Skip to main content

ಸುಬಹಿ ನಮಾಜಿನಲ್ಲಿ ಕುನೂತ್..ಭಾಗ 06

*ಸುಬಹಿ* *ನಮಾಝಿನಲ್ಲಿ* *ಖುನೂತ್.*

*ಭಾಗ* *--6*
�� *ಮುನೀರ್* *ಸಖಾಫಿ,* *ಸಾಲೆತ್ತೂರು.*
----------------------------

ಇಮಾಮ್ ದಾರಖುತ್ ನಿ ವರದಿ ಮಾಡುತ್ತಾರೆ;

عن الحسن عن انس بن مالك قال صليت مع رسول الله صلي الله عليه وسلم فلم يزل يقنت بعد الركوع في صلاة الغداة حتي فارقته -قال- وصليت خلف عمر بن الخطاب فلم يزل يقنت بعد الركوع في صلاة الغداة حتي فارقته.
(دارقطني 2/40 )
"ಅನಸ್ ಬಿನ್ ಮಾಲಿಕ್ (ರ) ರಿಂದ ಹಸನ್ (ರ) ವರದಿ ,ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ನಮಾಝ್ ಮಾಡಿದ್ದೇನೆ.ಅವರು ಸುಬಹಿ ನಮಾಝಿನಲ್ಲಿ ರೂಕೂಅ ನ ನಂತರ ವಫಾತ್ ತನಕ ಖುನೂತ್ ಓದಿದ್ದರು.ಉಮರ್ (ರ)ರೊಂದಿಗೂ ನಮಾಝ್ ಮಾಡಿದ್ದೇನೆ.ಅವರೂ ಕೂಡಾ ಖುನೂತ್ ಓದಿದ್ದರು".
(ದಾರಖುತ್ ನಿ 2/40 )
---------------------------
عن الحسن عن انس قال قنت مع رسول الله صلي الله عليه وسلم وعمر حتي فارقتهما.
(دار قطني 2/40)
"ಅನಸ್ ಬಿನ್ ಮಾಲಿಕ್ (ರ) ಹೇಳುತ್ತಾರೆ
,ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಮತ್ತು ಉಮರ್ (ರ)ರೊಂದಿಗೆ ಖುನೂತ್ ಓದಿದ್ದೇನೆ".
(ದಾರಖುತ್ ನಿ 2/40 )
------------------------ ---
عن علي وعمار انهما صليا خلف النبي صلي الله عليه وسلم -فقنت في صلاة الغداة.
(دارقطني 2/40)

ಅಲಿಯ್ಯ್ (ರ) ಮತ್ತು ಅಮ್ಮಾರ್ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಂದೆ ನಮಾಝ್ ಮಾಡಿದ್ದರು.ಸುಬಹಿ ನಮಾಝಿನಲ್ಲಿ ಅವರು ಖುನೂತ್ ಓದಿದ್ದರು".
(ದಾರಖುತ್ ನೀ 2/40)
------------------------ -----
عن سعيد بن عبد العزيز فيمن نسي القنوت في صلاة الصبح قال يسجد سجدتي السهو.
ಸಈದ್ ಬಿನ್ ಅಬ್ದುಲ್ ಅಝೀಝ್ (ರ) ಹೇಳುತ್ತಾರೆ;
"ಸುಬಹಿ ನಮಾಝಿನಲ್ಲಿ ಖುನೂತ್ ಮರೆತರೆ ಸಹ್ ವಿನ ಎರಡು ಸುಜೂದು ನಿರ್ವಹಿಸಬೇಕು".
(ದಾರಖುತ್ ನೀ 2/40)
------------------------ ---
عن ابن عباس قال ما زال رسول الله صلي الله عليه وسلم يقنت حتي فارق الدنيا
ಇಬ್ನ್ ಅಬ್ಬಾಸ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ ಖುನೂತ್ ಓದಿದ್ದರು".
(ದಾರಖುತ್ ನೀ 2/41).
------------------------ ----
عن عطاء ان رسول الله صلي الله عليه وسلم قنت في الفجر
ಅತ್ವಾಅ (ರ) ಹೇಳುತ್ತಾರೆ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಖುನೂತ್ ಓದಿದ್ದರು"
(ಮುಸನ್ನಫ್ ಇಬ್ನ್ ಅಬೀಶೈಬ 2/211)
------------------------ ---
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಸ್ವಹಾಬಿಗಳು ಖುನೂತ್ ಓದಿದ ಕುರಿತು ವರದಿಯಾದ ಕೆಲವೊಂದು ಹದೀಸ್ ಗಳನ್ನು ನೀವು ಓದಿದಿರಿ.
ಈ ಹದೀಸ್ ಗಳನ್ನು ಸ್ವಹೀಹ್ ಎಂದು ಹೇಳಿದವರ ಉದ್ದರಣಿಗಳನ್ನು ಮೇಲೆ ವಿವರಿಸಲಾಗಿದೆ.
ಇದೂ ಅಲ್ಲದೇ ನೂರಾರು ಹದೀಸ್ ಗಳು ಈ ವಿಷಯದಲ್ಲಿ ಇವೆ.ಎಲ್ಲಾ ಹದೀಸ್ ಗಳ ಆಶಯ ಒಂದೇ ಆಗಿರುವುದರಿಂದ ಎಲ್ಲವನ್ನೂ ಇಲ್ಲಿ ನೀಡಲು ಬಯಸುವುದಿಲ್ಲ.
ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತೆಂದು ತಿಳಿಯಲು ಈ ಹದೀಸ್ ಗಳೇ ಧಾರಾಳ ಸಾಕು.
ಖುನೂತ್ ಬಿದ್ ಅತ್ ಆಗಿದ್ದರೆ (ಸುಬಹಿ ನಮಾಝಿನ ನಂತರ(ಸುನ್ನಿಗಳು ಎಲ್ಲಿ ಖನೂತ್ ಓದುವರು ಎಂದೂ ಕೂಡಾ ತಿಳಿಯದ ಶತ ಮೂರ್ಖ ����) ಖುನೂತ್ ಓದುವುದು ವ್ಯಭಿಚಾರಕ್ಕಿಂತಲೂ ಮಹಾ ಪಾಪವೆಂದು ಮುಜಾಹಿದ್ ಬಾಲುಶ್ಶೇರಿ ಮೌಲವಿ ಹೇಳಿದ್ದಾನೆ.)ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಅನುಯಾಯಿಗಳು ಅದನ್ನು ನಿರ್ವಹಿಸುತ್ತಿರಲಿಲ್ಲ.ಮಾತ್ರವಲ್ಲ ಆ ಅನಾಚಾರವನ್ನು ಇಮಾಮರು ಅವರ ಗ್ರಂಥಗಳಲ್ಲಿ ಉಲ್ಲೇಖಿಸುತ್ತಿರಲಿಲ್ಲ. ಶಾಫಿಈ ಮದ್ಸ್ ಹಬ್ ನಲ್ಲಿ ಖುನೂತ್ ಸುನ್ನತ್ತೆಂದು ಹೇಳದ ಯಾವ ಇಮಾಮರೂ ಕೂಡಾ ಇಲ್ಲ.
ವಹ್ಹಾಬಿಗಳ ವಾದ ಪ್ರಕಾರ ಇಮಾಮರುಗಳು ಮಹಾಪಾಪವನ್ನು ಪ್ರಚಾರ ಮಾಡಿದರೇ?
ವಹ್ಹಾಬಿಗಳು ಇದಕ್ಕೆ ಉತ್ತರಿಸಬೇಕು.

ಮುಂದುವರಿಯುವುದು....

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...