ತಾವು ಸ್ವಲಾತ್ ಹೇಳುತ್ತಿದ್ದೀರಾ? ಹಾಗಾದರೆ ಇದನ್ನೊಮ್ಮೆ ಓದಿ ನೋಡಿ.
_🌾ಅಶ್ರಫ್ ಕೆ.ಎಸ್. ಕಟ್ಟದಪಡ್ಪು_
*_ಸಾತ್ವಿಕ ವಿದ್ವಾಂಸರಾದ ಅಬುಲ್ ಮವಾಹಿಬ್ ಸಾದುಲಿ ರವರು ತನ್ನ ಜೀವಿತಾವಧಿಯಲ್ಲಿ ಪ್ರವಾದಿ ﷺ ರವರನ್ನು ಹಲವು ಬಾರಿ ಸ್ವಪ್ನದಲ್ಲಿ ಕಂಡಂತಹ ಮಹಾನರಾಗಿದ್ದಾರೆ._*
_ಪ್ರವಾದಿ ﷺ ತಂಙಳ್ ರವರನ್ನು ಹಲವಾರು ಬಾರಿ ಸ್ವಪ್ನದಲ್ಲಿ ಕಾಣಲು ಕಾರಣವೇನೆಂದರೆ ದಿನನಿತ್ಯ ಹಗಲು ವೇಳೆ ಸಾವಿರ ಸ್ವಲಾತನ್ನು ಹಾಗೂ ರಾತ್ರಿ ವೇಳೆಯು ಸಾವಿರ ಸ್ವಲಾತನ್ನು ಹೇಳುತ್ತಾ ಜೀವನದಲ್ಲಿ ರೂಡಿಮಾಡಿಕೊಂಡಂತಹ ಮಹಾನ್ ವಿದ್ವಾಂಸರಾಗಿದ್ದರು, ಅದಲ್ಲದೇ 'ಸೂರತುಲ್ ಕೌಸರ್ ' ಸೂರತನ್ನು ಜೀವಿತಾವಧಿಯಲ್ಲಿ ದಿನನಿತ್ಯವು ಅಳವಡಿಸಿಕೊಂಡು ಓದುತ್ತಿದ್ದರು._
_ಆ ಮಹಾನ್ ವಿದ್ವಾಂಸ ರವರು ತನ್ನ ಜೀವನದಲ್ಲಿ ಉಂಟಾದ ಅನುಭವವನ್ನು ವಿವರಿಸುತ್ತಾರೆ. "ಒಂದು ದಿವಸ ನಾನು ದಿನನಿತ್ಯ ಹೇಳುವ ಸ್ವಲಾತನ್ನು ಅವಸರ ಅವಸರವಾಗಿ ಹೇಳಿ ಮುಗಿಸಿದ್ದೆ, ಅಂದು ರಾತ್ರಿ ನಾನು ಮಲಗಿದ್ದ ಸಮಯ ಎಂದಿನಂತೆ ಪ್ರವಾದಿ ರವರು ಸ್ವಪ್ನದಲ್ಲಿ ಪ್ರತ್ಯಕ್ಷ ಗೊಂಡರು ಆದರೇ ಪ್ರವಾದಿ ﷺ ರವರು ನನ್ನೊಂದಿಗೆ ಮಾತನಾಡದೆ ಯಾವುದೇ ಪ್ರತಿಕ್ರಿಯಿಸದೆ ಮುಖ ತಿರುಗಿಸಿ ಮುಂದೆ ಸಾಗುತ್ತಿದ್ದರು..ಇದನ್ನು ಕಂಡ ನಾನು ಪ್ರವಾದಿ ﷺ ರವರ ಬಳಿ ಹೋಗಿ ಕೇಳಿದೆ ಪ್ರೀತಿಯ ಪ್ರವಾದಿ ﷺ ರವರೇ ನನ್ನೊಂದಿಗೆ ಯಾಕೆ ಮಾತಾನಾಡುತ್ತಿಲ್ಲ.?? ನನ್ನನ್ನೇಕೆ ಪರಿಗಣಿಸದೆ ಮುಂದಕ್ಕೆ ಹೋಗುತ್ತಿದ್ದೀರಿ?? ಅಂತಹ ತಪ್ಪೇನು ನಾನು ಮಾಡಿದ್ದೀನಿ ಪ್ರವಾದಿ ﷺ ರವರೇ ..?? ಎಂದು ನಾನು ಪ್ರವಾದಿ ﷺ ರವರ ಬಳಿ ಕೇಳಿದಾಗ ಪ್ರವಾದಿ ﷺ ರವರ ಉತ್ತರ ಹೀಗಿತ್ತು "ಓ ಅಬುಲ್ ಮಾವಾಹಿಬ್ ರವರೇ.. ಅವಸರ ಎಂಬುದು ಇಬ್ಲೀಸ್ನ ಪ್ರೇರಣೆ ಯಿಂದ ಬರುವುದು ಅದ್ದರಿಂದ ನೀವು ನಿನ್ನೆ ರಾತ್ರಿ ನನ್ನ ಮೇಲೆ ಹೇಳಿದ ಸ್ವಲಾತ್ ಇಬ್ಲೀಸನ ಪ್ರೇರಣೆ ಯಿಂದಾಗಿತ್ತು. ಅದ್ದರಿಂದ ಸ್ವಲಾತ್ ಸಮಾಧಾನ ದಿಂದ ಹೇಳಬೇಕು, ಅವಸರದಲ್ಲಿ ನಿನ್ನೆ ಸ್ವಲಾತ್ ಹೇಳಿದ ಕಾರಣಕ್ಕಾಗಿ ನಿಮ್ಮೊಂದಿಗೆ ನಾನು ಬರಲಿಲ್ಲ" ಎಂಬುದಾಗಿತ್ತು ಪ್ರವಾದಿ ﷺ ರವರ ಪ್ರತಿಕ್ರಿಯೆ. ಆಗಲೇ ಪ್ರವಾದಿ ﷺ ತಂಙಳ್ ರವರೊಂದಿಗೆ ಕ್ಷಮೆ ಯಾಚಿಸಿ ಇನ್ನುಮುಂದೆ ಇದರಲ್ಲಿ ನಾನು ಗಮನಹರಿಸುವೆನು ಎಂದು ಹೇಳಿದೆ. ಅಂದಿನಿಂದ ನಾನು ಸಮಾಧಾನದಿಂದಲೇ ಸ್ವಲಾತ್ ಹೇಳುವ ಕಡೆಗೆ ಗಮನವಿರಿಸಿದ್ದೆ._
*_ಪ್ರೀತಿಯ ಪ್ರವಾದಿ ಪ್ರೇಮಿಗಳೇ ನಾವು ಹೇಳುವ ಸ್ವಲಾತ್ ಆದಷ್ಟೂ ಮಟ್ಟಿಗೆ ಸಮಾಧಾನದಿಂದಲೇ ಕೂಡಿರಬೇಕು, ನಾವು ಸ್ವಲಾತ್ ಹೇಳುವಾಗ ಮದೀನಾ ಮಣ್ಣಿನ ರಾಜಕುಮಾರ, ಮಾಣಿಕ್ಯದ ಮುತ್ತು ಪ್ರೀತಿಯ ಪ್ರವಾದಿ ﷺ ತಂಙಳ್ ರವರ ಇಶ್ಕ್ ಹೃದಯಂತರಳಾದಲ್ಲಿ ತೇಲಾಡುತ್ತಿರಬೇಕು..ಇನ್ಷಾ ಅಲ್ಲಾಹ್ ಅಲ್ಲಾಹನು ಅನುಗ್ರಹಿಸಲಿ.ಆಮೀನ್.._*
➖➖➖➖➖➖➖➖➖➖
_*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಪುಣ್ಯ ಪ್ರವಾದಿ ﷺ ರವರ ಮೇಲೆ ಪ್ರೀತಿಯಿಂದ ಮೂರು ಸ್ವಲಾತ್ ಹೇಳೋಣ*_
_*اللهم صل علي سيدنا محمد عبدك ورسولك النبي الامي وعلي اله وصحبه وسلم*_ ✨
➖➖➖➖➖➖➖➖➖➖
Comments