ವಿಸ್ಮಯ ತುಂಬಿದ ಜೀವಜಗತ್ತು
ಜೀವಪರ್ಯಂತ ಕಣ್ಣು ಮುಚ್ಚದ ಗೂಬೆ
*ಗೂಬೆ ಮನೆ ನುಗ್ಗಿದರೆ ಅಪಶಕುನವೇ...?*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119
▪ *ಹೊಟ್ಟೆಪಾಡಿಗಾಗಿ* ರಾತ್ರಿ ಹೊತ್ತಿನಲ್ಲಿ ಮಾತ್ರ ಸಂಚಾರ ಮಾಡುವ ಕೆಲವು ಪಕ್ಷಿಗಳಲ್ಲಿ ಒಂದಾಗಿದೆ ಗೂಬೆ ಅಥವಾ ಗೂಗೆ. ರಾತ್ರಿ ಸಮಯ ಸಂಚಾರದಲ್ಲಿರುವ ಇದು ಹಗಲಿನಲ್ಲಿ ತನ್ನ ಗೂಡಿನಲ್ಲೇ ಇರುತ್ತದೆ.
▪ *ಹಗಲುಹೊತ್ತು* ಕಣ್ಣಿಗೆ ದೃಷ್ಟಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣವೆನ್ನಲಾಗಿದೆ. ಅಲ್ಲದೆ *"ನನ್ನಷ್ಷು ಸುಂದರಿಯಾದ ಪಕ್ಷಿ ಈ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ. ಆದ್ದರಿಂದ ನಾನು ಹಗಲುಹೊತ್ತು ಸಂಚಾರಕ್ಕೆ ಹೊರಟರೆ ನನ್ನ ಚಂದ ನೋಡಿ ಇತರ ಪಕ್ಷಿಗಳು ಅಸೂಯೆಗೊಂಡು ಏನಾದರು ಹೇಳಿದರೆ ನನಗೆ ಕಣ್ಣದೃಷ್ಟಿ ಬೀಳಬಹುದು"* ಎಂಬ ಅಹಂಕಾರ ಈ ಪಕ್ಷಿಗೆ ಇರುವುದರಿಂದ ಹಗಲು ಹೊತ್ತಿನಲ್ಲಿ ಸಂಚಾರಕ್ಕೆ ಹೊರಡುವುದಿಲ್ಲ ಎಂದು ತತ್ವಜ್ಞಾನಿ ಜಾಹಿಳ್ ಅಭಿಪ್ರಾಯ ಪಟ್ಟಿದ್ದಾರೆ.
▪ *ಹಗಲಿನಲ್ಲಿ* ಈ ಪಕ್ಷಿಯನ್ನು ಕಂಡರೆ ಇತರ ಪಕ್ಷಿಗಳು ಕೊಂದು ಬಿಡುತ್ತದೆ. ಹಗಲು ಸಂಚಾರದ ಎಲ್ಲಾ ಪಕ್ಷಿಗಳು ಇದರ ವೈರಿಯಾಗಿದ್ದರೂ ಕಾಗೆಯಾಗಿರುತ್ತದೆ ಕಟ್ಟಾವೈರಿ. ಅಂತೆಯೇ ರಾತ್ರಿಯ ರಾಜನಾದ ಇದು ಇತರ ಯಾವ ಬಲಿಷ್ಠವಾದ ಹಗಲು ಪಕ್ಷಿಯನ್ನೂ ರಾತ್ರಿ ತನಗೆ ಕಾಣಸಿಕ್ಕಿದಲ್ಲಿ ನಿರಾಯಾಸ ಕೊಂದು ಬಿಡುತ್ತದೆ. ಮಾತ್ರವಲ್ಲ ರಾತ್ರಿ ತನ್ನ ಹೊಟ್ಟೆ ತುಂಬಿಸಲು ಇತರ ಪಕ್ಷಿಗಳ ಗೂಡುಗಳಿಗೆ ಹೋಗಿ ಅವುಗಳನ್ನು ಗೂಡಿನಿಂದ ಹೊರದಬ್ಬಿ ಅವುಗಳ ಮರಿಗಳು ಮತ್ತು ಮೊಟ್ಟೆಗಳನ್ನು ಆರಾಮವಾಗಿ ತಿಂದು ಬಿಡುತ್ತದೆ. ಬೆಳಗಾಗುವಾಗ ಹೊಟ್ಟೆ ತುಂಬಿಸಿ ತೇಗುತ್ತಾ ತನ್ನ ಗೂಡು ತಲುಪಿ ಸಂಜೆಯ ತನಕ ಕಳ್ಳರಂತೆ ಸುಖವಾಗಿ ನಿದ್ರೆ ಮಾಡುತ್ತದೆ.
▪ *ಈ ಕಾರಣದಿಂದ* ಪುರಾತನ ಕಾಲದಲ್ಲಿ ಈಜಿಪ್ತಿನಂತಹಾ ಕೆಲವು ರಾಷ್ಟ್ರಗಳಲ್ಲಿ ಬೇಟೆಯಾಡುವವರು ಹಗಲು ಹೊತ್ತು ಬೇಟೆಯಾಡಲು ಹೋಗುವಾಗ ತಮ್ಮೊಂದಿಗೆ ಗೂಬೆಯನ್ನು ಕೊಂಡು ಹೋಗುತ್ತಿದ್ದರು. ಕಾಡಿನಲ್ಲಿ ಬೇಟೆಯಾಡುವಾಗ ಇದನ್ನು ಕಂಡರೆ, ಅಥವಾ ಇದರ ಕೂಗು ಕೇಳಿದರೆ, ಹಗಲು ಸಂಚಾರದಲ್ಲಿರುವ ಇತರ ಪಕ್ಷಿಗಳು ಇದನ್ನು ಕೊಲ್ಲಲು ಇದರ ಹತ್ತಿರ ಬರುತ್ತಿದ್ದವು. ಬೇಟೆಗಾರನಿಗೆ ಪಕ್ಷಿಗಳನ್ನು ಬೇಟೆಯಾಡಿ ಹಿಡಿಯಲು ಇದು ಒಂದು ಒಳ್ಳೆಯ ಉಪಾಯವಾಗಿತ್ತು.
▪ *ಇದರ* ರಾತ್ರಿಯ ಕೂಗು ಬಹಳ ಭಯಾನಕವಾಗಿರುತ್ತದೆ. ಸರ್ಪ ಹಾವುಗಳಂತಹಾ ಸರೀಸೃಪಗಳು ಕೂಡ ಇದರ ಕೂಗು ಕೇಳಿದರೆ ಭಯದಿಂದ ತಮ್ಮ ತಮ್ಮ ಗೂಡುಗಳಿಗೆ ಹೋಗುತ್ತದೆ.
▪ *ಏಕಾಂತತೆಯನ್ನು* ಬಯಸುವ ಈ ಗೂಬೆಯು ಯಾವಾಗಲೂ ಒಂಟಿಯಾಗಿರುವುದೇ ವಿನಾ ಒಕ್ಕೂಟದಲ್ಲಿರುವುದಿಲ್ಲ. ಇದು ಸುಮಾರು ಇಪ್ಪತ್ತರಿಂದ ಮೂವತ್ತು ವರ್ಷಗಳ ತನಕ ಬದುಕುತ್ತದೆ. ಜನರಿಲ್ಲದ ಜನವಾಸ ಕಡಿಮೆಯಿರುವ ಊರಲ್ಲಿ ವಾಸಮಾಡುವುದಕ್ಕೆ ಇದು ಹೆಚ್ಚು ಆಸಕ್ತಿ ಕೊಡುತ್ತದೆ. ಒಂದು ಜನವಾಸವಿಲ್ಲದ ಊರಿನಲ್ಲಿ ವಾಸಿಸುತ್ತಿರುವಾಗ ಆ ಊರಿಗೆ ಬೇರೆ ಕಡೆಯಿಂದ ಜನರು ಬಂದು ವಾಸಮಾಡಲು ಶುರುಮಾಡಿದರೆ ಗೂಬೆಯು ಅಲ್ಲಿಂದ ಜಾಗ ಬದಲಾವಣೆ ಮಾಡುತ್ತದೆ.
▪ *ಇಲಿ,* ಬೆಕ್ಕಿನ ಮರಿ, ಹಲ್ಲಿ, ಹರಣೆ, ಸಣ್ಣ ಹಾವು, ಕೀಟಗಳಾಗಿರುತ್ತದೆ ಇದರ ಬೋಜನವಸ್ತು.
▪ *ಗೂಗೆಯು* ತೋಳದಂತೆಯೇ ರಾತ್ರಿ ನಿದ್ರೆ ಮಾಡುವುದು ಒಂದು ಕಣ್ಣಿನಲ್ಲಾಗಿರುತ್ತದೆ. ಇನ್ನೊಂದು ಕಣ್ಣು ತೆರೆದಿರುತ್ತದೆ. ತೋಳವಾದರೆ ಯಾವಾಗಲೂ ಒಂದೇ ಕಣ್ಣನ್ನು ಮುಚ್ಚಿ ನಿದ್ದೆ ಮಾಡುವುದಿಲ್ಲ. ಸ್ವಲ್ಪ ಸಮಯ ನಿದ್ದೆ ಮಾಡಿ ಎಚ್ಚರವಾದರೆ, ನಂತರದ ಎರಡನೇ ಪಿರೇಡಿನಲ್ಲಿ ಮತ್ತೊಂದು ಕಣ್ಣನ್ನು ಮಚ್ಚುತ್ತದೆ. ಆದರೆ ಗೂಬೆಯು ಹಾಗಲ್ಲ. ಜೀವಪರ್ಯಂತ ಒಂದು ಕಣ್ಣನ್ನು ಮಾತ್ರ ನಿದ್ರೆಗೆ ಬಳಸುತ್ತದೆ. ಎಷ್ಟರ ತನಕವೆಂದರೆ, ಇದನ್ನು ಚೂರಿಹಾಕಿ ಕೊಂದರೂ ಬದುಕಿದ್ದಾಗ ತೆರೆದಿದ್ದ ಕಣ್ಣು ಹಾಗೆಯೇ ತೆರೆದಿರುತ್ತದೆ. ಸುಬ್‌ಹಾನಲ್ಲಾಹ್.! ಇದೆಂತಹಾ ನಾವರಿಯದ ವಿಸ್ಮಯಗಳು...?
▪ *ಬದುಕಿದ್ದಾಗ* ಅಥವಾ ಸತ್ತ ನಂತರ ಒಬ್ಬನು ಇದರ ಎರಡು ಕಣ್ಣನ್ನು ಕಿತ್ತು ತೆಗೆದು ಅದರಲ್ಲಿ ಯಾವಾಗಲೂ ತೆರೆದಿಡುತ್ತಿದ್ದ ಕಣ್ಣನ್ನು ಉಂಗುರ ಧರಿಸುವಂತೆ ತನ್ನ ಕೈ ಬೆರಳಿಗೆ ಕಟ್ಟಿದರೆ ಅದು ಅವನ ಕೈಯಲ್ಲಿ ಇರುವ ತನಕ ಅವನಿಗೆ ನಿದ್ರೆ ಬಾರದು. ಅಂತೆಯೇ ಮುಚ್ಚಿರುತ್ತಿದ್ದ ಕಣ್ಣನ್ನು ಕಟ್ಟಿದರೆ ಫಲಿತಾಂಶ ವಿರುದ್ಧವಾಗಿರುವುದು.
▪ *ಎರಡು* ಕಣ್ಣನ್ನು ಕಿತ್ತ ನಂತರ ಯಾವುದು ಮುಚ್ಚಿದ್ದದ್ದು ಮತ್ತು ಯಾವುದು ತೆರೆದಿದ್ದದ್ದು ಎಂದು ಗಲಿಬಿಲಿಯಾದರೆ, (Confuse) ಎರಡು ಕಣ್ಣನ್ನೂ ನೀರಿಗೆ ಹಾಕಬೇಕು. ನೀರಿನಲ್ಲಿ ಯಾವುದು ತೇಲುತ್ತದೆಯೋ ಅದು ಎಚ್ಚರದ ಕಣ್ಣಾಗಿರುವುದು. ಯಾವುದು ಮುಳುಗುತ್ತದೆಯೋ ಅದು ನಿದ್ರೆಯ ಕಣ್ಣಾಗಿರುತ್ತದೆ.!
▪ *ಗೂಗೆಯು* ಬರೀ ಎರಡು ಮೊಟ್ಟೆಯಿಡುತ್ತದೆ. ಅದರಲ್ಲಿ ಒಂದರಲ್ಲಿ ಮಾತ್ರ ಮರಿಯಾಗುತ್ತದೆ. ಮತ್ತೊಂದರಲ್ಲಿ ಮರಿಯಾಗುವುದಿಲ್ಲ. ಅಂತೆಯೇ ಈ ಎರಡು ಮೊಟ್ಟೆಯ ದ್ರಾವಣದಲ್ಲಿ ಒಂದು ಕೂದಲನ್ನು ಚಿಗುರಿಸುವುದೂ ಮತ್ತೊಂದು ಉದುರಿಸುವುದೂ ಆಗಿರುತ್ತದೆ.
▪ *ತಲೆ ಕೂದಲು* ಚಿಗುರಿಸುವುದು ಮತ್ತು ಉದುರಿಸುವುದು ಯಾವುದೆಂದು ತಿಳಿಯಬೇಕೆಂದಿದ್ದರೆ, ಒಂದೊಂದು ಮೊಟ್ಟೆಯನ್ನು ಒಡೆದು ಅದರ ದ್ರಾವಣವನ್ನು ಬೇರೆಬೇರೆ ಒಂದೊಂದು ಗಾಜಿನ ಬಾಟಲಿಗೆ ಸುರಿಯಬೇಕು. ನಂತರ ಅದನ್ನು ಚೆನ್ನಾಗಿ ಕಲಸಬೇಕು. ಕೊನೆಗೆ ನೋಡುವಾಗ ಒಂದರಲ್ಲಿರುವ ದ್ರಾವಣವು ಕಪ್ಪು ಬಣ್ಣವಾಗಿಯೂ ಮತ್ತೊಂದು ಹಳದಿಯಾಗಿಯೂ ಇರುವುದು. ಯಾವುದು ಕಪ್ಪಾಗಿದೆಯೋ ಆ ಮೊಟ್ಟೆಯಲ್ಲಿ ಮರಿಯಾಗುತ್ತದೆ. ಮಾತ್ರವಲ್ಲ ಆ ದ್ರಾವಣವನ್ನು ತಲೆಗೆ ಹಚ್ಚಿದರೆ ಕೂದಲು ಉದುರುವುದು ಕೊನೆಗೊಂಡು ಚಿಗುರಲು ಶುರುವಾಗುತ್ತದೆ. ಅಂತೆಯೇ ಹಳದಿ ದ್ರಾವಣವಾದ ಮೊಟ್ಟೆಯಲ್ಲಿ ಮರಿಯಾಗುವುದಿಲ್ಲ. ಮಾತ್ರವಲ್ಲ ಅದನ್ನು ತಲೆಗೆ ಹಚ್ಚಿದರೆ ಕೂದಲು ಉದುರುತ್ತದೆ.
▪ *ಗೂಗೆಯನ್ನು* ಒಂದು ಅಪಶಕುನ ಮತ್ತು ಕೆಟ್ಡ ಪಕ್ಷಿಯೆಂದು ನಂಬಲಾಗುತ್ತದೆ. ಗೂಗೆಯು ಮನೆಗೆ ಪ್ರವೇಶಿಸಿದರೆ ಅಥವಾ ಮನೆಯ ಮಹಡಿಯ ಮೇಲೆ ಕುಳಿತರೆ ಆ ಮನೆ ಮತ್ತು ಕುಟುಂಬ ಸಂಪೂರ್ಣವಾಗಿ ಅವನತಿಯಾಗಿ ಅಳಿದು ಹೋಗುತ್ತದೆ ಎಂಬ ನಂಬಿಕೆ ಪ್ರಾಚೀನ ಕಾಲದಿಂದಲೇ ಇದೆ. ಇಂತಹಾ ಘಟನೆಗಳು ನಡೆದಾಗ ಅಂದಿನ ಜನರು ಆ ಮನೆ ಮತ್ತು ಊರನ್ನು ಬಿಟ್ಟು ಹೋದ ಇತಿಹಾಸ ಕೂಡ ಇದೆ. ಆದರೆ ಇಸ್ಲಾಮಿನಲ್ಲಿ ಇದಕ್ಕೆ ಯಾವುದೇ ಸ್ಪಷ್ಟವಾದ ಆಧಾರವಿಲ್ಲ. ಅದಾಗ್ಯೂ ಗೂಗೆಯು ಮನೆ ಪ್ರವೇಶಿಸುವುದನ್ನು ಕನಸಿನಲ್ಲಿ ಕಾಣುವುದು ಕೆಲವೊಮ್ಮೆ ಅಪಶಕುನ ಮತ್ತು ಅಪಾಯದ ಸೂಚನೆಯೆಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
▪ *ಕೈಸರ್* ಚಕ್ರವರ್ತಿಯು ತನ್ನ ಸೇವಕನಲ್ಲಿ *"ಕೆಟ್ಟದರಲ್ಲಿ ಕೆಟ್ಟ ಪಕ್ಷಿಯನ್ನು, ಕೆಟ್ಟ ಮರದ ಕಟ್ಟಿಗೆಯಲ್ಲಿ ಬೇಯಿಸಿ, ಕೆಟ್ಟವರಲ್ಲಿ ಕೆಟ್ಟವನಿಗೆ ತಿನ್ನಿಸು"* ಎಂದು ಹೇಳಿದಾಗ ಬುದ್ಧಿವಂತನಾದ ಆತನು ಒಂದು ಗೂಬೆಯನ್ನು ಹಿಡಿದು, ಕಣಿಗಲು (Oleander) ಮರದ ಕಟ್ಟಿಗೆಯಲ್ಲಿ ಬೇಯಿಸಿ, ಚಾಡಿ ಮಾಡುವ ಚಾಡಿಕೋರನಿಗೆ ತಿನ್ನಿಸಿದನೆಂದು *ತಾರೀಕ್ ಬಿನ್ ನಜ್ಜಾರ್* ಎಂಬ ಗ್ರಂಥದಲ್ಲಿ ಇಮಾಮ್ ಬಿನ್ ನಜ್ಜಾರ್ ಉಲ್ಲೇಖಿಸಿದ್ದಾರೆ.
▪ *ಗೂಬೆಯ* ಪಿತ್ತಕೋಶವನ್ನು ಜಜ್ಜಿ ಅದರ ನೀರನ್ನು ಕಣ್ಣಿಗೆ ಪೂಸಿದರೆ ರಾತ್ರಿ ಬೆಳಕು ನೋಡಲಾಗದೆ ಬಲೆಕಟ್ಟುವ ತೊಂದರೆ ನಿವಾರಣೆಯಾಗುತ್ತದೆ. ಅಂತೆಯೇ ಇದರ ಪಿತ್ತಕೋಶವನ್ನು *ಓಕ್* (Oak) ಮರದ ಕಟ್ಟಿಗೆಯನ್ನು ಸುಟ್ಟ ಬೂದಿಯೊಂದಿಗೆ ಮಿಶ್ರಣ ಮಾಡಿ ತಿಂದರೆ ಮೂತ್ರನಾಳ ಮತ್ತು ಮೂತ್ರಕೋಶದಲ್ಲಿರುವ ಕಲ್ಲು ಹಾರಿ ಹೋಗುತ್ತದೆ. ಹಾಗೆಯೇ ಚಾಪೆಯಲ್ಲಿ ಮೂತ್ರಶಂಕೆ ಮಾಡುವವನಿಗೂ ಬಹಳ ಫಲ ಕೊಡುತ್ತದೆ.
▪ *ಒಬ್ಬನು* ಇದರ ಎರಡು ಕಣ್ಣನ್ನು ಕಸ್ತೂರಿಯೊಂದಿಗೆ ಮಿಶ್ರಣ ಮಾಡಿ ತನ್ನ ಶರೀರಕ್ಕೆ ಅಥವಾ ಬಟ್ಟೆಗೆ ಸವರಿದರೆ ಆ ವಾಸನೆಯನ್ನು ಸ್ರವಿಸುವ ಎಲ್ಲರೂ ಆತನನ್ನು ಬಹಳ ಮೆಚ್ಚುತ್ತಾರೆ. ಮಾತ್ರವಲ್ಲ ಜನರೆಡೆಯಲ್ಲಿ ಪ್ರಸಿದ್ಧಿಯಾದವನಾಗುತ್ತಾನೆ.
▪ *ಶೇಂದಿ* ಅಂಗಡಿಯಲ್ಲಿ ಹಲವಾರು ಮಂದಿ ಶೇಂದಿ ಕುಡಿಯುತ್ತಿರುವಾಗ ಅಲ್ಲಿ ಇದರ ಎಲುಬನ್ನು ಸುಟ್ಟು ಹೊಗೆ ಹಾಕಿದರೆ ಶೇಂದಿಯಂಗಡಿಯಲ್ಲಿ ಯುಧ್ದ ಸಮಾನವಾದ ರೀತಿಯಲ್ಲಿ ಕುಡುಕರ ಎಡೆಯಲ್ಲಿ ಪರಸ್ಪರ ಜಂಜಾಟವಾಗುತ್ತದೆ.
▪ *ಗೂಬೆಯ* ಮಾಂಸ ತಿಂದ ಕೂಡಲೇ ವಾಕರಿಕೆ ಶುರುವಾಗುತ್ತದೆ. ಇದರ ಯಕೃತ್ತು (Liver) ಒಂದು ತರ ವಿಷವಾಗಿದೆ. ಆದ್ದರಿಂದ ಅದನ್ನು ತಿಂದ ಕೂಡಲೇ ಮಾರಕವಾದ ಕರುಳುಬೇನೆ ಖಾಯಿಲೆಗೆ ತುತ್ತಾಗುತ್ತಾನೆ.
▪ *ಇದರ* ಹೃದಯವನ್ನು ಕಿತ್ತು ಮಹಿಳೆಯೊಬ್ಬಳ ಕೈಗೆ ರಾತ್ರಿ ಮಲಗುವಾಗ ಕಟ್ಟಿದರೆ, ಹಗಲಿನಲ್ಲಿ ಅವಳು ನಿಷಿದ್ಧ ಮತ್ತು ಹಲಾಲ್ ಆದ ಏನೆಲ್ಲಾ ಕೆಲಸ ಮಾಡಿರುತ್ತಾಳೆ ಅದನ್ನೆಲ್ಲ ರಾತ್ರಿ ನಿದ್ದೆಯಲ್ಲಿ ಸವಿಸ್ತಾರವಾಗಿ ವಿವರಿಸಿ ಹೇಳುವಳು.! ಅಂತೆಯೇ ಇದರ ಹೃದಯವನ್ನು ತೋಳದ ಚರ್ಮದಲ್ಲಿ ಸುತ್ತಿ ಒಬ್ಬನ ಕಾಲಿನ ತೊಡೆಯ ಭಾಗಕ್ಕೆ ಕಟ್ಟಿಹಾಕಿದರೆ, ಅದು ಅವನ ಕಾಲಿನಲ್ಲಿ ಇರುವ ತನಕ ಅವನನ್ನು ಯಾವ ವಿಷ ಜಂತುವೂ ಕಚ್ಚದು. ಮಾತ್ರವಲ್ಲ ಯಾವ ರಾತ್ರಿಕಳ್ಳನೂ ಅವನತ್ತ ಬರಲಾರನು. ರಾತ್ರಿಯಲ್ಲಿ ಹಗಲಿನಂತೆಯೇ ಬಹಳ ಧೈರ್ಯವಾಗಿ ಎಲ್ಲಿಗೆ ಬೇಕಾದರೂ ಹೋಗಬಹುದು.
▪ *ಗೂಗೆಯ* ಕೊಬ್ಬನ್ನು ಒಬ್ಬನು ಕಣ್ಣಿಗೆ ಪೂಸಿದರೆ ಅವನ ಕಣ್ಣು ಯಾವ ಅಮವಾಸ್ಯೆಯ ಕತ್ತಲೆಯಲ್ಲೂ ಬೆಕ್ಕಿನ ಕಣ್ಣಿನಂತೆ ಮಿನುಗುತ್ತದೆ.
▪ *ಇಂಗ್ಲಿಷ್‌ನಲ್ಲಿ* (Facial paralysis) ಎಂದು ಕರೆಯಲ್ಪಡುವ ಮುಖದ ಕೆಳಭಾಗವು ವಕ್ರವಾಗಿಯೂ ಕೆಳಗಿನ ತುಟಿಯು ಉಬ್ಬಿಯೂ ಇರುವ ಒಂದು ರೋಗವಾಗಿದೆ "ಅರ್ಧಾಂಗವಾಯು". ಈ ಖಾಯಿಲೆಗೆ ಬಲಿಯಾದವನು ಗೂಬೆಯ ಹೃದಯವನ್ನು ಒಂದೆರಡು ಸಲ ಸುಟ್ಟು ತಿಂದರೆ ಖಾಯಿಲೆ ಗುಣವಾಗುತ್ತದೆ.
▪ *ಗೂಬೆಯನ್ನು* ಒಬ್ಬನು ಕನಸಲ್ಲಿ ಕಂಡರೆ ಮುಂದಕ್ಕೆ ಅವನು ಯಾರ ಹೆದರಿಕೆಯೂ ಇಲ್ಲದ ಬಹಳ ಧೈರ್ಯಶಾಲಿ ವ್ಯಕ್ತಿಯಾಗುವನು ಎಂಬುದರ ನಿಶಾನೆಯಾಗಿದೆ.
▪ *ಒಬ್ಬನ* ಮನೆಯೊಳಗೆ ಗೂಬೆಯು ಪ್ರವೇಶಿಸಿದ ಕನಸು ಕಂಡರೆ ಯಾರಾದರೊಬ್ಬನ ಮರಣವಾರ್ತೆಯ ಲಕ್ಷಣವಾಗಿದೆ. ಕೆಲವೊಮ್ಮೆ ಮನೆಗೆ ಕಳ್ಳರು ನುಗ್ಗುವ ಸೂಚನೆಯಾಗಿದೆ. ಅಥವಾ ಅವನ ಮನೆ, ಕುಟುಂಬ, ವ್ಯವಹಾರ ಅವನತಿ ಮತ್ತು ವಿನಾಶದತ್ತ ಹೋಗುವುದರ ಸಂಕೇತವಾಗಿದೆ.
▪ *ಗೂಗೆಯ* ಕೂಗನ್ನು ಕನಸಿನಲ್ಲಿ ಕೇಳುವುದು ಯಾವುದಾದರು ಅಪಾಯಕಾರಿ ವಾರ್ತೆ ಬರಲಿರುವುದರ ಲಕ್ಷಣವಾಗಿದೆ.
▪ *ಗೂಬೆಯು* ಇಸ್ಲಾಮಿನಲ್ಲಿ ಭಕ್ಷ್ಯಯೋಗ್ಯವಲ್ಲ. ನಿಷಿದ್ಧವಾಗಿದೆ.
ಸಂಗ್ರಹ ; ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಅಬ್‌ಶೀಹಿಯ *ಮುಸ್‌ತತ್‌ರಫ್,* ಇಮಾಮ್ ಖಝ್‌ವೀನಿಯ *ಅಜಾಯಿಬುಲ್ ಮಖ್‌ಲೂಖಾತ್,* ಇಮಾಮ್ ಶಿಹಾಬುದ್ದೀನ್ ಅಹ್‌ಮದ್ ಅಲ್ ಉಮರಿಯ *ಮಸಾಲಿಕುಲ್ ಅಬ್‌ಸ್ವಾರ್ ಫೀ ಮಮಾಲಿಕಿಲ್ ಅಮ್‌ಸ್ವಾರ್* ಎಂಬ ಗ್ರಂಥಗಳು.

Comments