ಆಶೂರಾ ತಾಸೂಆ
*********************************
ಇಸ್ಲಾಮಿಕ್ ಕ್ಯಾಲಂಡರ್ ಪ್ರಕಾರ ಪ್ರಥಮ ತಂಗಳಾಗಿದೆ ಮುಹರ್ರಂ. ಅಲ್ಲಾಹನು ಹಲವು ಮಹತ್ವಗಳನ್ನು ನೀಡಿ ಗೌರವಿಸಿದ ತಿಂಗಳು.
ಪ್ರವಾದಿ ಮೂಸಾ (ಅ) ರನ್ನು ಫಿರ್ಔನಿನಿಂದ ರಕ್ಷಿಸಿದ್ದು ಕೂಡಾ ಇದೇ ತಿಂಗಳ ಹತ್ತನೇ ದಿನವಾಗಿದೆ. ಆದ್ದರಿಂದ ಈತಿಂಗಳ ಹತ್ತನೇ ದಿನವಾದ ಆಶೂರಾಅ್ ದಿನದಂದು ಉಪವಾಸ ಆಚರಿಸುವುದು ಪ್ರತ್ಯೇಕ ಸುನ್ನತ್ತಿದೆ. ಪ್ರವಾದಿ (ಸ)ರವರು ಈ ತಿಂಗಳ ಹತ್ತನೇ ದಿನದಂದು ಉಪವಾಸ ಆಚರಿಸಿ ಒಂಬತ್ತನೇ ದಿನದಂದು ಉಪವಾಸ ಆಚರಿಸಲು ಸಹಾಬಿಗಳಿಗೆ ಹೇಳಿದರು. ಇಮಾಂ ಬುಖಾರಿ ಮುಸ್ಲಿಂ ಉಲ್ಲೇಖಿಸಿದ ಹದೀಸ್ನಲ್ಲಿ ಕಾಣಬಹುದು 'ಇಬ್ನ್ ಅಬ್ಬಾಸ್ (ರ) ರಿಂದ ವರದಿ : ಪ್ರವಾದಿ (ಸ) ಮದೀನಕ್ಕೆ ವಲಸೆ ಹೋದಾಗ ಅಲ್ಲಿನ ಯಹೂದಿಯನ್ನದರು ಆಶೂರಾಅ್ (ಮುಹರ್ರಂ ಹತ್ತು) ದಿನದಂದು ಉಪವಾಸ ಆಚರಿಸುತ್ತಿದ್ದರು ಪ್ರವಾದಿ (ಸ) ರವರು ಆ ಉಪವಾಸದ ಕುರಿತು ಕೇಳಿದಾಗ ಇಂದು ನಮ್ಮ ಪ್ರವಾದಿ ಮೂಸಾ(ಅ) ರನ್ನು ರಕ್ಷಿಸಿ ಅವರ ಆಜನ್ಮ ಶತ್ರು ಪಪಿರ್ಔನ್ ನನ್ನು ನೀರುಪಾಲಾಗಿಸಿದ ದಿನ ಆದ್ದರಿಂದ ಮೂಸ ನೆಬಿಯವರು ಕೃತಜ್ಞತೆಗಾಗಿ ಉಪವಾಸ ಆಚರಿಸುತ್ತಿದ್ದರು ಹಾಗಾಗಿ ನಾವು ಕೂಡಾ ಅದನ್ಮು ಮುಂದುವರಿಸುತ್ತಿದ್ದೇವೆ ಎಂದರು. ಮೂಸಾ ನೆಬಿಯವರೊಂದಿಗೆ ನಿಮಗಿಂತಲೂ ನಿಕಟರು ನಾವು ಎಂದು ಹೇಳಿದ ಪ್ರವಾದಿ (ಸ) ರವರು ಅಂದಿನಿಂದ ಉಪವಾಸ ಆಚರಿಸಿದರಲ್ಲದೆ ತನ್ನ ಅನುಯಾಯಿಗಳಿಗೂ ಅದನ್ನು ಆಜ್ಞಾಪಿಸಿದರು. ವರ್ಷಗಳು ಕಳೆದ ನಂತರ ಪ್ರವಾದಿ(ಸ) ಯವರು ಹೇಳಿದರು ನೀವು ಯಹೋದ್ಯರೊಂದಿಗೆ ಸಮಾನರಾಗದಿರಲು ಮುಹರ್ರಂ ಒಂಬತ್ತರಂದೂ ಉಪವಾಸ ಆಚರಿಸಿ. (ಬೈಹಖೀ)
صوموا التاسع والعاشر ولا تشبهوا باليهود
ಮತ್ತೋಂದು ಉಲ್ಲೇಖದಲ್ಲಿ
لين بقيت إلى قابل لأصومن التاسع
ಮುಂದಿನ ವರ್ಷ ನಾನು ಜೀವಂತವಿದ್ದರೆ ಒಂಬತ್ತನೇ ಉಪವಾಸವನ್ನೂ ಆಚರಿಸುವೆನು ಎಂದಿದೆ. ಆದರೆ ನಂತರದ ವರ್ಷ ಪ್ರವಾದಿ (ಸ) ರವರು ವಫಾತಾಗಿದ್ದರು. ಇದರಿಂದ ಪ್ರವಾದಿ(ಸ)ರವರ ಈ ನಿರ್ದೇಶ ತನ್ನ ಕೊನೇಯ ಮುಹರ್ರಮ್ ನಲ್ಲೆಂದೂ ಪ್ರವಾದಿ (ಸ) ರವರು ಮುಹರ್ರಂ ಒಂಬತ್ತನೇಯ ಉಪವಾಸವನ್ನು ಆಚರಿಸದಿದ್ದರೂ ಸಹಾಬಿಗಳನ್ನು ಪ್ರೋತ್ಸಾಹಿಸಿದ್ದಾರೆಂದೂ ತಿಳಿಯುತ್ತೆದೆ.
ಅದೂ ಅಲ್ಲದೆ ಹಲವು ವಿಶೇಷತೆಗಳು ಈ ಉಪವಾಸಕ್ಕಿದೆ
ಆಶೂರಾಅ್ ದಿನದ ಉಪವಾಸದ ಕುರಿತು ಪ್ರವಾದಿ(ಸ) ಯವರಲ್ಲಿ ಕೇಳಲ್ಪಟ್ಟಾಗ ಅದು ಒಂದು ವರ್ಷದ ಪಾಪಗಳನ್ನು ಮನ್ನಿಸುವುದು ಎಂದಿದ್ದಾರೆ ಪ್ರವಾದಿ(ಸ). ಆ ದಿನ ಇತರ ಜೀವಿಗಳು ಕೂಡಾ ಉಪವಾಸ ಆಚರಿಸುತ್ತದೆ ಎಂಬ ವರದಿ ಇದೆ. ಇಮಾಂ ಫತ್ಹ್ ಬ್ನ್ ಶಹ್ರಖ್(ರ) ಹೇಳುತ್ತಾರೆ 'ನಾನು ಎಲ್ಲಾ ದಿನವೂ ಇರುವೆಗಳಿಗೆ ರೊಟ್ಟಿ ಹಾಕುತ್ತಿದ್ದೆ ಆದರೆ ಆಶೂರಾ ದಿನದಂದು ಇರುವೆಯು ನಾನಿಟ್ಟ ರೊಟ್ಟಿಯನ್ನು ತಿನ್ನುತ್ತಿರಲಿಲ್ಲ. ಈ ಘಟನೆಯು ಮೇಲೆ ಉಲ್ಲೇಖಿಸಿದ ಹದೀಸ್ಗೆ ಪೂರಕವಾಗಿದೆ.
من وسع على عياله يوم عاشوراء وسع الله عليه في سنة كلها
ಶುರಾಅ್ ದಿನದಂದು ತನ್ನ ಕುಟುಂಬಕ್ಕೆ ಉತ್ತಮ ಆಹಾರ ನೀಡಿದನಿಗೆ ಅಲ್ಲಾಹನು ಒಂದು ವರ್ಷವಿಡೀ ವಿಶಾಲತೆ ನೀಡುವನು (ಬೈಹಖೀ)
ಇದು ನನ್ನ ಜೀವನದಲ್ಲಿ ಐವತ್ತು ವರ್ಷಗಳ ಕಾಲ ಅನುಭವಿಸಿದ ಸತ್ಯ ಸಂಗತಿಯಾಗಿದೆ ಎಂದು ಸುಫ್ಯಾನ್ ಇಬ್ನ್ ಉಯಯ್ನ(ರ) ಹೇಳುತ್ತಾರೆ.
*ಉಪವಾಸದ ನಿಯ್ಯತ್ತು*
*نويت صوم غد عن أداء سنة تاسوعاء هذه السنة لله تعالى*
*ಈ ವರ್ಷದ ತಾಸುಆಅ್ (ಮುಹರ್ರಂ ಒಂಬತ್ತನೇ) ದಿನದ ಐಚ್ಚಿಕ (ಸುನ್ನತ್) ಉಪವಾಸವನ್ನು ಅಲ್ಲಾಹನಿಗಾಗಿ ನಾಳೆ ನಾನು ಆಚರುಸುತ್ತೇನೆಂದು ಸಂಕಲ್ಪ ಮಾಡುತ್ತೇನೆ.*
*نويت صوم غد عن أداء سنة عاشوراء هذه السنة لله تعالى*
*ಈ ವರ್ಷದ ಆಶೂರಾಅ್ (ಮುಹರ್ರಂ ಹತ್ತನೇ)ದಿನದ ಸುನ್ನತ್ ಉಪವಾಸವನ್ನು ಅಲ್ಲಾಹನಿಗಾಗಿ ನಾಳೆ ನಾನು ಆಚರಿಸುತ್ತೇನೆಂದು ಸಂಕಲ್ಪ ಮಾಡುತ್ತೇನೆ*
ಸಾಲಿಂ ಸಹದಿ ಅಲ್ ಅಫ್ಳಲಿ ತುರ್ಕಳಿಕೆ
Comments