ಮದೀನಾದ ಪವಿತ್ರ ಹಸಿರು ಖುಬ್ಬ
*ಹೌದು ಅದೊಂದು ವಿಸ್ಮಯ... ಅದು ನೋಡುವಾಗಲೇ ಏನೂ ಒಂದು ವಿಶೇಷ ಆನಂದ, ಹೃದಯಕ್ಕೆ ಒಂದು ರೀತಿಯ ಔಷಧಿ ಅಂತಾನೇ ಹೇಳಬಹುದು. ಸತ್ಯವಿಶ್ವಾಸಿಯ ಪಾಲಿಗೆ ಅದು ಕೇವಲ ಒಂದು ಕಟ್ಟಡವಲ್ಲ. ಬದಲಾಗಿ ಹೃದಯದ ಒಳಗೆ ಸದಾ ಮಹಾ ಆನಂದ ನೀಡುವ ಸುಂದರ ಆಕೃತಿಯಾಗಿದೆ, ಮದೀನಾದ ಬಿಳಿ ಅಮೃತ ಶಿಲೆಯ ಸ್ವರ್ಣಕೊಟ್ಟರದಲ್ಲಿರುವ ಪ್ರಪಂಚದ ಎಲ್ಲಾ ಸೌಂದರ್ಯವನ್ನು ಮರೆಮಾಚುವ ನಯನಮನೋಹರವಾದ ಪವಿತ್ರ ಹಸಿರು ಖುಬ್ಬ....*
ಖುಬ್ಬ ಅಂದರೆ ನಾವು ತುಂಬಾ ಪ್ರೀತಿಸುತ್ತೇವೆ.... ಆ ಪ್ರೀತಿಯಿಂದಲೇ ನಾವು ಹಲವು ಕಾರ್ಯಕ್ರಮ ಮತ್ತು ಇತರ ವಿಷಯಗಳಿಗೆ ಪವಿತ್ರ ಖುಬ್ಬದ ಚಿತ್ರವನ್ನು ಹಾಕುತ್ತೇವೆ. ಆ ಪವಿತ್ರ ಫೋಟೋವು ಅದಕ್ಕೆ ಬೇರೆಯೇ ವಿಶೇಷ ಸೌಂದರ್ಯ ನೀಡುತ್ತದೆ. ಆದರೆ ನಾವು ಪವಿತ್ರ ಖುಬ್ಬದ ಚಿತ್ರ ಹಾಕುವಾಗ ಸ್ವಲ್ಪ ಗಮನಿಸಬೇಕು. ಆ ಪವಿತ್ರ ಖುಬ್ಬದ ಫೋಟೋ ನೆಲಕ್ಕೆ ಬೀಳುವುದು, ಅಥವಾ ಎಲ್ಲೂ ಒಂದು ಕಡೆ ಅದರ ಪವಿತ್ರ್ಯತೆಗೆ ಚ್ಯುತಿ ಬರುವ ರೂಪದಲ್ಲಿ ಇರುವುದು ಮುಂತಾದ ಯಾವುದೇ ರೀತಿಯ ಸಮಸ್ಯೆ ಬರುವ ಸಂಧರ್ಭ ಇರುವುದಾದರೆ ದಯವಿಟ್ಟು ಖುಬ್ಬದ ಚಿತ್ರವನ್ನು ಹಾಕಲು ಹೋಗಲೇಬೇಡಿ. ಒಬ್ಬ ಸತ್ಯವಿಶ್ವಾಸಿಗೆ, ಪ್ರವಾದೀ ﷺِ ಪ್ರೇಮಿಗೆ ಅದು ಸಹಿಸಲಾಗದ ಕಾರ್ಯವಾಗಿದೆ.
ಸಾಧಾರಣವಾಗಿ ರಬೀವುಲ್ ಅವ್ವಲ್ ನಲ್ಲಿ ಫ್ಲೆಕ್ಸ್'ಗಳಿಗೆ ಪವಿತ್ರ ಖುಬ್ಬದ ಚಿತ್ರ ಹಾಕಿಸುತ್ತೇವೆ. ಆ ಪವಿತ್ರ ಖುಬ್ಬದ ಚಿತ್ರವಿರುವ ಫ್ಲೆಕ್ಸನ್ನು ಕಾರ್ಯಕ್ರಮ ಮುಗಿದ ಮೇಲೆ ಎತ್ತರದ ಸ್ಥಳದಲ್ಲಿ ಜೋಪಾನವಾಗಿ ಇಡುವುದಾದರೆ ಮಾತ್ರ ಪವಿತ್ರ ಖುಬ್ಬದ ಚಿತ್ರ ಹಾಕಿಸಿ.
ಇನ್ನು ವಾಲ್ ಪೋಸ್ಟರ್'ಗಳಲ್ಲಿ ಪವಿತ್ರ ಖುಬ್ಬದ ಚಿತ್ರ ಹಾಕಲೇಬೇಡಿ. ಅದು ಕಾರ್ಯಕ್ರಮ ಮುಗಿದ ಮೇಲೆ ಹರಿದು ನೆಲಕ್ಕೆ ಹಾಕುತ್ತಾರೆ. ಮತ್ತೆ ನೋಟೀಸ್'ಗಳಲ್ಲೂ ಹಾಕಬೇಡಿ ಅದೂ ಕೂಡಾ ಜನರು ಬಿಸಾಡಿ ಬಿಡುತ್ತಾರೆ.
ಕೆಲವು ಹಜ್ಜ್ ಉಮ್ರಾ ಟೂರ್ ಗಳ ನೋಟಿಸ್ ಗಳಲ್ಲಿ ಹೆಚ್ಚಾಗಿ ಪವಿತ್ರ ಕಬಾ ಮತ್ತು ಪವಿತ್ರ ಖುಬ್ಬದ ಚಿತ್ರ ಕಾಣಸಿಗುತ್ತದೆ. ಅಂತಹಾ ನೋಟಿಸ್ ಖಂಡಿತವಾಗಿಯೂ ಜನರ ಕೈಯಲ್ಲಿ ಜೋಪನವಾಗಿರುವುದಿಲ್ಲ. ಇದೆಲ್ಲಾ ಮುತ್ತು ನಬಿ ﷺِ ತಂಙಳ ಮೇಲಿರುವ ಇಷ್ಕಿನ ಭಾಗವಾಗಿದೆ. ಆ ಪವಿತ್ರ ಖುಬ್ಬದ ಚಿತ್ರ ಎಲ್ಲೆಲ್ಲೋ ಬೀಳುವುದು ಸತ್ಯವಿಶ್ವಾಸಿಗೆ ಇಷ್ಟವಿಲ್ಲದ ಕಾರ್ಯವಾಗಿದೆ. ಇಸ್ಲಾಮಿನಲ್ಲಿ ಗೌರವಕ್ಕೆ ತುಂಬಾ ಸ್ಥಾನವಿದೆ. ಮಲಕುಗಳ ನೇತಾರ ಆಗಿದ್ದ ಆಝಾಝೀಲ್ ಇಬ್ಲೀಸ್ ಆದದ್ದು ಗೌರವ ಇಲ್ಲದ್ದರಿಂದ ಎಂದು ಎಲ್ಲರಿಗೂ ತಿಳಿದ ವಿಚಾರ. ಖುಬ್ಬದ ಚಿತ್ರ ನೋಡಲು ಆಸೆಯಿದ್ದರೆ ನಮ್ಮ ಮನೆಯ ಗೋಡೆಯ ಮೇಲೆ ಒಳ್ಳೆಯ ಫ್ರೇಮ್ ಹಾಕಿಸಿ ಇಡಬಹುದು. ಮನೆಯ ಗೋಡೆಯಲ್ಲಿಟ್ಟರೆ ಅದನ್ನು ಯಾವಾಗಲೂ ನೋಡುತ್ತಾ ನೋಡುತ್ತಾ ಆನಂದಿಸಬಹುದು. ಮತ್ತೆ ಅದಕ್ಕೆ ಯಾವುದೇ ಗೌರವ ಚ್ಯುತಿಯೂ ಬರಲ್ಲ.
*ಎಲ್ಲೂ ಕೇಳಿದ ನೆನಪು ಒಮ್ಮೆ ಮಡವೂರ್ ಶೈಖ್ ಸಿ.ಯಂ ವಲಿಯುಲ್ಲಾಹಿ ಖ.ಸಿ ರವರು ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿ ಮೇಜಿನ ಮೇಲೆ ಹಳೆಯ ಒಂದು ಬ್ಯಾನರ್ ಹಾಸಿದ್ದರು. ಅದರಲ್ಲಿ ಪವಿತ್ರ ಖುಬ್ಬದ ಚಿತ್ರವಿತ್ತು ಅದರ ಮೇಲೆ ಚಾ ತಂದು ಇಟ್ಟಾಗ ಮಹಾನುಭಾವರು ಇದು ಚಾ ಇಡಲು ಇರುವುದಲ್ಲಾ ಎಂದು ವಿರೋಧಿಸಿದ್ದರಂತೆ. ಇದೆಲ್ಲಾ ಮುತ್ತು ನಬಿ ﷺِ ತಂಙಳ ಪುಣ್ಯ ಇಷ್ಕಿನ ಭಾಗವಾಗಿದೆ.*
*ಇದು ಖುಬ್ಬದ ವಿಷಯದಲ್ಲಿ ಮಾತ್ರವಲ್ಲ ಅಲ್ಲಾಹು ಗೌರವಿಸಿದ ಎಲ್ಲದರಲ್ಲೂ ಗೌರವ ಪಾಲಿಸುವುದು ನಮ್ಮ ಕರ್ತವ್ಯ. ಅಲ್ಲಾಹನ ಮತ್ತು ರಸೂಲರ ﷺِ ನಾಮವನ್ನು ಅದರ ಗೌರವಕ್ಕೆ ದಕ್ಕೆಬರುವಂತಹಾ ಸ್ಥಳದಲ್ಲಿ ಹಾಕುವುದು, ಒಮ್ಮೆ ಉಪಯೋಗಿಸುವ ವಸ್ತುಗಳಿಗೆ ಪವಿತ್ರ ನಾಮ ಹಾಕುವುದು. ಉದಾ; ಮದುವೆ ಆಮಂತ್ರಣ ಪತ್ರಿಕೆಯಲ್ಲಿ in the name of allah, insha allaah, ಖುರ್ ಆನ್ ಆಯತ್, ಹದೀಸ್, ದುಆ ಗಳನ್ನು ಹಾಕುವುದು, ಈ ಅಮಂತ್ರನ ಪತ್ರಿಕೆ ಅದರ ಸಮಯದ ಬಳಿಕ ಎಲ್ಲೆಲ್ಲೂ ಬಿಸಾಡಿಬಿಡುತ್ತಾರೆ. ಇದರಿಂದ ತುಂಬಾ ಜಾಗೃತೆಯಿರಲಿ. ನೋಟೀಸ್'ಗಳಲ್ಲಿ ಅಲ್ಲಾಹನ ನಾಮ, ಬಿಸ್ಮಿ ಹಾಕುವುದು, ರಮಲಾನ್ ಬಾಂಗ್ ಟೈಮಿಂಗ್ ಕಾರ್ಡುಗಳಲ್ಲಿ ದುಅಗಳನ್ನು ಹಾಕುವುದು, ಸಂಗ ಸಂಸ್ಥೆಗಳ ರಿಸಿಪ್ಟ್ ಗಳಲ್ಲಿ جزاك الله خير ಎಂದು ಹಾಕುವುದು. ಜೋಪಾನವಾಗಿಡಲು ಸಾಧ್ಯವಿಲ್ಲದ ಫ್ಲೆಕ್ಸ್,ಗಳಲ್ಲಿ ಆಯತ್- ಹದೀಸ್ ಗಳನ್ನು ಮತ್ತು لا اله الا الله محمد رسول الله ಎಂದು ಹಾಕುವುದು, ವಾಲ್'ಪೋಸ್ಟರ್'ಗಳಲ್ಲಿ ಅಲ್ಲಾಹ್, ಮುಹಮ್ಮದ್ ﷺِ ಎಂದು ಹಾಕುವುದು. ಪಕ್ಷಿಗಳು ಗಲೀಜು ಮಾಡುವ ಸ್ಥಳಗಳಲ್ಲಿ ಪವಿತ್ರ ನಾಮಗಳನ್ನು ಹಾಕುವುದು ಮುಂತಾದ ಎಲ್ಲಾ ಕಾರ್ಯವೂ ಅದರ ಗೌರವಕ್ಕೆ ಚ್ಯುತಿ ತರುವಂತಹಾ ವಿಷಯವಾಗಿರುವುದರಿಂದ ಅದನ್ನು ಹಾಕದೆ ಅದರ ಗೌರವ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ.*
*ಪವಿತ್ರ ನಅಲ್ ಮುಬಾರಕ್, ನಬಿ ﷺِ ತಂಙಳ ಪುಣ್ಯ ಪದರಕ್ಷೆಯ ಮಾದರಿಯಿರುವ ಟೊಪ್ಪಿ ಧರಿಸುವುದಾರೆ ಅದನ್ನು toilet ಮತ್ತು bathroom ಗೆ ಹೋಗುವಾಗ ಧರಿಸದಿರಿ. ಅದಕ್ಕಿರುವ ಗೌರವ ಹೇಳತೀರದು. ಅಲ್ಲಾಮಾ ಮುಕ್ರಿ رضي الله عنه ನಅಲ್ ಮುಬಾರಕ್ ಬಗ್ಗೆ 450ಕ್ಕಿಂತಲೂ ಅಧಿಕ ಪುಟಗಳಲ್ಲಿರುವ ಮಹಾ ಗ್ರಂಥವನ್ನೇ ರಚಿಸಿದ್ದಾರೆ. ಇಮಾಂ ಯುಸುಫುನ್ನಬಹಾನಿ رضي الله عنه ರವರು ಪವಿತ್ರ ನಅಲ್ ಮುಬಾರಕ್ ಚಿತ್ರವನ್ನು ಬಿಡಿಸಿ ಅದಕ್ಕೆ ಸೇವೆ ಮಾಡಿ ವಿಜಯಹೊಂದಿದ ಮಹಾತ್ಮರಾಗಿದ್ದಾರೆ. ಆದ್ದರಿಂದ ನಅಲ್ ಮುಬಾರಕ್ ಟೊಪ್ಪಿ ಧರಿಸುವಾಗ ಅದರ ಗೌರವನ್ನು ಸಂರಕ್ಷಿಸಲು ಸಾಧ್ಯವಾದರೆ ಮಾತ್ರ ಧರಿಸಿ. ಪುಣ್ಯ ಪ್ರವಾದೀ ﷺِ ತಂಙಳರು ಮಿಹ್ರಾಜ್ ಯಾತ್ರೆ ಹೋದಾಗಲೂ ಆರ್ಶ್ ನ ಬಳಿ ತೆರಳಿದಾಗಳೂ ತನ್ನ ಪವಿತ್ರ ಪಾದರಕ್ಷೆ ಕಳಚಿರಲಿಲ್ಲ. ಆ ಪುಣ್ಯ ನಅಲುಲ್ ಮುಸ್ತಫಾ ﷺِ ಪವಿತ್ರ ಪದರಕ್ಷೆಯ ಮಾದರಿಯಾಗಿದೆ ನಅಲ್ ಮುಬಾರಕ್. ಆದ್ದರಿಂದ ಗೌರವಿಸುವ ಎಲ್ಲವನ್ನೂ ಗೌರವಿಸಿದರೆ ನಮ್ಮನ್ನು ಅಲ್ಲಾಹು ಗೌರವಿಸುವನು.*
ಅಲ್ಲಾಹನು ಅವನ ಶಾಪದಿಂದ ನಮ್ಮನ್ನು ಕಾಪಾಡಲಿ. ಗೌರವಿಸಲು ಕಲಿಸಿದ ಎಲ್ಲವನ್ನೂ ಗೌರವಿಸಿ ಸೂಕ್ಷ್ಮತೆಯಿಂದ ಜೀವಿಸಲು ಅಲ್ಲಾಹು ನಮಗೆಲ್ಲರಿಗೂ ತೌಫಿಖ್ ನೀಡಲಿ.
صلى الله عليك يا رسول الله صلى الله عليه وسلم
امين يا رب العالمين
اللهم صل على سيدنا محمد وعلى اله وصحبه وسلم
✒ ಅಬ್ದುಲ್ ನಾಸಿರ್ ಕಾವೂರು🍇
➖➖➖➖➖➖➖➖➖

Comments