ರಾತ್ರಿಯಲ್ಲಿ ಪಕ್ಕನೆ ಉಂಟಾಗುವ ಮೃತ್ಯುವಿನಿಂದ ಹೇಗೆ ಪಾರಾಗಬಹುದು..
ವೈದ್ಯರೋರ್ವರು ತನ್ನ ಅಮೂಲ್ಯ ಸಲಹೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.(ಕನ್ನಡಕ್ಕೆ ಮಲಯಾಳಮ್ ನಿಂದ ಅನುವಾದ: ಭಗತ್ ಗಣೇಶ್)
ನಿದ್ರಿಸುತ್ತಿರುವಾಗ ರಾತ್ರಿಯ ಅಸಮಯದಲ್ಲಿ ಪಕ್ಕನೆ ಏಳುವ( ಪಕ್ಕನೆ ಉಂಟಾದ ಶಬ್ದ ಇನ್ನಿತರ ಕಾರಣದಿಂದ ಮನೆಯನ್ನು ಪರಿಶೋಧಿಸಲು, ಮೂತ್ರಶಂಕೆ ಮಾಡಲು,ಟಾಯ್ಲೆಟ್ ಗೆ ಹೋಗಲು) ಪ್ರತಿಯೋರ್ವ ವ್ಯಕ್ತಿಯೂ ಮೂರೂವರೆ ನಿಮಿಷ ಜಾಗ್ರತೆವಹಿಸಬೇಕು. ಕಾರಣ ಇದು ಅತ್ಯಂತ ಅಮೂಲ್ಯ ಸಮಯವಾಗಿದೆ.ರಾತ್ರಿ ನಿದ್ದೆಯಿಂದ ಪಕ್ಕನೆ ಏಳುವಾಗ ಉಂಟಾಗುವ ಸಾವನ್ನು ಈ ಮೂರೂವರೆ ನಿಮಿಷದಲ್ಲಿ ಗಣನೀಯವಾಗಿ ಕಡಿಮೆಗೊಳಿಸಬಹುದಾಗಿದೆ.
ಆರೋಗ್ಯವಂತನಾಗಿದ್ದ ವ್ಯಕ್ತಿಯೋರ್ವ ನಿದ್ದೆಯಿಂದೇಳುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುವ ಸುದ್ದಿಯನ್ನು ಪದೇ ಪದೇ ಕೇಳುತ್ತಿದ್ದೇವೆ. "ನಿನ್ನ ರಾತ್ರಿ ಹತ್ತು ಗಂಟೆಯವರೆಗೆ ಅವ ನನ್ನೊಂದಿಗೆ ಚಾಟಿಂಗ್ ಮಾಡಿದ್ದ.. ಹಾಗಿದ್ದವ ಸಾವನ್ನಪ್ಪಿದ್ದಾನೆಂಬ ಇವತ್ತು ಬೆಳಿಗ್ಗೆ ಕೇಳಿ ಬಂದ ಸುದ್ದಿಯನ್ನು ನಂಬಲಿಕ್ಕಾಗ್ತಾ ಇಲ್ಲ..!" ಇಂತಹ ಮಾತುಕತೆ ಸಾಮಾನ್ಯವಾಗಿ ನಾವು ಕೇಳ್ತಾ ಇರುತ್ತೇವೆ. ಹೀಗೊಂದು ಸಾವು ಬರಲು ಕಾರಣವಾದರೂ ಏನು? ಸಾಮಾನ್ಯವಾಗಿ ರಾತ್ರಿ ಹೊತ್ತು ಟಾಯ್ಲೆಟ್ ಗೋ,ಬಾತ್ ರೂಮಿಗೋ ಹೋಗಲು ಅವಸರದಿಂದ ಏಳುತ್ತೇವೆ. ಹೆಚ್ಚಿನ ಸಮಯ ಕೆಲವರಿಗೆ ಮಲಗಿ ನಿದ್ರಿಸುತ್ತಿದ್ದಲ್ಲಿಂದ ಪಕ್ಕನೆ ಎದ್ದು ನಿಲ್ಲುವಾಗ ಮಿದುಳಿಗೆ ರಕ್ತಸಂಚಾರ ಸಮರ್ಪಕವಾಗಿ ನಡೆಯುತ್ತಿರುವುದಿಲ್ಲ.!
*ಇಂತಹ ಸಂದರ್ಭದಲ್ಲಿ ಮೂರುವರೆ ನಿಮಿಷ ಅತ್ಯಂತ ಅಮೂಲ್ಯವಾದದ್ದು ಹೇಗೆ?*
ಮಧ್ಯರಾತ್ರಿಯಲ್ಲಿ ಮೂತ್ರ ಶಂಕೆಗಾಗಿ ನಾವು ಎದ್ದೇಳುವಾಗ ಉದಾಹರಣೆಗೆ ಎದೆಬಡಿತ ಪಕ್ಕನೆ ತಾಳತಪ್ಪುವ ಸಾಧ್ಯತೆ ಇದೆ. ಮಾತ್ರವಲ್ಲದೆ ಪಕ್ಕನೆ ಏಳುವಾಗ ಮಿದುಳಿಗೆ ರಕ್ತ ಸಂಚಾರವಿಲ್ಲದೆ ತಲೆಸುತ್ತುವಂತಾದೀತು ಮತ್ತು ರಕ್ತ ಸಂಚಾರದ ಕೊರತೆಯಿಂದಾಗಿ ಹೃದಯಘಾತವಾಗುವ ಸಾಧ್ಯತೆಯೂ ಇದೆ. ಆದ್ದರಿಂದಲೇ ಇಂತಹ ವೇಳೆ *ಮೂರುವರೆ ನಿಮಿಷ* ಜಾಗ್ರತೆವಹಿಸಲು ಈ ಕೆಳಗಿನ ನಿರ್ದೇಶಗಳನ್ನು ಕೊಡಲಾಗಿದೆ.
1-ನೀವು ನಿದ್ದೆಯಿಂದ ಪಕ್ಕನೆ ಏಳುವಾಗ ಮೊದಲ ಒಂದೂವರೆ ನಿಮಿಷ ಎಚ್ಚರವಾದರೂ ಹಾಸಿಗೆಯಲ್ಲೇ ಹಾಗೆಯೇ ಮಲಗಿದ್ದು ಬಿಡಿ.
2-ಮುಂದಿನ ಒಂದು ನಿಮಿಷ ಹಾಸಿಗೆಯಲ್ಲಿ ನಿಧಾನಕ್ಕೆದ್ದು ಕುಳಿತುಕೊಳ್ಳಿ.
3-ನಿಮ್ಮ ಕಾಲುಗಳನ್ನು ಮಂಚದಿಂದ ಕೆಳಗೆ ಅಥವಾ ಚಾಪೆಯಲ್ಲಿಯೇ ಚಾಚಿ ಅರ್ಧ ನಿಮಿಷ ಕುಳಿತುಕೊಳ್ಳಿ.
ಈ ಮೂರು ನಿಮಿಷ ಈ ರೀತಿ ಕಳೆದ ಬಳಿಕ ತಲೆಸುತ್ತುವ(ಗಿರಕಿ ಹೊಡೆದಂತಾಗುವುದು) ಸಾಧ್ಯತೆ ಇರದು. ಹೃದಯಘಾತ ಉಂಟಾಗದು. ಕುಸಿದು ಬಿದ್ದು ಪಕ್ಕನೆ ಸಾವನ್ನಪ್ಪುವ ಸಾಧ್ಯತೆಯೂ ಇಲ್ಲದಾಗಲಿದೆ. ಯಾಕೆಂದರೆ ಮಿದುಳಿಂದ ಹಿಡಿದು ಪ್ರಮುಖ ಅಂಗಾಂಗಗಳಿಗೆ ರಕ್ತ ಸಂಚಾರ ಸಮರ್ಪಕಗೊಳಿಸಲು ಈ ಮೂರು ನಿಮಿಷ ವನ್ನು ಈ ರೀತಿ ಮಾಡಲು ಉಪಯೋಗಿಸುವುದರಿಂದ ಸಾಧ್ಯವಿದೆ.
ನಿಮ್ಮ ಕುಟುಂಬ ಸದಸ್ಯರು,ಸ್ನೇಹಿತರು ಎಂಬವರಲ್ಲಿ ಈ ವಿಷಯವನ್ನು ಹಂಚಿಕೊಳ್ಳಿ. ಇಂತಹ ಸಾವಿಗೆ ವಯೋಮಿತಿಯ ಲೆಕ್ಕವಿಲ್ಲ. ಯಾರನ್ನಾದರೂ ಬಲಿ ತೆಗೆದುಕೊಳ್ಳಬಹುದು. ಈ ವಿಷಯ ಮೊದಲೇ ನಿಮಗೆ ತಿಳಿದಿದ್ದರೆ ಇದನ್ನು ಒಂದು ಅವಲೋಕನವನ್ನಾಗಿ ಪರಿಗಣಿಸಿದರೆ ಸಾಕು. ಇದನ್ನು ಹೆಚ್ಚಿನ ಗ್ರೂಪ್ ಗಳಿಗೂ ಹಂಚಿರಿ. ಒಂದು ಪ್ರಾಣವನ್ನು ಕಾಪಾಡಿದ ಪುಣ್ಯಕಾರ್ಯವನ್ನು ಮಾಡಿದಂತಾಗುತ್ತದೆ.
Comments