ಇಮಾಮ್ ಶಾಫಿಯೀಯವರ ಮೂರು ತಪ್ಪುಗಳನ್ನು ಕಂಡುಹಿಡಿದ ಪುಟ್ಟ ಬಾಲಕಿ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119
▪ *ಇಮಾಮ್* ಅಹ್‌ಮದ್ ಬಿನ್ ಹಂಬಲ್ (ರ) ರವರು ಇಮಾಮ್ ಶಾಫಿಯೀ (ರ) ರವರ ಒಬ್ಬ ಪ್ರಮುಖ ಶಿಷ್ಯರಾಗಿದ್ದರು. ಮಾತ್ರವಲ್ಲ ತನ್ನ ಗುರುವನ್ನು ಬಹಳ ಪ್ರೀತಿ ಮತ್ತು ಗೌರವದಿಂದ ಯಾವಾಗಲೂ ಕಾಣುತ್ತಿದ್ದರು.
▪ *ಇಮಾಮ್* ಅಹ್‌ಮದ್ ಬಿನ್ ಹಂಬಲ್ (ರ) ರಿಗೆ ಧರ್ಮದಲ್ಲಿ ಬಹಳ ಭಯ ಭಕ್ತಿಯಿರುವ ಸದಾಚಾರಿಯಾದ ಒಬ್ಬಳು ಮಗಳಿದ್ದಳು. ಮಗಳಲ್ಲಿ ತಂದೆಯು ತನ್ನ ಗುರುವಾದ ಇಮಾಮ್ ಶಾಫಿಯವರ ಬಗ್ಗೆ ಯಾವಾಗಲೂ ಪ್ರಶಂಸಿಸಿ, ಹೊಗಳಿ ಹೇಳುತ್ತಿದ್ದರು. *"ನನ್ನ ಗುರುವಿಗೆ ಸಮಾನವಾದ ಒಬ್ಬ ಪಂಡಿತ ಈ ಹಾಲಿ ಜಗತ್ತಿನಲ್ಲಿ ಯಾರೂ ಇಲ್ಲ. ಅವರ ಪಾಂಡಿತ್ಯಕ್ಕೆ ಸಮಾನ ಅವರು ಮಾತ್ರ. ಅವರು ರಾತ್ರಿಯಿಂದ ಬೆಳಗಿನ ತನಕ ಸುನ್ನತ್ ನಮಾಝು ಮಾಡುತ್ತಾರೆ. ರಾತ್ರಿ ನಿದ್ರೆ ಬಹಳ ಕಡಿಮೆ. ಹಸಿವು ಹೋಗಲು ಮಾತ್ರ ಏನಾದರು ತಿನ್ನುತ್ತಾರೆ. ಹೊಟ್ಟೆತುಂಬಾ ತಿನ್ನುವ ಅಭ್ಯಾಸವೇ ಇಲ್ಲ."* ಇತ್ಯಾದಿ ಇತ್ಯಾದಿ...
▪ *ಪುಟ್ಟ* ಬಾಲಕಿಗೆ ದಿನಾಲೂ ತಂದೆಯಿಂದ ಇದನ್ನು ಕೇಳುವಾಗ ತನ್ನ ತಂದೆಯ ಗುರುವಿನ ಮೇಲೆ ಬಹಳ ಪ್ರೀತಿ ಮತ್ತು ಗೌರವ ಬರುತ್ತಿತ್ತು. ಮಾತ್ರವಲ್ಲ ಅದು ಅವಳ ಇಸ್ಲಾಮಿನ ಬದುಕನ್ನೇ ಬಹಳ ಉತ್ತುಂಗಕ್ಕೆ ತಲುಪಿಸಿತು. ಎಲ್ಲಿಯತನಕವೆಂದರೆ, ಇದರ ಪರಿಣಾಮವಾಗಿ ಬಾಲಕಿಯು ಇಮಾಮ್ ಶಾಫಿಯೀಯವರ ಗ್ರಂಥಗಳನ್ನು ಅಧ್ಯಯನ ಮಾಡ ತೊಡಗಿದಳು. ಕೊನೆಗೆ ತನ್ನ ತಂದೆಯು ಇಷ್ಟೊಂದು ಹೊಗಳಿ ಹೇಳುವ ಆ ಮಹಾ ವ್ಯಕ್ತಿಯನ್ನು ಮರಣಕ್ಕೆ ಮುಂಚೆ ಒಮ್ಮೆಯಾದರೂ ಕಣ್ಣಾರೆ ನೋಡಬೇಕೆಂಬ ಹಂಬಲ ಈ ಪುಟ್ಟ ಬಾಲಕಿಗೆ ಬಂತು.
▪ *ಒಂದು* ದಿನ ಅನಿರೀಕ್ಷಿತವಾಗಿ ಇಮಾಮ್ ಶಾಫಿಯವರು ಇಮಾಮ್ ಹಂಬಲಿಯವರ ಮನೆಗೆ ಅತಿಥಿಯಾಗಿ ಬಂದರು. ಬಂದದ್ದೇ ತಡ, ಆ ಪುಟ್ಟ ಬಾಲಕಿಗೆ ಎಲ್ಲಿಲ್ಲದ ಸಂತೋಷ. ತನ್ನ ತಂದೆಯ ಗುರುವನ್ನು ಕಣ್ಣಾರೆ ಕಾಣುವ ಭಾಗ್ಯ ಲಭಿಸಿದರಲ್ಲಿ ಆ ಬಾಲಕಿಗೆ ಆದ ಸಂತೋಷ ಹೇಳತೀರದು. ಮನೆಯಲ್ಲಿ ಒಂದು ಹಬ್ಬದ ವಾತಾವರಣವೇ ಸೃಷ್ಟಿಯಾಯಿತು. ಸಡಗರವೇ ಸಡಗರ.. ಇಮಾಮ್ ಅಹ್‌ಮದ್ ಬಿನ್ ಹಂಬಲಿಗೂ ತನ್ನ ಗುರುವಿಗೆ ಅತಿಥಿ ಸತ್ಕಾರ ಮಾಡುವುದರಲ್ಲಿ ಎಲ್ಲಿಲ್ಲದ ಉತ್ಸಾಹ ಮತ್ತು ಸಂತೋಷ.
▪ *ರಾತ್ರಿ* ಭೋಜನಕ್ಕೆ ರೊಟ್ಟಿ, ಅನ್ನ, ಬಿರಿಯಾನಿ, ಮಾಂಸದ ಪಲ್ಯ, ಹುರಿದ ಕೋಳಿ ಇತ್ಯಾದಿ... ಎಲ್ಲವೂ ರೆಡಿಯಾಯಿತು. ಇದನ್ನೆಲ್ಲಾ ತಾಯಿಯ ಒಟ್ಟಿಗೆ ಅಡುಗೆ ಕೋಣೆಯಲ್ಲಿ ತಯಾರು ಮಾಡುವಾಗ "ತಂದೆ ಹೊಗಳಿ ಹೇಳುತ್ತಿದ್ದ ಇಮಾಮ್ ಶಾಫಿಯೀ ಇವರೆಯಾ..?" ಎಂಬ ಸಂಶಯ ಕೂಡ ಆ ಬಾಲಕಿಗೆ ಆಗಾಗ್ಗೆ ಬರುತ್ತಿತ್ತು.
▪ *ಭೋಜನ* ಎಲ್ಲಾ ತಯಾರಿಯಾಯಿತು. ಇಮಾಮ್ ಶಾಫಿಯೀ ಮತ್ತು ಇಮಾಮ್ ಹಂಬಲೀ ಊಟಕ್ಕೆ ಕುಳಿತರು. ಈಮಾಮ್ ಶಾಫಿಯವರು ಬಹಳ ಗಡದ್ದಾಗಿ ಹೊಟ್ಟೆತುಂಬಾ ತೇಗಿ ತೇಗಿ ತಿಂದರು. ನಂತರ ಮಲಗುವ ಕೊಠಡಿಗೆ ಹೋಗಿ ಬೆಳಗಿನ ತನಕ ಆರಾಮವಾಗಿ ನಿದ್ದೆ ಮಾಡಿದರು. ಆದರೆ ಇಮಾಮ್ ಹಂಬಲಿಯವರು ಬೇರೊಂದು ಕೊಠಡಿಯಲ್ಲಿ ಆರಾಧನೆಯಲ್ಲಿ ಮುಳುಗಿದ್ದರು.
▪ *ಸುಬ್‌ಹ್* ಅಝಾನ್ ಮೊಳಗಿತು. ಈಮಾಮ್ ಶಾಫಿಯವರು ನಿದ್ದೆಯಿಂದ ಎದ್ದು ಉಝು ಮಾಡದೆಯೇ ಸುಬ್‌ಹ್ ನಮಾಝ್ ಮಾಡಿದರು. ಇದನ್ನೆಲ್ಲಾ ಮನೆಯೊಳಗಿನಿಂದ ರಾತ್ರಿಯಿಂದ ಬೆಳಗಿನ ತನಕ ಇಣುಕಿ ನೋಡಿ ಗಮನಿಸುತ್ತಿದ್ದ ಪುಟ್ಟ ಬಾಲಕಿಗೆ *"ತಂದೆ ಹೇಳುತ್ತಿದ್ದ ಇಮಾಮ್ ಶಾಪಿಯೀ ಇವರೆಯಾ..? ಅಲ್ಲಾ ಜನ ಬದಲಾಗಿದೆಯಾ..? "* ಎಂಬ ಬಲವಾದ ಸಂಶಯ ಕೂಡ ಬಂತು.
▪ *ಬಾಲಕಿ* ತಂದೆಯನ್ನು ಒಂದು ಕಡೆಗೆ ಕರೆದು ಕೇಳಿದಳು. *"ಅಪ್ಪಾಜೀ.. ನೀವು ಈ ತನಕ ಯಾವಾಗಲೂ ಹೊಗಳಿ ಹೇಳುತ್ತಿದ್ದ ನಿಮ್ಮ ಗುರು ಇಮಾಮ್ ಶಾಫಿಯೀ ಇವರೆಯಾ..? ಸತ್ಯ ಹೇಳಬೇಕು. ನೀವು ಹೇಳುತ್ತಿದ್ದ ಯಾವ ಗುಣವೂ ಅವರಿಗಿಲ್ಲ. ಒಬ್ಬ ಸಾಧಾರಣ ಮನುಷ್ಯ. ರಾತ್ರಿ ನಮಾಝು ಇಲ್ಲ. ಝಿಕ್‌ರ್, ಆರಾಧನೆ ಯಾವುದೂ ಇಲ್ಲ. ಹೊಟ್ಟೆ ತುಂಬಾ ತಿಂದು ಬೆಳಗಿನ ತನಕ ಗೊರಕೆಹೊಡೆದು ನಿದ್ರೆ ಮಾಡಿದರು. ಸಾಲದ್ದಕ್ಕೆ ಬೆಳಿಗ್ಗೆ ಉಝು ಮಾಡದೆಯೇ ನಮಾಝು ಕೂಡ ಮಾಡಿದರು. ಏನಿದರ ರಹಸ್ಯ..? ನನಗೆ ತಿಳಿಯಬೇಕಾಗಿದೆ."*
▪ *ಇಮಾಮ್* ಹಂಬಲಿಯವರು ಮಗಳನ್ನು ತನ್ನ ಉಸ್ತಾದರ ಸನ್ನಿಧಿಗೆ ಕೊಂಡು ಹೋಗಿ ಮಗಳಿಗಿರುವ ಮೂರು ಸಂಶಯಗಳನ್ನು ಗುರುವಿನ ಮುಂದಿಟ್ಟರು.
1. ಹೊಟ್ಟೆತುಂಬಾ ತಿನ್ನದ ನೀವು ನಿನ್ನೆ ಆ ರೀತಿ ತಿಂದದ್ದು ಯಾಕೆ..?
2. ರಾತ್ರಿ ನಿದ್ರಿಸದ ನೀವು ನಿನ್ನೆ ಬೆಳಗಿನ ತನಕ ನಿದ್ದೆ ಮಾಡಿದರ ಕಾರಣ...?
3. ಕೊನೆಗೆ ನಿದ್ದೆ ಮಾಡಿಯೂ ವುಝು ಮಾಡದೆ ನಮಾಝು ಮಾಡಿದ್ದರ ರಹಸ್ಯವೇನು...?
▪ *ಬಾಲಕಿಯ* ಈ ಮೂರು ಪ್ರಶ್ನೆಗಳಿಗೆ ಜ್ಞಾನಸೂರ್ಯ ಇಮಾಮ್ ಶಾಫಿಯೀ (ರ) ರವರು ಬಹಳ ನಗುಮುಖದಿಂದ ಉತ್ತರ ಕೊಟ್ಟರು.
1. ಹೊಟ್ಟೆತುಂಬಾ ತಿನ್ನಲು ಕಾರಣವೇನೆಂದರೆ, ನೀವು ಮಾಡಿದ ಆಹಾರವು ನೂರರಲ್ಲಿ ನೂರು ಶತಮಾನ ಹಲಾಲಾದ ಮಾರ್ಗದಲ್ಲಿ ಸಂಪಾದಿಸಿದ ಹಣದಲ್ಲಾಗಿರಬಹುದು ಎಂಬ ಬಲವಾದ ವಿಶ್ವಾಸ ಮತ್ತು ನಂಬಿಕೆ ನನಗಿದೆ. ಹಲಾಲಾದ ಮಾರ್ಗದಲ್ಲಿ ಸಂಪಾದಿಸಿ ಮಾಡಿದ ಹಣದಿಂದ ಉದಾರಿಯು ಕೊಡುವ ಆಹಾರವು ಖಾಯಿಲೆಗಳಿಗೆ ಔಷಧಿಯಾಗಿದೆ ಎಂದು ಹದೀಸಿನಲ್ಲಿದೆ. ಅಂತೆಯೇ ಜಿಪುಣನು ಕೊಡುವ ಆಹಾರದಲ್ಲಿ ರೋಗವಿದೆ. ಆ ಕಾರಣದಿಂದ ನನಗೇನಾದರು ಖಾಯಿಲೆಯಿದ್ದರೆ ನಿಮ್ಮ ಔಷಧಿಯಾದ ಆಹಾರದಿಂದ ಗುಣವಾಗಲಿ ಎಂದು ಭಾವಿಸಿ ಹೊಟ್ಟೆ ತುಂಬಾ ತಿಂದೆನು.
2. ನಿನ್ನೆ ರಾತ್ರಿ ನಾನು ಒಂದು ನಿಮಿಷವೂ ನಿದ್ರೆ ಮಾಡಲಿಲ್ಲ. ಹಾಸಿಗೆಯ ಮೇಲೆ ಮಲಗಿದಲ್ಲಿಂದಲೇ ಕಂಠಪಾಠವಿರುವ ಖುರ್‌ಆನ್ ಮತ್ತು ಲಕ್ಷೋಪಲಕ್ಷ ಹದೀಸುಗಳನ್ನು ಮುಂದಿಟ್ಟು ಕರ್ಮಶಾಸ್ತ್ರ ವಿಷಯದಲ್ಲಿ ಎಪ್ಪತ್ತೆರಡು ವಿಷಯಗಳಾಗಿ ಇರುವ ಸಂಶಯಗಳಿಗೆ ಉತ್ತರ ಕಂಡು ಹಿಡಿದೆನು. ರಾತ್ರಿಯಿಂದ ಸುಬಹ್ ಬಾಂಗಿನ ತನಕ ಅದರಲ್ಲೇ ಮಗ್ನನಾದ ಕಾರಣ ಸುನ್ನತ್ ನಮಾಜಿನ ನೆನಪಾಗಲಿಲ್ಲ. ಮಾತ್ರವಲ್ಲ ಮುಂದಿನ ಮುಸ್ಲಿಂ ಉಮ್ಮತಿಗೆ ಬೇಕಾಗಿ ಮಾಡುವ ಈ ಮಹಾಕಾರ್ಯ ಸುನ್ನತ್ ನಮಾಝಿಗಿಂತಲೂ ಶ್ರೇಷ್ಠವಲ್ಲವೇ...?
3. *ರಾತ್ರಿ* ನಿದ್ರೆ ಮಾಡದ್ದರಿಂದ ಇಶಾ ನಮಾಝಿಗೆ ಮಾಡಿದ ಉಝು ಅಸಿಂಧುವಾಗದ ಕಾರಣ ಆ ಉಝುವಿನಲ್ಲೇ ಬೆಳಗಿನ ಫಜರ್ ನಮಾಝು ಕೂಡ ಮಾಡಿದೆ.
▪ *ಸುಬ್‌ಹಾನಲ್ಲಾಹ್*.. ಇಮಾಮ್ ಶಾಫಿಯೀ (ರ) ರಿಂದ ಈ ಉತ್ತರ ದೊರೆತಾಗ ಬಾಲಕಿಯು ಬೆಚ್ಚಿಬಿದ್ದಳು.
ಸಂಗ್ರಹ: ಇಮಾಮ್ ಶಬ್‌ಲಂಜಿಯ *ನೂರುಲ್ ಅಬ್‌ಸ್ವಾರ್* ಎಂಬ ಗ್ರಂಥ.

Comments
http://brtaslim.com/wp-content/uploads/2016/03/f81ec1b726219f29cc912550f6327403.mp3
PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com