*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*
ಸಂಚಿಕೆ - 06
ನವಾಝ್ ಸಖಾಫಿ ಉಳ್ಳಾಲ
ತಾಜುಲ್ ಉಲಮಾ ಖ.ಸಿ ಅತೀವ ಬುದ್ಧಿಶಾಲಿಯೂ ಗ್ರಹಣ ಶಕ್ತಿಯೂ ಉಳ್ಳವರಾಗಿದ್ದರು.ಜ್ಞಾನದ ವಿಷಯದಲ್ಲಿ ಅವರನ್ನು ಮೀರಿ ನಿಲ್ಲುವ ವಿದ್ವಾಂಸರು ಅವರ ಕಾಲದಲ್ಲಿರಲಿಲ್ಲ.ಅವರ ಪ್ರಗಲ್ಭ ಶಿಷ್ಯ ವ್ರಂದದವರೇ ಹೇಳುವಂತೆ ಅವರಿಗೆ ಸರಿಸಾಟಿ ಯಾರೂ ಇಲ್ಲ.ಅವರು ವಿದ್ಯಾ ಸಾಗರವಾಗಿದ್ದರು.ಎಲ್ಲಾ ವಿಧದ ವಿದ್ಯೆಯಲ್ಲೂ ಅವರು ನೈಪುಣ್ಯತೆ ಪಡೆದಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ಯ ಎಂಬ ಮೊಹಲ್ಲಾದ ಖಾಝಿಯಾಗಿದ್ದ ಎಸ್ ಕೆ ಸಮಸ್ತದ ವಿದ್ವಾಂಸರಾದ *ಇಬ್ನುಲ್ ಖುತುಬಿ* ಹೇಳುತ್ತಾರೆ
ಈ ಕಾಲದಲ್ಲಿ ಅಗಾಧ ಪಾಂಡಿತ್ಯದ ವಿದ್ವಾಂಸರಿದ್ದರೆ ಅದು ಎರಡು ಮಂದಿ ಮಾತ್ರ. ಒಂದು ಇ ಕೆ ಅಬೂಬಕರ್ ಮುಸ್ಲಿಯಾರ್, ಮತ್ತೊಬ್ಬರು ತಾಜುಲ್ ಉಲಮಾ ಆಗಿದ್ದರು.ಸ್ವಹೀಹುಲ್ ಬುಖಾರಿ ತರಗತಿಗೆ ಕಿತಾಬಿನೊಂದಿಗೆ ಹಾಜರಾಗುತ್ತಿದ್ದರು.ಮುತಅಲ್ಲಿಮರ ಮನಮುಟ್ಟುವ ರೀತಿಯಲ್ಲಾಗಿತ್ತು ಅವರ ಹದೀಸ್ ವಿವರಣೆ.ಮಧ್ಯೆ ಮಧ್ಯೆ ತನ್ನ ಉಸ್ತಾದರುಗಳು ವಿವರಿಸಿದ ತಹಖೀಖಾತುಗಳನ್ನು ಆ ವಿಷಯಕ್ಕೆ ಸಂಬಂಧಿಸಿ ಮುತಅಲ್ಲಿಮರಿಗೆ ತಿಳಿಸುತ್ತಿದ್ದರು. ಒಂದು ವೇಳೆ ತರಗತಿಗೆ ಕಿತಾಬ್ ಇಲ್ಲದೆ ತಾಜುಲ್ ಉಲಮಾ ಬಂದರೆ ಅಂದು ಹದೀಸಿನ ವಿವರಣೆ ಕಿತಾಬ್ ಕೊಂಡು ಬಂದ ದಿವಸಕ್ಕಿಂತ ಹೆಚ್ಚಿರುತ್ತದೆ..
ತಾಜುಲ್ ಉಲಮಾ ಖ.ಸಿ ಉಳ್ಳಾಲದಲ್ಲಿ ಸಾಮಾನ್ಯ ವಾದ ಪುಟ್ಟ ಮನೆಯಂತಿರುವ ರೂಮಿನಲ್ಲಿ ವಾಸಿಸುತ್ತಿದ್ದರು.ಮಂಚದಲ್ಲಿ ನಿದ್ರಿಸುತ್ತಿರಲಿಲ್ಲ.ಯಾವಾಗಲೂ ಕಿತಾಬ್ ನೋಡುವುದರಲ್ಲಿ ತಲ್ಲೀನರಾಗುತ್ತಿದ್ದರು.ನಿದ್ರೆ ಬಂದರೆ ಗೋಡೆಗೆ ಒರಗಿ ಕುಳಿತು ನಿದ್ರಿಸುತ್ತಿದ್ದರು.ಎಚ್ಚರವಾದಾಗಲೆಲ್ಲಾ ಪುನಃ ಕಿತಾಬ್ ನ ಕಡೆ ಗಮನ ಹರಿಸುತ್ತಿದ್ದರು.
*ಇಮಾಮ ಖುಶೈರಿ ರಹಿಮಹುಲ್ಲಾಹ್ ತನ್ನ ಗ್ರಂಥದಲ್ಲಿ ವಿವರಿಸುತ್ತಾರೆ.*
ಅವುಲಿಯಾಗಳಿಗೆ ಅಲ್ಲಾಹನು ನೀಡುವಂತಹ ಕರಾಮತುಗಳಲ್ಲಿ ಅತ್ಯಂತ ಉನ್ನತವಾದ ಕರಾಮತು *ಅಲ್ಲಾಹನಿಗೆ ತಖ್ವಾದೊಂದಿಗೆ ನಿರಂತರವಾಗಿ ಇಬಾದತ್ ಮಾಡುವ ತೌಫೀಖ್ ( ಸೌಭಾಗ್ಯ ) ಲಭಿಸುವುದು,* ಮತ್ತು *ಅಲ್ಲಾಹನು ವಿರೋಧಿಸಿದ ಕಾರ್ಯಗಳಿಂದ,ನಿಷಿದ್ಧವಾದ ಕಾರ್ಯಗಳಿಂದ ಮುಕ್ತನಾಗಿ ಜೀವಿಸುವುದು* ಇಂತಹ ಒಂದು ಉನ್ನತವಾದ ಕರಾಮತು ಲಭಿಸಿದ ಸೌಭಾಗ್ಯವಂತರಾಗಿದ್ದಾರೆ ನಮ್ಮ ಶೈಖುನಾ ತಾಜುಲ್ ಉಲಮಾ ಖ.ಸಿ.
ತನ್ನ ಬದುಕು ಪೂರ್ತಿ ಅಲ್ಲಾಹನಿಗಾಗಿ ಮೀಸಲಿಟ್ಟರು.ಇಲ್ಮ್ ಕಲಿಯುವಿಕೆ,ಇಲ್ಮ್ ಹೇಳಿ ಕೊಡುವಿಕೆ,ಕುರಾನ್ ಓದುವಿಕೆ,ದ್ಸಿಕ್ರ್ ಸ್ವಲಾತ್ ಹೇಳುವಿಕೆ ಹಾಗೂ ಹಲವಾರು ಸುನ್ನತ್ ಜಮಾತಿನ ಸಂಘಟನೆಗಳಿಗೆ ನೇತ್ರತ್ವ ನೀಡುವಿಕೆ ಹೀಗೆ ತನ್ನ ಜೀವನ ಪೂರ್ತಿ ಅಲ್ಲಾಹನ ಮಾರ್ಗದಲ್ಲಿ ವ್ಯಯಿಸಿದರು.
------------------------------
*يا تاج العلماء قدس الله سره العزيز أنت حي في قلوبنا*
ಕಣ್ಮರೆಯಾದರೂ ಮನ್ಮರೆಯಾಗದ ತಾಜುಲ್ ಉಲಮಾ
ತಾಜುಲ್ ಉಲಮಾ ಖ.ಸಿ ರವರ ಬದುಕಿನ ಕೊನೆಯ ಹಂತದಲ್ಲಿ ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಉಂಟಾಗುವ ಏರುಪೇರು ಅವರ ಆರೋಗ್ಯದಲ್ಲಿ ಉಂಟಾಯಿತು.ಆದರೆ ಅದ್ಯಾವುದನ್ನು ತಾಜುಲ್ ಉಲಮಾ ಗಣನೆಗೆ ತೆಗೆದುಕೊಳ್ಳಲಿಲ್ಲ.ತನ್ನ ದಿನನಿತ್ಯದ ಇಬಾದತ್ತುಗಳಿಗೆ ಯಾವುದೇ ಚ್ಯುತಿ ಉಂಟಾಗಲಿಲ್ಲ.ತಾಜುಲ್ ಉಲಮಾ ರವರ ಬಳಿಯಿದ್ದವರು ಮುತ್ತು ಮುಹಮ್ಮದ್ ಮುಸ್ತಫ ಸ.ಅ ರವರ ಮದಹ್ ಕಾವ್ಯವಾದ ಬುರ್ದಾ ಬೈತನ್ನು ಕೇಳಿಸುತ್ತಿದ್ದರು.ನೆಬಿ ಸ.ಅ ಮರ ಮದಹನ್ನು ಆಸ್ವಾದಿಸುತ್ತಾ ದ್ಸಿಕ್ರ್ ನಲ್ಲಿ ತಲ್ಲೀನರಾಗುತ್ತಿದ್ದರು.ಮರಣ ಸಮೀಪಿಸಿದಾಗ ಝಂ ಝಂ ನೀರನ್ನು ಹೀರಿ ತೌಹೀದಿನ ಕಲಿಮತ್ ಲಾಇಲಾಹ ಇಲ್ಲಲ್ಲಾಹ್ ಉಚ್ಛರಿಸುತ್ತಾ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ಪಾತ್ರರಾಗಿ ಇಹಲೋಕ ತ್ಯಜಿಸಿದರು.ಹಿಜಿರಾ ವರ್ಷ 1435 ರಬೀವುಲ್ ಆಖಿರ್ 01 ಶನಿವಾರ, ಇಸವಿ ವರ್ಷ 2014 ಫೆಬ್ರವರಿ ತಿಂಗಳ ಒಂದರಂದು ವಫಾತಾದರು. *ಇನ್ನಾ ಲಿಲ್ಲಾಹಿ ವಇನ್ನಾ ಇಲೈಹಿ ರಾಜಿಊನ್* ತಾಜುಲ್ ಉಲಮಾ ಖ.ಸಿ ರವರ ಮರಣ ವಾರ್ತೆ ಹರಡುತ್ತಿದ್ದಂತೆ ಜಗತ್ತಿನಾದ್ಯಂತವಿರುವ ಸುನ್ನೀ ಸಮೂಹ ಸ್ತಬ್ದರಾದರು.ಎಲ್ಲರ ಮನಸ್ಸಿನಲ್ಲೂ ಉದ್ಭವಿಸಿದ ಒಂದು ಪ್ರಶ್ನೆ !
*ಇನ್ನು ನಮಗೆ ಯಾರು* ಹೌದು.ತಾಜುಲ್ ಉಲಮಾ ಖ.ಸಿ ರವರ ವಫಾತಿನ ವಾರ್ತೆ ಕೇಳಿ ಸುನ್ನೀ ಸಮೂಹ ಅತೀವ ದುಃಖಿತರಾದರು.ಊರಿಗೆ ಊರೇ ಮೌನವಾಯಿತು.ಸುನ್ನೀ ಜಂಇಯ್ಯತುಲ್ ಉಲಮಾ ವಿದ್ವಾಂಸ ಸಭೆಯ ಅಧ್ಯಕ್ಷರಾಗಿದ್ದರು.ನೂರಾರು ಮೊಹಲ್ಲಾಗಳ ಖಾಝಿಯಾಗಿದ್ದರು.ಸಾವಿರಾರು ಶಿಷ್ಯರನ್ನು ಸಮೂಹಕ್ಕೆ ಅರ್ಪಿಸಿದ ಮಹಾನ್ ತ್ಯಾಗಿ ಅವರು.ಎಸ್ ಎಸ್ ಎಫ್ ನಿಂದ ಹಿಡಿದು ಸುನ್ನತ್ ಜಮಾಅತಿನ ಸರ್ವ ಸಂಘಟನೆಗಳ ನೇತಾರರಾಗಿದ್ದರು.ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದರು.ಹಲವಾರು ರಾಜ್ಯಗಳಿಂದ ತಾಜುಲ್ ಉಲಮಾ ಖ.ಸಿ ರವರ ಅಂತಿಮ ದರ್ಶನ ಪಡೆಯಲು ಅವರು ವಫಾತಾದ ಕೇರಳದ ಎಟ್ಟಿಕುಳಂ ಗೆ ನಾಲ್ದೆಸೆಯಿಂದಲೂ ಜನರು ಹರಿದು ಬಂದರು.ಜನಸಾಗರವೇ ಅಲ್ಲಿ ತುಂಬಿಹೋಯಿತು.ಎಷ್ಟೋ ಕಿಲೋ ಮೀಟರ್ ತನಕ ರಸ್ತೆಗಳು ಜನರಿಂದ ತುಂಬಿ ತುಳುಕಿದವು.ಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯ ಉಲಮಾ ಉಮರಾಗಳ ದಂಡೇ ಅಲ್ಲಿ ಆಗಮಿಸಿತ್ತು.ಹೀಗೆ ಒಬ್ಬರ ಮಯ್ಯಿತ್ ಸಂದರ್ಶಿಸಲು ಸೇರಿದ ಜನಸಾಗರವನ್ನು ಅದಕ್ಕಿಂತ ಮುಂಚೆ ಜಗತ್ತು ಕಂಡಿರಲಿಕ್ಕಿಲ್ಲ.ಅಷ್ಟೊಂದು ಜನಸಮೂಹ ಅಲ್ಲಿ ಸೇರಿತ್ತು.ಇದುವೇ ಜನರೆಡೆಯಲ್ಲಿ ತಾಜುಲ್ ಉಲಮಾ ಖ.ಸಿ ರವರ ಅಂಗೀಕಾರಕ್ಕೆ ಉತ್ತಮ ಉದಾಹರಣೆಯಾಗಿದೆ.ತಾಜುಲ್ ಉಲಮಾ ಖ.ಸಿ ರವರ ಮೇಲೆ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ನೇತ್ರತ್ವದಲ್ಲಿ ಮಯ್ಯಿತ್ ನಮಾಜು ಮುಗಿಸಿ ಎಟ್ಟಿಕುಲಂ ನ ಮಸ್ಜಿದು ತ್ತಖ್ವಾ ಸಮೀಪ ಅವರನ್ನು ದಫನ ಮಾಡಲಾಯಿತು.ಹಂತಹಂತವಾಗಿ ಅವರ ಮೇಲೆ ಮಯ್ಯಿತ್ ನಮಾಜು ನಿರ್ವಹಿಸಲಾಯಿತು.ಇಂದು ಎಟ್ಟಿಕ್ಕುಳಂ ಪ್ರಸಿದ್ಧ ಝಿಯಾರತ್ ಕೇಂದ್ರವಾಗಿ ಮಾರ್ಪಟ್ಟಿದೆ.ಹಂತಹಂತವಾಗಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯೂ ತಾಜುಲ್ ಉಲಮಾ ಸುಪುತ್ರರೂ ಆದ ಸಯ್ಯಿದ್ ಫಝಲ್ ಕೋಯಮ್ಮ ನೇತ್ರತ್ವದಲ್ಲಿ ಬೆಳೆದು ಬರುತ್ತಿದೆ.ವಾರ್ಷಿಕ ಉರೂಸ್ ಕಾರ್ಯಕ್ರಮ ನಡೆದು ಬರುತ್ತಿದೆ.
ತಾಜುಲ್ ಉಲಮಾ ಖ.ಸಿ ರವರ ಪದವಿ ಉನ್ನತಿಗೇರಿಸು ಅಲ್ಲಾಹ್.ಅವರ ಬರ್ಕತಿನಿಂದ ನಮ್ಮ ಇಹಪರ ವಿಜಯಗೊಳಿಸು ಅಲ್ಲಾಹ್..ಆಮೀನ್..........
*ಮುಗಿಯಿತು*
ಪ್ರೀತಿಯ ವಾಚಕರೇ....ನನಗೆ ತಿಳಿದಿರುವಷ್ಟು ಮಟ್ಟಿಗೆ ಬರೆದಿದ್ದೇನೆ.ಇಂಶಾಅಲ್ಲಾಹ್...
ಶೀಘ್ರದಲ್ಲಿ ನಿರೀಕ್ಷಿಸಿ......
*ಉಳ್ಳಾಲವನ್ನು ಬೆಳಗಿಸಿದ ಮಹಾ ಪುರುಷ ಸಯ್ಯಿದ್ ಮದನಿ ಖ.ಸಿ*
ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760
Comments