ಕುತ್ತ್ ರಾತೀಬ್ ಇಸ್ಲಾಮಿಕವೇ?
📝 _ಮುನೀರ್ ಸಖಾಫಿ ಸಾಲೆತ್ತೂರು_
----------------------------------------------------
ಹಲವು ರಾತೀಬುಗಳು ನಮಗೆ ಪರಿಚಯವಿದೆ.ಮುಹ್ಯುದ್ದೀನ್ ರಾತೀಬ್,ರಿಫಾಯೀ ರಾತೀಬ್,ಹದ್ದಾದ್ ರಾತೀಬ್,ಶಾದುಲಿ ರಾತೀಬ್ ಹೀಗೆ ಹಲವಾರು ರಾತೀಬ್ ಗಳು.
ಮಹಾತ್ಮರಾದ ಔಲಿಯಾಗಲು ಅವರ ಶಿಷ್ಯಂದಿರ ಪಾರತ್ರಿಕ ಲೋಕದ ವಿಜಯಕ್ಕಾಗಿ ಖುರ್'ಆನ್ ಮತ್ತು ಹದೀಸಿನಲ್ಲಿ ವರದಿಯಾದ ಕೆಲವು ದ್ಸಿಕ್ರ್ ಗಳನ್ನು ದೈನಂದಿನ ಜಪಿಸಲು ನೀಡಿದ ದ್ಸಿಕ್ರ್ ಗಳಾಗಿದೆ ರಾತೀಬ್.
ಔಲಿಯಾಗಳ ನಾಯಕ ಶೈಖ್ ರಿಪಾಯೀ (ರ) ರವರ ಹೆಸರಲ್ಲಿ ನಡೆಸಿಕೊಂಡು ಬರುವ ಪ್ರತ್ಯೇಕ ರಾತೀಬಾಗಿದೆ ಕುತ್ತ್ ರಾತೀಬ್ ಎಂಬುವುದು.
ರಾತೀಬ್ ನ ನಡುವೆ ಅಥವಾ ರಾತೀಬ್ ನ ನಂತರ ಆಯುಧಗಳಿಂದ ಶರೀರಕ್ಕೆ ಚುಚ್ಚುವುದಕ್ಕೆ "ಕುತ್ತ್ ರಾತೀಬ್" ಎನ್ನುತ್ತಾರೆ.
ವಹ್ಹಾಬಿ ಯಾನೆ ಮೌದೂದಿಗಳು ಇದನ್ನು ಕ್ರಿಮಿನಲ್ ರಾತೀಬ್ ಎಂದು ಹೇಳಿ ಪರಿಹಾಸ್ಯ ಮಾಡುವುದುಂಟು.
ಇದರ ನೈಜತೆಯ ಬಗ್ಗೆ ಅಲ್ಪ ವಿವರಿಸುತ್ತೇನೆ.
ಮಾರಕಾಯುಧಗಳಿಂದ ಶರೀರಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ಚುಚ್ಚುವುದು ನಿಷಿದ್ಧವಾಗಿದೆ.ಇದು ಖುರ್'ಆನಿನಲ್ಲೇ ಹೇಳಲಾಗಿದೆ.
ಅಭ್ಯಾಸ ಅಥವಾ ವಾಡಿಕೆಯಿಂದ ಹಾಗೂ ಕರಾಮತ್ ನಿಂದ ಅಪಾಯ ಸಂಭವಿಸದು ಎಂದು ದೃಡವಿದ್ದಲ್ಲಿ ಚುಚ್ಚುದಕ್ಕೆ ಯಾವುದೇ ಅಡ್ಡಿಯಿಲ್ಲ.
ಇಮಾಮ್ ಇಬ್ನ್ ಹಜರುಲ್ ಹೈತಮೀ (ರ)ಬರೆಯುತ್ತಾರೆ,
ولا يحرم من الطاهر إلا نحو حجر وتراب ومنه مدر وطفل لمن يضره وعليه يحمل إطلاق جمع متقدمين حرمته بخلاف من لا يضره كما قاله جمع متقدمون واعتمده السبكي وغيره وسم وإن قل إلا لمن لا يضره
(تحفة 9/ 479)
ಕಲ್ಲು ,ಮಣ್ಣು ಮುಂತಾದ ಶುದ್ಧಿಯಿರುವ ವಸ್ತುಗಳನ್ನು ತಿನ್ನುವುದರಿಂದ ತೊಂದರೆಯಿದೆ ಎಂದಾದಲ್ಲಿ ಅದನ್ನು ತಿನ್ನುವುದು ಹರಾಮ್ ಆಗಿದೆ.ನಿಶ್ಶರತ್ತ್ ಅದು ತಿನ್ನುವುದು ಹರಾಮ್ ಎಂದು ಹೇಳಿದ ಇಮಾಮರುಗಳ ಮಾತನ್ನು ಈ ರೀತಿ ವ್ಯಾಖ್ಯಾನಿಸಬೇಕಾಗಿದೆ.
ತಿನ್ನುವುದರಿಂದ ಯಾವುದೇ ತೊಂದರೆಯಿಲ್ಲದ ಜನರಿಗೆ ತಿನ್ನುವುದಕ್ಕೆ ಯಾವುದೇ ನಿಷೇಧವಿಲ್ಲ.
ಪೂರ್ವೀಕರಾದ ಹಲವಾರು ಇಮಾಮರುಗಳು ಇದನ್ನು ಸ್ಪಷ್ಟಪಡಿಸಿದ್ದು, ಇಮಾಮ್ ಸುಬುಕಿ (ರ)ಇದನ್ನು ಪ್ರಬಲ ಮಾಡಿದ್ದಾರೆ.ವಿಷ ಅಲ್ಪವಾದರೂ ತಿನ್ನುವುದು ಹರಾಮ್ ಆಗಿದೆ.ಆದರೆ ತಿನ್ನುವುದರಿಂದ ತೊಂದರೆಯಿಲ್ಲದ ಜನರಿಗೆ ಅದು ತಿನ್ನುವುದು ಹರಾಮ್ ಅಲ್ಲ.
(ತುಹ್'ಫ 9/479)
ಇದೇ ರೀತಿ ಇಮಾಮ್ ರಂಲೀ ನಿಹಾಯದಲ್ಲಿ ಮತ್ತು ಖತೀಬುಶ್ಶಿರ್'ಬೀನಿ ಮುಗ್ನಿಯಲ್ಲೂ ವಿವರಿಸಿದ್ದಾರೆ.
_______________________________
ಸ್ವಹಾಬೀ ಪ್ರಮುಖರಾದ ಕಾಲಿದ್ ಬಿನ್ ವಲೀದ್ (ರ) ರವರು ವಿಷ ಕುಡಿದು ಒಂದು ಘಟನೆ ಪ್ರಸಿದ್ಧವಾಗಿದೆ.
ಅಬುಸ್ಸಫರ್ (ರ) ವರದಿ ಮಾಡುವ ಆ ಘಟನೆ ಹೀಗಿದೆ.
ಕಾಲಿದ್(ರ) ಹೀರತ್ ಎಂಬ ಸ್ಥಳಕ್ಕೆ ಹೋದಾಗ ಶತ್ರು ಸೈನ್ಯದ ಬಳಿ ತಲುಪಿದರು.ಆವಾಗ ಅವರಲ್ಲಿ ಇಸ್ಲಾಮ್ ಸತ್ಯ ದೀನ್ ಆಗಿದ್ದರೆ ,ನಿನ್ನ ಅಲ್ಲಾಹು ಏಕನಾಗಿದ್ದರೆ ಈ ವಿಷವನ್ನು ಕುಡಿದು ತೋರಿಸಬೇಕೆಂದು ಅವರು ಸವಾಲು ಹಾಕಿದಾಗ ಕಾಲಿದ್ (ರ) ವಿಷ ವನ್ನು" ಬಿಸ್ಮಿ" ಹೇಳಿ ಕುಡಿದರು.ಅಲ್ಲಾಹನ ಅನುಮತಿ ಪ್ರಕಾರ ಅವರಿಗೆ ಯಾವುದೇ ತೊಂದರೆಯಾಗಿಲ್ಲ.
(ಮುಸನ್ನಫ್ ಇಬ್ನ್ ಅಬೀ ಶೈಬ 8/56)
ಈ ಘಟನೆಯನ್ನು ಹಲವಾರು ಮುಹದ್ದಿಸ್ ಗಳು ವರದಿ ಮಾಡಿದ್ದಾರೆ.
ಇಮಾಮ್ ಬೈಹಖೀ ತನ್ನ ದಲಾಇಲುನ್ನುಬುವ್ವ 3324 ,
ಇಮಾಮ್ ತ್ವಬ್'ರಾನಿ ಅಲ್ ಮುಹ್'ಜಮುಲ್ ಕಬೀರ್ ನ 3718 ,
ಇಮಾಮ್ ಅಬೂ ಯಹ್'ಲ ತನ್ನ ಮುಸ್ನದ್ ನ 7029 ರಲ್ಲೂ ಉಲ್ಲೇಖಿಸಿದ್ದಾರೆ.
ವಹ್ಹಾಬಿಗಳು ಈ ಘಟನೆಯನ್ನು ತಳ್ಳಿಹಾಕುವಂತಿಲ್ಲ.
ಕಾರಣ , ವಹ್ಹಾಬಿಗಳ ಶೈಖುಲ್ ಇಸ್ಲಾಮ್ ಇಬ್ನ್ ತೀಮಿಯ್ಯ ತನ್ನ ಗ್ರಂಥದಲ್ಲೇ ಇದನ್ನು ವರದಿ ಮಾಡಿದ್ದಾರೆ.
ಅವರು ಹೇಳುವುದು ನೋಡಿ,
وكرامات الصحابة والتابعين بعدهم وسائر الصالحين كثيرة جدا..........
وخالد بن الوليد حاصر حصنا منيعا، فقالوا: لا نسلم حتى تشرب السم، فشربه فلم يضره.(الفرقان ،66،67)
ಸ್ವಹಾಬಿಗಳ ಮತ್ತು ತಾಬಿವುಗಳ ಕರಾಮತ್ ಹಲವಾರು ಇದೆ..........
ಖಾಲಿದ್ ಬಿನ್ ವಲೀದ್ (ರ)ರೊಂದಿಗೆ ಶತ್ರುಗಳು ವಿಷವನ್ನು ಕುಡಿಯಬೇಕೆಂದು ಸವಾಲು ಹಾಕಿದಾಗ ಕುಡಿದು ಬಿಟ್ಟರು.ಯಾವ ತೊಂದರೆಯೂ ಅವರಿಗಾಗಿಲ್ಲ.
(ಇಬ್ನ್ ತೀಮಿಯ್ಯ ರ ಅಲ್ ಫುರ್'ಖಾನ್ ,ಪುಟ 66,67).
_______________________________
ಖಾಲಿದ್ (ರ )ರವರ ಪ್ರಸ್ತುತ ಘಟನೆಯನ್ನು ಇಮಾಮ್ ದಮೀರಿ ತನ್ನ ಹಯಾತುಲ್ ಹಯವಾನುಲ್ ಕುಬ್ರಾದಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ.ಕಾಲಿದ್(ರ)ರವರು ವಿಷವನ್ನು ಕುಡಿದ ಕರಾಮತ್ತನ್ನು ನೋಡಿದ ಶತ್ತು ಸೈನ್ಯ ಅವರೊಂದಿಗೆ ಯುದ್ಧ ಮಾಡದೆ 80,000 ದಿರ್ಹಮ್ ನೀಡಿ ಅವರೊಂದಿಗೆ ಸ್ನೇಹ ಒಪ್ಪಂದ ಮಾಡಿ ಹೊರಟು ಹೋದರು.
(ಹಯಾತುಲ್ ಹಯವಾನ್ 1/391).
ಈ ಘಟನೆಯಿಂದ ಶರೀರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ದೃಢವಿದ್ದಲ್ಲಿ ಅಪಾಯದ ವಸ್ತು ತಿನ್ನುವುದು /ಇನ್ನಿತರ ಅದ್ಭುತಗಳನ್ನು ನಡೆಸುವುದು ಅನಿಸ್ಲಾಮಿಕವಲ್ಲ ಎಂದು ಮನವರಿಕೆಯಾಯಿತು.
ಒಂದು ವೇಳೆ ಅನಿಸ್ಲಾಮಿಕವಾಗಿರುತ್ತಿದ್ದಲ್ಲಿ ಕಾಲಿದ್(ರ) ಇದಕ್ಕೆ ತಯಾರಾಗುತ್ತಿರಲಿಲ್ಲ.
*ರಿಫಾಯಿ ರಾತೀಬ್'ನಲ್ಲಿ ಆಯುಧಗಳಿಂದ ಚುಚ್ಚಿ ನಡೆಸುವ ರಾತೀಬ್ ಗೆ ಕುತ್ತು ರಾತೀಬ್ ಎಂದು ಅದು ಅಪಾಯವಿಲ್ಲವೆಂದು ದೃಢವಿರುವವರು ನಡೆಸಬಹುದೆಂಬುವುದಕ್ಕೆ ಕೆಲವು ಪ್ರಮಾಣಗಳನ್ನು ಒಂದನೇ ಭಾಗದಲ್ಲಿ ವಿವರಿಸಿದ್ದೇನೆ.*
ಶೈಖ್ ರಿಫಾಈ (ರ) ರವರ ಶಿಷ್ಯಂದಿರು ಹಲವಾರು ಅಧ್ಬುತಗಳನ್ನು ತೋರಿಸುತ್ತಿದ್ದರು.ಅಗ್ನಿಯಲ್ಲಿ ನಡೆಯುವುದು,ಹಾವುಗಳನ್ನು ನುಂಗುವುದು,ಸಿಂಹಗಳನ್ನು ವಾಹನವಾಗಿಸಿ ಯಾತ್ರೆ ಹೋಗುವುದು ಅದಲ್ಲಿ ಕೆಲವೊಂದು.
ಇಮಾಮ್ ಇಬ್ನ್ ಖಲ್ಲಿಕಾನ್ ಹೇಳುವುದು ನೋಡಿ,
ولأتباعه أحوال عجيبة من أكل الحيات وهي حية ، والنزول في التنانير وهي تضطرم ، فيطفئونها ،ويلعبون بها وهي تشتغل، ويقال : إنهم في بلادهم يركبون الأسود.
(وفيات الاعيان 1/190)
ಹೊತ್ತಿ ಉರಿಯುತ್ತಿರುವ ಬೆಂಕಿಯ ಒಳ ಪ್ರವೇಶಿಸಿ ಬೆಂಕಿ ಆರಿಸುವುದು,ಉರಿಯುತ್ತಿರುವ ಬೆಂಕಿಯೊಂದಿಗೆ ಆಟವಾಡುವುದು,ಜೀವಂತ ಹಾವುಗಳನ್ನು ನುಂಗುವುದು ಮುಂತಾದ ಅಧ್ಭುತಗಳನ್ನು ಶೈಖ್ ರಿಫಾಯಿವರ ಅನುಯಾಯಿಗಳು ಪ್ರಕಟಿಸುತ್ತಿದ್ದರು.
ಅವರು ಸಿಂಹಗಳ ಮೇಲೇರಿ ಯಾತ್ರೆ ಹೋಗುತ್ತಿದ್ದರು.
(ವಫಯಾತುಲ್ ಅಹ್'ಯಾನ್ 1/190)
ಇದನ್ನು ಇಮಾಮ್ ಇಬ್ನುಲ್ ಇಮಾದ್ (ರ) ತನ್ನ ಶದ್ಸರಾತುಝ್ಝಹಬ್ ನ 4/258 ರಲ್ಲೂ ಉಲ್ಲೇಖಿಸಿದ್ದಾರೆ.
-----------------------------------------------------
*ಇದು ಮಾಯಾಜಾಲವೇ?*
ಕುತ್ತು ರಾತೀಬ್ ನ ಕೆಲವೊಂದು ವೀಡಿಯೋಗಳು ಅಂತರ್ಜಾಲದಲ್ಲಿ ಶೇರ್ ಆಗುವಾಗ ತಿಳುವಳಿಕೆಯಿಲ್ಲದ ಕೆಲವು ಜನರು ಸುನ್ನಿಗಳನ್ನು ಮತ್ತು ರಾತೀಬನ್ನು ಹಿಯಾಳಿಸುವವರಿದ್ದಾರೆ.
ಕೆಲವರು ಇದನ್ನು ಕ್ರಿಮಿನಲ್ ರಾತೀಬ್ ಎಂದು ಹೇಳಿದರೆ ಇನ್ನು ಕೆಲವರು ಮಾಯಾಜಾಲ ಎಂದು ಹೇಳುವವರಿದ್ದಾರೆ.
ವಾಸ್ತವಿಕತೆ ಕಲಿಯದೆ ನಾವು ಯಾವ ಮಾತನ್ನು ಕೂಡಾ ಹೇಳಲೇಬಾರದು.
ಔಲಿಯಾಗಳ ಇಂತಹಾ ಪವಾಡಗಳು ಚರಿತ್ರೆಯ ಗ್ರಂಥಗಳಲ್ಲಿ ದಾಖಲಿಸಲಾಗಿದೆ.
ಪವಾಡಗಳು ಹಲವು ರೀತಿಯಲ್ಲಿದೆ.ಕೆಲವು ನಿಷಿದ್ಧವಾದವು ಇದೆ.ಇನ್ನು ಕೆಲವು ಅಂಗೀಕರಿಸಲ್ಪಡುವಂತದ್ದೂ ಇದೆ.
ಅದನ್ನು ಬೇರ್ಪಡಿಸಿ ಇಮಾಮರು ವಿವರಿಸಿದ್ದಾರೆ.
ಇಮಾಮ್ ಅಬ್ದುರ್ರಹ್'ಮಾನ್ ಬಾಅಲವೀ ಅಲ್ ಹಲ್ರಮೀ(ರ)ಹೇಳುವುದು ನೋಡಿ,
(مسألة:): خوارق العادة على أربعة أقسام:
ಪವಾಡಗಳು 4 ವಿಧವಿದೆ.
المعجزة المقرونة بدعوى النبوة المعجوز عن معارضتها، الحاصلة بغير اكتساب وتعلم،
1.ಪ್ರವಾದಿಗಳ ನುಬುವ್ವತ್ ಗೆ ಸಂಬಂಧಪಟ್ಟ ಮುಹ್'ಜಿಝತ್.
ಅದನ್ನು ನಿಷೇಧಿಸಲು ಯಾರಿಗೂ ಸಾಧ್ಯವಿಲ್ಲ.
ಕಲಿಕೆಯಿಂದ ಅಥವಾ ಸಂಪಾದನೆಯ ಮೂಲಕ ಅದನ್ನು ಗಳಿಸಲು ಸಾಧ್ಯವಿಲ್ಲ.
والكرامة وهي ما تظهر على يد كامل المتابعة لنبيه من غير تعلم ومباشرة أعمال مخصوصة، وتنقسم إلى ما هو إرهاص وهو ما يظهر على يد النبي قبل دعوى النبوّة، وما هو معونة وهو ما يظهر على يد المؤمن الذي لم يفسق ولم يغتر به،
ಕಲಿಕೆಯಿಂದ ಅಥವಾ ಇನ್ನಿತರ ಯಾವುದೇ ಚಟುವಟಿಕೆಗಳ ಮೂಲಕವಲ್ಲದೆ ಪೂರ್ಣವಾಗಿ ಪ್ರವಾದಿಗಳನ್ನು ಅನುಸರಿಸಿ ಜೀವಿಸುವರಿಂದ ಪ್ರಕಟವಾಗುವ ಪವಾಡವಾಗಿದೆ ಕರಾಮತ್.
ಇದು 2 ವಿಧವಿದೆ.
1.ಪ್ರವಾದಿತ್ವದ ಮುಂಚಿತವಾಗಿ ಪ್ರವಾದಿಗಳಿಂದ ಪ್ರಕಟವಾದ ಪವಾಡ.ಇದಕ್ಕೆ "ಇರ್'ಹಾಸ್ವ್" ಎಂಬ ಹೆಸರಿದೆ.
2.ದುಷ್ಕರ್ಮಿಯಲ್ಲದ ಒಬ್ಬ ಸತ್ಯವಿಶ್ವಾಸಿಯಿಂದ ಪ್ರಕಟವಾಗುವ ಪವಾಡ.ಅಧ್ಭುತ ಪವಾಡ ಪ್ರಕಟವಾದುದರಿಂದ ಆತ ವಂಚಿಸಲ್ಪಡುವವನಲ್ಲ.ಇದಕ್ಕೆ "ಮಊನತ್" ಎಂಬ ಹೆಸರಿದೆ.
والاستدراج وهو ما يظهر على يد الفاسق المغترّ،
3.ಇಸ್ತಿದ್'ರಾಜ್.
ಅಧ್ಬುತ ಪವಾಡ ಪ್ರಕಟಗೊಂಡ ಕಾರಣಕ್ಕೆ ವಂಚಿಸಲ್ಪಟ್ಟ ದುಷ್ಕರ್ಮಿಯಾದ ಮನುಷ್ಯನಲ್ಲಿ ಪ್ರಕಟವಾದ ಪವಾಡ.
والسحر وهو ما يحصل بتعلم ومباشرة سبب على يد فاسق أو كافر كالشعوذة،وهي خفة اليد بالأعمال، وحمل الحيات ولدغها له، واللعب بالنار من غير تأثير، والطلاسم والتعزيمات المحرمة واستخدام الجان وغير ذلك،
4.ಸಿಹ್ರ್.
ಕೆಲವು ಕೆಲಸಗಳ ಮೂಲಕ ದುಷ್ಕರ್ಮಿ ಮತ್ತು ಸತ್ಯ ನಿಷೇಧಿಗಳಲ್ಲಿ ಕಾಣುವ ಪವಾಡ.ಇದು ಕಲಿಕೆಯಿಂದ ಗಳಿಸುವ ಪವಾಡವಾಗಿದೆ.
ವಾಮಾಚಾರ ಇದಕ್ಕೆ ಉದಾಹರಿಸಬಹುದಾಗಿದೆ.ಒಂದು ಚಟುವಟಿಕೆಯೊಂದಿಗಿರುವ ಕೈಚಳಕವಾಗಿದೆ ಅದು.ಸರ್ಪಗಳನ್ನು ಹೊತ್ತೊಯ್ಯುವುದು,ಅದನ್ನು ಕಚ್ಚಿಸುವುದು,ತೊಂದರೆಯಾಗದ ರೂಪದಲ್ಲಿ ಬೆಂಕಿಯಲ್ಲಿ ಆಟವಾಡುವುದು ನಿಷಿಧ್ದವಾದ ಮಂತ್ರಗಳಿಗೆ ಬೇಕಾಗಿ ಬರೆಯುವುದು ಮತ್ತು ಅದಕ್ಕಾಗಿ ಗೆರೆ ಹಾಕುವುದು ಮುಂತಾದವು ಇದರಲ್ಲಿ ಒಳಪಡುತ್ತದೆ.
إذا عرفت ذلك علمت أن ما يتعاطاه الذين يضربون صدورهم بدبوس أو سكين، أو يطعنون أعينهم، أو يحملون النار أو يأكلونها، وينتمون إلى سيدي أحمد الرفاعي، أو سيدي أحمد بن علوان أو غيرهما من الأولياء، أنهم إن كانوا مستقيمين على الشريعة، فائمين بالأوامر، تاركين للمناهي، عالمين بالفرض العيني من العلم عاملين به، لم يتعلموا السبب المحصل لهذا العمل، فهو من حيز الكرامة وإلا فهو من حيز السحر، إذ الإجماع منعقد على أن الكرامة لا تظهر على يد فاسق، وأنها لا تحصل بتعلم أقوال وأعمال،
ಹೀಗಿರುವಾಗ ಶೈಖ್ ರಿಫಾಯೀ(ರ) ರವರ ಮತ್ತು ಶೈಖ್ ಅಹ್ಮದು ಬಿನ್ ಅಲ್'ವಾನೀ(ರ) ರಂತಹಾ ಔಲಿಯಾಗಳ ಜನರೆಂದು ಹೇಳುವ ಕೆಲವು ಜನರು ಆಯುಧಗಳಿಂದ ಹೃದಯಕ್ಕೆ ಮತ್ತು ಕಣ್ಣಿಗೆ ಚುಚ್ಚುವುದು ಹಾಗೂ ಬೆಂಕಿಯನ್ನು ಹೊತ್ತುಯ್ಯುವುದು,ಬೆಂಕಿಯನ್ನು ನುಂಗುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ.ಅವರು ಶರೀಅತ್ ನ ನಿಯಮಗಳನ್ನು ಅಕ್ಷರಸ ಪಾಲಿಸಿ ಜೀವಿಸಿ,ವೈಯುಕ್ತಿಕ ಭಾಧ್ಯತೆಗಳನ್ನು ತಿಳಿದು ಅವರ ಜೀವನದಲ್ಲಿ ಅಳವಡಿಸಿ ,ಈ ಪವಾಡಗಳನ್ನು ಪ್ರಕಟಿಸಲು ಕಲಿಯದೆ ಪವಾಡಗಳು ದರ್ಶಿಸಲು ಸಾಧ್ಯವಾದರೆ ಅದನ್ನು ಕರಾಮತ್ ನ ಲಿಸ್ಟ್'ನಲ್ಲಿ ಒಳಪಡಿಸಬಹುದಾಗಿದೆ.
ಪವಾಡಗಳು ಕಲಿತು ಪ್ರಕಟಿಸಿದಲ್ಲಿ ಸಿಹ್ರ್ ನ ಲಿಸ್ಟ್ ನಲ್ಲೂ ಒಳಪಡಿಸಬಹುದಾಗಿದೆ.
ಕಾರಣ ಕರಾಮತ್ ದುರ್ಷರ್ಮಿಯಲ್ಲಿ ಪ್ರಕಟವಾಗಲಾರದು.ಕಲಿಕೆಯಿಂದ ಕರಾಮತ್ ದರ್ಶಿಸಲಸಾಧ್ಯವೆಂದು ವಿಧ್ವಾಂಸರು ಒಮ್ಮತಾಭಿಪ್ರಾಯ ತಾಳಿದ್ದಾರೆ.
(ಬಿಗ್'ಯ 299)
ಪವಾಡಗಳು ಅವರವರ ಕರಾಮತ್ತಾಗಿ ಸಂಭವಿಸಬೇಕಾದರೆ ಪ್ರಸ್ತುತ ನಿಯಮಗಳು ಅಡಗಿರಬೇಕು ಎಂದಾಗಿದೆ ಮೇಲಿನ ಇಬಾರತ್ತಿನಲ್ಲಿ ಹೇಳಿದ್ದು.ಅದೇ ವೇಳೆ ಒಂದು ಪ್ರವಾದಿಯ ಅಥವಾ ವಲಿಯ್ಯ್ ನ ಕರಾಮತ್ ಇನ್ನೊಬ್ಬರಲ್ಲಿ ಪ್ರಕಟವಾಗಲು ಪ್ರಸ್ತುತ ನಿಬಂಧನೆ ಬಾಧಕವಲ್ಲ.ಅದು ದುಷ್ಕರ್ಮಿಯಲ್ಲೂ ,ಕಾಫಿರಾದ ವ್ಯಕ್ತಿಯಲ್ಲೂ ಪ್ರಕಟವಾಗಬಹುದಾಗಿದೆ.
ಔಲಿಯಾಗಳನ್ನು ನಿಂದಿಸಿದ ಎಷ್ಟೋ ದುಷ್ಕರ್ಮಿಗಳಿಗೆ ಔಲಿಯಾಗಳ ಕರಾಮತ್'ನ ಮೂಲಕ ನಾಶ ನಷ್ಟ ಸಂಭವಿಸಿದ್ದು ಚರಿತ್ರೆಗಳಲ್ಲಿದೆ.
ಇಮಾಮ್ ಇಬ್ನ್ ಹಜರ್ (ರ) ಹೇಳುತ್ತಾರೆ,
وقد تظهر الكرامة علي يد فاسق بل كافر كالسامري فانه رأى فرس جبريل حتي اخذ من تراب حافرها وجعله في
العجل فخار.(فتاوي الكبري للهيتمي 4/352)
ಕೆಲವೊಮ್ಮೆ ಔಲಿಯಾಗಳ ಕರಾಮತ್ ಸತ್ಯ ನಿಷೇಧಿ ಅಥವಾ ದುಷ್ಕರ್ಮಿಯ ಮೂಲಕ ಪ್ರಕಟವಾಗಬಹುದು.ಜಿಬ್ರೀಲ್ ಅಲೈಹಿಸ್ಸಲಾಮ್ ರ ಕುದುರೆಯ ಕಾಲು ತಾಗಿದ ಮಣ್ಣು ತೆಗೆದು"ಸಾಮಿರಿ" ಎಂಬಾತನು ಆತ ನಿರ್ಮಿಸಿದ ಹಸುವಿನ ಕರು ವಿಗೆ ಹಾಕಿದಾಗ ಅದು ಶಬ್ಧವುಂಟು ಮಾಡಿತು.
(ಫತಾವಲ್ ಕುಬ್ರಾ 4/352)
----------------------------------------------------
ಇಲ್ಲಿ ಜಿಬ್ರೀಲ್ (ಅ) ರ ಕರಾಮತ್ ಸಾಮಿರಿಯಲ್ಲಿ ಪ್ರಕಟವಾಯಿತು.ಆತ ಕಾಫಿರನಾಗಿದ್ದ.
ಇಮಾ ಗಝ್ಝಾಲೀ(ರ)ಹೇಳುತ್ತಾರೆ,
يجوز ظهور ذلك علي يد فاسق لانه مقدور في نفسه
(الاقتصاد في الاعتقاد 1/63)
ದುಷ್ಕರ್ಮಿಯಲ್ಲೂ ಔಲಿಯಾಗಳ ಕರಾಮತ್ ಪ್ರಕಟವಾಗಬಹುದು.ಕಾರಣ ಅದು ಅಸಂಭವ್ಯವಾದ ಸಂಗತಿಯಲ್ಲ.
(ಅಲ್ ಇಖ್ತಿಸ್ವಾದ್ ಫಿಲ್ ಇಹ್'ತಿಖಾದ್ 1/63)
----------------------------------------------------
ಒಟ್ಟಿನಲ್ಲಿಒಬ್ಬ ವ್ಯಕ್ತಿ ಶರೀಅತ್ ನ ನಿಯಮಗಳನ್ನು ಪಾಲಿಸಿ ಅವನಿಂದ ಪವಾಡಗಳು ಪ್ರಕಟವಾದಲ್ಲಿ ಅದು ಆತನ ಕರಾಮತ್ ಎಂದೂ ಶರೀಅತ್ ನಿಯಮ ಪಾಲಿಸದವನಾಗಿದ್ದರೆ, ಪವಾಡ ಶಕ್ತಿ ಕಲಿತು ಪ್ರಕಟ ಮಾಡಿದ್ದಲ್ಲಿ ಅದು ಸಿಹ್ರ್ ಎಂದೂ ಹೇಳಬಹುದಾಗಿದೆ.ಇದ್ಯಾವುದೂ ಇಲ್ಲದ ಕೇವಲ ಒಬ್ಬ ಸಾಧಾರಣ ವ್ಯಕ್ತಿಯಿಂದ ಅಧ್ಬುತ ಪವಾಡಗಳು ಪ್ರಕಟವಾದಲ್ಲಿ ಆತ ಯಾವ ಪ್ರವಾದಿಗೆ ಅಥವಾ ವಲಿಯ್ಯ್ ಗೆ ಸೇರಿಸಿ ಅದನ್ನು ಹೇಳುತ್ತಾನೋ ಅದು ಅವರ ಮುಹ್'ಜಿಝತ್ ಅಥವಾ ಕರಾಮತ್ ಆಗಿ ಪರಿಗಣಿಸಲ್ಪಡಲಾಗುತ್ತದೆ.
ಕುತ್ತ್ ರಾತೀಬ್ ಎಂಬುವುದು ರಿಫಾಈ ರಾತೀಬ್ ನಲ್ಲಿ ನಡೆಸುವ ಒಂದು ಕ್ರಿಯೆ ಆಗಿರುವುದರಿಂದ ಅದು ರಿಫಾಯೀ ಶೈಖ್ (ರ)ರಿಗೆ ಸೇರಿದ ಕರಾಮತ್ ಎಂದು ಹೇಳಬಹುದು.
ಕುತ್ತು ರಾತೀಬ್ ನಡೆಸುವವರು ಸುನ್ನತ್ ಗಳನ್ನು ಪಾಲಿಸದವರು.ಅವರಲ್ಲಿ ಹೇಗೆ ಪವಾಡ ನಡೆಯಬಹುದು ಎಂಬ ಸಂಶಯ ಕೆಲವರಿಗಾದರೂ ಇದೆ.
ಅದರ ಉತ್ತರವನ್ನಾಗಿದೆ ಮೇಲೆ ಓದಿದ್ದು.
ಯಾವುದೇ ಕಾರಣವಿಲ್ಲದೆ ಶರೀರಕ್ಕೆ ಗಾಯ ಮಾಡಬಾರದು.ಚಿಕಿತ್ಸೆಯ ಭಾಗವಾಗಿ ಶರೀರಗಳನ್ನು ಗಾಯ ಮಾಡುವುದು/ಭಾಗಗಳನ್ನು ಕೊಯ್ಯುವುದು ಸ್ವಾಭಾವಿಕವಾಗಿದೆ.
ಕರಾಮತ್ ಎಂಬ ಪವಾಡವನ್ನು ನಿಷೇಧಿಸುವವರ ಮುಂದೆ ಔಲಿಯಾಗಳಿಗೆ ಕರಾಮತ್ ಇದೆ ಎಂದು ತೋರಿಸಲು ಆತ್ಮೀಯ ಚಿಕಿತ್ಸೆಯ ಭಾಗವಾಗಿ ರಾತೀಬ್ ನಲ್ಲಿ ಆಯುಧಗಳಿಂದ ಚುಚ್ಚಿದರೆ ಅದನ್ನು ತಪ್ಪು ಎಂದು ಹೇಗೆ ತಾನೇ ಹೇಳುವುದು?
ಪುರಾವೆಗಳು ಇನ್ನೂ ಇವೆ.
ಬೇಕಾದಲ್ಲಿ ಇನ್ನೊಮ್ಮೆ ಬರೆಯುವೆ.ಇಂಶಾ ಅಲ್ಲಾಹ್.
ಮುಗಿಯಿತು.....
----------------------------------------------------
Comments