*ಉಳ್ಳಾಲ ಬೆಳಗಿಸಿದ ಮಹಾ ಪುರುಷ ಖುತುಬುಝ್ಝಮಾನ್ ಸಯ್ಯಿದ್ ಮದನಿ ಖ.ಸಿ*
ಭಾಗ - 02
�� ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
ಸಯ್ಯಿದ್ ಮದನಿ ಖ.ಸಿ ರವರ ಬಳಿ ಕಷ್ಟ ಕಾರ್ಪಣ್ಯಗಳನ್ನು ಹೇಳಿ ವಿವಿಧ ಊರುಗಳಿಂದ ಜನರು ಬರತೊಡಗಿದರು.ನಾನಾ ಸಮಸ್ಯೆಗಳನ್ನು ಹೊತ್ತ ಜನರು ಅವರ ಬಳಿ ಬಂದು ಪರಿಹಾರ ಪಡೆದು ಸಂತುಷ್ಟರಾಗಿ ಮರಳುತ್ತಿದ್ದರು.
ಅದ್ರಶ್ಯ ಜ್ಞಾನಗಳಿಂದ ಮತ್ತು ಕರಾಮತುಗಳಿಂದ ಸನ್ಮಾರ್ಗದ ಹಾದಿಗೆ ಜನರನ್ನು ಮರಳಿಸಿ ಇಸ್ಲಾಂ ಧರ್ಮಕ್ಕೆ ಶಕ್ತಿ ತಂಬಿದ ಅಲ್ಲಾಹನ ಇಷ್ಟದಾಸರುಗಳಾದ ಅವುಲಿಯಾಗಳ, ಸಯ್ಯಿದರುಗಳ ಪದವಿಗಳನ್ನು ಇನ್ನಷ್ಟು ಉನ್ನತಿಗೇರಿಸುತ್ತಾ ಅಲ್ಲಾಹನು ಅವರನ್ನು ಗೌರವಿಸುತ್ತಾನೆ.ಅವರು ಅಲ್ಲಾಹನಿಗೆ ಬಹಳಷ್ಟು ಹತ್ತಿರವಾಗುತ್ತಾರೆ.ಅಲ್ಲಾಹನ ಸಾಮೀಪ್ಯ ಬಯಸಿದಾಗ ಜನರಿಂದ ದೂರ ಸರಿದು ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸುತ್ತಾರೆ.
ಸದಾ ಪಾಪದ ಕೂಪದಲ್ಲಿ ಮುಳುಗಿರುವ ನಾವು ಅಲ್ಲಾಹನ ಸಜ್ಜನರಾದ ಅವುಲಿಯಾಗಳನ್ನು ಗೌರವಿಸುವವರಾಗೋಣ.ಅವರನ್ನು ನಮ್ಮ ಎಲ್ಲಕ್ಕಿಂತಲೂ ಮಿಗಿಲಾಗಿ ಪ್ರೀತಿಸುವವರಾಗೋಣ.ಅವರ ಗುಣಗಾನ ಮದಹ್ ಗಳನ್ನು ಪ್ರಶಂಸಿಸುವವರಾಗೋಣ.ಆ ಮೂಲಕ ಅಲ್ಲಾಹನಲ್ಲಿ ನಮ್ಮ ಪಾಪಗಳಿಗೆ ತೌಬ ಮತ್ತು ಇಸ್ತಿಗ್ಫಾರ್ ಮೂಲಕ ಕ್ಷಮೆ ಬೇಡುವವರಾಗೋಣ.ಅಲ್ಲಾಹನ ಇಷ್ಟದಾಸರುಗಳ ಮದಹ್ ಕೀರ್ತನೆಗಳನ್ನು ಹಾಡಿ ಹೊಗಳಿ ಅವರನ್ನು ತವಸ್ಸುಲ್ ಮಾಡುವ ಮೂಲಕ ಅಲ್ಲಾಹನ ರಹ್ಮತ್ ನಮಗೆ ಲಭಿಸುತ್ತದೆ.ಅವರನ್ನು ಅವರ ಪದವಿ,ಕರಾಮತುಗಳನ್ನು ವಿರೋಧಿಸುವವರಾದರೆ ಅಲ್ಲಾಹನ ಕಠಿಣವಾದ ಕ್ರೋಧಕ್ಕೆ ಮತ್ತು ಶಿಕ್ಷೆಗೆ ತುತ್ತಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ನಾನು ಇಲ್ಲಿ ಸಯ್ಯಿದ್ ಮದನಿ ತಂಗಳ್ ರವರ ಮದಹ್ ಪ್ರಕೀರ್ತನೆಯನ್ನು ಅವರ ಕರಾಮತು ಗಳನ್ನು ಚುಟುಕಾಗಿ ವಿವರಿಸುವೆನು.ಇಂಶಾ ಅಲ್ಲಾಹ್.
ಮದನಿ ತಂಗಳ್ ಉಳ್ಳಾಲ ಅವರು ಅಹ್ಲು ಬೈತ್ ಕುಟುಂಬ ಪರಂಪರೆಗೆ ಸೇರಿದ ಮತ್ತು ಮದೀನ ಮುನವ್ವರದಿಂದ ಬಂದವರಾಗಿದ್ದಾರೆ ಎಂಬುದು ನಿಸ್ಸಂದೇಹ ದ್ರಢಪಟ್ಟ ಕಾರ್ಯವಾಗಿದೆ.ಪ್ರವಾದಿ ಸ.ಅ ಮರ ಕುಟುಂಬ ಪರಂಪರೆಯಾದ ಅಹ್ಲು ಬೈತನ್ನು ಸ್ನೇಹಿಸುವುದು ನಮ್ಮ ಮೇಲೆ ಕಡ್ಡಾಯವಾಗಿದೆ ಎಂದು ಶಾಫಿ ಇಮಾಂ ( ರ.ಅ ) ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.
ಪ್ರವಾದಿ ( ಸ.ಅ ) ಹೇಳುತ್ತಾರೆ
*مثل أهل بيتي كسفينة نوح عليه السلام فمن ركب فيها نجا ومن تخلف عنها غرق*
ನನ್ನ ಅಹ್ಲುಬೈತಿನ ಉದಾಹರಣೆ ನೂಹ್ ನೆಬಿ ( ಅ.ಸ ) ರವರ ಹಡಗಿನಂತೆ.ಅದರಲ್ಲಿ ಹತ್ತಿದವರು ರಕ್ಷಣೆ ಹೊಂದಿದರು.ಹಡಗಿಗೆ ಹತ್ತದೇ ಯಾರು ದೂರ ಸರಿದರೋ ಅವರು ನಾಶ ಹೊಂದಿದರು.
ಸತ್ಯ ವಿಶ್ವಾಸಿಗಳನ್ನು ರಕ್ಷಿಸಲು ಮತ್ತು ಅಸತ್ಯ ವಿಶ್ವಾಸಿಗಳನ್ನು ನಾಶಪಡಿಸಲು ನೂಹ್ ನೆಬಿ ( ಅ.ಸ ) ರವರ ಕಾಲದಲ್ಲಿ ಅಲ್ಲಾಹನು ಜಲಪ್ರಳಯ ಸ್ರಷ್ಟಿಸಿದನು.ಅಲ್ಲಾಹನ ಆದೇಶದ ಮೇರೆಗೆ ಮೊದಲೇ ರೆಡಿ ಮಾಡಿಟ್ಟಿದ್ದ ಹಡಗಿನಲ್ಲಿ ನೂಹ್ ನೆಬಿ ಅ.ಸ ಮರ ಅನುಯಾಯಿಗಳಾದ ಸತ್ಯವಿಶ್ವಾಸಿಗಳು ಹಡಗನ್ನೇರಿ ಜಲಪ್ರಳಯದಿಂದ ರಕ್ಷಣೆ ಪಡೆದರು.ಅಸತ್ಯ ವಿಶ್ವಾಸಿಗಳು ಆ ಜಲಪ್ರಳಯದಲ್ಲಿ ಮುಳುಗಿ ಅಲ್ಲಾಹನ ಶಿಕ್ಷೆಗೆ ಗುರಿಯಾದರು.
ತನ್ನ ಅಹ್ಲುಬೈತನ್ನು ಸ್ನೇಹಿಸುವುದರಿಂದ ಅವರನ್ನು ತವಸ್ಸುಲ್ ಮಾಡುವುದರಿಂದ ರಕ್ಷೆ ಇದೆ.ಅವರನ್ನು ಕಡೆಗಣಿಸುವುದರಿಂದ ವಿನಾಶ ಇದೆಯೆಂಬ ಸ್ಪಷ್ಟವಾದ ಮುನ್ನೆಚ್ಚರಿಕೆಯನ್ನು ಪ್ರವಾದಿ ಸ.ಅ ತನ್ನ ಅಹ್ಲು ಬೈತನ್ನು ನೂಹ್ ನೆಬಿ ( ಅ.ಸ ) ಮರ ಹಡಗಿಗೆ ಹೋಲಿಕೆ ಮಾಡಿ ಉದಾಹರಿಸಿದ್ದಾರೆ.
ಮದನಿ ತಂಗಳ್ ಖ.ಸಿ ಅಹ್ಲುಬೈತ್ ಕುಟುಂಬದ ಶ್ರೇಷ್ಠ ಮನೆತನದ ಉಳ್ಳಾಲದ ಓರ್ವ ಮಹಿಳೆಯನ್ನು ಮದುವೆಯಾದರು.ಆದರೆ ಅವರ ದಾಂಪತ್ಯ ಜೀವನದಲ್ಲಿ ಮಕ್ಕಳುಂಟಾಗಲಿಲ್ಲ...
ಮುಂದುವರಿಯುವುದು....
ತಾವೂ ಓದಿದ ನಂತರ ಇತರರಿಗೆ ಶೇರ್ ಮಾಡಲು ಮರೆಯದಿರಿ...
�� ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Comments