Skip to main content

ರೋಗ ಮತ್ತು ಮರಣ

*ರೋಗ ಮತ್ತು ಮರಣ*

✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

ಎಲ್ಲಾ ಜೀವವಿರುವ ಶರೀರವು ಮರಣದ ರುಚಿ ನೋಡಲಿದೆ.ನಿಶ್ಚಯವಾಗಿಯೂ ನಿಮ್ಮ ಸತ್ಕರ್ಮದ ಪ್ರತಿಫಲ ಅಂತ್ಯದಿನದಲ್ಲಿ ನಿಮಗೆ ಪೂರ್ಣವಾಗಿ ನೀಡಲ್ಪಡುತ್ತದೆ.ಯಾರಾದರೂ ನರಕದಿಂದ ರಕ್ಷಣೆ ಪಡೆದು ಸ್ವರ್ಗ ಪ್ರವೇಶಿಸಿದರೆ ಖಂಡಿತವಾಗಿಯೂ ಅವನು ವಿಜಯಶಾಲಿಯಾಗುವನು.ಇಹಲೋಕ ಜೀವನ ವಂಚನೆಯ ಸರಕಾಗಿದೆ. *( ಪವಿತ್ರ ಕುರಾನ್ )*

*ನೆಬಿ ಸ.ಅ ಹೇಳಿದರು*

ಒಬ್ಬ ಮುಸ್ಲಿಮನು ಮತ್ತೊಬ್ಬ ಮುಸ್ಲಿಮನ ಮೇಲೆ ಮಾಡಬೇಕಾದ ಬಾಧ್ಯತೆಗಳು ಐದು.
1- ಸಲಾಮಿಗೆ ಉತ್ತರ ನೀಡುವುದು.
2-ರೋಗಿಯನ್ನು ಸಂದರ್ಶಿಸುವುದು
3-ಮಯ್ಯಿತ್ ಪರಿಪಾಲನೆಯಲ್ಲಿ ಭಾಗಿಯಾಗುವುದು.
4-ಆಹ್ವಾನ ಸ್ವೀಕರಿಸುವುದು.
5-ಸೀನಿದವನು *ಅಲ್ ಹಂದುಲಿಲ್ಲಾಹ್* ಹೇಳಿದರೆ ಪ್ರತಿಯಾಗಿ *ಯರ್ಹಮುಕಲ್ಲಾಹ್* ಹೇಳುವುದು.

ಒಬ್ಬ ಮುಸ್ಲಿಮನಿಗೆ ಯಾವುದೇ ಮುಸೀಬತ್ ಸಂಭವಿಸುವುದಿಲ್ಲ ಅಲ್ಲಾಹು ಅವನ ಪಾಪವನ್ನು ಕ್ಷಮಿಸಿ ಅಲ್ಲದೆ.ಎಷ್ಟರ ತನಕ ಅಂದರೆ ಕಾಲಿಗೆ ಚುಚ್ಚಿದ ಮುಳ್ಳಿನ ವೇದನೆಯ ಬದಲಿಗೂ ಅಲ್ಲಾಹು ಅವನ ಪಾಪವನ್ನು ಮನ್ನಿಸುತ್ತಾನೆ. *ಹದೀಸ್*

ಅಲ್ಲಾಹು ಒಬ್ಬನಿಂದ ಒಳಿತು ಬಯಸಿದರೆ ಅಲ್ಲಾಹು ಅವನನ್ನು ಕಷ್ಟಗಳ ಮೂಲಕ ಪರೀಕ್ಷಿಸುವನು. *ಹದೀಸ್*

*ರೋಗಿಯನ್ನು ಸಂದರ್ಶಿಸುವುದು*

ಒಬ್ಬ ವ್ಯಕ್ತಿಯನ್ನು ಆರೋಗ್ಯವಂತನಾಗಿಸುವುದು ಮತ್ತು ಅನಾರೋಗ್ಯ ಪೀಡಿತನನ್ನಾಗಿಸುವುದು ಅಲ್ಲಾಹು ಆಗಿದ್ದಾನೆ.ಅದು ಅಲ್ಲಾಹನ ಅನುಲ್ಲಂಘನೀಯ ತೀರ್ಮಾನವಾಗಿರುತ್ತದೆ.ಆರೋಗ್ಯವಂತನು ಅಲ್ಲಾಹನಿಗೆ ಶುಕ್ರ್ ಸಲ್ಲಿಸುವುದು ಮತ್ತು ರೋಗಿಯು ಸಬೂರು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.ಆದರೂ ರೋಗಕ್ಕೆ ಚಿಕಿತ್ಸೆ ಪಡೆಯುವುದು ಸುನ್ನತ್ ಆಗಿದೆ.ಕಾರಣ ಅಲ್ಲಾಹು ಯಾವುದೇ ರೋಗವನ್ನು ನೀಡುವುದಾದರೂ ಅದಕ್ಕೆ ಸೂಕ್ತವಾದ ಮದ್ದನ್ನು ಕೂಡಾ ಸ್ರಷ್ಟಿಸಿದ್ದಾನೆ.ಮರಣ ಒಂದನ್ನು ಬಿಟ್ಟು ಇತರ ಎಲ್ಲಾ ರೋಗಕ್ಕೂ ಮದ್ದು ಇದೆ.ರೋಗಿಯನ್ನು ಸಂದರ್ಶಿಸುವುದು ಸುನ್ನತ್ ಆಗಿದೆ.ರೋಗಿಯು ರೋಗದಿಂದ ಮುಕ್ತನಾಗಿ ಬದುಕುವ ಸಾಧ್ಯತೆಯಿದ್ದರೆ ಸಂದರ್ಶಿಸಿದವನು ಅವನ ರೋಗಶಮನಕ್ಕಾಗಿ ಪ್ರಾರ್ಥಿಸಿ ಮರಳಬೇಕು.ಈ ಕೆಳಗಿನ ಪ್ರಾರ್ಥನೆ ಏಳು ಬಾರಿ ಪ್ರಾರ್ಥಿಸುವುದು ಸುನ್ನತ್ ಆಗಿದೆ.

*أَسْأَلُ اللَّهَ الْعَظِيمَ رَبَّ الْعَرْشِ الْعَظِيمِ أَنْ يَشْفِيَك*

ರೋಗಿಯು ಆ ರೋಗದಿಂದ ಮರಣಹೊಂದುವ ಸಾಧ್ಯತೆ ಹೆಚ್ಚು ಎಂದು ಮನಗಂಡರೆ ತೌಬ ಮತ್ತು  ವಸಿಯ್ಯತ್ ಮಾಡಲು ಪ್ರೇರೇಪಿಸಿ ಅಲ್ಲಾಹನ ರಹ್ಮತಿನ ಮೇಲೆ  ಭರವಸೆಯಿಡಲು ಸೂಚಿಸಬೇಕು.

ಪ್ರತಿಯೊಬ್ಬರೂ ಮರಣದ ನೆನಪನ್ನು ಅಧಿಕಗೊಳಿಸುವುದು ಸುನ್ನತಾಗಿದೆ.ನೆಬಿ ಸ.ಅ ಹೇಳಿದರು
*ಸರ್ವ ಸುಖ ಸಂತೋಷಗಳನ್ನು ಇಲ್ಲವಾಗಿಸುವ ಮರಣದ ನೆನಪನ್ನು ನೀವು ಅಧಿಕಗೊಳಿಸಿರಿ.*ಆದುದರಿಂದಾಗಿದೆ ರೋಗಿಯನ್ನು ಸಂದರ್ಶಿಸುವಿಕೆ,ಮಯ್ಯಿತ್ ಪರಿಪಾಲನೆಯಲ್ಲಿ ಭಾಗಿಯಾಗುವಿಕೆ ಹಾಗು ಕಬರ್ ಸಂದರ್ಶನ ಇಸ್ಲಾಮಿನಲ್ಲಿ ಜಾರಿಯಾದದ್ದು....ತೌಬ ನಿರ್ವಹಿಸುವ ಮೂಲಕ,ಅಕ್ರಮಿಸಲ್ಪಟ್ಟವನಿಗೆ ತಿರುಗಿಸಿ ನ್ಯಾಯ ನೀಡುವ ಮೂಲಕ ಮರಣಕ್ಕೆ ತಯಾರಾಗಿರಬೇಕು.ರೋಗಿಯಾದವನು ಇದನ್ನು  ಪ್ರತ್ಯೇಕವಾಗಿ ಗಮನಿಸಬೇಕು.
ಪಾರತ್ರಿಕ ಆವಶ್ಯಕತೆ ಅಲ್ಲದವುಗಳಿಗಾಗಿ ಮರಣವನ್ನು ಆಶಿಸುವುದು ಕರಾಹತ್ ಆಗಿದೆ.ಆತ್ಮಹತ್ಯೆ ಮಾಡುವುದು ಹರಾಂ ಆಗಿದೆ.ನಾಳೆ ಪರಲೋಕದಲ್ಲಿ ಅಲ್ಲಾಹನ ಶಿಕ್ಷೆಗೆ ಗುರಿಯಾಗುವ ಪಾಪವಾಗಿದೆ.

*ನೆಬಿ ಸ.ಅ ಹೇಳಿದರು*

ನಿಮ್ಮಲ್ಲಿ ಒಬ್ಬಾತ ಅವನಿಗೆ ಸಂಭವಿಸಿದ ಮುಸೀಬತುಗಳಿಗಾಗಿ ಮರಣವನ್ನು ಆಶಿಸಬಾರದು.ಇನ್ನು ಮರಣವಲ್ಲದೆ ಬೇರೇನನ್ನು  ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಸಂದಿಗ್ಧ ಪರಿಸ್ಥಿತಿ ಬಂದರೆ ಈ ಕೆಳಗಿನ ದುವಾ ನಿರ್ವಹಿಸಬೇಕು.

*أَللَّهُمَّ أَحْيِنِي إِنْ كَانَتِ الْحَيَاةُ خَيْرًا لِي .. وَتَوَفَّنِي إِنْ كَانَتِ الْوَفَاةُ خَيْرًا لِي*

ಅರ್ಥ : ಅಲ್ಲಾಹುವೇ ,ನಾನು ಬದುಕಿರುವುದು ಉತ್ತಮವಾದರೆ ನನ್ನನ್ನು ಬದುಕಿಸು. ಅಲ್ಲ ನನಗೆ ಮರಣ ಉತ್ತಮವಾದರೆ ಮರಣವನ್ನು ನೀಡು.....

���������������

ಅಲ್ಲಾಹುವೇ ನಮ್ಮ ಜೀವನದಲ್ಲಿ ಸುಖ,ಸಮ್ರದ್ಧಿ,ಐಶ್ವರ್ಯವನ್ನು ನೀಡು.ಮರಣ ಹೊಂದುವ ವೇಳೆ ಪರಿಪೂರ್ಣ ಈಮಾನಿನೊಂದಿಗೆ ತೌಹೀದಿನ ವಾಕ್ಯ ಲಾಇಲಾಹ ಇಲ್ಲಲ್ಲಾಹ್ ಉಚ್ಛರಿಸಿ ಮರಣ ಹೊಂದುವ ಸಜ್ಜನರ ಸಾಲಿಗೆ ನಮ್ಮನ್ನು ಸೇರಿಸು ಅಲ್ಲಾಹ್....ಆಮೀನ್.....

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...