Skip to main content

ಪುಣ್ಯ ಪ್ರವಾದಿ ﷺ ತಂಙಳ ಪಾದರಕ್ಷೆಯ ನಕ್ಷೆ

*💚صَلُّوا عَلَى الْحَبِيب مُحَمَّدٍ ﷺ* 💞

*💚صَلَّى اللهُ عَلَى مُحَمَّدٍ*
*صَلَّى اللهُ عَلَيْهِ وَسَلَّمْ✨*

*💚 اَلصَّلَاةُ وَالسَّلَامُ عَلَيْكَ يَا سَيَّدِي يَارَسُولَ اللّٰه ﷺ💚*

                         *🌹نَعْلْ مُبَارَكْ 🌹*
      _{ಪುಣ್ಯ ಪ್ರವಾದಿ ﷺ ತಂಙಳ ಪಾದರಕ್ಷೆಯ ನಕ್ಷೆ }_

       
*_ಗೌರವಕ್ಕೆ ದಕ್ಕೆ ಬಾರದಿರಲಿ_*

_ಪುಣ್ಯ ಪ್ರವಾದಿ ಮುತ್ತು ಹಬೀಬ್ ಮುತ್ತು ಮುಸ್ತಫಾ ﷺِ ತಂಙಳ್'ರವರ ಪಾದರಕ್ಷೆಯ ನಕ್ಷೆ ಇರುವ ಟೊಪ್ಪಿಯು ಈವಾಗ ಕಾಣಸಿಗುತ್ತಿದೆ. ಮತ್ತು ಅದನ್ನು ಧರಿಸುವ ನಮ್ಮ ಆತ್ಮೀಯ ಗೆಳೆಯರೂ ಕೂಡ ಇದ್ದಾರೆ. ಅವರೊಂದಿಗೆ ಪ್ರೀತಿಯಿಂದ ಒಂದು ಮನವಿ ಮಾಡಿಕೊಳ್ಳುತ್ತಿದ್ದೇವೆ._

*ಮುತ್ತು ಹಬೀಬ್ ಮುತ್ತು ಮುಸ್ತಫಾ ﷺِ ತಂಙಳ್'ರವರ ಪಾದರಕ್ಷೆಯ ನಕ್ಷೆ ಇರುವ ಟೊಪ್ಪಿಯು ಅಥವಾ ಪುಣ್ಯ ಪಾದರಕ್ಷೆಯ ನಕ್ಷೆ ಇರುವ  ಇನ್ನಿತರ  ವಸ್ತ್ರಗಳನ್ನು ಧರಿಸುವವರು ಅದಕ್ಕಿರುವ ಗೌರವ ಅರ್ಥ ಮಾಡಿಕೊಂಡು ಉಪಯೋಗಿಸುವುದು ತುಂಬಾನೇ ಒಳ್ಳೆಯದು. ಕಾರಣ ನಾವು ಅಂತಹ ಪವಿತ್ರವಾದ ವಸ್ತುಗಳನ್ನು ಉಪಯೋಗಿಸುವಾಗ ಅದಕ್ಕಿರುವ ಮಹತ್ವ, ಮೊಹಬ್ಬತ್, ಹಾಗೂ ಅದರ ಪುಣ್ಯ, ಬರ್ಕತ್ತನ್ನು  ತಿಳಿಯದೇ ಹೋದಲ್ಲಿ ಅದರ ಗೌರವಕ್ಕೆ ದಕ್ಕೆ ಬರುವ ಸಂದರ್ಭ ಎದುರಾಗಬಹುದು.*

*_ಪುಣ್ಯ ಸಂಪಾದಿಸಲು ಹೋಗಿ ಅದರ ಗೌರವಕ್ಕೆ ದಕ್ಕೆ ಬರುವ ಸಾಧ್ಯತೆ ಹೆಚ್ಚು ಆದ್ದರಿಂದ ಅದರ ಬಗ್ಗೆ ಜಾಗ್ರತೆವಹಿಸುವುದು ಉತ್ತಮ. ನಮಗೆ ಅದರ ಬಗ್ಗೆ ಗೌರವ ಕಾಪಾಡಲು ಸಾಧ್ಯವಿದೆ ಎಂದು ದೃಢ ಸಂಕಲ್ಪವಿದ್ದರೆ ಮಾತ್ರ ಪುಣ್ಯ ಪಾದರಕ್ಷೆಯ ನಕ್ಷೆಯಿರುವ ವಸ್ತುಗಳನ್ನು ಉಪಯೋಗಿಸುವ. ಇಲ್ಲದಿದ್ದಲ್ಲಿ ಅದನ್ನು ಉಪಯೋಗಿಸದೆ ಇರುವುದೇ ಉತ್ತಮ._*

_ಇತ್ತೀಚಿನ ದಿನದಲ್ಲಿ ಹಲವರ ಟೊಪ್ಪಿಗಳಲ್ಲಿ  ಪುಣ್ಯ ರಸೂಲುಲ್ಲಾಹಿ ﷺِ ತಂಙಳ ಪವಿತ್ರವಾದ ಪಾದರಕ್ಷೆಯ ನಕ್ಷೆ ಕಾಣಸಿಗುತ್ತಿವೆ._

*_الْحَمْدُ للَّهِ ثُمَّ اَلْحَمْدُ للَّهِ_*

*ಪಾಪಿಯಾದ ನಮಗೆ ನಮ್ಮ ಮಾಣಿಕ್ಯ ಮುತ್ತು ಹಬೀಬುಲ್ಲಾಹಿ ﷺِ ತಂಙಳನ್ನು ನೋಡಲು ಭಾಗ್ಯ ಸಿಗದಿದ್ದರೂ ಅಲ್ಲಿಯ ﷺِ ಪುಣ್ಯವೇರಿದ ಪಾದರಕ್ಷೆಯ ನಕ್ಷೆಯಾದರು ನೋಡಲು ಅಲ್ಲಾಹು ತೌಫೀಕ್ ನೀಡಿದ್ದಾನೆ.( اَلْحَمْدُ للَّهِ )* 

_ಆದರೆ ಕೆಲವು ಸಹೋದರರು ಈ ಪುಣ್ಯ ನಕ್ಷೆಯನ್ನು ಎಲ್ಲರೂ ಉಪಯೋಗಿಸುತ್ತಿರುವಾಗ ನಾನು ಕೂಡ  ಉಪಯೋಗಿಸಬೇಕೆಂದು ಬಯಸುವವರಿದ್ದಾರೆ.ಆದರೆ ಅದರ ಮಹತ್ವ ಅರ್ಥಮಾಡಿಕೊಳ್ಳದೆ ನಾವು ಆ ಪುಣ್ಯವೇರಿದ ಟೊಪ್ಪಿಯನ್ನು ಸಾಧಾರಣ ಬಳಸುವ ಟೊಪ್ಪಿಯ ರೀತಿಯಲ್ಲಿ ಬಳಸುತ್ತಿಲ್ಲವೇ?_
*_نعوذ بالله_*

*_ಅಲ್ಲಾಹು ನಮ್ಮನ್ನು ಕಾಪಾಡಲಿ_*
*_۞ْآمِيـــــنْ  يَا رَبَّ الْعَالَمِين۞_*

_ಆ ಪುಣ್ಯವೇರಿದ ಟೊಪ್ಪಿಯನ್ನು ಧರಿಸಿಕೊಂಡು ಶೌಚಾಲಯಕ್ಕೆ ಹೋಗುತ್ತಿಲ್ಲವೇ?_

_ಆ ಪುಣ್ಯವೇರಿದ ಟೊಪ್ಪಿಯನ್ನು ನಾವು ಗೌರವಿಸದೆ ಮನೆಯ ಯಾವುದಾದರೊಂದು ಸ್ಥಳದಲ್ಲಿ ಹಾಕುತ್ತಿಲ್ಲವೇ?_

_ಆ ಪುಣ್ಯವೇರಿದ ಟೊಪ್ಪಿಯನ್ನು ನಮ್ಮ ಮನೆಯ ಮಕ್ಕಳ ಕೈಯಲ್ಲಿ ಕೊಡುತ್ತಿಲ್ಲವೇ?_
*( ಮಕ್ಕಳ ಕೈಯಲ್ಲಿ ಕೊಡುವುದು ತಪ್ಪು ಎಂದು ಅರ್ಥವಲ್ಲ, ಬದಲಾಗಿ ಮಕ್ಕಳ ಕೈಯಲ್ಲಿ ಕೊಡುವುದರಿಂದ ಆ ಪುಣ್ಯವೇರಿದ ನಕ್ಷೆಗೆ ಯಾವುದೇ ರೀತಿಯ ಅಗೌರವ ಆಗಬಾರದು ಅಷ್ಟೇ )*

_ಮಕ್ಕಳು ಯಾವಾಗಲು ಶುಚಿತ್ವದಲ್ಲಿರಬೇಕೆಂದಿಲ್ಲ, ಅವರು ಬುದ್ದಿ ಇಲ್ಲದೆ ಆ ಪುಣ್ಯವೇರಿದ ವಸ್ತುಗಳನ್ನು ಅಶುದ್ಧಿ ಇರುವ ಸ್ಥಳದಲ್ಲಿ ಅಥವಾ ಗೌರವಕ್ಕೆ ಬಂಗವಾಗುವ ರೀತಿಯಲ್ಲಿ ಉಪಯೋಗಿಸಿದರೆ ಅದರ ಜವಬ್ದಾರರು ನವಾಗಿದ್ದೇವೆ ಎಂಬುವುದು ನೆನಪಿರಲಿ_

*ಕಾಣದ  ಪುಣ್ಯ ಪ್ರವಾದಿ ﷺِ ತಂಙಳ್'ರವರ ಪಾದರಕ್ಷೆಯ  ನಕ್ಷೆಯನ್ನು ಕಾಣುವ ಸೌಭಾಗ್ಯ ಸಿಕ್ಕಿರುವುದೇ ಬಹುದೊಡ್ಡ ರಹ್ಮತ್ ಆಗಿದೆ. ಆದರೆ ನಾವದನ್ನು ಎಲ್ಲೆಂದರಲ್ಲಿ ಇಡುತ್ತಾ , ಬಳಸುತ್ತಾ ಅದರ ಗೌರವ ಪಾಲಿಸುವುದಿಲ್ಲ ಎಂಬುವುದು ದುಃಖದ ವಿಷಯ…!*

*_ಒಂದು ವೇಳೆ ನಮಗೆ ಅದರ ಗೌರವವನ್ನು ಪಾಲಿಸಲು ಆಧರಿಸಲು ಆಗದೇ ಇದ್ದರೆ ಅದನ್ನು ಖರೀದಿಸದಿರೋಣ. ಖರೀದಿಸಿದ ನಂತರ ಅದರ ಗೌರವವನ್ನು ಪಾಲಿಸಲು ಮರೆಯದಿರೋಣ._*

_💚ಪುಣ್ಯ ಪ್ರವಾದಿ ಮುತ್ತು ಹಬೀಬ್ ಮುತ್ತು ಮುಸ್ತಫಾ ﷺِ ತಂಙಳ್'ರವರ ಯಾವುದೇ ವಸ್ತು, ವಿಷಯವಾದರೂ ಅದರಲ್ಲಿ ಒಂದು ಅಣುವಿನಷ್ಟು ಕೂಡ ಅಲ್ಲಿಯ ﷺِ ಗೌರವಕ್ಕೆ ದಕ್ಕೆ ಬಾರದಂತೆ ನೋಡಿಕೊಳ್ಳೋಣ._

*_ಪುಣ್ಯವೇರಿದ ಪಾದರಕ್ಷೆಯ  ಮಹತ್ವ ಎಷ್ಟೊಂದು ಶ್ರೇಷ್ಠವಾದುದು ಗೊತ್ತಾ ?_*

*_ಪುಣ್ಯವೇರಿದ ಪಾದರಕ್ಷೆಯ ನಕ್ಷೆಯನ್ನು ರಚಿಸಿದ ಮಹಾನರು ಯಾರು ಗೊತ್ತಾ?_*

*_💚ಇಮಾಂ ಯೂಸುಫುನ್ನಬಹಾನೀ ರಲಿಯಲ್ಲಾಹು ಅನ್ಹು ರವರು ರಚಿಸಿದ  ಮುತ್ತು ಹಬೀಬುಲ್ಲಾಹಿ ﷺ ತಂಙಳ ಪವಿತ್ರವಾದ ಪಾದರಕ್ಷೆಯ ನಕ್ಷೆಯಾಗಿದೆ ಇಂದು ನಾವೆಲ್ಲರೂ ನೋಡುತ್ತಿರುವ ಈ ಪುಣ್ಯವಾದ ಪಾದರಕ್ಷೆ._*

_ಈ ಪುಣ್ಯವಾದ ಪಾದರಕ್ಷೆಯಲ್ಲಿ ಹಲವಾರು ಮಹತ್ವಗಳಿವೆ ಮತ್ತು ತುಂಬಾನೇ ಪ್ರಯೋಜಗಳು  ಕೂಡ ಇದೆ._

_ಇಮಾಂ ಖಸ್ತಲ್ಲಾನೀ ರಲಿಯಲ್ಲಾಹು ಅನ್ಹು ಹಾಗೂ ಇಮಾಂ ಮುಖ್'ರೀ ರಲಿಯಲ್ಲಾಹು ಅನ್ಹು ರವರಿಂದ ಉಲ್ಲೇಖ :_
*_ಉಲಮಾಗಳು ಹೇಳುತ್ತಾರೆ ; ಮುತ್ತು ಪ್ರವಾದಿ ﷺ ತಂಙಳ ಈ ಪುಣ್ಯ ಪಾದರಕ್ಷೆಯ ನಕ್ಷೆಯ ಪುಣ್ಯವು ಅದು ತುಂಬಾನೇ ಶ್ರೇಷ್ಠವಾಗಿದೆ ಆದರಲ್ಲಿ ಸಿಗುವ ಅನುಭವ ತುಂಬಾನೇ ಪವಿತ್ರವಾದುದಾಗಿದೆ._*

*_ಬರ್ಕತ್ ಪಡೆಯುವ ಉದ್ದೇಶದಿಂದ ಒಬ್ಬ ವ್ಯಕ್ತಿಯು ಈ ಪುಣ್ಯ ನಕ್ಷೆಯನ್ನು ಇಟ್ಟುಕೊಂಡರೆ ಖಂಡಿತವಾಗಿಯೂ ಅವನು ಇದರ ಮಹತ್ವವನ್ನು ಅನುಭವಿಸುವನು._*

_ಅಕ್ರಮಿಗಳಿಂದ ಅವನಿಗೆ ಕಾವಲು ಇದೆ, ಶತ್ರುಗಳು ಅವನ ಮುಂದೆ ಪರಾಜಯಗೊಳ್ಳುವರು , ಪಿಶಾಚಿಯ ಉಪಟಲದಿಂದಲೂ ,ಅಸೂಯೆಗಾರರ ಶರ್ರ್'ನಿಂದಲೂ ರಕ್ಷೆಹೊಂದುವನು._

*_ಗರ್ಭಿಣಿಯಾದ ಹೆಣ್ಣು ತನ್ನ ಪ್ರಸವ ವೇದನೆ ಕಾಣಿಸಿಕೊಂಡ ಸಂದರ್ಭದಲ್ಲಿ  ಈ ಪುಣ್ಯ ಪಾದರಕ್ಷೆಯ ನಕ್ಷೆಯನ್ನು ತನ್ನ ಬಲಕೈಯಲ್ಲಿ ಹಿಡಿದುಕೊಂಡರೆ ಅವಳಿಗೆ ಸುಖಪ್ರಸವವಾಗುದರಲ್ಲಿ ಸಂಶಯವಿಲ್ಲ._*

_ಕಣ್ಣು ದೃಷ್ಟಿ , ಸಿಹ್ರ್ ಇತ್ಯಾದಿ ಎಲ್ಲಾ ರೀತಿಯ ಶರ್ರ್'ನಿಂದಲೂ ಈ ಪುಣ್ಯ ನಕ್ಷೆಯಿಂದ ಪರಿಹಾರವಿದೆ._

*_ಈ ಪುಣ್ಯವೇರಿದ ನಕ್ಷೆಯನ್ನು ಯಾವಾಗಲೂ ಒಬ್ಬನು ಹೊತ್ತುಕೊಂಡರೆ ಅವನಿಗೆ ಜನರ ಬಳಿ ವಿಶೇಷವಾದ ಸ್ವೀಕಾರವಿದೆ ಮಾತ್ರವಲ್ಲ, ಪುಣ್ಯ ಪ್ರವಾದಿ ಮುತ್ತು ಮುಹಮ್ಮದ್ ಮುಸ್ತಫಾ ﷺ ತಂಙಳ್‌ರವರ ಪವಿತ್ರವಾದ ರೌಲ ಷರೀಫನ್ನು ಖಂಡಿತವಾಗಿಯೂ ಸಂದರ್ಶಿಸುವನು ಹಾಗೂ ಕನಸಿನಲ್ಲಿ ಪುಣ್ಯ ಪ್ರವಾದಿ ಮುತ್ತು ಮುಹಮ್ಮದ್ ಮುಸ್ತಫಾ ﷺ ತಂಙಳರನ್ನು ದರ್ಶಿಸುವನು._*

_ಅಲ್ಲಾಹುವೇ ನಮಗೆ ಈ ಪುಣ್ಯ ಭಾಗ್ಯವನ್ನು ಕರುಣಿಸು ಅಲ್ಲಾಹ್_

*۞ْآمِيـــــنْ  يَا رَبَّ الْعَالَمِين۞*

_ರೋಗ ಶಮನ , ಆಗ್ರಹ ಸಾಫಲ್ಯ , ಮನೆ-ವ್ಯಾಪಾರಗಳಲ್ಲಿ ಬರ್ಕತ್ ಲಭ್ಯವಾಗುತ್ತೆ ಹಾಗು ಎಲ್ಲಾ ರೀತಿಯ ಆಪತ್ತಿನಿಂದಲೂ ರಕ್ಷೆಹೊಂದುವನು._

*_ಇದರ ಪ್ರಯೋಜನಗಳೆಲ್ಲವೂ ಕೂಡ ಅವರವರ ನಿಯ್ಯತ್ತಿನ( ವಿಶ್ವಾಸ ) ಅನುಸಾರವಾಗಿ ಇರುತ್ತದೆ._*

_ಈ ಪುಣ್ಯ ಪಾದರಕ್ಷೆಯ ಒಡೆಯರಾದ ಮಾಣಿಕ್ಯ ಮುತ್ತು ಮುಹಮ್ಮದ್ ಮುಸ್ತಫಾ  ﷺ ತಂಙಳರವರನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಿದರೆ ಆ ಪ್ರಾರ್ಥನೆಗೆ ಉತ್ತರ ಖಂಡಿತ_
_(ಸಆದತ್ 494)_

*ಪುಣ್ಯ ಪಾದರಕ್ಷೆಯ ನಕ್ಷೆಯ ಬಗ್ಗೆ ಇಮಾಮ್ ಯುಸುಫುನ್ನಬಹಾನೀ ರಲಿಯಲ್ಲಾಹು ಅನ್ಹು ಈ ರೀತಿ ಹಾಡಿದ್ದಾರೆ.*
*إِنَّی خَدَمْتُ مِثَالَ نَعْلِ الْمُصْطَفَی*

*لَاعِيشَ فِی الدَّارَيْنِ تَحْتَ ظِلَالِهَا*

*سَعْدَ ابْنُ مَسْعُودٍ بِخِدْمَةِ نَعْلِهِ*

*وَاَنَا السَّعِيدُ بِخِدْمَتِی لِمِثَالِهَا*

*_"ದ್ವಿಲೋಕದಲ್ಲಿ ನನಗೆ ಜಯ ಸಿಗಲು ಮುತ್ತು ಪ್ರವಾದಿ ಮುತ್ತು ಮುಹಮ್ಮದ್ ಮುಸ್ತಫಾ ﷺ  ತಂಙಳ್'ರವರ ಪಾದರಕ್ಷೆಯ ನಕ್ಷೆಯ ಸೇವೆಯನ್ನು ನಾನು ಮಾಡುವೆನು._*
*_ಅಬ್ದುಲ್ಲಾಹಿಬ್ನು ಮಸ್ಊದ್ ರಲಿಯಲ್ಲಾಹು ಅನ್ಹುರವರು ಮಾಣಿಕ್ಯ ಮುತ್ತು ಹಬೀಬುಲ್ಲಾಹಿ ﷺ ತಂಙಳ್'ರವರ ಪಾದರಕ್ಷೆಗೆ ಸೇವೆ ಮಾಡಿ ಪರಲೋಕ ವಿಜಯಿಗಳಾಗಿದ್ದಾರೆ. ನಾನು ಆ ಪಾದರಕ್ಷೆಯ ನಕ್ಷೆಗೆ ಸೇವೆ ಮಾಡಿ ಜಯ ಗಳಿಸುವೆನು"_*
_(ಸಆದತ್ 495)_

*_ಅಲ್ಲಾಹು ನಮ್ಮನ್ನೆಲ್ಲರನ್ನು ಈ ಮಹಾನರ ಬರ್ಕತಿನಿಂದ ರಹ್ಮತ್ತುಲ್‌ಲಿಲ್  ಆಲಮೀನ್ ಮುತ್ತು ಮುಹಮ್ಮದ್ ಮುಸ್ತಫಾ ﷺ ತಂಙಳ ಪರಿಪೂರ್ಣ ಆಶಿಕ್'ಗಳಾಗಿ ಅಲ್ಲಿಯ ﷺ ಕಾರುಣ್ಯದ ನೋಟವುಳ್ಳ ಪ್ರೀತಿಯ ಉಮ್ಮತ್ತಿನ ಸಾಲಿನಲ್ಲಿ ಸೇರಿಸಲಿ_*

*۞ْآمِيـــــنْ يَا رَبَّ الْعَالَمِين۞*
✨✨✨✨✨✨✨✨✨✨✨

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ💕 ಪುಣ್ಯ ಮುತ್ತು ಪ್ರವಾದಿ ﷺ ತಂಙಳ್'ರವರ ಹೆಸರಲ್ಲಿ ಮೂರು ಸ್ವಲಾತ್ ಹೇಳೋಣ*

   *اَلٰلّٰهُمَّ صَلِّ عَلَی سَيَّدِنَا مُحَمَّدٍ نَّبِيِّ الْاُمِّيِّ الحَبِيبِ الْعَالِي الْقَدْرِ الْعَظِيمِ الْجَاهِ وَعَلَی اۤلِهِ وَصَحْبِهِ   وَسَلِّمْ*✨ْ

🌹🌹🌹🌹🌹🌹🌹🌹🌹🌹🌹
*_💚ಪುಣ್ಯ ಪಾದರಕ್ಷೆಯ ನಕ್ಷೆಯನ್ನು ರಚಿಸಿದ ಮಹಾನರಾದ ಯೂಸುಫುನ್ನಬಹಾನೀ ರಲಿಯಲ್ಲಾಹು ಅನ್ಹು ಹಾಗೂ 💚ಮುತ್ತು ಹಬೀಬುಲ್ಲಾಹಿ ﷺِ ತಂಙಳ್'ರವರ ಪ್ರೀತಿಯನ್ನು ಸಂಪೂರ್ಣವಾಗಿ ಅನುಭವಿಸಲು ಭಾಗ್ಯ ಸಿಕ್ಕಿದ 💚ಆಶಿಖುರ್ರಸೂಲ್ ಅಲಾ ಹಝ್ರತ್ ಇಮಾಂ ಅಹ್ಮದ್ ರಝಾ ಖಾನ್  ಬರೇಲ್ವಿ ರಹ್ಮತುಲ್ಲಾಹಿ ಅಲೈಹಿ ರವರ ಮೇಲೆ ಒಂದು ಫಾತಿಆ ಓದಲು ಮರೆಯದಿರೋಣ_*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...