ಈದ್ ಮುಬಾರಕ್ ಎಂದು ಹೇಳಬಾರದೇ..
ತೋಕೆ ಉಸ್ತಾದರ ಸುನ್ನೀ ವಾಣಿಯಿಂದ*
ಲೇಖನ: ತೋಕೆ ಉಸ್ತಾದ್
▪▪▪▪
ಪೆರ್ನಾಳಿನಂದು ಮಂಗಳಾಶಂಸೆ ಹೇಳುವುದರ ಬಗ್ಗೆ ಪೂರ್ವಿಕ ಇಮಾಮರುಗಳ ಉಲ್ಲೇಖ ನೋಡಿ.
ಇಮಾಮ್ *ಝಕರಿಯ್ಯಲ್ ಅನ್ಸಾರಿ* ರಹ್ಮತುಲ್ಲಾಹಿ ಅಲೈಹಿ ರವರ *"ಅಸ್ನಲ್ ಮುತ್ವಾಲಿಬ್"* ಎಂಬ ಗ್ರಂಥ ದಲ್ಲಿ ಹೇಳುವುದನ್ನು ನೋಡಿ..
وأجاب عنه شيخ الإسلام حافظ عصره ابن حجر بعد اطلاعه على ذلك بأنها مشروعة ، واحتج له بأن البيهقيعقد لذلك بابا فقال : باب ما روي في قول الناس بعضهم لبعض في يوم العيد تقبل الله منا ومنك ، وساق ما ذكره من أخبار وآثار ضعيفة لكن مجموعها يحتج به في مثل ذلك ، ثم قال : [ ص: 402 ] ويحتج لعموم التهنئة لما يحدث من نعمة ، أو يندفع من نقمة بمشروعية سجود الشكر والتعزية ، وبما في الصحيحين { عن كعب بن مالكفي قصة توبته لما تخلف عن غزوة تبوك أنه لما بشر بقبول توبته ومضى إلى النبي صلى الله عليه وسلم قام إليه طلحة بن عبيد الله فهنأه }
*"ಈ ಬಗ್ಗೆ ಕೇಳಲಾದ ಪ್ರಶ್ನೆ ಯೊಂದಕ್ಕೆ ಹಾಫಿಳ್ ಇಬ್ನು ಹಜರಿಲ್ ಅಸ್ಖಲಾನಿ ರಹ್ಮತುಲ್ಲಾಹಿ ಅಲೈಹಿ ರವರು ಹೀಗೆ ಉತ್ತರಿಸಿದ್ದಾರೆ.* *ಪೆರ್ನಾಳಿನಂದು ಮಂಗಳಾಶಂಸೆ ಹೇಳುವುದು ಸುನ್ನತಾಗಿದೆ.*
ಇಮಾಮ್ ಬೈಹಖೀ ರಳಿಯಲ್ಲಾಹು ಅನ್ಹು ರವರು ತನ್ನ ಗ್ರಂಥ ದಲ್ಲಿ ಇದರ ಬಗ್ಗೆ ಪ್ರತ್ಯೇಕ ಅಧ್ಯಾಯವೊಂದನ್ನು ನೀಡಿದ್ದನ್ನು ಅವರಿದಕ್ಕೆ ಪುರಾವೆ ಯಾಗಿಸಿದ್ದಾರೆ. ಇಮಾಮ್ ಬೈಹಖೀ ರಳಿಯಲ್ಲಾಹು ಅನ್ಹು ರವರು ಹೀಗೆ ಅಧ್ಯಾಯವನ್ನು ನೀಡಿದ್ದಾರೆ. *'ಪೆರ್ನಾಳಿನಂದು ಒಬ್ಬ ಮುಸ್ಲಿಂ ಮತ್ತೊಬ್ಬ ಮುಸ್ಲಿಮನನ್ನು ಕಾಣುವಾಗ "ತಖಬ್ಬಲಲ್ಲಾಹು ಮಿನ್ನಾ ವಮಿಂಕ"' ಎಂದು ಹೇಳುವುದರ ಬಗ್ಗೆ ತಿಳಿಸುವ ಅಧ್ಯಾಯ.* ಈ ಅಧ್ಯಾಯ ದಲ್ಲಿ ಇಮಾಮ್ ಬೈಹಖಿ ರಳಿಯಲ್ಲಾಹು ಅನ್ಹು ರವರು ಹಲವು ದುರ್ಬಲವಾದ ಹದೀಸ್ ಮತ್ತು ಸ್ವಹಾಬಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. *ಆದರೆ ಒಟ್ಟಾರೆ ಯಾಗಿ ಅವುಗಳನ್ನು ಮಂಗಳಾಶಂಸೆ ಹೇಳುವುದಕ್ಕೆ ಪುರಾವೆ ಯಾಗಿಸಬಹುದು. ನಂತರ ಇಮಾಮ್ ಬೈಹಖೀ ರಳಿಯಲ್ಲಾಹು ಅನ್ಹು ರವರು*
*ಮೊತ್ತ ದಲ್ಲಿ ಮಂಗಳಾಶಂಸೆ ಹೇಳುವುದಕ್ಕೆ ಯಾವುದಾದರೂ ಅನುಗ್ರಹ ದೊರೆತರೆ ಅಥವಾ ವಿಪತ್ತೊಂದು ತೊಲಗಿದರೆ ಶುಕ್ರ್ ನ ಸುಜೂದ್ ಮಾಡುವುದು ಸುನ್ನತ್ತಾಗಿತುತ್ತದೆ ಎಂಬುದನ್ನು ಪುರಾವೆ ಯಾಗಿಸಿದ್ದಾರೆ.ಅದೇ ರೀತಿ ಕಅ್ ಬುಬ್ನು ಮಾಲಿಕ್ ರಳಿಯಲ್ಲಾಹು ಅನ್ಹು ರವರ ತೌಬಾವನ್ನು ಸ್ವೀಕರಿಸಿದಾಗ ಅವರಿಗೆ ತ್ವಲ್ ಹತ್ ಬಿನ್ ಉಬೈದಿಲ್ಲಾಹೀ ರಳಿಯಲ್ಲಾಹು ಅನ್ಹು ರವರು ಮಂಗಳಾಶಂಸೆ ಹೇಳಿದ ಘಟನೆ ಯನ್ನೂ ಪುರಾವೆ ಯಾಗಿಸಿದ್ದಾರೆ."* (ಅಸ್ನಲ್ ಮತ್ವಾಲಿಬ್ ಭಾಗ-1, ಪುಟ-283)
ಅದೇ ರೀತಿ "ಇಖ್ ನಾಅ್" 174/1,
ಜಮಲ್ 246/6
ಮುಂತಾದ ಹಲವು ಗ್ರಂಥ ಗಳಲ್ಲಿ ಕಾಣಬಹುದು. ಇದರಿಂದ ಪೆರ್ನಾಲ್ ದಿವಸ ಮಂಗಳಾಶಂಸೆ ಅರ್ಪಿಸುವುದು ಸುನ್ನತ್ತಾಗಿದೆಯೆಂದು ಸ್ಪಷ್ಟ ವಾಗುತ್ತದೆ.
*ಮಂಗಳಾಶಂಸೆ ಹೇಳಬೇಕಾದ ಪದ*
'ತಖಬ್ಬಲಲ್ಲಾಹು ಮಿನ್ನಾ ವಮಿಂಕ' ಎಂಬ ಝಕರಿಯ್ಯಲ್ ಅನ್ಸಾರಿ ರಹ್ಮತುಲ್ಲಾಹಿ ಅಲೈಹಿ ರವರ ಮಾತನ್ನು ವ್ಯಾಖ್ಯಾನಿಸುತ್ತಾ ಇಮಾಮ್ *ಸುಲೈಮಾನುಲ್ ಜಮಲ್* ಹೇಳುತ್ತಾರೆ :
قوله : تقبل الله منا ومنك ) أي نحو ذلك مما جرت به العادة في التهنئة
*" 'ತಖಬ್ಬಲಲ್ಲಾಹು ಮಿನ್ನಾ ವಮಿಂಕ' ಮತ್ತು ವಾಡಿಕೆಯಲ್ಲಿರುವ ಇನ್ನಿತರ ಪದಗಳಿಂದ ಸುನ್ನತ್ ದೊರಕುತ್ತದೆ."* (ಜಮಲ್)
ಅದೇ ರೀತಿ 'ಶರ್ವಾನೀ' 56/3, ಹಾಶೀಯತುನ್ನಿಹಾಯ ಮುಂತಾದ ಗ್ರಂಥ ಗಳಲ್ಲಿ ಕಾಣಬಹುದು.
ಈ ಉಲ್ಲೇಖಗಳಿಂದ ಊರಿನಲ್ಲಿ ವಾಡಿಕೆ ಇರುವ ಪದಗಳಿಂದ ಮಂಗಳಾಶಂಸೆಯ ಸುನ್ನತ್ ದೊರಕಬಹುದೆಂದು ಸ್ಪಷ್ಟವಾಗುತ್ತದೆ. ಇಂದು ಎಲ್ಲಾ ಮುಸ್ಲಿಂ ರಾಷ್ಟಗಳಲ್ಲಿ ವಾಡಿಕೆ ಯಲ್ಲಿರುವ ಪದವಾಗಿದೆ ಈದ್ ಮುಬಾರಕ್ ಎಂಬುವುದು. ಆದ್ದರಿಂದ ಈ ಪದಗಳಿಂದಲೂ ಸುನ್ನತ್ ದೊರಕಬಹುದೆಂದು ತಿಳಿದು ಬರುತ್ತದೆ.
ಇನ್ನು ಮಾಲೀಕಿ, ಹನಫೀ ಮದ್ಸ್ ಹಬಿನ ಗ್ರಂಥ ಗಳಲ್ಲಿ ಈದ್ ಮುಬಾರಕ್ ಎಂಬ ಪದದಿಂದ ಮಂಗಳಾಶಂಸೆ ಹೇಳುವುದು ಸುನ್ನತಾಗಿದೆಯೆಂದು ಸ್ಪಷ್ಟವಾಗಿ ಹೇಳಿದ್ದನ್ನೇ ಕಾಣಬಹುದು...
*ಕೊನೆಯ ಮಾತು*
ಶಾಫಿಈ ಮದ್ಸ್ ಹಬಿನ ಗ್ರಂಥಗಳಿಂದ ಮಂಗಳಾಶಂಸೆ ಹೇಳಿದ ಸುನ್ನತ್ ಲಭ್ಯ ವಾಗುತ್ತದೆಯೆಂದು ತಿಳಿಸಲಾಗಿದೆ. *ಆದರೆ ಕೇವಲ ಈದುನ್ ಮುಬಾರಕ್ ಎಂದು ಹೇಳುವುದಕ್ಕಿಂತ ಈದುನ್ ಮುಬಾರಕುನ್ ಅಲೈಕ ಎಂದೋ ಅಥವಾ ಈದುಕ ಮುಬಾರಕುನ್, ಈದುಕುಂ ಮುಬಾರಕುನ್ ಎಂದು ಹೇಳುವುದು ಉತ್ತಮವಾಗಿದೆ.*
▪▪▪▪
🔭 *ನಿಸಾರ್ ಸಖಾಫಿ ಉಳ್ಳಾಲ*
Comments