಪ್ರವಾದಿ* ಯೂಸುಫ್ (ಅ) ರನ್ನು ಅವರ ಸಹೋದರರು ಟೊಳ್ಳು ಬಾವಿಗೆ ಎಸೆದು ತಂದೆಯವರಲ್ಲಿ ತೋಳ ಹಿಡಿಯಿತು ಎಂದು ಹೇಳಿದ್ದರು.
▪ *ಪ್ರೀತಿಯ* ಪುತ್ರನು ಕಾಣೆಯಾದ ನಂತರ ತಂದೆ ಹಝ್ರತ್ ಯಅ್‌ಕೂಬ್ (ಅ) ಬೇಸರದಿಂದ ಯಾರಲ್ಲೂ ಮಾತನಾಡುತ್ತಿರಲಿಲ್ಲ. ಮಾತ್ರವಲ್ಲ ಸಿಕ್ಕಿದವರಲ್ಲೆಲ್ಲಾ ಮಗನ ಬಗ್ಗೆ ಏನಾದರು ಮಾಹಿತಿ ಇದೆಯೇ ಎಂದು ಕೇಳುತ್ತಿದ್ದರು.
▪ *ಹೀಗಿರುವಾಗ* ಮಕ್ಕಳು ಹೇಳುವುದು ನಿಜವಾ ಎಂದು ತಿಳಿಯಲು ಒಂದು ದಿನ ಹತ್ತಿರದ ಕಾಡಿಗೆ ಹೋದರು. ಅಲ್ಲಿ ಹೋದ ಕೂಡಲೇ "ರೋಗಿ ಬಯಸಿದ್ದೂ ಹಾಲು. ವೈದ್ಯ ಕೊಟ್ಡದ್ದೂ ಹಾಲು" ಎಂಬ ಗಾದೆ ಮಾತಿನಂತೆ ಒಂದು ತೋಳವನ್ನು ಕಂಡರು. ತೋಳದಲ್ಲಿ ಹಝ್ರತ್ ಯಅ್‌ಕೂಬ್ (ಅ) ಕೇಳಿದರು. *"ನನಗೆ ನಿನ್ನಲ್ಲಿ ಒಂದು ಮಾತು ಕೇಳಲಿಕ್ಕಿದೆ. ಯಾವತ್ತೂ ಸುಳ್ಳು ಹೇಳಬಾರದು. ನೀನು ನನ್ನ ಮಗ ಯೂಸುಫ್‌ನನ್ನು ಕೊಂದು ತಿಂದಿದ್ದಿಯಾ..?"* ತೋಳ ಹೇಳಿತು. *"ಇಲ್ಲ... ನಾನು ತಿನ್ನಲಿಲ್ಲ. ನಾನು ಯಾಕೆ ನಿಮ್ಮ ಮಗನನ್ನು ತಿನ್ನುವುದು.?"*
ಯಅ್‌ಕೂಬ್; *ಹಾಗಾದರೆ ಅವನು ಜೀವಂತವಾಗಿಯೇ ಇದ್ದಾನಾ...?*
ತೋಳ; *ಹೌದು. ಇದ್ದಾನೆ.*
ಹಝ್ರತ್ ಯಅ್‌ಕೂಬ್; *ಹಾಗಾದರೆ ಎಲ್ಲಿದ್ದಾನೆ.?*
ತೋಳ; *ಮಲಕ್ ಜೀಬ್‌ರೀಲ್ (ಅ) ರಲ್ಲಿ ಕೇಳಿರಿ. ಅವರಿಗೆ ಅದರ ಬಗ್ಗೆ ಸರಿಯಾದ ಮಾಹಿತಿಯಿದೆ.*
ಹಝ್ರತ್ ಯಅ್‌ಕೂಬ್; *ಅವರಲ್ಲಿ ಹಲವಾರು ಬಾರಿ ಕೇಳಿದ್ದೇನೆ. ಅವರು ಸರಿಯಾದ ಉತ್ತರ ಕೊಡದೆ ಜಾರುತ್ತಾರೆ. ಎಷ್ಟು ಕೇಳಿದರೂ ಹೇಳುವುದಿಲ್ಲ.*
ತೋಳ; *ಅವರು ಹೇಳದ್ದನ್ನು ನಾನು ಹೇಳುವುದಾ..?*
ಎಂದು ಹೇಳಿ ತೋಳ ಅಲ್ಲಿಂದ ಕಾಲ್ಕಿತ್ತಿತು.
ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments