Skip to main content

ಮರಣ ಮರಣಾ ನಂತರ

*ಮರಣ ಮರಣಾನಂತರ*

✍ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

�����������������

ಮರಣಾಸನ್ನವಾದ ವ್ಯಕ್ತಿಯನ್ನು ಖಿಬ್ಲಕ್ಕೆ ಮುಖ ಮಾಡಿಸಿ ಮಲಗಿಸಬೇಕು.ಶಹಾದತಿನ ವಾಕ್ಯ 'ಲಾಇಲಾಹ ಇಲ್ಲಲ್ಲಾಹ್' ಮರಣಾಸನ್ನವಾದ ವ್ಯಕ್ತಿಯ ಸಮೀಪ ಅವನಿಗೆ ಕೇಳುವಂತೆ ಹೇಳಬೇಕು.ಹೇಳು ಹೇಳು ಎಂದು ಒತ್ತಾಯಪಡಿಸಬಾರದು..ಅವನ ಬಳಿ ಯಾಸೀನ್ ಸೂರತ್ ಓದುತ್ತಿರಬೇಕು.ಮುಟ್ಟಾದವಳು,
ಜನಾಬತ್ ಸ್ನಾನ ಕಡ್ಡಾಯವಾದವರು ಅವನ ಹತ್ತಿರ ಬರಬಾರದು..
*ವ್ಯಕ್ತಿ ಮರಣ ಹೊಂದಿದ ತಕ್ಷಣ ಏನೆಲ್ಲಾ ಮಾಡಬೇಕು*
ಮಯ್ಯಿತಿನ ಎರಡು ಕಣ್ಣುಗಳನ್ನು ಚಿಮ್ಮಿಸಬೇಕು.ಗಡ್ಡ ಮೂಲೆಯನ್ನು ವಸ್ತ್ರದ ನಾರಿನಿಂದ ಮೇಲಕ್ಕೆ ಎಳೆದು ಕಟ್ಟಬೇಕು.ಮಯ್ಯಿತಿನ ಶರೀರದ ಜೋಯಿಂಟ್ ಗಳನ್ನು ಸಡಿಲಗೊಳಿಸಬೇಕು.ಮರಣ ಹೊಂದುವ ವೇಳೆ ಧರಿಸಿದ್ಧ ವಸ್ತ್ರವನ್ನು ಊರಿ ತೆಗೆದು ತೆಳುವಾದ ವಸ್ತ್ರವನ್ನು ಮಯ್ಯಿತಿನ ಮೇಲೆ ಹಾಸಬೇಕು.ಮಯ್ಯಿತಿನ ಹೊಟ್ಟೆಯ ಮೇಲೆ ಚಿಕ್ಕದಾದ ಸ್ವಲ್ಪ ಘನವಿರುವ ವಸ್ತುವನ್ನು ಇಡಬೇಕು.ಮಂಚದ ಮೇಲೆ ಖಿಬ್ಲಕ್ಕೆ ಮುಖ ಮಾಡಿಸಿ ಮಲಗಿಸಬೇಕು.ನಂತರ ಸ್ನಾನ,ಕಫನ್, ನಮಾಜು ಹಾಗೂ ದಫನ ಕಾರ್ಯವನ್ನು ನಡೆಸಬೇಕು.ಇವೆಲ್ಲವೂ ಫರ್ಳ್ ಕಿಫಾಯ ಆದ ಕಾರ್ಯವಾಗಿದೆ.

*ಮರಣದ ಬಳಿಕ ಮಯ್ಯಿತಿಗೆ ಉಪಕಾರ ಸಿಗುವ ಕಾರ್ಯಗಳು...*

ಮರಣ ಹೊಂದಿದ ವ್ಯಕ್ತಿಗೆ ನಾವು ಮಾಡುವ ದುಆದ ಪ್ರತಿಫಲ ಉಪಕಾರ ಸಿಗುತ್ತದೆ.
ಅಲ್ಲಾಹು ಹೇಳುತ್ತಾನೆ...

*ಅವರ ನಂತರ ಬಂದವರಿಗೂ ಅವರು ಹೇಳುವರು.ನಮ್ಮ ರಕ್ಷಕನೇ...ನಮಗೆ ಮತ್ತು ನಮಗಿಂತ ಮುಂಚೆ ಸತ್ಯ ವಿಶ್ವಾಸದೊಂದಿಗೆ  ಮರಣಹೊಂದಿದ ನಮ್ಮ ಸಹೋದರರಿಗೂ ಮಾಫಿ ನೀಡು...ಸತ್ಯ ವಿಶ್ವಾಸ ಸ್ವೀಕರಿಸಿದವರೊಂದಿಗೆ ನಮ್ಮ ಮನಸ್ಸುಗಳಲ್ಲಿ ಯಾವುದೇ ವಿದ್ವೇಷ ನೀನು ಉಂಟುಮಾಡಬೇಡ.ನಮ್ಮ ರಕ್ಷಕನೇ..ನಿಶ್ಚಯವಾಗಿಯೂ ನೀನು ತುಂಬಾ ದಯೆಯಿರುವವನೂ ಕರುಣಾನಿಧಿಯೂ ಆಗಿರುವಿ....*
(ಪವಿತ್ರ ಕುರಾನ್)

ನಾವು ಮಾಡುವ ದುಆದ ಪ್ರತಿಫಲದಿಂದ ಮರಣಹೊಂದಿದವರಿಗೆ ಉಪಕಾರ ಲಭಿಸುತ್ತದೆ ಎಂಬುದಕ್ಕೆ ಮೇಲಿನ ಆಯತ್ ಪುರಾವೆಯಾಗಿದೆ.ಅದೇರೀತಿ ಮರಣಹೊಂದಿದವರ ಮೇಲೆ ಕುರಾನ್ ಓದಿದರೆ ಅದರ ಪ್ರತಿಫಲ ಅವರಿಗೆ ಲಭಿಸುತ್ತದೆ ಎಂದು ನೆಬಿ ಸ.ಅ ಹೇಳಿದ್ದಾರೆ..

*ನಿಮ್ಮ ಮರಣಹೊಂದಿದವರ ಮೇಲೆ ಯಾಸೀನ್ ಸೂರತ್ ಓದಿರಿ*
(ಹದೀಸ್)

*ಅನ್ಸಾರಿಗಳಾದ ಸ್ವಹಾಬಿಗಳು ಅವರ ಮರಣಹೊಂದಿದವರ ಬಳಿ ಅಲ್ ಬಖರ ಸೂರತ್ ಓದುತ್ತಿದ್ದರು*
(ಹದೀಸ್)

ನಮ್ಮ ಪೂರ್ವಿಕ ವಿದ್ವಾಂಸರುಗಳು ಹೇಳಿದರು....
ಮರಣಹೊಂದಿದವರ ಮೇಲೆ ಕುರಾನ್ ಓದಿದವನು ಅವರ ಮೇಲೆ ಓದಿದುದರ ಪ್ರತಿಫಲವನ್ನು ಹದಿಯಾ ಮಾಡುವುದು ಕಡ್ಡಾಯವಾಗಿದೆ...
ಒಬ್ಬ ವ್ಯಕ್ತಿಯು ಅವನಿಗೆ ಕಡ್ಡಾಯವಾದ ಹಜ್ಜನ್ನು ನಿರ್ವಹಿಸದೇ ಮರಣಹೊಂದಿದ್ದರೆ ಆ ಮರಣಹೊಂದಿದ ವ್ಯಕ್ತಿಯ ವಾರೀಸುದಾರರು ಅವನ ಹಜ್ಜನ್ನು ನಿರ್ವಹಿಸುವುದು ಕಡ್ಡಾಯವಾಗಿದೆ..ಅದೇರೀತಿ ಮರಣಹೊಂದಿದ ವ್ಯಕ್ತಿಯು ಅವನಿಗೆ ಝಕಾತ್ ಕಡ್ಡಾಯವಾದ ಸಂದರ್ಭದಲ್ಲಿ ಝಕಾತ್ ನೀಡದೇ ಇದ್ದು ಬಳಿಕ ಮರಣಹೊಂದಿದರೆ ಅವನ ಝಕಾತನ್ನು ಅವನ ವಾರೀಸುದಾರರು ಸಂದಾಯ ಮಾಡುವುದು ಕಡ್ಡಾಯವಾಗಿದೆ....ಹೀಗೆ ನಿರ್ವಹಿಸಲ್ಪಟ್ಟ ಹಜ್ ಮತ್ತು ಝಕಾತಿನ ಪ್ರತಿಫಲ ಮರಣಹೊಂದಿದವನಿಗೆ ಲಭಿಸುತ್ತದೆ..

ಅದೇರೀತಿ ಮರಣಹೊಂದಿದವರ ಹೆಸರಿನಲ್ಲಿ ದಾನಧರ್ಮ ನೀಡಿದರೆ ಅದರ ಪ್ರತಿಫಲವು ಅವರಿಗೆ ಲಭಿಸುತ್ತದೆ.
*ಸಅದ್ ರಲಿಯಲ್ಲಾಹು ಅನ್ಹು ರವರ ಮರಣಹೊಂದಿದ ತಾಯಿಯ ಹೆಸರಿನಲ್ಲಿ ಒಂದು ಬಾವಿ ನಿರ್ಮಿಸಿ ಸ್ವದಕ ನೀಡಲು ನೆಬಿ (ಸ.ಅ) ಸಅದ್ ರ.ಅ ರವರೊಂದಿಗೆ ಆದೇಶವಿತ್ತರು.*

*ನೆಬಿ ಸ.ಅ ತನ್ನ ಮರಣಹೊಂದಿದ ಪ್ರಿಯಪತ್ನಿ ಖದೀಜ ರ.ಅ ರವರ ಹೆಸರಿನಲ್ಲಿ ಆಡನ್ನು ಕೊಯ್ದು ಮಾಂಸ ಮಾಡಿ ಖದೀಜ ರಳಿಯಲ್ಲಾಹು ಅನ್ಹಾ ರವರ ಸ್ನೇಹಿತೆಯರಿಗೆ ಕಳುಹಿಸುತ್ತಿದ್ದರು....*

ಮರಣಹೊಂದಿದವರ ಹೆಸರಿನಲ್ಲಿ ದಾನಧರ್ಮ ನೀಡಿದರೆ ಅವರಿಗೆ ಪ್ರತಿಫಲ ಲಭಿಸುತ್ತದೆ ಎಂಬುದು ಈ ಹದೀಸುಗಳಿಂದ ಸಾಬೀತಾಗುತ್ತದೆ.

✍ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760

Comments

Br.Taslim said…
485) Do the deceased (mayyit) benefit from the recitation of the Quran (Qabr)? ಮರಣ ಹೊಂದಿದವರಿಗೆ ಖುರ್’ಆನ್ ಪಾರಯಣದಿಂದ ಏನಾದರೂ ಪ್ರಯೊಜನ ಲಭಿಸುತ್ತದೆಯೆ?
http://brtaslim.com/wp-content/uploads/2016/12/2016-12-05-AUDIO-00000328.mp3

315) Why is it okay to do umra & hajj for a person who deceased and wrong to read Quran for him? ಮೈಯ್ಯತ್ತ್’ಗೆ ಹಜ್ಜ್ ಮತ್ತು ಉಮ್ರದ ಪ್ರತಿಫಲ ಲಭಿಸುತ್ತದಲ್ಲವೇ? ಹಾಗಾದರೆ ಖುರ್’ಆನ್ ಯಾಕೆ ಅಲ್ಲ?
http://brtaslim.com/wp-content/uploads/2017/06/11-online-audio-converter.com_.lite_.mp3

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...