Skip to main content

ತಮ್ಮ ವಿದ್ಯಾರ್ಥಿ ಜೀವನವನ್ನು SSF Campus ನೊಂದಿಗೆ ವಿನಿಯೋಗಿಸಿ.



_ಅಧುನಿಕ  ಕಾಲಘಟ್ಟವು ಪಾಶ್ಚಾತ್ಯ ಸಂಸ್ಕೃತಿಗಳೊಂದಿಗೆ ಮುನ್ನುಗ್ಗುತ್ತಿರುವಾಗ ನಮ್ಮ ಮುಸ್ಲಿಂ ಸಮುದಾಯವು ಕೂಡ ಪಾಶ್ಚಾತ್ಯ ಸಂಸ್ಕೃತಿಗಳಿಗೆ ಹೊಂದಿಕೊಂಡು ಅಲ್ಲಾಹನು ನಿಷೇಧಿಸಿದಂತಹ ಅನಾಚಾರಗಳಲ್ಲಿ ಮುಳುಗಿ ಹೋಗಿದೆ. ಅದರಲ್ಲೂ ಹೆಚ್ಚಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವಂತಹ ಮುಸ್ಲಿಂ ವಿದ್ಯಾರ್ಥಿಗಳು, ಇಸ್ಲಾಂ ದೀನ್ ಕಲಿಸಿ ಕೊಟ್ಟಂತಹ ಇಸ್ಲಾಮಿನ ಆಶಯ ಆದರ್ಶಗಳನ್ನು ತಳ್ಳಿ ಹಾಕಿ ಪಾಶ್ಚಾತ್ಯ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಇಸ್ಲಾಂಗೆ ವಿರುದ್ಧವಾಗಿ ಜೀವಿಸುತ್ತಿದ್ದಾರೆ._

     _ಇಸ್ಲಾಂ ಕಟುವಾಗಿ ವಿರೋಧಿಸಿದಂತಹ ಮಧ್ಯಪಾನ, ಗಾಂಜ, ಡ್ರಗ್ಸ್  ಮೊದಲಾದ ಅಮಲು ಪದಾರ್ಥಗಳಿಗೆ ನಮ್ಮ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಈಗಿನ ಕಾಲದ ವಿದ್ಯಾರ್ಥಿಗಳು ಇಸ್ಲಾಮಿನ ಬಗ್ಗೆ ಹಾಗೂ ಮರಣದ ಬಗ್ಗೆ ಮರೆತು ಜೀವಿಸುತ್ತಿದ್ದಾರೆ._

_ಇಂತಹ ಸನ್ನಿವೇಶಗಳನ್ನು ಅರಿತ ನಮ್ಮ SSF ಸಂಘಟನೆಯ ಪಂಡಿತ ಸಾದಾತುಗಳು, ನಾಯಕರುಗಳು ಇಂದು ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವಂತಹ ಯುವ ವಿದ್ಯಾರ್ಥಿಗಳನ್ನು ಸರಿ ದಾರಿಗೆ ಕರೆತರಲು SSF Campus ಎಂಬ ಸಂಘಟನೆಯನ್ನು ರೂಪಿಕರಿಸಿದರು. ಇದೀಗ ಭಾರತಾದ್ಯಂತ ಬಹಳಷ್ಟು ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. SSF ಸಂಘಟನೆಯು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಪ್ರವಾದಿ ಮುಹಮ್ಮದ್ ಮುಸ್ತಫಾ ﷺ ರು ತಿಳಿಸಿಕೊಟ್ಟಂತಹ ನೈಜ ಹಾದಿಯಲ್ಲಿ ಜೀವಿಸಲು CAMPUS  ವಿದ್ಯಾರ್ಥಿ ಸಂಘಟನೆಯು ನೈಜ ದಾರಿ ತೋರಿಸಿಕೊಡುತ್ತಿವೆ._

        _SSF ಸಂಘಟನೆ ಗೆ ನಾವು ಬೇಕಾಗಿಲ್ಲ. ಆದರೆ ನಮ್ಮ ಇಹಪರ ವಿಜಯಕ್ಕೆ ಬೇಕಾಗಿ ನಮಗೆ  SSF ಬೇಕಾಗಿದೆ. ಪ್ರತಿಯೊಂದು ಸಂಘಟನೆಗೂ ಒಂದೊಂದು ರೀತಿಯ ಗುರಿ ಇದ್ದೇ ಇರುತ್ತದೆ. ಆದೇ ರೀತಿ SSF ನ ಗುರಿ ಪ್ರತಿಯೊಬ್ಬ ಮುಸಲ್ಮಾನನು 5 ವಕ್ತ್ ನಮಾಝ್ ಇಮಾಮ್ ಜಮಾಅತ್ ಆಗಿ ನಿರ್ವಹಿಸಿ ಮುತ್ತು ನೆಬಿ  ﷺ ಪಾಲಿಸಿದ ಆಶಯ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವಿಸುವುದಾಗಿದೆ. SSF ರಾಜಕೀಯ ಸಂಘಟನೆಯಲ್ಲ. ಇದೊಂದು ಧಾರ್ಮಿಕ ಸಂಘಟನೆಯಾಗಿದೆ. ಇಸ್ಲಾಮಿನ ಚೌಕಟ್ಟಿನೊಳಗೆ ಜೀವಿಸಲು ಕಲಿಸಿ ಕೊಡುವಂತಹ ಸಂಘಟನೆಯಾಗಿದೆ. ನಮ್ಮ ಇಹ ಹಾಗೂ ಪರಲೋಕ ಜೀವನ ವಿಜಯಗೊಳ್ಳಲು ನಮಗೆ SSF ಅತ್ಯವಶ್ಯಕವಾಗಿದೆ._

_ಶಿಸ್ತು ಬದ್ಧ ವಿದ್ಯಾರ್ಥಿ ಮತ್ತು ಧಾರ್ಮಿಕ ಸೌಹಾರ್ದತೆಯ ಕ್ಯಾಂಪಸ್ ನಿರ್ಮಾಣಕ್ಕಾಗಿ ಪ್ರತಿ ಮುಸ್ಲಿಂ ವಿದ್ಯಾರ್ಥಿಗಳು SSF ನ ಜೊತೆ ಕೈ ಜೋಡಿಸಬೇಕಾಗಿದೆ._

*_SSF CAMPUS MEMBERSHIP CAMPAIGN_*
_2019 JULY 10-25_

_ಜಹಫರ್ ಸಾಧಿಕ್ ಕಟ್ಟದಪಡ್ಪು_
_SSF Campus Secretary_
_Kakyapadavu Unit_

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...