ಗೌಸೇ ಆಝಮ್ ಪವಾಡಗಳು
(ಲೇಖಕರು: ಎಂ. ಎ ಅಬ್ದುಲ್ ಖಾದರ್ ಮುಸ್ಲಿಯಾರ್ (ರಹಿಮಹುಲ್ಲಾ)
ಕನ್ನಡಕ್ಕೆ- ಇಸ್ಮಾಯಿಲ್ ಸ'ಅದಿ ಮಾಚಾರ್ )
ಕೋಳಿಯ ಮುಳ್ಳು
ಮುಹಮ್ಮದಿಬ್ನು ಖಾಇದುಲ್ ಅವಾನಿ (ರದಿಯಲ್ಲಾಹು ಅನ್ಹು) ಎಂಬವರು ಹೇಳಿದರು. 'ಒಬ್ಬಳು ಸ್ತ್ರೀ ತನ್ನ ಮಗನೊಂದಿಗೆ ಶೈಖ್ ಜೀಲಾನಿಯ ಬಳಿ ತಲುಪಿದರು. ತನ್ನ ಮಗುವನ್ನು ಶೈಖವರಿಗೆ ಸಮರ್ಪಿಸಿ ಇವನನ್ನು ನೀವು ಆತ್ಮೀಯ ರಂಗದಲ್ಲಿ ಪಳಗಿಸಬೇಕೆಂದು ಕೋರಿದರು. ಅವರು ಮಗುವನ್ನು ಸ್ವೀಕರಿಸಿ ಆತ್ಮೀಯವಾಗಿ ಬೆಳೆಸತೊಡಗಿದರು.
ಹೀಗಿರಲು ಒಂದು ಬಾರಿ ಮಗನನ್ನು ನೋಡಲು ಆ ತಾಯಿ ಬಂದರು. ಹಸಿವಿನಿಂದಲೂ, ನಿದ್ರಾಹೀನತೆಯಿಂದಲೂ ತನ್ನ ಮಗ ಸಣಕಲಾಗಿದ್ದನ್ನು ಕಂಡ ತಾಯಿ, ತನ್ನ ಮಗನ ಆಹಾರ ಒಣಗಿದ ರೊಟ್ಟಿ ಎಂದು ತಿಳಿದ ಕೂಡಲೇ ದುಃಖದಿಂದ ಶೈಖವರ ಬಳಿ ಬಂದರು.
ಆಗ ಶೈಖವರ ಮುಂಭಾಗದಲ್ಲಿ ತಿಂದು ಮುಗಿದ ಕೋಳಿಯೊಂದರ ಮುಳ್ಳು ರಾಶಿಬಿದ್ದಿತ್ತು. ಆ ಸ್ತ್ರೀ ಹೇಳಿದರು. “ನೀವು ಕೋಳಿಮಾಂಸ ತಿನ್ನುತ್ತಾ ನನ್ನ ಮಗನಿಗೆ ಒಣಗಿದ ರೊಟ್ಟಿ ನೀಡುವುದಾ?”
ಶೈಖ್ ಮುಳ್ಳುಗಳ ಮೇಲೆ ಕೈಯಿಟ್ಟು ಹೇಳಿದರು. 'ಕೊಳೆತು ಹೋದ ಎಲುಬುಗಳನ್ನು ಜೀವಂತಗೊಳಿಸುವ ಅಲ್ಲಾಹನ ಅನುಮತಿಯೊಂದಿಗೆ ನೀ ಎದ್ದು ನಿಲ್ಲು' ಹೇಳಿದ್ದೇ ತಡ ಅದು ಜೀವಂತ ಕೋಳಿಯಾಗಿ ಮಾರ್ಪಟ್ಟಿತು. ಅದು ಜೋರಾಗಿ ಹೀಗೆ ಹೇಳಿತು. “ಲಾ ಇಲಾಹ ಇಲ್ಲಲ್ಲಾಹು”
ಶೈಖವರು ಸ್ತ್ರೀಯೊಂದಿಗೆ ಹೇಳಿದರು. 'ಈ ಒಂದು ಅವಸ್ಥೆಗೆ ನಿಮ್ಮ ಮಗ ತಲುಪಿದರೆ ಅವನಿಗೆ ಇಷ್ಟವಿರುವುದೆಲ್ಲವನ್ನು ತಿನ್ನಬಹುದು'
(ಖಲಾಇದ್-37)

Comments