Skip to main content

ಧೂಮಪಾನ ( ಸೀಗರೇಟ್ ) ಸೇದುವಿಕೆ ಇಸ್ಲಾಮಿನ ದೃಷ್ಟಿಕೋನದಲ್ಲಿ

ಧೂಮಪಾನ ( ಸೀಗರೇಟ್ ) ಸೇದುವಿಕೆ ಇಸ್ಲಾಮಿನ ದೃಷ್ಟಿಕೋನದಲ್ಲಿ
*ಪವಿತ್ರ ಕುರ್ ಆನ್ ಹೇಳುತ್ತದೆ:-*
*"ಸ್ವತಃ ನಿಮ್ಮ ಕೈಗಳಿಂದ ನಿಮ್ಮನ್ನು ನೀವೇ ವಿನಾಶಕ್ಕೊಳಪಡಿಸಿ ಕೊಳ್ಳಬೇಡಿರಿ"*
*(ಕುರ್ ಆನ್ 2:195)*

ಅಂದರೆ ಸ್ವತಹ ನಮ್ಮ ಜೀವಕ್ಕೆ ಹಾನಿಯುಂಟು ಮಾಡುವ ಸೀಗರೇಟ್, ಮಾದಕ ದ್ರವ್ಯ, ಹಾಗೂ ಶರಾಬ್ ಇವೆಲ್ಲವೂ ನಿಷಿದ್ದವಾಗಿದೆ.ಓ ಯುವ ಸಮೂಹವೇ ಪವಿತ್ರ ಕುರ್ ಆನ್ ಹೇಳುತ್ತಿರುವ ಒದೊಂದು ಸಂದೇಶವು ನಮ್ಮ ಜೀವನದ ಬದಲಾವಣೆಗಾಗಿದೆ.
ಓ ಯುವ ಸಮೂಹವೇ ಚಿಂತಿಸಿ ನೋಡಿ ಒಮ್ಮೆ ಇಲ್ಲಿ!!!!!
ಒಂದು ವೇಳೆ ಸೀಗರೇಟ್ ಇತರ ಆಹಾರಗಳ ಹಾಗೆ ಹಲಾಲ್ ಆಗಿದ್ದರೆ(ಧರ್ಮಸಮ್ಮತ ಗೊಳಿಸಿದ್ದರೆ)

*1)ಸೀಗರೇಟ್ ಸೇದುವಾಗ ನಾವು ಯಾಕೆ ಬಿಸ್ಮಿಲ್ಲಾಹ್ ಎಂದು ಹೇಳುವುದಿಲ್ಲ*
*2)ಸೇದಿ ಮುಗಿಸಿದ ನಂತರ ಯಾಕೆ ಅಲ್ ಹಮ್ದುಲಿಲ್ಲಾಹ್ ಎಂದು ಯಾಕೆ ಹೇಳುವುದಿಲ್ಲ*
*3) ಸೀಗರೇಟ್ ಸೇದಿ ಮುಗಿದ ನಂತರ ಯಾಕೆ ನಾವು ಅದನ್ನು ಯಾವ ಕಾರಣದಿಂದ ನಾವು  ಕಾಲಿನಿಂದ ಒದೆಯುತ್ತೆವೆ.*
*4) ಸೀಗರೇಟನ್ನು ನಮ್ಮ ತಂದೆ-ತಾಯಿ ಬಂಧು ಬಳಗದ ಮುಂದೆ ನಾವು ಯಾಕೆ ಸೇದುವುದಿಲ್ಲ.*
*5) ಸೀಗರೇಟ್ ನೀವು ಸೇದುತ್ತಿರಿ ಆದರೆ ನಿಮ್ಮ ಮಕ್ಕಳಿಗೆ ನೀವು ಸೇದಳು ಯಾಕೆ ಅವಕಾಶ ನೀಡುತ್ತಿಲ್ಲ.*

ನೋಡಿ ಓ ನಮ್ಮ ಯುವ ಸಮೂಹವೇ ಈ ಮೇಲಿನ ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ

ಇನ್ನೊಂದು ಕಡೆ ಕುರ್ ಆನ್ ಹೇಳುತ್ತದೆ:-

*"ನೀವು ನಿಮ್ಮನ್ನೇ ವಧಿಸದಿರಿ,ಖಂಡಿತವಾಗಿಯೂ ಅಲ್ಲಾಹನು ನಿಮ್ಮೊಂದಿಗೆ ಅಪಾರವಾದ* *ಕರುಣೆಯುಳ್ಳವನಾಗಿರುತ್ತಾನೆ"*
*(ಕುರ್ ಆನ್4:29)*

ವಾಸ್ತವಿಕತೆ ನೋಡಿ ಸಹೋದರರೇ ಒಂದು ಸುಟ್ಟು ಹೋದ ಸೀಗರೇಟ್ ಹೇಳುತ್ತದೆ
*"ಇವತ್ತು ನನ್ನ ಸಾವಿಗೆ ಕಾರಣ* *ನೀನಾಗಿರುವೇನು ಆದರೆ!*
*ನಾಳೆ ನಿನ್ನ ಸಾವಿಗೆ ಕಾರಣ ನಾನು* *ಆಗಿರುವೇನು*
*ಚಿಂತಿಸಿರಿ!!!!*

ಎಷ್ಟೋಂದು ವಾಸ್ತವಿಕತೆಯ ಮಾತು ಅಲ್ಲವೇ ಸಹೋದರರೇ!

*ಈ ನಿಮ್ಮ ಮೋಜಿನ ಆಟಕ್ಕೆ ನಿನ್ನ ಜೀವವನ್ನು ನಿನ್ನ ಕೈಯಿಂದಲೇ ನೀನು ನಾಶ ಪಡಿಸುವ ನಿನಗೆ ನಾಳೆ ಅಲ್ಲಾಹನ ಬಳಿ ಖಂಡಿತವಾಗಿಯೂ ಘೋರ ಶಿಕ್ಷೆ ಕಾದಿದೆ.*

ಓ ಯುವ ಸಮೂಹವೇ ಬದಲಾಗಿ ನಿಮ್ಮ‌ಮರಣ ನಿಮ್ಮ ಕೈಯಿಂದಲೇ ಸಂಭವಿಸುವುದಕ್ಕಿಂತ ಮುಂಚೆ
ನನ್ನ ಬರಹದಲ್ಲಿ ತಪ್ಪಿದ್ದರೆ ಕ್ಷಮೀಸಿ.ಓ  ಅಲ್ಲಾಹನ್ನೆ  ನಮ್ಮ ಎಲ್ಲಾ ಯುವ ಸಮೂಹವನ್ನು ಧೂಮಪಾನದಿಂದ ಮುಕ್ತಿಗೊಳಿಸಲಿ.ಆಮೀನ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...