Skip to main content

ಮಹಾತ್ಮರೊಬ್ಬರ ಮರಣ ಪತ್ರ

ಮಹಾತ್ಮರೊಬ್ಬರ ಮರಣ ಪತ್ರ

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119

   ▪ ಮಹಾನ್ ವ್ಯಕ್ತಿಯೊಬ್ಬರು ತನ್ನ ಮರಣಕ್ಕೆ ಕೆಲವು ದಿನಗಳ ಮುಂಚೆ ಒಂದು ಪತ್ರವನ್ನು ಬರೆದು ತನ್ನ ಹಾಸಿಗೆಯ ಅಡಿಯಲ್ಲಿಟ್ಟರು. ಆ ಪತ್ರದ ಮುಖ್ಯಾಂಶಗಳು ಈ ಕೆಳಗಿನಂತಿದೆ;
   ▪ ಈ ಇಹಲೋಕ ತ್ಯಜಿಸಿ ಪರಲೋಕಕ್ಕೆ ಹೋಗುವ ಅದರ ಪ್ರಥಮ ಹಂತವಾದ ಮರಣದ ಬಗ್ಗೆ ನನಗೆ ಯಾವುದೇ ಹೆದರಿಕೆ, ಭಯ, ಕಳವಳವಿಲ್ಲ.
   ▪ನನ್ನ ಕೊಳೆತು ಹೋಗುವ ಈ ಶರೀರದ ಬಗ್ಗೆ ನಾನು ಕಿಂಚಿತ್ತೂ ಗಮನ ಕೊಡುವುದೂ ಇಲ್ಲ.
   ▪ ಮರಣಾ ನಂತರ ಮಾಡಬೇಕಾದ ಅತ್ಯಗತ್ಯ ಕರ್ಮಗಳಾದ ಶರೀರದಲ್ಲಿರುವ ವಸ್ತ್ರ ಕಳಚಿ ಸ್ನಾನ ಮಾಡಿಸುವುದು, ಕಫನ್ ಮಾಡುವುದು, ನನ್ನ ಹಳೆ ಮನೆಯಿಂದ ಖಬರ್ ಎಂಬ ಹೊಸ ಮನೆಗೆ ವರ್ಗಾವಣೆ ಮಾಡುವುದು ಇತ್ಯಾದಿ ಕರ್ಮಗಳನ್ನು ನನ್ನ ಮುಸ್ಲಿಮ್ ಸಹೋದರರು ಮಾಡುವರು.
   ▪ನನ್ನ ಈ ಎಂದೆಂದಿಗೂ ಮರಳಿ ಬಾರದ ಯಾತ್ರೆ ಬೀಳ್ಕೊಡಲು ಹಲವಾರು ಮಂದಿ ಅವರ ದೈನಂದಿನ ಹೊಟ್ಟೆಪಾಡಿನ ಕಸಬನ್ನು ಬಿಟ್ಟು ಹಾಜರಾಗುವರು.
   ▪ನಾನು ಯಾತ್ರೆ ಹೋಗುವಾಗ ಈ ಕೆಳಗೆ ಹೇಳುವ ಕೆಲವು ವಸ್ತುಗಳನ್ನು ಬಿಟ್ಟು ಹೋಗುತ್ತೇನೆ.
1.ನಾನು ಬರೆದ ಮತ್ತು ಖರೀದಿಸಿದ ಕೆಲವು ಗ್ರಂಥಗಳು.
2. ಒಂದು ಪೆಟ್ಟಿಗೆ.
3. ಬೀಗದ ಕೈ.(ಚಾವಿ)
4. ಪಾದರಕ್ಷೆ.
5. ತಸ್‌ಬೀಹ್ ಮಾಲೆ.
6. ಕೆಲವು ಉಡುಪುಗಳು.
   ▪ಈ ಮೇಲೆ ಹೇಳಲ್ಪಟ್ಟ ವಸ್ತುಗಳನ್ನು ನನ್ನ ಕುಟುಂಬಿಕರು ಯಾರಿಗಾದರೂ ದಾನ ಮಾಡುವುದಾದರೆ ಅದು ನನ್ನ ಈ ಯಾತ್ರೆಯಲ್ಲಿ ನನಗೆ ಬರುವ ಕಷ್ಟ ಕಾರ್ಪಣ್ಯಗಳಿಗೆ ಒಂದು ಪರಿಹಾರ ಆಗಬಹುದು.
   ▪ನಾನು ಈ ಇಹಲೋಕ ಬಿಟ್ಟು ಹೋಗುವುದರಿಂದ ಈ ಐಹಿಕ ಜಗತ್ತಿಗೆ ಯಾವುದೇ ನಷ್ಟವಿಲ್ಲ. ಅದರ ಚಲನ ವಲನಗಳು ಹಾಗೆಯೇ ಮುಂದುವರಿಯುತ್ತದೆ. ನಾನು ಮಾಡುತ್ತಿದ್ದ ನನ್ನ ಕಸಬಿಗೆ ಅಧಿಕೃತರು ಬೇರೆಯವರನ್ನು ನೇಮಕ ಮಾಡುತ್ತಾರೆ. ನನಗೆ ಆಸ್ತಿಪಾಸ್ತಿ ಇದ್ದರೆ ಅದು ಇಸ್ಲಾಮಿನ ನಿಯಮದಂತೆ ಅರ್ಹರಿಗೆ ಹೋಗುತ್ತದೆ. ಪ್ರಪಂಚದ ಆರ್ಥಿಕ ವ್ಯವಸ್ಥೆ ಅದರ ಹಾದಿಯಲ್ಲಿ ಮುಂದುವರಿಯುತ್ತದೆ.
   ▪ನನಗೆ ಈ ಯಾತ್ರೆ ಹೊರಡುವುದರಿಂದ ನನ್ನ ತಂದೆ ತಾಯಂದಿರು ನಾನು ಈ ಪ್ರಪಂಚಕ್ಕೆ ಬಂದಾಗ ಇಟ್ಟ ಹೆಸರು ನನ್ನಿಂದ ದೂರವಾಗುತ್ತದೆ. ನಂತರ ಯಾರೂ ನನ್ನನ್ನು ಹೆಸರೇಳಿ ಕರೆಯುವುದಿಲ್ಲ. ನಂತರದ ಹೆಸರು *ಮಯ್ಯಿತ್* ಎಂದಾಗಿರುತ್ತದೆ. ನನ್ನ ಮೇಲೆ ನಮಾಝ್ ಮಾಡುವಾಗಲೂ, ನನ್ನನ್ನು ಶವ ಮಂಚದಿಂದ ಹೊರ ತೆಗೆಯುವಾಗಲೂ, ಕಬರಿನೊಳಗೆ ಇಡುವಾಗಲೂ *ಮಯ್ಯಿತ್* ಎಂಬ ಪದವಲ್ಲದೆ ಬೇರೆ ಯಾವ ಹೆಸರು ಯಾರೂ ಹೇಳುವುದಿಲ್ಲ. ನನ್ನ ಕುಟುಂಬ, ಮನೆತನ, ಗೊತ್ರ, ಅಧಿಕಾರ ಪದವಿ ಇತ್ಯಾದಿ ಯಾವುದೂ ಇದ್ದೂ ಯಾವುದೇ ಪ್ರಯೋಜನವಿಲ್ಲ. ಎಲ್ಲರೂ ಹೇಳುವುದು ಮಯ್ಯಿತ್... ಮಯ್ಯಿತ್... ಮಯ್ಯಿತ್...
   ▪ಓ ನನ್ನ ಬದುಕಿರುವ ಮಿತ್ರ..,   ಇನ್ನು ನಾನು ಸಂಪೂರ್ಣ ಕಣ್ಮರೆಯಾದರೆ ನನ್ನನ್ನು ತಿಳಿಯುವ ನನ್ನ ಆಪ್ತ ಮಿತ್ರರು ಹೇಳುತ್ತಾರೆ. *"ಸಾಧು ಮನುಷ್ಯ. ಯಾರಿಗೂ ತೊಂದರೆ ಇರಲಿಲ್ಲ. ಹೋದ..."* ನಂತರ ಒಂದೆರಡು ದಿನ ಕಳೆಯುವಾಗ ಅವರಿಗೆ ಅದೂ ಮರೆತು ಹೋಗುತ್ತದೆ. ಅವರು ಅವರವರ ಕೆಲಸದಲ್ಲಿ ತಲ್ಲೀನರಾಗುತ್ತಾರೆ.
   ▪ಇನ್ನು ಪತ್ನಿ, ಪತಿ, ಮಕ್ಕಳು ಮುಂತಾದ ಕುಟುಂಬಿಕರಾದರೆ ಅವರಿಗೆ ಒಂದರೆರಡು ವಾರದ ಅಥವಾ ಒಂದೆರಡು ತಿಂಗಳುಗಳ ತನಕ ಬೇಸರವಿರುತ್ತದೆ. ನಂತರ ಅವರೂ ಮರೆತು ಬಿಡುತ್ತಾರೆ.
   ▪ಓ ಮಿತ್ರಾ... ಇಲ್ಲಿಗೆ ನನ್ನ ಕತೆ (ಅಥವಾ ನಿನ್ನ) ಮುಗಿಯಿತು. ಮುಂದಕ್ಕೆ ಆಗಿರುತ್ತದೆ ನನ್ನ ಸರಿಯಾದ ಕತೆ ಆರಂಭವಾಗುವುದು.
   ▪ನನ್ನ ಚಂದ, ಆಸ್ತಿಪಾಸ್ತಿ, ಆರೋಗ್ಯ, ಮಕ್ಕಳು, ಮನೆ ಮಂದಿರ, ಪತ್ನಿ, ತಂದೆ, ತಾಯಿ ಇತ್ಯಾದಿ ಎಲ್ಲವೂ ಈಗ ನನ್ನೊಂದಿಗಿಲ್ಲ. ನಾನೊಬ್ಬನೇ... ಈಗ ನನ್ನ ಸರಿಯಾದ ಜೀವನಕ್ಕೆ ಕಾಲಿಟ್ಟಿರುವೆನು.
   ▪ಈಗ ನನಗೆ (ಅಥವಾ ನಿನಗೆ) ಕೆಲವು ಪ್ರಶ್ನೆಗಳು ಎದುರಾಗುತ್ತದೆ. ನೀನು ನಿನ್ನ ಶಾಶ್ವತ ಜೀವನ ಸುಗಮವಾಗಲು ಏನು ಸಿದ್ದತೆ ಮಾಡಿರುವಿ.?
   ▪ನಮಾಝ್, ಉಪವಾಸ, ಝಕಾತ್, ಹಜ್ಜ್ , ದಾನಧರ್ಮ ಇತ್ಯಾದಿಗಳಲ್ಲಿ ನಿನ್ನಲ್ಲಿ ಯಾವುದಿದೆ..? ಅದುವೇ ನಿನ್ನ ಯಶಸ್ವಿಗೆ ಕಾರಣವಾಗುವುದು.
   ▪ಪರವಾಗಿಲ್ಲ.. ನಾನು ಬರೆದ ಈ ಪತ್ರದಲ್ಲಿರುದನ್ನಾದರೂ ಇತರರಿಗೆ ತಿಳಿಸಲು ನಿನಗೆ ಸಾದ್ಯವಾಗುವುದಾದರೆ ಅದೂ ನಿನ್ನ ಒಳಿತಿಗೆ ಮತ್ತು ಯಶಸ್ವಿಗೆ ನಾಂದಿಯಾದೀತು.
   ▪ ಮರಣ ಆಸನ್ನವಾಗುವ ಒಬ್ಬ ವ್ಯಕ್ತಿ ಆ ವೇಳೆಯಲ್ಲಿ ಹೇಳುವ ಮಾತಿನ ಬಗ್ಗೆ ಪವಿತ್ರ ಕುರ್‌ಆನ್ ಹೇಳುತ್ತದೆ *"ಪ್ರಭೂ..., ನನಗೆ ಸ್ವಲ್ಪ ಕಾಲಾವಧಿ ಕೂಡ ನೀನು ಕೊಡುತ್ತಿದ್ದರೆ ನಾನು ದಾನಧರ್ಮ ಮಾಡಿ ಸಜ್ಜನರ ಪಟ್ಟಿಯಲ್ಲಿ ಆಗುತ್ತಿದ್ದೆ"*
   ▪ಇಲ್ಲಿ ಗಮನಾರ್ಹ ಸಂಗತಿಯೆಂದರೆ, *"ನೀನು ನನಗೆ ಸ್ವಲ್ಪ ಸಮಯ ಕೊಡತ್ತಿದ್ದರೆ ನಾನು ನಮಾಝು ಮಾಡುತ್ತಿದ್ದೆ, ನಾನು ಉಮ್ರ ನಿರ್ವಹಿಸುತ್ತಿದ್ದೆ, ನಾನು ಕುರ್‌ಆನ್ ಓದುತ್ತಿದ್ದೆ ಅಥವಾ ಇನ್ಯಾವುದೇ ಸತ್ಕಾರ್ಯ ಮಾಡುತ್ತಿದ್ದೆ"* ಎಂದು ಹೇಳದೆ ಬರೀ ನಾನು ಧಾನ ಮಾಡುತ್ತಿದ್ದೆ ಎಂದು ಹೇಳಿದ್ದರಲ್ಲಿ ಧಾನವು ಮರಣಾ ನಂತರ ಮರಣ ಹೊಂದಿದ ವ್ಯಕ್ತಿಯ ಪಾರತ್ರಿಕ ಬದುಕಿನಲ್ಲಿ ತುಂಬಾ ಪರಿಣಾಮಕಾರಿ ಫಲ ನೀಡುತ್ತದೆ ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
   ▪ಕೊನೆಯದಾಗಿ ನಾನು ಹೇಳುತ್ತೇನೆ; ಮಿತ್ರಾ... ನಿಮಗೆ ಮರಣಾ ನಂತರ ನೆರಳಾಗಿ ಬರುವ ಒಂದಾಗಿದೆ ಧಾನ ಅಥವಾ ಸದಖ. ಆದ್ದರಿಂದ ನಾನು ಹೇಳಿದ ಈ ಅಮೂಲ್ಯ ಮಾತುಗಳು ನಿನಗೆ ಇಷ್ಟವಾದರೆ ಇದು ಒಂದು ಒಳ್ಳೆಯ ಉಪದೇಶ ಎಂಬ ನಿಯ್ಯತಿನಲ್ಲಿ ನೀನು ನಿನ್ನ ಇತರ ಸಹೋದರರಿಗೆ ಹಂಚಿಕೊಳ್ಳು. *ಒಳ್ಳೆಯ ಮಾತು ಧಾನವಾಗಿದೆ* ಎಂಬ ಪ್ರವಾದಿ ಮುಹಮ್ಮದ್ (ಸ) ರ ಪವಿತ್ರ ಹದೀಸ್ ನಿನಗೆ ಗೊತ್ತಿದೆಯಲ್ಲವೇ..?
   ▪ಪತ್ರ ದೀರ್ಘ ಮಾಡುವುದಿಲ್ಲ. ನಿನ್ನ ಕಾರಣದಿಂದ ನಿರ್ಲಕ್ಷ್ಯವಾಗಿರುವ ಒಬ್ಬನಾದರೂ ಎಚ್ಚರವಾಗಲಿ... ಎಂಬ ಆಶಾಭಾವನೆಯೊಂದಿಗೆ ಮುಕ್ತಾಯ ಗೊಳಿಸುತ್ತೇನೆ.

   ಇತೀ..
           ಪರಲೋಕ ಯಾತ್ರಿಕ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...