ಓದಲೇ ಬೇಕಾದ ಮಾಹಿತಿ
ನಿಮ್ಮ ಅವೆರ್ನಸ್ ಸರ್ಕಲ್ ಪೇಜಲ್ಲಿ
ಮಳೆಗಾಲದಲ್ಲಿ ವಿದ್ಯುತ್ ನಿಂದ ಸ್ವಲ್ಪ ದೂರ ಇರಿ
ದಯವಿಟ್ಟು ಓದಿ ಇತರರಿಗೂ ಹಂಚಿ
ಕರಾವಳಿ ಮತ್ತು ಕರ್ನಾಟಕದ ಇತರೆ ಪ್ರದೇಶಗಳಲ್ಲಿ ಗಾಳಿ ಮಳೆ ಭಾರೀ ಜೋರಾಗಿದ್ದು ಚಂಡಮಾರುತದ ಭೀತಿ ಎದುರಾಗಿದೆ. ಈ ಗಾಳಿ ಮಳೆಗೆ ನಗರದ ಹೊರ ಭಾಗದಲ್ಲಿ ಮರಗಳ ಎಡೆಯಿಂದ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಯಾವಾಗ ಬೇಕಾದರೂ ಅಪಾಯ ಆಗಬಹುದು. ಗುಡುಗು ಮಿಂಚಿನದ್ದು ಪ್ರತ್ಯೇಕವಾಗಿ ಹೇಳುವಂತಿಲ್ಲ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಉತ್ತಮ.
ಮಳೆಗಾಲದಲ್ಲಿ ವಿದ್ಯುತ್ ‘ಶಾಕ್' ಯಾವಾಗ ನಮ್ಮ ಮೇಲೆ ಬಂದೆರಗುತ್ತದೆ ಎನ್ನುವ ನಿರೀಕ್ಷೆಯೇ ಇರುವುದಿಲ್ಲ. ಮನೆಯಿಂದ ಹೊರಗಿಳಿಯುವ ಸಂದರ್ಭದಲ್ಲಿ ರಸ್ತೆಯ–ಲ್ಲೆಲ್ಲೋ ಬಿದ್ದಿರುವ ವಿದ್ಯುತ್ ತಂತಿ ತುಳಿದು ಸಾವು ಸಂಭವಿಸಬಹುದು; ಮರದ ರೆಂಬೆ ಮುರಿದು ವಿದ್ಯುತ್ ತಂತಿ ಕೆಳಗುರುಳಿ ಅಪಾಯ ತಂದೊಡ್ಡಬಹುದು; ಅದೆಲ್ಲೋ ತಂತಿ ಬಿದ್ದ ಪರಿಣಾಮ ಹರಿವ ನೀರಲ್ಲೂ ಕರೆಂಟ್ ಇರಬಹುದು; ಮಳೆ-ಗಾಳಿಗೆ ಕಂಡಕ್ಟರ್ ತುಂಡಾಗುವುದು, ಲೈನ್‌ಗಳ ಮೇಲೆ ಗಿಡಗಳು ಬೀಳುವುದು, ಜಂಪ್ಸ್, ಪ್ರಾಣಿಗಳು ಹೊಲ-ಗದ್ದೆಗಳಿಗೆ ನುಗ್ಗದಂತೆ ಅಳವಡಿಸಿದ ಬೇಲಿಗೆ ಹರಿಸಿದ ವಿದ್ಯುತ್‌ನಿಂದ, ತಂತಿ ಕೆಳಗಡೆ ಮನೆಗಳಿರುವುದು... ಸಾವು ಹೇಗೆ ಬೇಕಾದರೂ ಎರಗಬಹುದು.
ಮಳೆಗಾಲದ ಶಾಕ್‌ನಿಂದ ದೂರ ಇರಲು 10 ಟಿಪ್ಸ್
1) ಮಳೆ ಬರುತ್ತಿದ್ದರೆ ರಕ್ಷಣೆಗೆ ಮರದ ಅಡಿ ನಿಲ್ಲಬೇಡಿ. ಮರಗಳ ಕೊಂಬೆ ವಿದ್ಯುತ್ ತಂತಿಗೆ ತಾಕಿದ್ದರೆ, ನಿಮಗೂ ವಿದ್ಯುತ್ ಹರಿಯುವ ಅಪಾಯ ಇರುತ್ತದೆ
2) ಜೋರಾಗಿ ಮಳೆ ಸುರಿಯುತ್ತಿದ್ದರೆ ವಿದ್ಯುತ್ ಪ್ರಸರಣ ಜಾಲದ ಅಡಿಯಲ್ಲಿ ಸಂಚರಿಸುವ ರಿಸ್ಕ್ ತೆಗೆದುಕೊಳ್ಳಬೇಡಿ. ವಿದ್ಯುತ್ ಆಕರ್ಷಣೆಯಿಂದಲೂ (ಇಂಡಕ್ಷನ್) ಶಾಕ್ ಹೊಡೆಯುವ ಗಂಡಾಂತರ ಇರುತ್ತದೆ
3) ಸಿಡಿಲು, ಗುಡುಗು ಇದ್ದರೆ ತಕ್ಷಣ ಹತ್ತಿರದ ಮನೆ ಇಲ್ಲವೆ ಯಾವುದೇ ಸುರಕ್ಷಿತ ಪ್ರದೇಶದಲ್ಲಿ ಆಶ್ರಯ ಪಡೆಯಿರಿ.
4) ಮಳೆಯಿಂದ ವಿದ್ಯುತ್ ಕಂಬದ ಮೇಲೆ ಮರಗಳ ಕೊಂಬೆ ಇಲ್ಲವೆ ತೆಂಗಿನ ಗರಿ ಬಿದ್ದಿದ್ದರೆ, ಅವುಗಳನ್ನು ತೆರವುಗೊಳಿಸುವ ಪ್ರಯತ್ನ ಮಾಡಬೇಡಿ
5) ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದ್ದರೆ- ಇದನ್ನು ಪ್ಲಾಸ್ಟಿಕ್ ಪೈಪು ಇಲ್ಲವೆ ಕೋಲಿನಿಂದ ಪಕ್ಕಕ್ಕೆ ಸರಿಸುವ ಅನಾಹುತಕಾರಿ ಕೆಲಸಕ್ಕೆ ಕೈಹಾಕಬೇಡಿ
6) ಮಳೆಯಿಂದ ಕೆಲವು ಬಾರಿ ಮನೆಗಳಲ್ಲಿ ಗ್ರೌಂಡಿಂಗ್ ಇಲ್ಲವೆ ಅರ್ಥಿಂಗ್ ಸಮಸ್ಯೆ ಕಾಣಿಸಿಕೊಂಡು, ಸ್ವಿಚ್ಚುಗಳು ಶಾಕ್ ಹೊಡೆಯಲು ಆರಂಭಿಸುತ್ತವೆ. ಕೂಡಲೆ ಮನೆಯ ಮುಖ್ಯ ಸ್ವಿಚ್ ಆಫ್ ಮಾಡಿ
7) ದೊಡ್ಡ ಮಳೆ, ಗುಡುಗು- ಸಿಡಿಲು ಇದ್ದಾಗ ಟಿವಿ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಪ್ಲಗ್‌ಗಳನ್ನು ತೆಗೆದಿಡಿ ಮತ್ತು ಒದ್ದೆ ಬೆರಳುಗಳಲ್ಲಿ ಇವುಗಳನ್ನು ಮುಟ್ಟಬೇಡಿ
8) ನದಿ ಪಾತ್ರ, ಹಳ್ಳ ಇತ್ಯಾದಿಗಳ ಪಾತ್ರದಲ್ಲಿ ನೆಲಮಟ್ಟದಲ್ಲಿ ಟ್ರಾರ್ನ್‌ಫಾರ್ಮರ್ ಇದ್ದರೆ ಕೂಡಲೆ ಎಸ್ಕಾಂ ಸಿಬ್ಬಂದಿಗೆ ತಿಳಿಸಿ. ನೀರಿನಲ್ಲಿ ವಿದ್ಯುತ್ ಬೆಳಕಿನ ವೇಗದಲ್ಲಿ ಸಂಚರಿಸುತ್ತದೆ
9) ರಸ್ತೆ, ಮನೆ, ಹೊಲ, ಕಚೇರಿ ಹೀಗೆ ಎಲ್ಲೇ ವಿದ್ಯುತ್ ಕಂಬ ಇಲ್ಲವೆ ತಂತಿ ವಾಲಿದ್ದರೂ, ಕಿಡಿ ಕಾರಿಕೊಳ್ಳುತ್ತಿದ್ದರೂ- ಎಸ್ಕಾಂ ಸಿಬ್ಬಂದಿಗೆ ಈ ಬಗ್ಗೆ ದೂರು ನೀಡಿ. ಇಲ್ಲವಾದರೆ, ಮಳೆ ಮತ್ತು ಗಾಳಿ- ದೊಡ್ಡ ಅನಾಹುತಕ್ಕೆ ಕಾರಣವಾದೀತು
10) ವಿದ್ಯುತ್ ಕಂಬ, ಟ್ರಾರ್ನ್‌ಫಾರ್ಮರ್ ಬೇಲಿ, ಹೈಟೆನ್ಷನ್ ಲೈನ್‌ಗಳಿಗೆ ಜಾನುವಾರುಗಳನ್ನು ಕಟ್ಟಬೇಡಿ. ಬಟ್ಟೆ ಇತ್ಯಾದಿಗಳನ್ನು ಒಣಗಿಸುವ ಸಾಹಸ ಮಾಡಬೇಡಿ..
ಮಾಹಿತಿ:
*ಅವೆರ್ನಸ್ ಸರ್ಕಲ್*
*Awareness Circle*
Comments