Skip to main content

ತಾಜುಲ್ ಉಲಮಾ ಖ.ಸಿ..ಸಂಚಿಕೆ - 01

*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

              *ಭಾಗ 01*
-----------—-—------------

ಇತಿಹಾಸ ಪ್ರಸಿದ್ಧ ರಾಜ್ಯ ಕೇರಳ.ಇಸ್ಲಾಂ ಬಂದಂದಿನಿಂದ ಹಲವಾರು ವಿದ್ವಾಂಸರನ್ನು,ಅವುಲಿಯಾಗಳನ್ನು ಮುಸ್ಲಿಂ ಸಮೂಹಕ್ಕೆ ಸಮರ್ಪಿಸಲ್ಪಟ್ಟ ರಾಜ್ಯ ಕೇರಳ.ಕೇರಳ ಮತ್ತು ಸುತ್ತಮುತ್ತ ರಾಜ್ಯದ ಪ್ರದೇಶಗಳಲ್ಲಿ ಈ ಅವುಲಿಯಾ,ವಿದ್ವಾಂಸರುಗಳಿಂದಾಗಿದೆ ಅಜ್ಞಾನದ ಇರುಳು ಇಲ್ಲವಾಗಿದ್ದು ಮತ್ತು ಸುಜ್ಞಾನದ ಪ್ರಭೆ ಹರಡಿದ್ದು.ಇವರುಗಳಲ್ಲಿ ಆಧ್ಯಾತ್ಮಿಕ ಜಗತ್ತಿನ ಅಗ್ರಗಣ್ಯ ನಾಯಕರಾಗಿ ಗುರುತಿಸಲ್ಪಟ್ಟ ಓರ್ವ ಮಹಾನರಾಗಿದ್ದಾರೆ *ತಾಜುಲ್ ಉಲಮಾ* ಎಂಬ ಗೌರವ ನಾಮದೊಂದಿಗೆ ಜಗತ್ಪ್ರಸಿದ್ದರಾದ *ಆಲಿಮುಲ್ ಅಲ್ಲಾಮಃ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಅಲ್ ಬಾಖವಿ ಖ.ಸಿ.*ಹಿಜರಿ 1341 ರಬೀವುಲ್ ಅವ್ವಲ್ ತಿಂಗಳ 25 ಶುಕ್ರವಾರದಂದು ಕೋಯಿಕ್ಕೋಡು ಜಿಲ್ಲೆಯ ಫರೋಖ್ ಸಮೀಪದ ಕರುವಂತುರುತ್ತಿ ಎಂಬ ಪ್ರದೇಶದಲ್ಲಿ *ಅಬೂಬಕರ್ ಚೆರುಕುಞ್ಞಿ ಕೋಯ ಅಲ್ ಬುಖಾರಿ ಮತ್ತು ಸಯ್ಯಿದತ್ ಹಲೀಮ ಕುಞ್ಞಿ ಬೀವಿ (ರ.ಅ)* ರವರ ಪ್ರೀತಿಯ ಪುತ್ರನಾಗಿ ತಾಜುಲ್ ಉಲಮಾ ಖ.ಸಿ ಜನಿಸಿದರು.ಬಾಲ್ಯ ಪ್ರಾಯದಲ್ಲಿಯೇ ಕಠಿಣ ಪರಿಶ್ರಮಿಯಾಗಿದ್ದ ತಾಜುಲ್ ಉಲಮಾ ಖ.ಸಿ ಪ್ರಾಥಮಿಕ ಶಿಕ್ಷಣವನ್ನು ಧಾರ್ಮಿಕ ವಿದ್ವಾಂಸರಾಗಿದ್ದ ಪುತ್ತನ್ ವೀಟ್ಟಿಲ್ ಮುಹಮ್ಮದ್ ಮುಸ್ಲಿಯಾರ್ ರವರಿಂದ ಕರಗತ ಮಾಡಿ ಉನ್ನತ ಶಿಕ್ಷಣವನ್ನು ಜಾಮಿಅಃ ಬಾಖಿಯಾತುಸ್ಸ್ವಾಲಿಹಾತ್ ನಲ್ಲಿ ಪೂರ್ತಿಗೊಳಿಸಿದರು.ರಈಸುಲ್ ಮುಹಖ್ಖಿಖೀನ್ ಅಶ್ಶೈಖ್ ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್,ಶಂಸುಲ್ ಉಲಮಾ ಇ.ಕೆ ಅಬೂಬಕರ್ ಮುಸ್ಲಿಯಾರ್,ಶೈಖ್ ಹಸನ್ ಹಝ್ರತ್ ಖದ್ದಸಲ್ಲಾಹು ಅಸ್ರಾರಹುಂ *ತಾಜುಲ್ ಉಲಮಾ ಖ.ಸಿ*ರವರ ಪ್ರಮುಖ ಗುರುವರ್ಯರುಗಳಾಗಿದ್ದರು.

ತಾಜುಲ್ ಉಲಮಾ ಖ.ಸಿ ಮತ್ತು ಅವರ ಉಸ್ತಾದರುಗಳ ಬರ್ಕತಿನಿಂದ ನಮ್ಮ ಎಲ್ಲಾ ಕಾರ್ಯಗಳಲ್ಲಿ ಅಲ್ಲಾಹು ಒಳಿತನ್ನು ನೀಡಲಿ.ಅವರೊಂದಿಗೆ ಸ್ವರ್ಗದಲ್ಲಿ ನಮ್ಮನ್ನು ಅಲ್ಲಾಹು ಒಗ್ಗೂಡಿಸಲಿ.ಆಮೀನ್..........

*ಮುಂದುವರಿಯುವುದು*
ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...