Skip to main content

ಭೌತಿಕ, ಅಭೌತಿಕ ಪರಿಹಾರ

ಸಮಸ್ಯೆಗಳ ವೇಳೆ ಅಲ್ಲಾಹನ ಪ್ರವಾದಿಗಳು ಏನು ಮಾಡುತ್ತಿದ್ದರು?....              ಹೌದು ನಮಗೆದುರಾಗುವ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಭೌತಿಕ, ಅಭೌತಿಕ ಹೀಗೆ ಎರಡು ಪರಿಹಾರ ಮಾರ್ಗಳು ನಮಗಿರುತ್ತದೆ...    *ಎಲ್ಲಾ ಸೃಷ್ಟಿಗಳ ಸೃಷ್ಠಿಕರ್ತನೂ, ಸರ್ವಾಧಿಕಾರಿಯೂ, ಸರ್ವ ಶಕ್ತನೂ, ಸೃಷ್ಟಿ ಸಂರಕ್ಷಕನೂ ಆದ ಅಲ್ಲಾಹನ ಮೊರೆ ಹೋಗುವುದು, ಅವನಲ್ಲಿ ಪರಿಹಾರ ಬೇಡುವುದು, ಅವನಿಗೆ ಇಷ್ಠವಾಗುವ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದು, ಅವನಿಗೆ ಇಷ್ಟವಾಗದ ತಪ್ಪುಗಳು ನಮ್ಮಲ್ಲಿದ್ದರೆ ಅವುಗಳನ್ನು ತಿದ್ದುವುದು ಇವೆಲ್ಲಾ  ಅಭೌತಿಕ ಪರಿಹಾರ ಮಾರ್ಗಗಳಾಗಿವೆ.* ಅಲ್ಲಾಹನ ಪ್ರವಾದಿಗಳಿಗೆ ಸಮಸ್ಯಗಳೆದುರಾದಾಗ ಅವರು ವಿವಿಧ ರೀತಿಯ ಅಭೌತಿಕ ಪರಿಹಾರ ಮಾರ್ಗಗಳನ್ನು ಕಂಡುಕ್ಕೊಂಡದ್ದಾಗಿ ಕುರ್ಆನ್ ಹೇಳಿವೆ.         ಉದಾಹರಣೆಗೆ *ಆದಮ್ ಅಲೈಹಿಸ್ಸಲಾಮ್-ರವರು* ತಾನು ಸಿಲುಕಿದ ಸಮಸ್ಯೆದ ಪರಿಹಾರಕ್ಕಾಗಿ ..  ربنا ظلمنا أنفسنا و ان لم تغفر لنا وترحمنا لنكونن من الخاسرين ا... ಎಂಬ ದುಆ ಮಾಡಿ ಪರಿಹಾರ ಕಂಡುಕೊಂಡಿದ್ದರು,          *ಇಬ್ರಾಹೀಮ್ (ಅ)ರವರು* ನಂರೂದನ ಅಕ್ರಮಕ್ಕೆ ವಿದೇಯರಾದಾಗ حسبي الله و نعم الوكيل ಎಂದು ಹೇಳಿ ರಕ್ಷಣೆಯ ದಾರಿ ಕಂಡು ಕೊಂಡಿದ್ದರು, *ಯಅಕೂಬ್(ಅ)* ತನ್ನ  ಮಗ ಯೂಸುಫ್(ಅ)ರವರ ವಿಷಯದಲ್ಲಿ ದುಖಕ್ಕೀಡಾದಾಗ وبثي وحزني الي الله ಎಂದೇಳಿ ಪರಿಹಾರಕ್ಕಾಗಿ ಅಲ್ಲಾಹನ ಮೊರೆ ಹೋಗಿದ್ದರು,                       *ಹಬೀಬ್ (ಸ)ರವರವರಲ್ಲಿ*  ನಿಮ್ಮಲ್ಲಿ ಯುದ್ಧ ಮಾಡಲು ಶತ್ರುಗಳು  ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆಂದು ಹೇಳಲ್ಪಟ್ಟಾಗ ಈ ಮೇಲಿನ ಝಿಕ್ರ್ ಹೇಳಿದ್ದಾಗಿ ಇಮಾಮ್ ಮುಸ್ಲಿಮ್(ರ)ರವರು ವರದಿ ಮಾಡಿದ್ದಾರೆ. *ಯೂನುಸ್ ನೆಬಿ(ಅ)* ಮೀನಿನ ಉರರದೊಳಗೆ ಸಿಕ್ಕಿ ತೊಂದರಕ್ಕೀಡಾದಾಗ لا اله الا انت سبحانك اني كنت من الظالمين ಎಂದೇಳಿದಾಗಿಯೂ ಇದನ್ನೇಳದಿರುತ್ತಿದ್ದರೆ ಅಂತ್ಯ ದಿನ ತನಕ ಅವರಲ್ಲೇ ಉಳಿಯುತ್ತಿದ್ದರೆಂದೂ ಕುರ್ಆನ್ ಹೇಳಿವೆ.                           *ಆದ್ದರಿಂದ ನಮ್ಮ ಯಾವುದೇ ಸಮಸ್ಯಗಳಿಗೆ ದುಆ ಅಧಿಕ ಗೊಳಿಸುವುದು, ಈ ಮೇಲಿನಂತಹ ಝಿಕ್ರ್-ಗಳನ್ನು ಹೇಳುವುದು, ವಿವಿಧ ಮಜ್ಲಿಸ್-ಗಳನ್ನು ಸಂಘಟಿಸುವುದು ಇವುಗಳನ್ನು ನಾವು ಹೆಚ್ಚೆಚ್ಚಾಗಿ ಮಾಡಬೇಕಾಗಿವೆ. ಇದೆಲ್ಲವೂ ಬಹಳ ಪರಿಣಾಮಕಾರೀ ಪರಿಹಾರ ಮಾರ್ಗಗಳಾಗಿವೆ.*
ಇತೀ.....ಮದನಿ ಅಬೂ ಮುನಝ್ಝಹ:

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...