ಆಝಾನ್ (ಬಾಂಗ್) ನ ಈ ಸತ್ಯವನ್ನು ತಿಳಿದಿರುವವರು ನಮ್ಮಲ್ಲಿ ಎಷ್ಟು ಜನರಿದ್ದಾರೆ
➖➖➖➖➖➖➖
✍ಗಫೂರ್ ಬಾಯಾರ್
➖➖➖➖➖➖➖
'ಆಝಾನ್'
ಭೂಮದ್ಯೆ ರೇಖೆಯ ಪೂರ್ವ ತೀರದಲ್ಲಿರುವ ಇಂಡೋನೇಷ್ಯಾ.
ಹಲವಾರು ಚಿಕ್ಕ ದ್ವೀಪಗಳೊಳಗೊಂಡ ದೇಶಗಳಾಗಿದೆ.
*ಜಾವ, ಸುಮಾತ್ರ, ಬೋರ್ನಿಯೋ, ಸೈಬಿಲ್* ಈ ಹೆಸರಿನ ದ್ವೀಪಗಳನ್ನೊಳಗೊಂಡ
ಇಂಡೋನೇಷ್ಯಾದ ಅಧೀನದಲ್ಲಿರುವ ಸೈಬಿಲಿನಲ್ಲಿ ಮುಂಜಾನೆ 5:30ಕ್ಕೆ ಪ್ರಭಾತ ನಮಾಜಿಗಿರುವ ಆಝಾನಿನ ಸಮಯವಾಯಿತು ಎಂದಿಟ್ಟುಕೊಳ್ಳಿ..
ಅಲ್ಲಿಯ ಸಾವಿರಾರು ಮಸೀದಿಗಳಿಂದ ಫಜರಿನ ಆಝಾನ್ ಮೊಳಗುತ್ತದೆ.
ಈ ಪ್ರಕ್ರಿಯೆ ಹಾಗೆ ಪಶ್ಚಿಮ ಇಂಡೋನೇಷ್ಯಾಕ್ಕೆ ವ್ಯಾಪಿಸುತ್ತದೆ.. ಪೂರ್ವ- ಪಶ್ಚಿಮ ಇಂಡೋನೇಷ್ಯಗಾರರು ಪರಸ್ಪರವಿರುವ ಸಮಯ ವ್ಯತ್ಯಾಸ ಒಂದುವರೆ ಗಂಟೆಯಾಗಿದೆ.
ಸೈಬಿಲಿನಲ್ಲಿ ಆಝಾನ್ ಮೊಳಗಿ ಮುಗಿದ ಕೂಡಲೇ ಇಂಡೋನೇಷ್ಯಾದ ರಾಜಧಾನಿಯಾದ ಜಕಾರ್ತದಲ್ಲಿ ಆಝಾನ್ ಆರಂಭವಾಗುತ್ತದೆ.
ನಂತರ ಸುಮಾತ್ರದಲ್ಲಿ.. ಒಂದುವರೆ ಗಂಟೆ ನಿಲ್ಲದೆ ಆಝಾನ್ ಮೊಳಗುತ್ತಾ ಇರುತ್ತದೆ.
ಇಂಡೋನೇಷ್ಯಾದ ಆಝಾನ್ ಶುರುವಾಗಿ ಮುಗಿಯುವ ಮೊದಲೇ ಹತ್ತಿರದ ಬರ್ಮಾದಲ್ಲಿ ಆರಂಭಿಸುತ್ತದೆ.
ಜಕಾರ್ತದ ಆಝಾನಿನ ಒಂದು ಗಂಟೆಯ ನಂತರ ಢಾಕಾದಲ್ಲಿ ಫಜರ್ ಆಝಾನಿನ ಸಮಯವಾಗುತ್ತದೆ.
ತದನಂತರ ಕಲ್ಕತ್ತಾದಿಂದ ಶ್ರಿನಗರ್ ವರೆಗೆ ಆಝಾನ್ ಮೊಳಗಳು ಶುರುವಾಗುತ್ತದೆ. ನಂತರ ಮುಂಬೈನಲ್ಲೂ, ಭಾರತದ ಇತರ ಪ್ರದೇಶಗಳಿಗೂ ಆಝಾನ್ ಮೊಳಗುವುದು ವ್ಯಾಪಕಗೊಳ್ಳುತ್ತದೆ.
[Indian Standard Time) ಸಮಯವಾದರೆ ಸೂರ್ಯೋದಯದ ಸಮಯದಲ್ಲಿ ವ್ಯತ್ಯಾಸ ಇರುತ್ತದೆ.
ಅಂದರೆ ಸೂರ್ಯ ಉದಯಿಸುವಾಗ ದೆಹಲಿಯಲ್ಲಿ ಕಾಣುವ ಯಥಾರ್ಥ ಸಮಯಾಂತಿರಿಕ್ಷ ಆಗಿರಲಿಕ್ಕಿಲ್ಲ ಮಂಗಳೂರಿನಲ್ಲಿ.
ಅಸ್ತಮಯವೂ ಕೂಡ.
ಹಾಗೆಯೇ..
ಗುಜರಾತ್ತ್ ಮತ್ತು ಅಸ್ಸಾಂನ ನಡುವಿನಲ್ಲಿ ಆಝಾನ್ ಮೊಳಗುವುದರಲ್ಲಿ 40 ನಿಮಿಷದ ಅಂತರವಿದೆ.
ಕರ್ನಾಟದಲ್ಲಿಯೇ ದಕ್ಷಿಣ ಕರ್ನಾಟಕವು ಉತ್ತರ ಕರ್ನಾಟಕವಾಗಿ ಆಝಾನಿನಲ್ಲಿ 12 ನಿಮಿಷದ ವ್ಯತ್ಯಾಸವಿದೆ.]
ಶ್ರೀನಗರಿನಲ್ಲಿಯು, ಪಾಕಿಸ್ತಾನದ ಸಿಯಾಲ್ ಕೊಟ್ಟಿನಲ್ಲಿಯು ಫಜರಿನ ಆಝಾನ್ ಒಂದೇ ಸಮಯದಲ್ಲಾಗಿದೆ.
ಆದರೆ ಕೊತ್ತ, ಕರಾಚಿ, ಹಾಗೂ ಬಲೂಚಿಸ್ತಾನಿನ ಗೊವಾದಾರ್ ಎಂಬ ಸ್ಥಳಗಳಿಗಿಂತ ಸಿಯಾಲ್ ಕೊಟ್ಟಿನ ಸಮಯಕ್ಕೆ 40 ನಿಮಿಷದ ಅಂತರವಿದೆ.
ಈ ವ್ಯತಿರಿಕ್ತವಾದ ಸಮಯವಷ್ಟೂ ಫಜರಿನ ಆಝಾನ್ ಹಲವಾರು ಮಸೀದಿಗಳಲ್ಲಿ ಮೊಳಗಿಕೊಂಡಿರುತ್ತದೆ.
ಬಲೂಚಿಸ್ತಾನಿನಲ್ಲಿ ಆಝಾನ್ ಮುಗಿಯುವ ಮೊದಲೇ ಅಫ್ಘಾನಿಸ್ತಾನದಲ್ಲಿ ಆರಂಭವಾಗುತ್ತದೆ.
ನಂತರ ಮಸ್ಕತ್ತಿನಲ್ಲಿ.
ಮಸ್ಕತ್ ಮತ್ತು ಬಾಗ್ದಾದ್ ನ ಮದ್ಯೆ ಒಂದು ಗಂಟೆಯ ಸಮಯ ವ್ಯತ್ಯಾಸವಿದೆ.
ಈ ಒಂದು ಗಂಟೆಯಲ್ಲಿ ಆಝಾನ್ ಮೊಳಗುವುದು ಮಸ್ಕತ್ತಿನಿಂದ ಸೌದಿ ಅರೇಬಿಯದವರೆಗೆ, ಅಲ್ಲಿಯ
ಮಕ್ಕಾದಲ್ಲಿಯೂ, ಮದೀನದಲ್ಲಿಯೂ ಮೊಳಗುತಾ ಇರುವುದು.
ಮುಂದುವರಿದು ಯೆಮನ್, ಯು.ಎ.ಇ, ಕುವೈಟ್, ಸುತ್ತಿ ಇರಾಖಿಗೆ ತಲುಪುತ್ತದೆ.
ಬಾಗ್ದಾದ್ ಹಾಗು ಈಜಿಪ್ಟಿನ ಅಲೆಕ್ಸಾಂಡ್ರಿಯಾದ ನಡುವೆ ಒಂದು ಗಂಟೆಯ ಸಮಯದ ವ್ಯತ್ಯಾಸವಿದೆ.
ಈ ಸಮಯದಲ್ಲಿ ಆಝಾನ್ ಮೊಳಗುವುದು ಸಿರಿಯದಲ್ಲಿಯೂ, ಈಜಿಪ್ಟಿನಲ್ಲಿಯೂ, ಸೋಮಾಲಿಯಾದಲ್ಲಿ ಮತ್ತು ಸುಡಾನ್ ನಲ್ಲಿಯೂ ಆಝಾನಿನ ಸಮಯ ಆಗುತ್ತದೆ.
ಅಲೆಕ್ಸಾಂಡ್ರಿಯ ಮತ್ತು ಇಸ್ತಾಂಬುಲ್ ನಲ್ಲಿ ಒಂದೇ ರೇಖಾಂಶದಲ್ಲಾಗಿದೆ.
ಪೂರ್ವ-ಪಶ್ಚಿಮ ತುರ್ಕಿಗಳ ಮದ್ಯೆ ಇರುವ ಸಮಯ ವ್ಯತ್ಯಾಸ ಒಂದುವರೆ ಗಂಟೆ.
ಈ ಸಮಯದಲ್ಲಿ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನ ವರೆಗೂ ಆಝಾನ್ ಮೊಳಗಿಕೊಂಡೇ ಇರುತ್ತದೆ..
ಅಲೆಕ್ಷಾಂಡ್ರಿಯ ಮತ್ತು ಲಿಬಿಯ ದೇಶದ ಟ್ರಿಪ್ಪೊಳಿಯ ಮದ್ಯೆದಲ್ಲಿ ಸಮಯ ವ್ಯತ್ಯಾಸ ಒಂದೂವರೆ ಗಂಟೆ.
ಈ ಸಮಯ ಆಫ್ರಿಕಾದಲ್ಲಿ ಸಂಪೂರ್ಣವಾಗಿ ಆಝಾನ್ ಮೊಳಗುವುದು ಕೇಳಬಹುದು.
ಹೀಗೆ.. ಇಂಡೋನೇಷ್ಯಾದಿಂದ ಆರಂಭಿಸಿದ *ಫಜರಿನ ಆಝಾನ್ ಕರೆ ಮೊಳಗುವುದು ಒಂಬತ್ತುವರೆ ಗಂಟೆಯ ನಂತರ ಅಟ್ಲಾಂಟಿಕ್ ನ ಪೂರ್ವ ತೀರಕ್ಕೆ ತಲುಪುತ್ತದೆ.*
_ನನೆಪಿಟ್ಟು ಕೊಳ್ಳಿ.. ಈ ವೇಳೆಯಷ್ಟು ಭೂಮಿಯಲ್ಲಿ ಆಝಾನ್ ಮೊಳಗುವುದು ನಿಲ್ಲುವುದಿಲ್ಲ..!!_
ಫಜರಿನ ಆಝಾನ್ ಅಟ್ಲಾಂಟಿಕ್ ತೀರಕ್ಕೆ ತಲುಪುವುದರ ಮೊದಲೇ ಪೂರ್ವ ಇಂಡೋನೇಷ್ಯಾದಲ್ಲಿ *ಲುಹರ್* ಆಝಾನಿನ ಸಮಯವಾಗಿರುತ್ತದೆ.!
ಅಲ್ಲಿ ಳುಹರ್ ಆಝಾನ್ ಮೊಳಗುತ್ತದೆ.
ಅಲ್ಲಿಯ ಳುಹರಿನ ಆಝಾನ್ ಮಸ್ಕಟ್ಟಿಗೆ ತಲುಪುವ ಮೊದಲೇ ಪುನಃ ಪೂರ್ವ ಇಂಡೋನೇಷ್ಯಾದಲ್ಲಿ *ಅಸರ್* ಆಝಾನ್ ಮೊಳಗುತ್ತದೆ.
ಅಸರ್ ಆಝಾನ್ ಮೊಳಗಿ ಮುಗಿದಿರುತ್ತದೆ!.
ಈ ಅಸರಿನ ಆಝಾನ್ ಢಾಕ ತಲುಪುವುದಕ್ಕಿಂತ ಮುಂಜೆಯೇ ಪೂರ್ವ ಇಂಡೋನೇಷ್ಯಾದಲ್ಲಿ *ಮಗ್ರಿಬ್* ನ ಆಝಾನ್ ಕರೆಯುತ್ತದೆ.
ಸುಮಾತ್ರಿಯಲ್ಲಿ ಮಗ್ರಿಬ್ ಆಗುತಲೇ, ಸೈಬಿಲಿಯಲ್ಲಿ *ಇಶಾ* ಆಝಾನ್ ಮೊಳಗುತ್ತದೆ.!!
ಇಂಡೋನೇಷ್ಯಾದಲ್ಲಿ *ಫಜರ್* ಆಝಾನ್ ಕರೆಯುವಾಗ ಆಫ್ರಿಕಾದಲ್ಲಿ *ಇಶಾ* ಆಝಾನ್ ಮೊಳಗುತಿರುತ್ತದೆ.
ಭೂಗೋಳದ ಇನ್ನೊಂದು ತುದಿಯಲ್ಲಿ ಈ ಪ್ರಕ್ರಿಯೆ ಪುನರಾವರ್ತನೆಗೊಳ್ಳುತ್ತಾ ಇರುತ್ತದೆ....!
ಉತ್ತರ ಅಮೇರಿಕದಲ್ಲಿಯೂ, ಯುರೋಪಿನಲ್ಲೂ ಹಾಗು ದಕ್ಷಿಣ ಅಮೇರಿಕದಲ್ಲಿಯೂ ಸ್ಥಿತಿ ಇದೇ ಆಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ದಿನರಾತ್ರಿಯ 24 ಗಂಟೆಗಳೂ ಈ ಭೂಮಿ ಲೋಕದಲ್ಲಿ....
*ಅಲ್ಲಾಹು ಆಗಿದ್ದಾನೆ ಅತೀ ಉತ್ತಮನು,*
*ಅಲ್ಲಾಹು ಅಲ್ಲದೆ ಆರಾಧ್ಯನಿಲ್ಲ,*
*ಮುಹಮ್ಮದ್ ಅಲ್ಲಾಹುವಿನ ದೂತನಾಗಿದ್ದಾರೆ,*
*ನಮಾಝಿಗೆ ಬನ್ನಿ,*
*ವಿಜಯಕ್ಕೆ ಬನ್ನಿ....*
ಎಂಬ ಆಶಯವಿರುವ ಆಝಾನಿನ ಮಂತ್ರಧ್ವನಿ ಮೊಳಗುತಲೇ ಇರುತ್ತದೆ.
✍ *ಗಫೂರ್ ಬಾಯಾರ್*
Comments