ತಬ್ಬಲಿಯಾದೆ ನಾವು
ತಂದೆಯ ಅಗಲುವಿಕೆಯಿಂದ ದುಃಖಪ್ತನಾದ ಗೆಳೆಯ ಇಸ್ಹಾಕ್ ಫಜೀರ್ ಬರೆದ ಕಣ್ಣೀರ ಕವನ..
*▫ತಬ್ಬಲಿಯಾದೆವು ನಾವು.▫*
ಸಹನೆಯ ಕಟ್ಟೆ ಒಡೆಯಿತು
ಸಹಿಸಲಾಗದೆ ಹೃದಯ ಮೇಣದ
ಬತ್ತಿಯಂತೆ ಕರಗಿ ಹೋಯಿತು
ನಂಬಲರ್ಹ ಮಾತು..
ಒಲವಿನ ಅಬ್ಬನ ಮರಣ
ಬೆಳಸಿದರು ಕಾಣದ ಜಗತ್ತಿಗೆ ಪಯಣ.!!
ಬಿಕ್ಕಿ ಬಿಕ್ಕಿ ಅತ್ತರೂ
ಅಬ್ಬ ಅಬ್ಬ ಎಂದು ಮೊರೆಯಿಟ್ಟರೂ
ಕೇಳಿಲ್ಲ..
ಹಿಂತಿರುಗಿ ನೋಡಿಲ್ಲ..
ನವ ನವ್ಯ ಶ್ವೇತ ಬಟ್ಟೆ ಧರಿಸಿ
ಹೊರಟೇ ಹೋದರು.
ಪಂಜರದೊಳಗೆ ಬಂಧಿಯಾದ
ಹಕ್ಕಿ ಪಕ್ಷಿಗಳಂತೆ
ಚಡಪಡಿಸಿದೆ ನಾ
ಕಡಲಾಚೆಯ ಕನಸಿನ ಲೋಕದಲಿ
ಭಾವುಕನಾದೆ..
ತೋಡಿನಂತೆ ಹರಿಯಿತು ಅಸ್ರುಧಾರೆ..!!
ಲಾಲಿಸಿ ಪಾಲಿಸಿ ವಿದ್ಯೆ ಬದ್ದಿ ಕಲಿಸಿ
ಎರಡಕ್ಷರ ಬರೆಯಲು
ಜನರೆಡೆಯಲು ಬೆರೆಯಲು
ಪಿತ ಕರ್ಮ ಪೂರೈಸಿ
ಪೌರುಷ ಮೆರೆದ ಸೌಮ್ಯ ನಡತೆಯ
ನಲಿವು ನಲುಮೆಯ ಅಬ್ಬ.
ನಿಮ್ಮಿಂದ ದೊರಕಿತು ಎನಗೆ
ಬರಹಕ್ಕೆ ನಿಲುಕದ ಲಾಭ..!!
ಓ ಅಬ್ಬಾ...
ನನ್ನ ಬಿಟ್ಟು ಅಗಲಿರುವಿರಿ ಹೌದಾ.??
ನಿಮ್ಮ ಉಳಿಸಲು ಪಟ್ಟ ಪ್ರಯತ್ನ
ವಿಫಲವಾಯಿತು ಅಬ್ಬ..
ನಿಮ್ಮ ಅಂತಿಮ ದರ್ಶನಗೈಯಲು
ಓಡೋಡಿ ಕಡಲು ದಾಟಿ ಊರು ಸೇರಲು
ಎಲ್ಲವೂ ಶೂನ್ಯವಾಯಿತು ಅಬ್ಬ..
ಎಲ್ಲವೂ ಶೂನ್ಯವಾಯಿತು..!!
ನಿಮ್ಮ ನೆನಪಿಸಲು ನಿಮಗಾಗಿ
ತಹ್ಲೀಲ್ ಖತಂ ಓದಲು
ನನ್ನೊಂದಿಗೆ ಕೆ.ಸಿ.ಎಫ್ ಸನ್ನದ್ದ ಪಡೆ
ಸಿದ್ದರಿರುವಾಗ
ಓ ಅಬ್ಬಾ ನೀವೆಷ್ಟು ಭಾಗ್ಯಶಾಲಿ.!!
ಯಾ ಅಲ್ಲಾಹ್ ಅಬ್ಬನೊಂದಿಗೆ
ಒಗ್ಗೂಡಿಸು ಸ್ವರ್ಗೀಯ ಉದ್ಯಾನದಲ್ಲಿ
ಮಗ್ಫರತ್ ಮರ್ಹಮತ್'ನ ಗೊಂಚಲು
ನೀಡಿ
ಬರ್ಝಕಿ ಜೀವನ ಪ್ರಕಾಶಪೂರಿತ ಗೊಳ್ಳಲಿ..!!
-ಸಿ ಐ ಇಸಾಕ್ ಫಜೀರ್
Comments