Skip to main content

ಅಬೂ ಹನೀಫಾ ರಳಿಯಲ್ಲಾಹು ಅನ್ಹು ರವರ ಉತ್ತರಕ್ಕೆ ಕಂಗಾಲಾದ ನಾಸ್ತಿಕವಾದಿ

ಅಬೂ ಹನೀಫಾ ರಳಿಯಲ್ಲಾಹು ಅನ್ಹು ರವರ ಉತ್ತರಕ್ಕೆ ಕಂಗಾಲಾದ ನಾಸ್ತಿಕವಾದಿ
▪▪▪▪
قال الملحدون لأبي حنيفة : في أي سنة وجد ربك ؟
ಯಾವಾಗ ನಿಮ್ಮ ರಬ್ಬ್ ಅಸ್ತಿತ್ವ ಪಡೆದು ಕೊಂಡದ್ದು ?

قال : الله موجود قبل التاريخ والأزمنة لا أول لوجوده .
*ಅಬೂ ಹನೀಫಾ ರಳಿಯಲ್ಲಾಹು ಅನ್ಹು ಹೇಳಿದರು:*
ಅಲ್ಲಾಹನ ಅಸ್ಥಿತ್ವ ತಾರೀಖು, ಕಾಲ ಇವುಗಳಿಗಿಂತಲೂ ಮುಂಚೆ ಆಗಿದೆ. ಅವನ ಅಸ್ತಿತ್ವಕ್ಕಿಂತ ಮೊದಲು ಎಂಬುವುದು ಇಲ್ಲ.

قال لهم أبو حنيفة : ماذا قبل الأربعة ؟؟
ಅವರೊಂದಿಗೆ *ಅಬೂ ಹನೀಫಾ ರಳಿಯಲ್ಲಾಹು ಅನ್ಹು ಹೇಳಿದರು:* ನಾಲ್ಕಕ್ಕು ಮೊದಲು ಏನು ??
قالوا : ثلاثة ..
ನಾಸ್ತಿಕರು ಹೇಳಿದರು: ಮೂರು..
قال لهم :ماذا قبل الثلاثة ؟
ಅವರೊಂದಿಗೆ *ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಹೇಳಿದರು: ಮೂರಕ್ಕೂ ಮೊದಲು ಏನು ??
قالوا : إثنان ..
ನಾಸ್ತಿಕರು ಹೇಳಿದರು: ಎರಡು..
قال لهم : ماذا قبل الإثنين ؟
ಅವರೊಂದಿಗೆ *ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಕೇಳಿದರು: ಎರಡಕ್ಕೂ ಮೊದಲು ಏನು ??
قالوا : واحد ..
ನಾಸ್ತಿಕರು ಹೇಳಿದರು: ಒಂದು..
قال لهم : وما قبل الواحد ؟
ಅವರೊಂದಿಗೆ *ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಹೇಳಿದರು: ಒಂದಕ್ಕೂ ಮೊದಲು ಏನು ??
قالوا : لا شئ قبله ..
ನಾಸ್ತಿಕರು ಹೇಳಿದರು: ಅದಕ್ಕಿಂತ ಮುಂದೆ ಏನು ಇಲ್ಲ.
قال لهم : إذا كان الواحد الحسابي .. لا شئ قبله، فكيف بالواحد الحقيقي وهو الله ! إنه قديم لا أول لوجوده
ಅವರೊಂದಿಗೆ *ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಹೇಳಿದರು: ಒಂದು ಅಂಕ ಗಣಿತ ವಾದರೆ..ಅದಕ್ಕಿಂತ ಮುಂದೆ ಏನು ಇಲ್ಲ (ಗಣಿತವಾಗಿ ಲೆಕ್ಕಿಸಲ್ಪಡದ್ದು), ಹೇಗೆ ಒಂದು ಎಂಬುವುದೋ ಅದೇ ರೀತಿ ಅಲ್ಲಾಹನು ಏಕನು ! ಅಲ್ಲಾಹನು ಹಳೆಯವನು. ಅವನ ಅಸ್ತಿತ್ವಕ್ಕೆ ಮೊದಲು ಎಂಬುವುದು ಇಲ್ಲ
••••••••••••••••••••••••••••••••
قالوا : في أي جهة يتجه ربك ؟؟
ನಾಸ್ತಿಕರು ಕೇಳಿದರು: ಯಾವ ದಿಕ್ಕಿನಲ್ಲಿ ನಿಮ್ಮ ಅಲ್ಲಾಹನ ಶಿರೋನಾಮೆ ಇದೆ
قال : لو أحضرتم مصباحا في مكان مظلم إلى أي جهة يتجه النور ؟
*ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಹೇಳಿದರು:
ಕತ್ತಲೆಯ ಸ್ಥಳದಲ್ಲಿ ಬೆಳಕನ್ನು ನೀವು ತಂದರೆ ಅದು ಯಾವ ಭಾಗಕ್ಕೆ ಬೆಳಕು ತರುತ್ತದೆ ?
قالوا : في كل مكان ..
ನಾಸ್ತಿಕರು ಹೇಳಿದರು: ಎಲ್ಲೆಡೆ
قال : إذا كان هذا النور الصناعي فكيف بنور السماوات والأرض
*ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಹೇಳಿದರು:
ಅದು ಕೃತಕ ಬೆಳಕನ್ನು ಹೊಂದಿದ್ದಾಗಿದೆ. ಅದು ( ಅ ಕೃತಕ ಬೆಳಕು ) ಹೇಗೆ ಆಕಾಶ ಭೂಮಿಯ ಬೆಳಕಾಗುವುದು.
قالوا : عرّفنا شيئا عن ذات ربك ؟ أهي صلبة كالحديد أو سائلة كالماء ؟ أم غازية كالدخان والبخار؟؟
ನಾಸ್ತಿಕರು ಹೇಳಿದರು: ನಿಮ್ಮ ಅಲ್ಲಾಹನ ಬಗ್ಗೆ ನಮಗೆ ತಿಳಿದಿದೆ ? ಅಲ್ಲಾಹನು ಕಬ್ಬಿಣದಂತೆಯೇ ಅಥವಾ ಹರಿಯುವ ನೀರಿನಂತೆಯೇ ? ಅಥವಾ ಅನಿಲ, ಹೊಗೆ  ಮತ್ತು ಉಗಿಯಂತೆ ಅಲ್ಲವೇ ??
فقال : هل جلستم بجوار مريض مشرف على النزع الأخير ؟
ಅವಾಗ *ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಹೇಳಿದರು: ಕೊನೆಯುಸಿರೆಳೆಯುವ ಹಂತದಲ್ಲಿರುವ ರೋಗಿಯ ಬಳಿ ನೀವು ಕುಳಿತು ಕೊಂಡಿದ್ದೀರಾ
قالوا : جلسنا ..
ನಾಸ್ತಿಕರು ಹೇಳಿದರು: ನಾವು ಕುಳಿತು ಕೊಂಡಿದ್ದೇವೆ.
قال : هل كلمكم بعدما أسكته الموت ؟
*ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಕೇಳಿದರು:
ಮರಣ ಹೊಂದಿದ ನಂತರ ಅವರು ನಿಮ್ಮೊಂದಿಗೆ ಮಾತನಾಡಿದ್ದಾರ.?
قالوا : لا.
ನಾಸ್ತಿಕರು ಹೇಳಿದರು: ಇಲ್ಲ.
قال : هل كان قبل الموت يتكلم ويتحرك ؟
*ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಕೇಳಿದರು:
ಮರಣ ಹೊಂದುವುದಕ್ಕಿಂತ ಮುಂಚೆ ಅವರು ಮಾತನಾಡಿದ್ದಾರಲ್ಲವೇ ಅವರ ಅಂಗಾಗಳಿಗೆ ಚಲನ ಇತ್ತಲ್ಲವೇ ?
قالوا : نعم.
ನಾಸ್ತಿಕರು ಹೇಳಿದರು: ಔದು.
قال : ما الذي غيره ؟
ಇಮಾಮ್ *ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಕೇಳಿದರು: ಇದರೆಡೆಯಲ್ಲಿ ನಡೆದ ಚಮತ್ಕಾರ ಏನು?.(ಮರಣ ಹೊಂದುದಕ್ಕಿಂತ ಮುಂಚೆ ಮಾತು ಚಲನ ಇತ್ತು. ಆದರೆ, ಮರಣದ ನಂತರ ಚಲನ ಇಲ್ಲ ಮಾತೂ ಇಲ್ಲ ಕಾರಣ ಏನು..?)
قالوا : خروج روحه.
ನಾಸ್ತಿಕರು ಹೇಳಿದರು: ರೂಹ್ (ಆತ್ಮ) ನ ಬೆರ್ಪಡುವಿಕೆ ಕಾರಣದಿಂದ.
قال : أخرجت روحه ؟
*ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಕೇಳಿದರು: ರೂಹ್ (ಆತ್ಮ) ಬೇರ್ಪಟ್ಟ ಕಾರಣದಿಂದಲೇ?
قالوا : نعم.
ನಾಸ್ತಿಕರು ಹೇಳಿದರು: ಔದು
قال : صفوا لي هذه الروح ، هل هي صلبة كالحديد أم سائلة كالماء ؟؟ أم غازية كالدخان والبخار ؟؟
*ಅಬೂ ಹನೀಫಾ ರಳಿಯಲ್ಲಾಹು ಅನ್ಹು* ಕೇಳಿದರು: ಅ  ರೂಹ್ ನ ವಿಶೇಷತೆಗಳನ್ನು ಹೇಳಿ, ಅದು ಕಬ್ಬಿಣ ದಂತೆಯೇ ಅಥವಾ ಹರಿಯುವ ನೀರಿನಂತೆಯೇ ??
ಅಥವಾ ಅನಿಲ, ಹೊಗೆ  ಮತ್ತು ಉಗಿಯಂತೆಯೇ ??
قالوا : لا نعرف شيئا عنها !!
ನಾಸ್ತಿಕರು ಹೇಳಿದರು: ರೂಹ್ ನ ಕುರಿತು ನಮಗೆ ಗೊತ್ತಿಲ್ಲ.
قال : إذا كانت الروح المخلوقة لا يمكنكم الوصول إلى كنها فكيف تريدون مني أن أصف لكم الذات الإلهية !!
*ಅಬೂ ಹನೀಫಾ ರಳಿಯಲ್ಲಾಹು ಅನ್ಹು ರವರು ಹೇಳಿದರು:*
ರೂಹ್ (ಆತ್ಮ) ಸೃಷ್ಟಿ ಆದರೆ, ಅ ರೂಹ್ ನ ಮೂಲವನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ಮತ್ತೇಗೆ ಅದನ್ನು ಸೃಷ್ಟಿ ಸಿದ ಏಕನಾದ ಇಲಾಅ್ (ಅಲ್ಲಾಹ್ ) ನ ವಿಶೇಷಣಗಳ ಕುರಿತು ಕೇಳುವುದು.
▪▪▪▪
🎙 *ನಿಸಾರ್ ಸಖಾಫಿ ಉಳ್ಳಾಲ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...