Skip to main content

ಹೆಣ್ಣು ಮಕ್ಕಳು ಮದ್ರಸ ಶಿಕ್ಷಣ ಕಲಿಯಬಾರದೇ

ಪ್ರತಿಯೊಂದು ಹೆತ್ತವರು ಓದಲೇ ಬೇಕು
➖➖➖

ಹೆಣ್ಣು ಮಕ್ಕಳು ಮದ್ರಸ ಶಿಕ್ಷಣ ಕಲಿಯಬಾರದೇ

🌷🌷🌷🌷🌷🌷🌷🌷🌷🌷

✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*

🌷🌷🌷🌷🌷🌷🌷🌷🌷🌷

ಇತ್ತೀಚೆಗೆ ಪರಿಚಯಸ್ಥರೊಬ್ಬರು ಮಾತನಾಡಲು ಸಿಕ್ಕರು.ನಿಮ್ಮ ಮಗಳು ಮದ್ರಸದಲ್ಲಿ ಎಷ್ಟನೇ ತರಗತಿ ಎಂದು ಕೇಳಿದಾಗ,"ಅವಳು ಏಳನೇ ತರಗತಿ ಪಾಸಾದ ಬಳಿಕ ಸಾಕೆಂದು ಮದ್ರಸ ಬಿಡಿಸಿದ್ದೇನೆ.ಅವಳು ದೊಡ್ಡವಳಾಗಿದ್ದಾಳೆ. ಹೆಣ್ಣು ಮಕ್ಕಳು ತಾನೇ..? ಅಷ್ಟು ಕಲಿತರೆ ಸಾಕಲ್ಲವೇ..?" ಎಂದರು. ಶಾಲೆಗೆ ಹೋಗುತ್ತಾಳೆಯೇ ಎಂದು ಕೇಳಿದಾಗ "ಹೌದು, ಮಂಗಳೂರು ಗೆ ಹೋಗ್ತಾಳೆ" ಎಂದು ಉತ್ತರಿಸಿದರು.

ಒಬ್ಬಳೇ ಮಂಗಳೂರು ಅಥವಾ ಇನ್ಯಾವುದೇ ಕಡೆಗೆ ಬಸ್ಸಲ್ಲಿ‌ ಪ್ರಯಾಣ ಬೆಳೆಸಿ ಶಾಲೆ,ಕಾಲೇಜು ಹೋಗುವಾಗ ನಮ್ಮ ಹೆತ್ತವರಿಗೆ ಯಾವುದೇ ಟೆಂಕ್ಷಣ್ ಇರುವುದಿಲ್ಲ. ಬೆಳಿಗೆ ಎದ್ದು ಹೊರಟ ಮಗಳು ರಾತ್ರಿ ಮನೆಗೆ ಬಂದರೂ ಚಿಂತೆ ಬಿಡಿ,ಮುಖದಲ್ಲಿ ಗಾಬರಿಯ ಒಂದೇ ಒಂದು ಗೆರೆ ಕೂಡ ಮೂಡುವುದಿಲ್ಲ. ಕಾಲ ಬುಡದಲ್ಲಿ ಇರುವ ಮದ್ರಸಕ್ಕೆ ಕಳಿಸುವಾಗ ಮಾತ್ರ ಅವಳು ದೊಡ್ಡ ವಳಾದಳಂತೆ! ಕಲಿಯಬೇಕಾದ ಪ್ರಾಯದಲ್ಲಿ ಶಿಕ್ಷಣ ಕಲಿಯಲು ಬಿಡದೆ ಅವಳ   ಬದುಕನ್ನು ಇಹ,ಪರ ದಲ್ಲಿ ಕತ್ತಲಾಗಿಸುವ ರಕ್ಷಕರು ಆ ಮೂಲಕ ತಮ್ಮ ಪರಲೋಕ ಜೀವನವನ್ನೂ ನಷ್ಟ ಪಡಿಸುತ್ತಿದ್ದಾರೆ.

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಮಿನ  ಜ್ಞಾನ ಕೇಂದ್ರ.ಆದರೂ, ಖುರ್ ಆನ್ ಅವರ ಬಳಿ ಹೇಳಿದ್ದು, " ಇಲ್ಮ್ ಅಧಿಕಗೊಳ್ಳಲು ಪ್ರಾರ್ಥಿಸಿರಿ."  ಇಲ್ಮ್ ಕಲಿಯಲು ಕಡ್ಡಾಯ ವಾಗುವುದು ಪ್ರಾಯ ಪೂರ್ತಿ ಯಾದ ಬಳಿಕ. ಹೆಣ್ಣು ಮಕ್ಕಳಿಗೆ ಪ್ರಾಯ ಪೂರ್ತಿಯಾಗುವುದು ಒಂಬತ್ತು ಅಥವಾ ಹತ್ತನ್ನೆರಡು ವಯಸ್ಸಿನಲ್ಲಿ. ಆ ಸಮಯ ಮದ್ರಸ ಬಿಡಿಸಿದರೆ ಅವರಿಗೆ ಇಸ್ಲಾಮಿನ ಬಾಲ ಪಾಠವಾದರೂ ಗೊತ್ತಿರುತ್ತದೆಯೇ ? ಇಲ್ಮ್ ಯಾಕೆ ಕಲಿಯಬೇಕೆಂಬ ಪ್ರಬುದ್ಧತೆ ಬರುವಾಗ ಮದ್ರಸ ಬಿಡಿಸಿ ಅವರ ಬಾಳನ್ನು ಬಲಿ ನೀಡುವ ಹೆತ್ತವರು ತಮ್ಮ ಮಕ್ಕಳ ಪರಲೋಕ ಜೀವನ ಚಿವಿಟಿ ಹಾಕುತ್ತಿದ್ದಾರೆ.

ಹೆಣ್ಣು ಮಕ್ಕಳು ಕಲಿಯಬೇಕಾದ ಹಲವಾರು ವಿಷಯಗಳಿವೆ. ಏಳನೇ ತರಗತಿ ಯಲ್ಲಿ ಮದ್ರಸ ಬಿಟ್ಟವಳಿಗೆ ನಮಾಝ್ ಬಗ್ಗೆ ತಿಳಿದಿದೆಯೇ ? ಉಪವಾಸ ಬಗ್ಗೆ ಅರಿವಿದೆಯೇ ? ಹೈಳ್ ನ ಸಮಯ ಏರುಪೇರಾದರೆ ಏನು ಮಾಡಬೇಕೆಂಬ ಅರಿವು ಲಭಿಸಿದೆಯೇ ? ನಿಫಾಸ್ ಸಮಯದಲ್ಲಿ ಹೆಚ್ಚು ಕಡಿಮೆ ಯಾದರೆ ಏನು ಮಾಡಬೇಕೆಂಬ ಜ್ಞಾನ ಇದೆಯೇ ? ದಾಂಪತ್ಯ ಜೀವನ,ಕುಟುಂಬ ನಿರ್ವಹಣೆ, ಮಕ್ಕಳ ಬಾಧ್ಯತೆ ಹೀಗೆ... ಕಲಿಯಬೇಕಾದ ನೂರಾರು ಕಾರ್ಯಗಳು ಏಳನೇ ತರಗತಿಯಲ್ಲಿ ಕಲಿತು ಮುಗಿಸಲು ಸಾಧ್ಯವೇ ?  +2 ತನಕವಾದರು ಕಲಿಯಬೇಕು. ಅಷ್ಟರ ತನಕ ಕಲಿತರೂ ಇದೆಲ್ಲಾ ಮುಗಿಸಲು ಸಾಧ್ಯವಿಲ್ಲ ದಿದ್ದರೂ ಅದರ ಒಂದಂಶ ವಾದರೂ ಕಲಿಯಬಹುದು. ಇಲ್ಮ್ ಕಲಿಯಬೇಕಾದ ಸಮಯದಲ್ಲಿ ಕಲಿಯದೆ ಹೈಳ್, ನಿಫಾಸ್ ,ಉಪವಾಸ ಸಮಯದಲ್ಲಿ ತಮಗೆ ಉಂಟಾಗುವ ಸಂಶಯವನ್ನು ಬೇರೆಯವರ ಬಳಿ ಕೇಳಲು ಮುಜುಗರ ಅನುಭವಿಸಿ ಅಥವಾ ಅರಿವಿಲ್ಲದವರೊಂದಿಗೆ ಕೇಳಿ ತಪ್ಪಾಗಿ ಅರ್ಥೈಯಿಸಿ ನರಕದ ಹಾದಿ ಸುಗಮ ಗೊಳಿಸುವ ಹೆಣ್ಣು ಮಕ್ಕಳು ನಮ್ಮ ಮಕ್ಕಳಾಗಬಾರದು. ಇಂತಹ ಅನಿವಾರ್ಯ ವಿಷಯಗಳ ಕಲಿಕೆಗೆ ಮದ್ರಸ ಶಿಕ್ಷಣದ ಅನಿವಾರ್ಯತೆ ಇದೆ.ಕನಿಷ್ಠ +2 ತನಕವಾದರೂ ಅವಳನ್ನು ಮದ್ರಸ ಕ್ಕೆ ಕಳಿಸುವ ಮೂಲಕ ಅವಳ ಮತ್ತು ನಮ್ಮ ಇಹ,ಪರ ಬೆಳಗಿಸೋಣ.

ದೂರದ ಊರಿಗೆ ಶಾಲೆ,ಕಾಲೇಜು ಕಳಿಸಲು ಯಾವುದೇ ಆತಂಕ ಮತ್ತು ಮಗಳು ದೊಡ್ಡವಳಾದಳೆಂಬ ಚಿಂತೆ ಇಲ್ಲದ ಹೆತ್ತವರು ಮದ್ರಸ ಕಳಿಸಲು ದೊಡ್ಡ ವಳಾದಳೆಂಬ ಕುಂಟು ನೆಪ ಹೇಳುತ್ತಾರೆ‌. *ಅಲ್ಲಾಹನ ನೂರ್ ಆದ ಇಲ್ಮ್ ಅನ್ನು ಕಲಿಯಲು ತಡೆ ನೀಡಿ ಹೆಣ್ಣು ಮಕ್ಕಳನ್ನು ಧಾರ್ಮಿಕ ಶಿಕ್ಷಣ ದಿಂದ ವಂಚಿತರನ್ನಾಗಿ ಮಾಡುವ ಹೆತ್ತವರು ಅಲ್ಲಾಹನ ಕ್ರೂರ ಶಿಕ್ಷೆಗೆ ವಿಧೆಯರಾಗುತ್ತಾರೆಂಬುದರಲ್ಲಿ ಯಾವುದೇ ಸಂಶಯ ವಿಲ್ಲ.*

ಹೆಣ್ಣು ಕಲಿತರೆ ಕುಟುಂಬ, ಸಮಾಜ ಒಳಿತಿನ ಹಾದಿಯಲ್ಲಿ ಸಾಗುತ್ತದೆ. ಮಕ್ಕಳು ದಾರಿತಪ್ಪಲು, ಕೆಡುಕಿನತ್ತ ಸಾಗಲು ಮೂಲ‌ ಕಾರಣ ಧಾರ್ಮಿಕತೆ ಯ ಕೊರತೆ. ಹೆತ್ತವಳು ಧಾರ್ಮಿಕ ದಿಂದ ದೂರ ಸರಿದಾಗ ಮಕ್ಕಳು ದಾರಿತಪ್ಪಿದರಷ್ಟೇ. ಹೆಣ್ಣಿನ‌ ಶಿಕ್ಷಣದ ಮೇಲೆ ಕಲ್ಲು ಹಾಕುವ ಸುಭದ್ರ ವಾದ ಸಮಾಜವನ್ನು ಒಡೆಯುತ್ತಿದ್ದಾರೆಂಬ ಸತ್ಯ ಪ್ರತಿಯೊಂದು ಹೆತ್ತವರು ಅರಿಯಬೇಕು.

🌹🌷🌹🌷🌹🌷🌹🌷🌹🌷🌹

🌳🌳🌳🌳🌳🌳🌳🌳🌳🌳

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...