*ಉಳ್ಳಾಲ ಬೆಳಗಿಸಿದ ಮಹಾ ಪುರುಷ ಖುತುಬುಝ್ಝಮಾನ್ ಸಯ್ಯಿದ್ ಮದನಿ ಖ.ಸಿ*
ಭಾಗ - 01
�� ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
ಅರಿಯಿರಿ.,ಅಲ್ಲಾಹನ ಇಷ್ಟದಾಸರುಗಳಿಗೆ ಯಾವುದೇ ತರದ ಭಯವೋ, ದುಃಖವೋ ಇಲ್ಲ. ( ಕುರಾನ್ )
ಐಹಿಕ ಜೀವನದಿಂದ ಸಂಪೂರ್ಣ ದೂರವಾಗಿ ಸದಾ ಇಬಾದತುಗಳ ಮೂಲಕ ತ್ಯಾಗಮಯ ಜೀವನ ನಡೆಸುವವರು.ಅಲ್ಲಾಹನ ಸಂಪ್ರೀತಿಗಾಗಿ ತಮ್ಮ ಶರೀರವನ್ನು,ಸಂಪತ್ತನ್ನು ಅರ್ಪಿಸಿದವರು,ಹ್ರದಯ ಶುದ್ಧಿಗಾಗಿ ಅಲ್ಲಾಹನ ಸ್ಮರಣೆಯ ಮೂಲಕ ಕಳಂಕ ರಹಿತ ಬದುಕನ್ನು ನಡೆಸಿದವರು.ಅಲ್ಲಾಹನು ಹೇಳುತ್ತಾನೆ.
ألا بذكرالله تطمئن القلوب
ಅರಿಯಿರಿ..ಅಲ್ಲಾಹನ ಸ್ಮರಣೆಯಿಂದ ಹ್ರದಯಗಳಿಗೆ ಸಮಾಧಾನ ಉಂಟಾಗುತ್ತದೆ....
ಈ ಅಲ್ಲಾಹನ ಇಷ್ಟದಾಸರುಗಳಲ್ಲಿ ಮುತ್ತು ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕುಟುಂಬ ಪರಂಪರೆಯಲ್ಲಿ ಬರುವ ಅಹ್ಲು ಬೈತ್ ಗೆ ಅಲ್ಲಾಹು ಹೆಚ್ಚು ಪ್ರಾಧಾನ್ಯತೆಯನ್ನು ನೀಡಿ ಅವರನ್ನು ಅಲ್ಲಾಹು ಎಲ್ಲಾ ಕಳಂಕಗಳಿಂದ ವಿಮುಕ್ತಗೊಳಿಸಿದ್ದಾನೆ.
*إنما يريدالله ليذهب عنكم الرجس أهل البيت ويطهركم تطهيرا*
( ಪವಿತ್ರ ಕುರಾನ್ )
ಖಂಡಿತವಾಗಿಯೂ ಅಲ್ಲಾಹು ನೆಬಿ ಸ.ಅ ಮರ ಅಹ್ಲು ಬೈತನ್ನು ಕಳಂಕಗಳಿಂದ ವಿಮುಕ್ತಗೊಳಿಸಿ ಶುದ್ಧೀಕರಿಸಿದ್ದಾನೆ ಎಂಬ ಆಯತ್ ಅವತರಣೆಯಾದಾಗ ಅಲಿ (ರ.ಅ) ಫಾತಿಮ (ರ.ಅ) ಮತ್ತು ಮೊಮ್ಮಕ್ಕಳಾದ ಹಸನ್ ಹುಸೈನ್ (ರ.ಅ) ರವರನ್ನು ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಹತ್ತಿರ ಕರೆದು ತನ್ನ ಸನಿಹ ಕೂರಿಸಿ ಒಂದು ವಸ್ತ್ರವನ್ನು ಅವರ ಮೇಲೆ ಹಾಸಿ ಹೇಳಿದರು *ಇವರು ನನ್ನ ಅಹ್ಲು ಬೈತ್ ಆಗಿದ್ದಾರೆ..*
ಪ್ರವಾದಿ ಸ.ಅ ಮರ ಈ ಪವಿತ್ರ ಅಹ್ಲು ಬೈತ್ ನ ಪರಂಪರೆಯಲ್ಲಿ ಜನ್ಮ ತಾಳಿದ ಅಲ್ಲಾಹನ ವಲಿಯ್ಯ್ ಆಗಿದ್ದಾರೆ. *ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ......*
ಮದೀನಃ ಮುನವ್ವರದಿಂದ ಕರ್ನಾಟಕದ ಕರಾವಳಿ ಪ್ರದೇಶವಾದ ಉಳ್ಳಾಲಕ್ಕೆ ಬಂದು ಇಡೀ ದಕ್ಷಿಣ ಭಾರತದ ಜನತೆಯ ಆಶಾ ಕಿರಣವಾಗಿ,ವಿಶ್ವ ಭೂಪಟದಲ್ಲಿ ಉಳ್ಳಾಲ ರಾರಾಜಿಸಲು ಕಾರಣೀಕರ್ತರಾದ ಮಹಾನ್ ವಲಿಯ್ಯ್ ಆಗಿದ್ದಾರೆ ಸಯ್ಯಿದ್ ಮದನಿ ಖ.ಸಿ.,
ಕ್ರಿ.ಶ ಹದಿನಾರನೇ ಶತಮಾನದಲ್ಲಿ ಪವಿತ್ರ ಮದೀನದಿಂದ ಉಳ್ಳಾಲಕ್ಕೆ ಸಯ್ಯಿದ್ ಮದನಿ ಖ.ಸಿ ಆಗಮಿಸಿದರು.ಅವರ ಆಗಮನವೇ ಕರಾಮತಿನ ಮೂಲಕವಾಗಿತ್ತು.ಭೋರ್ಗರೆಯುವ ಅರಬೀ ಸಮುದ್ರದ ಅಲೆಗಳ ಮೇಲೆ ತನ್ನ ನಮಾಜಿನ ಮುಸಲ್ಲಾವನ್ನು ಹಾಸಿ ಅದರ ಮೇಲೆ ಕುಳಿತು ವಿಶಾಲ ಸಾಗರದ ತೆರೆಮಾಲೆಗಳನ್ನು ದಾಟಿ ಮಂಗಳೂರು ಕಡಲ ಕಿನಾರೆಗೆ ಬಂದು ತಲುಪಿದರು.ಅಲ್ಲಿಂದ ಉಳ್ಳಾಲ ಎಂಬ ಪ್ರಕ್ರತಿ ರಮಣೀಯವಾದ ಗ್ರಾಮಕ್ಕೆ ಬಂದು ವಾಸ್ತವ್ಯ ಹೂಡಿದರು.ಅಧರ್ಮ ಅರಾಜಕತೆ ಅನ್ಯಾಯ ಅನೀತಿ ತಾಂಡವವಾಡುತ್ತಿದ್ದ ಉಳ್ಳಾಲದ ಚಿತ್ರಣ ಆ ಬಳಿಕ ಹಂತಹಂತವಾಗಿ ಬದಲಾವಣೆಯಾಯಿತು.ಉಳ್ಳಾಲದಲ್ಲಿ ಹೊಸ ಯುಗದ ಆರಂಭಕ್ಕೆ ಸಯ್ಯಿದ್ ಮದನಿ ಖ.ಸಿ ರವರ ಆಗಮನ ಕಾರಣವಾಯಿತು.ಜಾತಿ ಮತ ಭೇದವಿಲ್ಲದೆ ಉಳ್ಳಾಲ ಪ್ರದೇಶದ ಜನರ ಗೌರವ ಅಂಗೀಕಾರಕ್ಕೆ ಪಾತ್ರರಾದರು.ಅವರ ಇಷ್ಟಾನುಸಾರ ಅವರ ವಾಸ್ತವ್ಯವನ್ನು ಹತ್ತಿರದ ಮಸೀದಿಗೆ ವರ್ಗಾಯಿಸಿದರು.ಹಗಲಿರುಳು ನಿರಂತರ ನಮಾಜು, ಪ್ರಾರ್ಥನೆ, ದ್ಸಿಕ್ರ್ ನಲ್ಲಿ ತಲ್ಲೀನರಾದರು.ಐಹಿಕ ಸುಖಾಡಂಭರಗಳನ್ನು ತ್ಯಜಿಸಿ ಸಂಪೂರ್ಣವಾಗಿ ತನ್ನನ್ನು ತಾನು ಅಲ್ಲಾಹನ ಸಂಪ್ರೀತಿಗಾಗಿ ತೊಡಗಿಸಿಕೊಂಡರು.ಅವರ ಉಪದೇಶ ನಿರ್ದೇಶಗಳನ್ನು ಆಲಿಸಿದ ಜನರು ಸಂಪೂರ್ಣವಾಗಿ ಇಸ್ಲಾಮಿನಲ್ಲಿ ಲೀನವಾಗಿ ಇಸ್ಲಾಮಿನ ಸುಂದರಾಶಯಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡರು.ಸಯ್ಯಿದ್ ಮದನಿ ತಂಗಳ್ ರವರ ಆಗಮನ ಅವರಿಗೆ ಕೆಡುಕಿನಿಂದ ವಿಮುಕ್ತಿ ಹೊಂದಿ ಒಳಿತಿನ ಹಾದಿಗೆ ಚಲಿಸಲು ಹೇತುವಾಯಿತು.
*ಮುಂದುವರಿಯುವುದು*
��ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760
Comments