ಖಲೀಫಾ ಪತ್ನಿಯಿಂದಲೇ ಹರಟೆ..
ದೂರು ಕೊಡಲು ಬಂದವ ಗಲಿಬಿಲಿ
*✒ಯೂಸುಫ್ ನಬ್ಹಾನಿ ಕುಕ್ಕಾಜೆ.*
📞00971 553499119
▪ಇಸ್ಲಾಮಿನ ಎರಡನೇ ಖಲೀಫಾ ಹಝ್ರತ್ ಉಮರುಲ್ ಫಾರೂಖ್ (ರ) ರ ಖಿಲಾಫತ್ ಕಾಲದಲ್ಲಿ ಒಬ್ಬರು ತನ್ನ ಪತ್ನಿಯು ಮನೆಯಲ್ಲಿ ಭಾರೀ ದನಿಯಲ್ಲಿ ಮಾತಾಡುವುದು, ಯಾವಾಗಲೂ ಹರಟೆ ಹೊಡೆಯುವುದು ಇತ್ಯಾದಿ ದುಸ್ವಭಾವದ ಬಗ್ಗೆ ದೂರು ಕೊಡಲು ಖಲೀಫಾ ಉಮರ್ (ರ) ರ ಮನೆಗೆ ಹೋದರು.
▪ಖಲೀಫರವರ ಮನೆ ತಲುಪಿದ ವ್ಯಕ್ತಿ ಬಾಗಿಲು ಮುಟ್ಟಿದಾಗಲೇ ಖಲೀಫರವರ ಮನೆಯೊಳಗಿಂದ ಮನೆಯೊಡತಿಯ ದನಿ ಬಹಳ ಜೋರಾಗಿ ಕೇಳುತ್ತಿತ್ತು. ಇದನ್ನು ಗಮನಿಸಿದ ಇವರು, ಖಲೀಫರ ಮನೆಯ ಅವಸ್ಥೆಯೇ ಹೀಗಾದರೆ ಇನ್ನು ಅವರಲ್ಲಿ ನಾನು ನನ್ನ ಪತ್ನಿಯ ಬಗ್ಗೆ ಹೇಗೆ ದೂರು ಕೊಡುವುದೆಂದು ನೆನೆಸಿ ಕೂಡಲೇ ಅಲ್ಲಿಂದ ಕಾಲ್ಕಿತ್ತರು.
▪ಮನೆಯತ್ತ ಯಾರೋ ಬಂದದ್ದನ್ನು ಗಮನಿಸಿದ ಖಲೀಫಾ ಉಮರ್ (ರ) ರು ಹೊರ ಬಂದಾಗ ಈ ದೂರು ಕೊಡಲು ಹೋದ ವ್ಯಕ್ತಿ ಮನೆಗೆ ಬಂದು ವಾಪಸು ಹೊಗುತ್ತಿದ್ದರು. ಕೂಡಲೇ ಖಲೀಫರು ಅವರನ್ನು ಕರೆದು ಕೇಳಿದರು. *"ಯಾಕೆ ಮನೆ ಬಾಗಿಲಿಗೆ ಬಂದು ವಾಪಸು ಹೋಗುತ್ತಿದ್ದೀರಿ.?"* ಆಗ ಅವರು
*"ಏನಿಲ್ಲ... ನನ್ನ ಪತ್ನಿಯು ಮನೆಯಲ್ಲಿ ಯಾವಾಗಲೂ ಹರಟೆ ಹೊಡೆಯುತ್ತಿರುದು, ಕಿರಿಕಿರಿ ಮಾಡುತ್ತಿರುವುದು, ಜೋರಾಗಿ ದಿನಿಯೆತ್ತಿ ಮಾತನಾಡುವುದು ಮಾಮೂಲಾಗಿದೆ. ಇದರಿಂದ ನಾನು ಬಹಳ ಸಮಸ್ಯೆಗೆ ಒಳಗಾಗಿದ್ದೇನೆ. ಒಟ್ಟಿನಲ್ಲಿ ಏನು ಮಾಡಬೇಕೆಂದು ತಿಳಿಯದೆ ಕೊನೆಗೆ ನಿಮ್ಮ ದರ್ಬಾರಿಗೆ ಬಂದೆನು. ಆದರೆ ಇಲ್ಲಿ ಬಂದಾಗಲೂ ಅದೇ ತರವಾಗಿದೆ. ಆದ್ದರಿಂದ ಖಲೀಫರ ಮನೆಯೊಡತಿಯ ಅವಸ್ಥೆಯೇ ಈ ರೀತಿಯಾದರೆ ಮತ್ತೆ ದೂರು ಕೊಡುವುದಾದರೂ ಹೇಗೆ..? ಎಂದು ನಾನು ನನ್ನ ಮನಸಲ್ಲೇ ಕೇಳುತ್ತಾ ವಾಪಸು ಹೋಗುತ್ತಿದ್ದೇನೆ"* ಎಂದು ಉತ್ತರಿಸಿದರು.
▪ಖಲೀಫಾ ಉಮರ್ (ರ) ರವರು ಅವರನ್ನು ಮನೆಯೊಳಗೆ ಕರೆಯಿಸಿ ಹೇಳಿದರು. *"ಬರೇ ಹರಟೆ ಹೊಡೆಯುತ್ತಾರೆ, ಕಿರಿಕಿರಿ ಮಾಡುತ್ತಾರೆ, ಜೋರಾಗಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ನೀವು ಅವಳನ್ನು ತರಾಟೆಗೆ ತೆಗೆದು ಕೊಳ್ಳಬಾರದು. ಅದನ್ನೆಲ್ಲಾ ಗಮನಕ್ಕೆ ತೆಗೆಯದೆ ಕೇಳಿದರೂ ಕೇಳದವರಂತೆ ನಟಿಸಬೇಕು. ಆ ವಿಷಯದಲ್ಲಿ ಸ್ವಲ್ಪ ಕ್ಷಮೆ ಪಾಲಿಸಬೇಕು. ಯಾಕೆಂದರೆ, ನೀನು ಮತ್ತು ನಾನು ಮಾಡಬೇಕಾದ ನಮಗೆ ಜವಾಬ್ದಾರಿ ಇರುವ ಮನೆ ಸ್ವಚ್ಛ ಮಾಡುವುದು, ಅಡುಗೆ ಮಡುವುದು, ಬಟ್ಟೆ ತೊಳೆಯುವುದು, ಮಕ್ಕಳ ಪರಿಪಾಲನೆ ಮಾಡುವುದು, ಮಗುವಿಗೆ ಮೊಲೆಯುಣಿಸುವುದು ಇತ್ಯಾದಿ ಕೆಲಸಗಳನ್ನು ಅವಳು ಕಷ್ಟಪಟ್ಟು ಕ್ಷಮಿಸಿ ಮಾಡುತ್ತಾಳೆ. ಅದು ಅವಳ ಕೆಲಸವಲ್ಲ. ಪತಿಯಂದಿರಾದ ನಮ್ಮದಾಗಿದೆ. ಅದ್ದರಿಂದ ಇಷ್ಟೆಲ್ಲಾ ಕಷ್ಟ ಸಹಿಸಿ, ತಾಳ್ಮೆಯಿಂದ ಇಂತಹಾ ಕೆಲಸಗಳನ್ನು ನಮಗಾಗಿ ಅವಳು ಮಾಡುವಾಗ ನಿನಗೆ ಅವಳಿಗೊಂದು ಎಕ್ಸ್ಕ್ಯೂಸ್ ಕೊಡಲು ಸಾಧ್ಯವಾಗದೇ...?"*
▪ಹಝ್ರತ್ ಉಮರ್ (ರ) ರ ಈ ಉಪದೇಶ ಕೇಳಿದಾಗ ಉತ್ತರ ಕೊಡಲಾಗದೆ ಬಂದ ವ್ಯಕ್ತಿ ತನ್ನ ಮನೆಗೆ ವಾಪಸು ಹೋದರು.
ಸಂಗ್ರಹ; ಇಮಾಮ್ ಅಬುಲ್ಲಯ್ಸ್ ಸಮರ್ಖದಿಯವರ *ತಂಬೀಹುಲ್ ಗಾಫಿಲೀನ್* ಎಂಬ ಗ್ರಂಥ.
Comments