Skip to main content

ತಾಜುಲ್ ಉಲಮಾ ಖ.ಸಿ..ಸಂಚಿಕೆ -02

*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

              *ಸಂಚಿಕೆ - 02*

------------------------------

*ತಾಜುಲ್ ಉಲಮಾ ಖ.ಸಿ* ಜ್ಞಾನ ಭಂಡಾರದ ಎಲ್ಲಾ ವಿಷಯಗಳ ಸರ್ವ ಮಜಲುಗಳಲ್ಲಿಯೂ ಅಗ್ರಗಣ್ಯ ವಿದ್ವಾಂಸರಾಗಿದ್ದರು.ಮಾತ್ರವಲ್ಲ ತನ್ನಲ್ಲಿರುವ ವಿದ್ಯೆಯನ್ನು ಇತರರಿಗೆ ಪಸರಿಸಲು ತುಂಬಾನೇ ಉತ್ಸುಕರಾಗಿದ್ದರು.ಇದೇ ಕಾರಣದಿಂದ 1951 ರಲ್ಲಿ ಕರ್ನಾಟಕದ ಮಂಗಳೂರು ತಾಲೂಕಿನ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ಅಂತ್ಯವಿಶ್ರಮ ಹೊಂದಿರುವ ಉಳ್ಳಾಲಕ್ಕೆ ಬಂದು ಅವರ ಆಶೀರ್ವಾದ ಪಡೆದು  *ಕಂಝುಲ್ ಉಲೂಂ* ಎಂಬ ಹೆಸರಿನಲ್ಲಿ ಪಳ್ಳಿ ದರ್ಸನ್ನು ಪ್ರಾರಂಭಿಸಿದರು.ವಿಜ್ಞಾನ ದಾಹಿಗಳಾದ ಮುತಅಲ್ಲಿಮರು ಕರ್ನಾಟಕ ಮತ್ತು ಕೇರಳದ ವಿವಿಧ ಊರುಗಳಿಂದ ಹರಿದು ಬರಲಾರಂಭಿಸಿದರು.ಬಳಿಕ ಸಯ್ಯಿದ್ ಮದನಿ ಶರೀಅತ್ ಕಾಲೇಜು ಆಗಿ ಪರಿವರ್ತಿತಗೊಂಡಿತು.ಇದರಿಂದ ಕರ್ನಾಟಕ ಭಾಗದಲ್ಲಿ ಇಸ್ಲಾಮಿನ ಸುಂದರ ಆಶಯಾದರ್ಶಗಳು ಹರಡಿದವು.ಪ್ರಗಲ್ಭ ವಿದ್ವಾಂಸರುಗಳ ಸ್ರಷ್ಟಿಯಾಯಿತು.ಅನ್ಯಾಯ,ಅಕ್ರಮ,ಅಜ್ಞಾನ ಅಂಧಕಾರದ ಕಗ್ಗತ್ತಲು ಇಲ್ಲವಾಯಿತು.
ತಾಜುಲ್ ಉಲಮಾ ಖ.ಸಿ ತನ್ನ ಆಯುಷ್ಯದ ಕೊನೆ ಗಳಿಗೆವರೆಗೂ ಸಯ್ಯಿದ್ ಮದನಿ ಶರೀಅತ್ ಕಾಲೇಜು ಇದರ ಪ್ರಾಂಶುಪಾಲರಾಗಿಯೂ ಮುದರ್ರಿಸರಾಗಿಯೂ ಉಳ್ಳಾಲ ಹಾಗೂ ಕರ್ನಾಟಕದ ನೂರಾರು ಮೊಹಲ್ಲಾಗಳ ಖಾಝಿಯಾಗಿಯೂ ಮುಂದುವರಿದಿದ್ದರು.1956 ಸೆಪ್ಟೆಂಬರ್ 20 ರಂದು ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಸದಸ್ಯರಾದರು.1976 ರಲ್ಲಿ ಉಪಾಧ್ಯಕ್ಷರಾದರು.1989 ರಲ್ಲಿ ಸುನ್ನೀ ಜಂಇಯ್ಯತುಲ್ ಉಲಮಾ ದ ಅಧ್ಯಕ್ಷರಾದರು.ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶ ನಾಯಕರಾಗಿ ಮುಸ್ಲಿಂ ಸಮೂಹಕ್ಕೆ ಇಸ್ಲಾಮಿನ ನೈಜ ಸುನ್ನೀ ಆಶಯಾದರ್ಶಗಳನ್ನು ತಿಳಿಸಿಕೊಡುತ್ತಾ ಮುಂದೆ ಸಾಗಿದರು.ಇದರೊಂದಿಗೆ ಎಲ್ಲಾ ತರದ ನೂತನವಾದಿಗಳ ನೀಚ ಕುಟಿಲ ತಂತ್ರಗಳ ಕಪಿಮುಷ್ಟಿಯಿಂದ ಮುಸ್ಲಿಂ ಸಮೂಹವನ್ನು ಸಡಿಲಿಸಿ ಅವರಿಗೆ ಸುನ್ನತ್ ಜಮಾಅತಿನ ನೈಜ ವಿಶ್ವಾಸಾಚಾರಗಳನ್ನು ತಿಳಿಸಿ ಇಸ್ಲಾಮನ್ನು ಭದ್ರಗೊಳಿಸಿದರು.ಧಾರ್ಮಿಕ ವಿಷಯದಲ್ಲಿ ಯಾವುದೇ ಆಕ್ಷೇಪ,ಆರೋಪಗಳಿಗೆ ಎದೆಗುಂದಲಿಲ್ಲ.ತಾಜುಲ್ ಉಲಮಾ ಹೇಳಿದಂತಹ ಮಾತು
*أنا على الحق ولو كنت وحدي*
ನಾನು ಸತ್ಯದ ಹಾದಿಯಲ್ಲಿದ್ದೇನೆ.ನಾನು ಏಕಾಂಗಿಯಾದರೂ ಸರಿ,ಇಸ್ಲಾಮಿನ, ಸುನ್ನತ್ ಜಮಾಅತಿನ ವಿಷಯದಲ್ಲಿ ಕಿಂಚಿತ್ತೂ ಸಡಿಲ ಮನೋಭಾವ ನನಗಿಲ್ಲ.
ವಿವಿಧ ಕಡೆಗಳಿಂದ ತಾಜುಲ್ ಉಲಮಾರ ಸನ್ನಿಧಿಗೆ ಜನರು ತಾಳ್ಮೆಯಿಂದ ಬಂದು ಅವರ ಮಾತು,ಕಲ್ಪನೆಯನ್ನು ಕೇಳಿ ಜೀವನದಲ್ಲಿ ಅನುಸರಿಸುತ್ತಿದ್ದರು.ತಾಜುಲ್ ಉಲಮಾ ಖ.ಸಿ ರವರ ಸನ್ನಿಧಿಗೆ ತಮ್ಮ ಕಷ್ಟ ಕಾರ್ಪಣ್ಯ ಗಳನ್ನು ಹೇಳಿ ಬರುತ್ತಿದ್ದ ಭಕ್ತಾದಿಗಳಿಗೆ ಅದಕ್ಕೆ ಪರಿಹಾರವನ್ನು ತಿಳಿಸುತ್ತಿದ್ದರು.ಉತ್ತಮ ಧರ್ಮಿಷ್ಟರೂ ಉತ್ತಮ ಸ್ವಭಾವದವರೂ ಆಗಿದ್ದರು.

ಮುಂದಿನ ಸಂಚಿಕೆಯಲ್ಲಿ ತಾಜುಲ್ ಉಲಮಾ ಖ.ಸಿ ರವರ ಕೆಲವೊಂದು *ಕರಾಮತ್* ಗಳನ್ನು ನಿರೀಕ್ಷಿಸಿ.

ಮುಂದುವರಿಯುವುದು
ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...