Skip to main content

ನಂಬಿಕೆಗೆ ದ್ರೋಹವೆಸಗಿ ಅಲಿ (ರ) ರವರ ಕುದುರೆ ಲಗಾಮನ್ನು ಕದ್ದು ಮಾರಿದ ದುರ್ದೈವಿ

ನಂಬಿಕೆಗೆ ದ್ರೋಹವೆಸಗಿ ಅಲಿ (ರ) ರವರ ಕುದುರೆ ಲಗಾಮನ್ನು ಕದ್ದು ಮಾರಿದ ದುರ್ದೈವಿ

✒ಯೂಸುಫ್ ನಬ್‌ಹಾನಿ ಕುಕ್ಕಾಜೆ.
📞0097155 3499119

▪ *ಒಮ್ಮೆ ಇಸ್ಲಾಮಿನ* ನಾಲ್ಕನೇ ಖಲೀಫಾ ಹಝ್ರತ್ ಇಮಾಮ್ ಅಲಿ (ರ) ರವರು ಇರಾಕಿನ ಕೂಫಾದಲ್ಲಿ ಒಂದು ಯಾತ್ರೆಯಲ್ಲಿದ್ದರು. ನಮಾಝಿನ ಸಮಯವಾದಾಗ ಒಂದು ಮಸೀದಿಯ ಹೊರಗಡೆ ತನ್ನ ಸಂಚಾರ ವಾಹನವಾದ ಹೇಸರಗತ್ತೆಯಿಂದ (ಕುದುರೆ) ಇಳಿದು ಅಲ್ಲಿ ಅಲೆದಾಡುತ್ತಿದ್ದ ಒಬ್ಬ ಬಡಪಾಯಿ ವ್ಯಕ್ತಿ ಯಲ್ಲಿ *"ನಾನು ನಮಾಝು ಮಾಡಿ ಬರುವ ತನಕ ಇದನ್ನು ಎಲ್ಲೂ ಹೋಗದಂತೆ ನೋಡಿಕೊಳ್ಳು. ಈಗಲೇ ಬರುತ್ತೇನೆ"* ಎಂದು ಹೇಳಿ ಅದರ ಲಗಾಮನ್ನು ಅವನಲ್ಲಿ ಹಿಡಿದುಕೊಳ್ಳಲು ಹೇಳಿ ಮಸೀದಿಯ ಒಳಗಡೆ ಹೋದರು.
   ▪ *ಇಮಾಮ್ ಅಲಿ* (ರ) ರವರು ನಮಾಝಿಗೆ ಪ್ರವೇಶಿಸಿದನ್ನು ಹೊರಗಿನಿಂದಲೇ ನೋಡುತ್ತಿದ್ದ ಆತ ಅದರ ಕಟ್ಟಿ ಹಾಕುವ ಹಗ್ಗವನ್ನು (ಲಗಾಮು) ತೆಗೆದು ಹತ್ತಿದಲ್ಲಿರುವ ಒಂದು ಅಂಗಡಿಗೆ ಹೋಗಿ ಎರಡು ದಿರ್‌ಹಮಿಗೆ ಮಾರಿ ಅಲ್ಲಿಂದ ಪರಾರಿಯಾದ.
   ▪ *ಇತ್ತ* ಹಝ್ರತ್ ಅಲಿ (ರ) ರವರು ನಮಾಝು ಮುಗಿಸಿ ತನ್ನ ಜೇಬಿನಿಂದ ಎರಡು ದಿರ್‌ಹಮ್ ಹೊರ ತೆಗೆದು ಮಸೀದಿ ಹೊರಗಡೆ ಕುದುರೆಗೆ ಕಾವಲು ನಿಂತ ವ್ಯಕ್ತಿಗೆ ಟಿಪ್ಸ್ (TIPS) ಆಗಿ ಕೊಡಬೇಕೆಂದು ಎಣಿಸಿ ಹೊರಬಂದಾಗ ಆ ವ್ಯಕ್ತಿಯನ್ನು ಕಾಣುವುದಿಲ್ಲ. ಮಾತ್ರವಲ್ಲ ಆತ ಕುದುರೆಯ ಲಾಗಾಮನ್ನು ಕೂಡ ಕಿತ್ತು ತೆಗೆದು ಎಲ್ಲೋ ಪರಾರಿಯಾಗಿದ್ದ.
   ▪ *ನಂತರ* ಹಝ್ರತ್ ಅಲಿ (ರ) ರವರು ತನ್ನೊಂದಿಗಿದ್ದ ಸೇವಕನಲ್ಲಿ (ಖಾದಿಮ್) *"ನೀನು ಅಂಗಡಿಯಿಂದ ಈ ಎರಡು ದಿರ್‌ಹಮಿಗೆ ಸಮಾನವಾದ ಒಂದು ಲಗಾಮು ತೆಗೆದುಕೊಂಡು ಬಾ."* ಎಂದು ಹೇಳಿದರು.
   ▪  *ಅಂಗಡಿಗೆ* ಹೋದ ಅಲಿ (ರ) ರವರ ಸೇವಕ ಲಗಾಮು ಖರೀದಿಸಿ ಬಂದು ಹಝ್ರತ್ ಅಲಿ (ರ) ರಲ್ಲಿ ಹೇಳಿದ.  *"ನಮ್ಮ ಹಳೆಯ ಲಗಾಮು ಆ ಅಂಗಡಿಯಲ್ಲಿದೆ. ಆ ಕದ್ದ ವ್ಯಕ್ತಿ ಅದನ್ನು ಅಲ್ಲಿ ಎರಡು ದಿರ್‌ಹಮಿಗೆ ಮಾರಾಟ ಮಾಡಿದ್ದಾನೆ."*
   ▪ *ಬಹಳ* ಬುಧ್ಧಿವಂತನಾದ ಹಝ್ರತ್ ಅಲಿ (ರ) ಹೇಳಿದರು. *"ನಾನು ಟಿಪ್ಸ್ ಕೊಡಬೇಕೆಂಬ ನಿಯ್ಯತ್ ಮಾಡಿದ ಹಣ ನನಗೆ ಹೊಯಿತು. ಅಲ್ಲಾಹುವಿನ ತಖ್‌ದೀರಿನಂತೆ ಅವನಿ‌ಗೆ ಸಿಗಬೇಕಾದದ್ದೂ ಸಿಕ್ಕಿತು. ಆದರೆ, ನನ್ನಿಂದ ಹಲಾಲಾದ ರೂಪದಲ್ಲಿ ಸಿಗಬೇಕಾಗಿದ್ದ ಹಣ ಅವನಿಗೆ ಅವನ ನಿಯ್ಯತಿನಂತೆ ಹರಾಮಾದ ರೂಪದಲ್ಲಿ ಸಿಕ್ಕಿತು."*

ಸಂಗ್ರಹ; ಇಮಾಮ್ ಅಬ್‌ಶೀಯವರ *ಅಲ್ ಮುಸ್‌ತತ್‌ರಫ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...