ನೂತನವಾದಿಗೆ ದೊರೆತ ಅರ್ಹ ಶಿಕ್ಷೆ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ಇಮಾಮ್ ಮುಹಮ್ಮದ್ ಬಿನ್ ಸಮ್ಮಾಕ್ (ರ) ಹಿಜ್‌ರಾ ಎರಡನೇ ಶತಮಾನದ ಒಬ್ಬ ಖ್ಯಾತ ಪಂಡಿತ ಹಾಗೂ ವಿದ್ವಾಂಸರಾಗಿದ್ದರು. ಇರಾಕಿನ ಕೂಫಾದ ಅವರ ಮನೆಯ ಸಮೀಪವಾಸಿಯಾಗಿ ನೆರೆಯಲ್ಲಿ ಒಬ್ಬ ನೂತನವಾದಿ ವಾಸವಾಗಿದ್ದನು. ಖಲೀಫಾ ಹಝ್ರತ್ ಅಬೂಬಕರ್ ಸಿದ್ದೀಖ್ (ರ) ಮತ್ತು ಖಲೀಫಾ ಹಝ್ರತ್ ಉಮರ್ (ರ) ರನ್ನು ಗೇಲಿ ಮಾಡಿ ಅವರನ್ನು ಯಾವುದೇ ಕಾರಣವಿಲ್ಲದೆ ಧೂಷಿಸಿವುದು, ನಿಂದನೆ ಮಾಡುವುದು, ಅವರನ್ನು ತೆಗಳುವುದು ಇತ್ಯಾದಿಯಾಗಿತ್ತು ಅವನ ದಿನ ನಿತ್ಯದ ಕೆಲಸ. ನೆರೆವಾಸಿಯಾದ್ದರಿಂದ ಇಮಾಮ್ ಮುಹಮ್ಮದ್ ಸಮ್ಮಾಕ್ (ರ) ರಿಗೆ ಅದೊಂದು ತಲೆ ನೋವೇ ಆಗಿತ್ತು. ಮಾತ್ರವಲ್ಲ ದಿನಾಲೂ ಇವರಿಬ್ಬರೆಡೆಯಲ್ಲಿ ಈ ವಿಷಯದಲ್ಲಿ ಜಟಾಪಟಿ ಆಗುತ್ತಲೇ ಇತ್ತು.
▪ಒಂದು ದಿನ ಈ ನೂತನವಾದಿ ಎಂದಿನಂತೆ ಈ ಎರಡು ಸಹಾಬೀಶ್ರೇಷ್ಟರನ್ನು ತೆಗಳಲು ಶುರು ಮಾಡಿದನು. ಇಮಾಮ್ ಸಮ್ಮಾಕ್ (ರ) ರವರು ಕೋಪ ತಡೆಯಲಾಗದೆ ಅವನಲ್ಲಿ ಮಾತಿಗಿಳಿದು ಕೊನೆಗೆ ಯುಧ್ದ ಸಮಾನವಾದ ಒಂದು ವಾತಾವರಣವೇ ಸೃಷ್ಟಿಯಾಯಿತು. ಆ ದಿನ ಇಮಾಮರು ಅವನ ಈ ಕೆಟ್ಟ ಸ್ವಭಾವವನ್ನು ಮತ್ತು ಅವನ ಈ ಗತಿಗೇಡನ್ನು ನೆನೆಸಿ ಅವನ ಈ ಉಪದ್ರವದಿಂದ ಹೇಗೆ ಬಚಾವು ಆಗುವುದೆಂದು ಆಲೋಚಿಸಿ ಬಹಳ ಬೇಸರ ಮತ್ತು ದುಃಖದಿಂದ ರಾತ್ರಿ ಮಲಗಿದರು. ಸುಬ್‌ಹಾನಲ್ಲಾಹ್...! ಮಧ್ಯರಾತ್ರಿಯಾಗುವಾಗ ಇಮಾಮ್ ಸಮ್ಮಾಕರಿಗೆ ಪ್ರವಾದಿ ಮುಹಮ್ಮದ್ (ಸ) ರನ್ನು ಕನಸಿನಲ್ಲಿ ಗೋಚರವಾಯಿತು.
▪ನಂತರ ನಡೆದ ಸಂಗತಿಯೇನೆಂದು ಇಮಾಮ್ ಸಮ್ಮಾಕ್ (ರ) ಹೇಳುತ್ತಾರೆ. *"ಮಧ್ಯರಾತ್ರಿಯಾಗುವಾಗ ನನಗೆ ಪ್ರಾವಾದಿವರ್ಯರನ್ನು ಕನಸಿನಲ್ಲಿ ಕಂಡಿತು. ಕಂಡ ಕೂಡಲೇ ನಾನು ನನ್ನ ಈ ಕೆಟ್ಟ ನೆರೆವಾಸಿಯ ವಿಷಯವನ್ನು ಪ್ರವಾದಿಯವರಲ್ಲಿ ಹೇಳಿದೆ. ಪ್ರವಾದಿ ಮುಹಮ್ಮದ್ (ಸ) ರು ಕನಸಿನಲ್ಲೇ ನನಗೆ ಒಂದು ಕತ್ತಿ ಕೊಟ್ಟು ನನ್ನಲ್ಲಿ ಹೇಳಿದರು. "ಸಮ್ಮಾಕ್..., ನೀವು ಈಗಲೇ ಈ ಕತ್ತಿಯನ್ನು ಹಿಡಿದು ಸಹಾಬಿಗಳನ್ನು ನಿಂದನೆ ಮಡುವ ಆ ವ್ಯಕ್ತಿಯನ್ನು ದ್ಸಬ್‌ಹ್ (ಚೂರಿಹಾಕಿ) ಮಾಡಿ ಬನ್ನಿ."*
▪ *ಪ್ರವಾದಿಯವರು ಕನಸಿನಲ್ಲಿ ಹೇಳಿದಂತೆ ನಾನವನನ್ನು ದ್ಸಬಹ್ ಮಾಡಿದೆ. ಅಷ್ಟರಲ್ಲೇ ನನಗೆ ಎಚ್ಚರವಾಯಿತು. ಆಗ ಮಧ್ಯರಾತ್ರಿಯಾಗಿತ್ತು. ಆಗಲೇ ಅವನಿರುವ ಹತ್ತಿರದ ಮನೆಯಲ್ಲಿ ಏನೋ ಭಯಂಕರ ಕೂಗಾಟ ಮತ್ತು ಬೊಬ್ಬೆ ಕೇಳುತ್ತಿತ್ತು. ನನಗೆ ಕಂಡ ಕನಸಿಗೂ ಈ ಕೂಗಾಟಕ್ಕೂ ಸಂಪರ್ಕವಿದೆಯೆಂದು ಆಗ ನನಗೆ ಗೊತ್ತಾಗಲಿಲ್ಲ. ಸುಬ್‌ಹಾನಲ್ಲಾಹ್! ಬೆಳಗಾಗುವಾಗ ಅವನ ಮನೆಯ ಹೊರಗೆ ನೋಡುವಾಗ ತುಂಬಾ ಜನರು ಜಮಾಯಿಸಿದ್ದು ಅಲ್ಲದೆ ಈತನನ್ನು ಸ್ನಾನ ಗ್ರಹಕ್ಕೆ ತರುವುದೂ ಕಂಡು ಬಂತು. ನಾನು ಕೂಡಲೇ ಆಕಡೆ ಹೋದೆನು. ಹೋದಾಗ ಅದು ಅವನ ಕೊನೆಯ ಸ್ನಾನವಾಗಿತ್ತು. ಮಾತ್ರವಲ್ಲ ಮೊದಲನೇ ರಾತ್ರಿ ಪ್ರವಾದಿವರ್ಯರು ನನಗೆ ಕತ್ತಿ ಕೊಟ್ಟು ದ್ಸಬಹ್ ಮಾಡಲು ಹೇಳಿದಂತೆ ಅವನ ಕತ್ತಿನಲ್ಲಿ ಶರೀರದಿಂದ ತಲೆ ಬೇರ್ಪಟ್ಟಂತೆ ಚೂರಿ ಹಾಕಿದ ಗುರುತು ಗೋಚರವಾಗುತ್ತಿತ್ತು.*
ಸಂಗ್ರಹ : ಇಮಾಮ್ ಅಬ್ದುಲ್ ರಹ್‌ಮಾನ್ ಸಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.
Comments