ಈದುಲ್ ಫಿತ್ರ್ ನ ಕೆಲವು ಸಂಶಯ ನಿವಾರಣೆಗಳು
✍🏻 *ಮುಹಮ್ಮದ್ ಆರೀಫ್ ಸಖಾಫಿ ಪುಂಜಾಲಕಟ್ಟೆ*
muhammadarifma403276@gmail.com
*1.* ಈದ್ ಸ್ನಾನದ ನಿಯ್ಯತ್ ಹೇಗೆ....?
=ಈದುಲ್ ಫಿತ್ರ್ ನ ಸುನ್ನತ್ತಾದ ಸ್ನಾನವನ್ನು ನಾನು ನಿರ್ವಹಿಸುವೆನು(ಸಂಕಲ್ಪಿಸುವುದು)
*2.* ಪೆರ್ನಾಳಿನ ಅತ್ಯಂತ ಉತ್ತಮ ಉಡುಪು ಮತ್ತು ಅದರ ಬಣ್ಣ ಯಾವುದು....?
=ಬೆಲೆಬಾಳುವ ಹೊಸ ಬಿಳಿ ವಸ್ತ್ರ.
*3.* ಪೆರ್ನಾಳ್ ನಂದು ಸುಗಂಧ ದ್ರವ್ಯ ಯಾವಾಗ ಉಪಯೋಗಿಸಬೇಕು....?
=ಪೆರ್ನಾಳಿನ ಅರ್ಧರಾತ್ರಿಯಿಂದಿಡಿದು ಸೂರ್ಯಸ್ತಮಾನದ ತನಕ
*4.* ಸುಗಂಧ ದ್ರವ್ಯ ಸುವಾಸಿನಿಸುವಾಗ ಸ್ವಲಾತ್ ಹೇಳಲು ಸುನ್ನತ್ತಿದೆಯೇ....?
=ಸುನ್ನತ್ತಿಲ್ಲ ಆದರೆ ಇಸ್ತಿಗ್ಘಾರ್ ಹೇಳಲು ಸುನ್ನತ್ತಿದೆ.
*5.* ಪೆರ್ನಾಳ್ ನಮಾಝಿನ ಮೊದಲು ತಿನ್ನುವುದು ಸುನ್ನತ್ತಿದೆಯಾ.....?
=ಈದುಲ್ ಫಿತ್ರ್ ನಂದು ಈದ್ ನಮಾಝಿನ ಮುಂಚೆ ತಿನ್ನುವುದು ಸುನ್ನತ್.
ಖರ್ಜೂರ ಉತ್ತಮ. ಅದರ ಲೆಕ್ಕ ಬೆಸಸಂಖ್ಯೆಯಾಗಿರಲು ಸುನ್ನತ್. ಆದರೆ ಈದುಲ್ ಆಝ್ಹಾದಲ್ಲಿ ನಮಾಝ್ ನಂತರ ತಿನ್ನುವುದು ಸುನ್ನತ್.
*6.* ಈದ್ ಆಶೆಂಸೆಯನ್ನು ಅರ್ಪಿಸಬಹುದೇ....?ಮತ್ತು ಅದರ ವಿಧಿಯೇನು...?
=ಅರ್ಪಿಸಬಹುದುˌಸುನ್ನತ್.
*7.* ಆಶೆಂಸೆಯನ್ನರ್ಪಿಸಲು ಆರಂಭವಾಗುವ ಮತ್ತು ಕೊನೆಗೊಳ್ಳುವ ಸಮಯ ಯಾವಾಗ...?
=ಶವ್ವಾಲ್ ಬಾನಚಂದ್ರ ಕಾಣುವುದರೊಂದಿಗೆ ಆರಂಭಗೊಂಡು ಅಂದಿನ ಮಗ್ರಿಬ್ ತನಕ.
*8.* ಆಶೆಂಸೆ ಅರ್ಪಿಸಬೇಕಾದ ವಚನ ಯಾವುದು....?
= *تقبل االله منا ومنكم*
(ತಖಬ್ಬಲಲ್ಲಾಹು ಮಿನ್ನಾ ವಮಿಂಕುಂ)
*9.* ಆಶೆಂಸೆ ಅರ್ಪಿಸಿದವರಿಗೆ ತಿರುಗಿ ಆಶೆಂಸೆ ಅರ್ಪಿಸುವುದು ಸುನ್ನತ್ತಿದೆಯೇ....?ಮತ್ತು ಅದರ ಪೂರ್ಣ ರೂಪ.....?
=ಸುನ್ನತ್ *تقبل الله منكم احياكم الله لامثاله كل عام وانتم بخير*
*10.* ಆಶೆಂಸೆ ವಿನಿಮಯ ಮಾಡುವಾಗ ಹಸ್ತಲಾಘವ ಮತ್ತು ಆಲಿಂಗನ ಮಾಡುವುದು ಸುನ್ನತ್ತಿದೆಯೇ....?
=ಸುನ್ನತ್ತಿದೆ.ಸ್ತ್ರಿಯರು ಪರಸ್ಪವಾಗಿಯೂˌ ಪುರುಷರು ಪರಸ್ಪರವಾಗಿಯೂ ಕಾಣಲು ನಿಷಿದ್ಧವಿಲ್ಲದ ಮಹ್ರ್ ಮ್.
(ವಿವಾಹ
ನಿಷಿಧ್ಧವಾದವರು)ಅಥವಾ ಗಂಡ ಹೆಂಡತಿಯರು ಪರಸ್ಪರ ಹಸ್ತಲಾಘವ ಮಾಡುವುದು ಸುನ್ನತ್.ಅನ್ಯ ಸ್ತ್ರಿ ಪುರುಷರು ಪರಸ್ಪರ ಮತ್ತು ಗಡ್ಡ ಬೆಳೆಯದ ಪ್ರಾಯಪೂರ್ತಿಯಾಗದ ಸ್ಪುರದ್ರೂಪಿಯಾದ ಬಾಲಕರೊಂದಿಗೆ ಹಸ್ತಲಾಘವ ಮಾಡುವುದು ಹರಾಂ.ಯಾತ್ರೆ ಮುಗಿದು ಬರುವ ಹಾಗೂ ದಿರ್ಘಕಾಲದ ನಂತರ ಬಂದವರನ್ನು ಆಲಿಂಗನ ನಡೆಸುವುದು ಸುನ್ನತ್ ಅಲ್ಲದವರೊಂದಿಗೆ ನಡೆಸುವುದು ಕರಾಹತ್ತಾಗಿದೆ.
*11.* ಸ್ತ್ರೀಯರಿಗೆ ಪೆರ್ನಾಳ್ ನಮಾಝ್ ಜಮಾಅತ್ತಾಗಿ ನಿರ್ವಹಿಸಲು ಸುನ್ನತ್ತಿದೆಯೇ...?
=ಸುನ್ನತ್ತಿದೆ.ಅವರ ಮನೆಯಲ್ಲಿಯೇ ಜಮಾಅತ್ತಾಗಿ ನಿರ್ವಹಿಸಲು ಸುನ್ನತ್.
*12.* ಈದ್ ನಮಾಝ್ ಎಲ್ಲಿ ನಿರ್ವಹಿಸುವುದು ಉತ್ತಮ....?
=ಎಲ್ಲರನ್ನೂ ಒಳಗೊಳ್ಳುವ ಸಾಕಾಗುವಷ್ಟು ವಿಶಾಲವಾಗಿದ್ದರೆ ಮಸೀದಿಯಲ್ಲೇ ಉತ್ತಮ.
*من احي ليلة الفطر وليلة* *الاضحي لم تمت قلبه يوم* *تموت القلوب*
ಈ ಹದೀಸಿನಲ್ಲಿ "ಹೃದಯಗಳು ಸತ್ತು ಹೋಗುವುದು"ಎಂಬುದರ ತಾತ್ಪರ್ಯವೇನು....?
=ಬೌತಿಕ ಸುಖಾಢಾಂಭರಗಳಲ್ಲಿ ಮುಳುಗಿ ಪರಲೋಕದ ಕುರಿತು ಚಿಂತನೆಗಳು ಇಲ್ಲವಾಗುವುದುˌಈಮಾನ್ ನಷ್ಟ ಹೊಂದುವುದುˌಅಂತ್ಯದಿನದ ಭೀಕರತೆಯಿಂದಾಗಿ ಯಾರು ಯಾರನ್ನು ಪತ್ತೆ ಹಚ್ಚಲು ಅಸಾಧ್ಯವಾಗುವುದು.ಎಂಬ 3ವ್ಯಾಖ್ಯಾನಗಳನ್ನು ಇಮಾಮರು ಇಲ್ಲಿ ಉಲ್ಲೇಖಿಸಿದ್ದಾರೆ.
ಎರಡು ಪೆರ್ನಾಳ್ ರಾತ್ರಿಗಳಲ್ಲಿ ಆರಾಧನೆಗಳಿಂದ ಧನ್ಯಗೊಳಿಸಿದರೆ ಇಂತಹಾ ಅಪಾಯಗಳಿಂದ ಅಲ್ಲಾಹು ಸಂರಕ್ಷಿಸುವನು ಎಂಬುವುದೇ ಈ ಹದೀಸಿನ ಅರ್ಥ.
✍🏻 *ಮುಹಮ್ಮದ್ ಆರೀಫ್ ಸಖಾಫಿ ಪುಂಜಾಲಕಟ್ಟೆ*
muhammadarifma403276@gmail.com
Comments