Skip to main content

ಮುಸಲ್ಮಾನರ ದೇಶ ಪ್ರೇಮದ ಕುರಿತು ಸಂಶಯ ಬೇಡ

ಮುಸಲ್ಮಾನರ ದೇಶ ಪ್ರೇಮದ ಕುರಿತು ಸಂಶಯ ಬೇಡ

@ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖನದ ಶೀರ್ಷಿಕೆಯಲ್ಲಿ ತಿಳಿಸಿದ ಹಾಗೆ ದೇಶದ ಹಲವಾರು ಮಂದಿಗೆ ಮುಸ್ಲಿಮರ ದೇಶ ಪ್ರೇಮದ ಬಗ್ಗೆ ಬಹಳಷ್ಟು ಸಂಶಯ ಅವರು ಭಾರತಕ್ಕಾಗಿ ಏನು ಮಾಡಿದ್ದಾರೆ ಎಂದು ಕೇಳುವರು..
      ಆದರೆ ಇತಿಹಾಸ ನಿಷ್ಕಲ್ಮಶವಾಗಿ ಕಲಿತವರಿಗೆ ತಿಳಿಯುತ್ತದೆ *ಮುಸ್ಲಿಮರ ರಕ್ತದಲ್ಲಿಯೇ ದೇಶ ಪ್ರೇಮ ಅವಿತುಕೊಂಡಿದೆ* ದೇಶ ಪ್ರೇಮವು ಈಮಾನಿನ ಭಾಗವಾಗಿದೆ ಎಂದು ಕಲಿಸುವ ಧರ್ಮದ ಅನುಯಾಯಿಗಳು ಆಗಿರುತ್ತಾರೆ ಮುಸ್ಲಿಮರು.
       ಸರಿ ಸುಮಾರು ಎಂಟು ಶತಕಗಳ ಕಾಲ ಮುಸ್ಲಿಮರ ಆಳ್ವಿಕೆ ಈ ದೇಶದಲ್ಲಿ ಇದ್ದರೂ ಆ ರಾಜರು ಯಾರು ಕೂಡ ಈ ದೇಶವನ್ನು ಮುಸ್ಲಿಂ ರಾಷ್ಟ್ರವಾಗಿ ಮಾಡಲಿಲ್ಲ ಈ ದೇಶದ ಅಖಂಡತೆಯನ್ನು ಕಾಪಾಡಿದರು ಬಹಳಷ್ಟು ಕೊಡುಗೆಗಳನ್ನು ನೀಡಿದರು ಕೇವಲ ವ್ಯಾಪಾರಕ್ಕಾಗಿ ಬಂದ *ಪೋರ್ಚುಗೀಸರು,ಪ್ರೆಂಚರು,ಡಚ್ಚರು ಹಾಗೂ ಬ್ರಿಟಿಷರು* ಸರಿ ಸುಮಾರು 20 ದಶಕಗಳ ಕಾಲ ಗುಲಮರನ್ನಾಗಿ ಆಳಿದರು ಅಂದು ದೇಶವನ್ನು ಆಂಗ್ಲರ ಮುಷ್ಠಿಯಿಂದ ಬಿಡಿಸಲು ಭಾರತೀಯರು ಹೋರಾಡಿದರು 1857 ರಿಂದ ಪ್ರಾರಂಭವಾದ ಪ್ರಥಮ ಹೋರಾಟ ಸಂಗ್ರಾಮದಲ್ಲಿ ಜಾತಿ ಧರ್ಮ ಬೇದ ಮನ್ಯೇ ಹೋರಾಡಿದರು. ಅದರಲ್ಲಿ ಬಹಳಷ್ಟು ಅಂದರೆ 65  ಶೇಕಡದಷ್ಟು ಜನರು ಮುಸ್ಲಿಮರಿದ್ದರು ಎನ್ನುದಕ್ಕೆ ನಮಗೆ ಹೆಮ್ಮೆಯಿದೆ.
      ನಮ್ಮ ದೇಶದ ಅಭಿಮಾನವಾದ ಹುತಾತ್ಮರ ಸ್ಮಾರಕವಾದ *ಇಂಡಿಯನ್ ಗೇಟ್* ನಲ್ಲಿ ಕೆತ್ತಿಡಳಾದಂತಹ 95,300 ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ 61,945 ಸ್ವಾತಂತ್ರ್ಯ ಹೋರಾಟಗಾರರು ಮುಸ್ಲಿಮರು  ಎಂದು ಹೇಳುವಲ್ಲಿ ಪ್ರತಿಯೊಬ್ಬ ಭಾರತೀಯ ಮುಸ್ಲಿಮರು ಹೆಮ್ಮೆ ಪಡುತ್ತಾರೆ, ಅಭಿಮಾನ ಪಡುತ್ತಾರೆ. 20 ದಶಕಗಳ ಕಾಲ ಪರಕೀಯರ ಕಪಿ ಮುಷ್ಠಿಯಿಂದ ಬಿಡುಗಡೆ ಮಾಡಲು ಅದೆಷ್ಟೋ ಮಂದಿ ತಮ್ಮ ಶರೀರರವನ್ನೇ ಭಾರತ ಮಾತೆಗೆ ಅರ್ಪಿಸಿದರು ಸ್ವಾತಂತ್ರ್ಯ ಹೋರಾಟಗಾರರ ನಾಯಕರಾದ *ಸುಭಾಶ್ ಚಂದ್ರ ಬೋಸ್* ಹೋರಾಟಕ್ಕಾಗಿ ಚಂದಾ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಒಬ್ಬರು *ಮುಸ್ಲಿಂ* ವೃದ್ಧೆಯ ಏನು ಇಲ್ಲವೆಂದು ದುಃಖಿಸುತ್ತಿದ್ದ ಸಂದರ್ಭದಲ್ಲಿ ತನ್ನ ಮಗನನ್ನೇ ಹೋರಾಟಕ್ಕೆ ಕಳಿಸುವಂತೆ ಬೋಸ್ ಅವರು ತಿಳಿಸಿದಾಗ ಸಂತೋಷದಿಂದ ಕಳಿಸಿ ಕೊಡುತ್ತಾರೆ ಆ ಮಗನು ಯುದ್ಧದಲ್ಲಿ ಜನ್ಮ ಭೂಮಿಗಾಗಿ ಶಹೀದ್ ಆಗುತ್ತಾರೆ ಆ ತಾಯಿ ತನ್ನ ಮಗನು ದೇಶಕ್ಕಾಗಿ ಶಹೀದ್ ಆದರು ಎಂದು ಸಂತೋಷದಿಂದ ಕಣ್ಣೀರು ಸುರಿಸುದನ್ನು ಕಂಡು ಸುಭಾಷ್ ಚಂದ್ರ ಬೋಸ್ ಅವರು ಹೇಳುತ್ತಾರೆ ತನ್ನ ಮಗನನ್ನೇ ದೇಶಕ್ಕಾಗಿ ತ್ಯಾಗ ಮಾಡಿದ ಮಹಾ ತಾಯಿ *(ಯಹಿ ಹೇ ಭಾರತ್ ಮಾತಾ)* ಇವರೇ ಭಾರತದ ತಾಯಿ *(ಬೋಲೋ ಭಾರತ್ ಮಾತಾ ಕಿ ಜೈ)* ಕೂಗಿರಿ ಭಾರತದ ತಾಯಿಗೆ ಜೈ ಎಂದು.
     ನಾವು ಬಹಳ ಹೆಮ್ಮೆಯಿಂದ ಬಹಳ ಗೌರವದಿಂದ ಜೀವಕ್ಕೆ ಜೀವ ಕೊಟ್ಟು ರಾಜ ರೋಷವಾಗಿ ತಲೆ ಎತ್ತಿ ಕೊಂಡು ನಿಲ್ಲಿಸುವ ದೇಶದ ಹೆಮ್ಮೆಯ *ತ್ರಿವರ್ಣ ಧ್ವಜವನ್ನು* ನಿರ್ಮಿಸಿ ಈ ದೇಶಕ್ಕೆ ಅರ್ಪಣೆ ಮಾಡಿದ್ದು *ಸುರಯ್ಯ ತಾಯ್ಬ್ಜಿ* ಎನ್ನುವ ಮುಸ್ಲಿಂ ಹೆಣ್ಣು ಆಗಿದ್ದರು.
    ಸ್ವಾತಂತ್ರ್ಯ ಭಾರತವನ್ನು ಅದರ ಮುಂಚಿನ ಭಾರತವನ್ನು ಮುಸ್ಲಿಮರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾರೆ.
       ಕೆಲವೊಂದು ಕಾಣದ ಕೈಗಳ ಕೈಚಳಕದ ಪ್ರಭಾವದಿಂದ ದೇಶದಲ್ಲಿ ಕೆಲವೊಂದು ಹೆಸರಿಗೆ ಮಾತ್ರ ಸೀಮಿತವಾದ ಮುಸ್ಲಿಂ ನಾಮದಾರಿಗಳ ಕಾರಣದಿಂದ ಕೆಲವೊಂದು ಅಹಿತಕರ ಘಟನೆ ನಡೆದಿದ್ದರೆ ಅವರಿಗೂ ಇಸ್ಲಾಂ ಸಮುದಾಯಕ್ಕೂ ಯಾವುದೇ ಸಂದರ್ಭದಲ್ಲಿ ಇಲ್ಲ ಅವರೆಲ್ಲರೂ *ಪಶುವಿನ ಮುಖವಾಡ ಹೊತ್ತ ಗುಳ್ಳೆ ನರಿಗಳು* ಎನ್ನುವ ಸತ್ಯವನ್ನು ಸಮಾಜವು ತಿಳಿಯಬೇಕು.
  ಒಂದು ಮಾವಿನ ಮರದಲ್ಲಿ ಕೆಲವೊಂದು ಮಾವು ಹಾಳಾಗಿದ್ದರೆ ನಾವು ಮಾವಿನಕಾಯನ್ನು ಮಾತ್ರ ಬಿಸಾಡಬೇಕು ಅದು ಬಿಟ್ಟು ಮಾವಿನ ಮರವನ್ನು ಕತ್ತರಿಸುದು ಮೂರ್ಖತನ ಆದರಿಂದ ಕೆಲವೊಂದು ನಾಮದಾರಿಗಳ ಕಾರಣವಾಗಿ ಇಡೀ ಮುಸ್ಲಿಂ ಸಮುದಾಯವನ್ನೂ ಮುಸ್ಲಿಮರನ್ನು ದೂಷಿಸಬೇಡಿ ಅವರ ನಿಷ್ಕಲ್ಮಶ ದೇಶ ಪ್ರೇಮದಲ್ಲಿ ಶಂಕಿಸಬೇಡಿ....

Comments

Br.Taslim said…
548) Is love of country part of faith? ದೇಶದ ಪ್ರೀತಿ ನಂಬಿಕೆಯ ಭಾಗವಾಗಿದೆ?
http://brtaslim.com/wp-content/uploads/2017/08/love-of-country-online-audio-converter.com_.lite_.mp3

PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...