Skip to main content

ಅಲ್ಲಾಹನ ಮಲಕುಗಳು

ಅಲ್ಲಾಹನ ಮಲಕುಗಳು ತಮಗೆಷ್ಟು ಗೊತ್ತು..

*✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ*

ಮಲಕುಗಳು ಅಲ್ಲಾಹನ ವಿಶಿಷ್ಟವಾದ ಸಮೂಹವಾಗಿದೆ...ಅವರೊಂದಿಗೆ ಅಲ್ಲಾಹು ಏನು ಆದೇಶಿಸುತ್ತಾನೋ ಅದನ್ನು ಧಿಕ್ಕರಿಸದೇ ತಕ್ಷಣ ನಿರ್ವಹಿಸುವವರಾಗಿದ್ದಾರೆ.ಮಲಕುಗಳನ್ನು ಅಲ್ಲಾಹು ಪ್ರಕಾಶದಿಂದ ಸ್ರಷ್ಟಿಸಿದ್ದಾನೆ.ಮನುಷ್ಯರಿಗೆ ಸಾಮಾನ್ಯವಾಗಿ ಇರತಕ್ಕಂತಹ ತಿನ್ನುವಿಕೆ,ಕುಡಿಯುವಿಕೆ,ನಿದ್ರೆ,ಹಸಿವು, ದಾಹ,ಬಳಲಿಕೆ,ವಿವಾಹ,ಸಂತಾನೋತ್ಪತ್ತಿ ಮುಂತಾದ ಯಾವುದೇ ಕಾರ್ಯಗಳು ಮಲಕುಗಳಿಗೆ ಇಲ್ಲ....
ಅಲ್ಲಾಹು ಮಲಕುಗಳನ್ನು ವಿಭಿನ್ನ ಪ್ರಕ್ರತಿಯಲ್ಲಿ ಸ್ರಷ್ಟಿಸಿದ್ದಾನೆ....ಕೆಲವೊಂದು ಮಲಕುಗಳಿಗೆ ಅಲ್ಲಾಹು ವಿಶೇಷವಾದ ಕೆಲಸವನ್ನು ಕೊಟ್ಟಿದ್ದಾನೆ...ಪ್ರಮುಖ ಹತ್ತು ಮಲಕುಗಳಿಗೆ ಈ ಕೆಳಗಿನ ಕೆಲಸಗಳನ್ನು ನೀಡಿದ್ದಾನೆ...

1-ಜಿಬ್ರೀಲ್(ಅ.ಸ)-ಅಲ್ಲಾಹನ ಅಂಬಿಯಾ ಮುರ್ಸಲುಗಳಿಗೆ ವಹ್ಯ್ ತಲುಪಿಸುವುದು..
2-ಮೀಕಾಯೀಲ್ (ಅ.ಸ)-ಸಿಡಿಲು ಮಿಂಚು,ಗಾಳಿ ಆಹಾರದ ಖಾತೆ..
3-ಇಸ್ರಾಫೀಲ್ (ಅ.ಸ)-ಅಂತ್ಯದಿನ ಸಮೀಪಿಸುವಾಗ *ಸೂರ್* ಎಂಬ ಕಹಳೆಯಲ್ಲಿ ಊದುವುದು..
4-ಅಝ್ರಾಯೀಲ್ (ಅ.ಸ)-ರೂಹ್ ಹಿಡಿಯುವುದು..
5-6-ಮುಂಕರ್ ಹಾಗು ನಕೀರ್ (ಅ.ಸ)-ಖಬರನಲ್ಲಿ ವಿಚಾರಣೆ ನಡೆಸುವುದು..
7-8-ರಖೀಬ್ ಹಾಗು ಅತೀದ್ (ಅ.ಸ)-ಮನುಷ್ಯರ ಎಡಬಲಗಳಲ್ಲಿದ್ದು ಮನುಷ್ಯರ ಒಳಿತು ಕೆಡುಕುಗಳನ್ನು ದಾಖಲಿಸುವುದು..
9-ರಿಲ್ವಾನ್ (ಅ.ಸ)-ಸ್ವರ್ಗವನ್ನು ಕಾಯುವುದು...
10-ಮಾಲಿಕ್ (ಅ.ಸ)-ನರಕವನ್ನು ಕಾಯುವುದು...

ಈ ಮೇಲೆ ತಿಳಿಸಿದ ಹತ್ತು ಮಲಕುಗಳ ಕುರಿತು ಕಲಿಯುವುದು ಮನುಷ್ಯನಿಗೆ ಕಡ್ಡಾಯವಾಗಿದೆ..

ಮಲಕುಗಳು ಆಕಾಶದಲ್ಲೂ ಭೂಮಿಯಲ್ಲೂ ವಾಸಿಸುತ್ತಾರೆ...

ಅಲ್ಲಾಹನು ಹೇಳುತ್ತಾನೆ....

*ولله جنود السموات والأرض*

ಆಕಾಶ ಭೂಮಿಗಳಲ್ಲಿ ಅಲ್ಲಾಹನ ಸಮೂಹವಾದ ಮಲಕುಗಳು ಅಲ್ಲಾಹನಿಗಿದ್ದಾರೆ...

ಅಲ್ಲಾಹನ ಅಸಾಮಾನ್ಯ ಸಾಮರ್ಥ್ಯ ಮತ್ತು ತಂತ್ರಗಾರಿಕೆಯನ್ನು ಪ್ರತ್ಯಕ್ಷಪಡಿಸಲು ಆಕಾಶ ಭೂಮಿಗಳಲ್ಲಿ ಮಲಕುಗಳನ್ನು ಸ್ರಷ್ಟಿಸಿದ್ದಾನೆ ಹೊರತು ಅಲ್ಲಾಹನಿಗೆ ಮಲಕುಗಳ ಅಗತ್ಯತೆ ಇದ್ದು ಅಲ್ಲ...

ಮಲಕುಗಳಲ್ಲಿ ಎರಡು ವಿಬಾಗ ಇದೆ..ರಹ್ಮತಿನ ವಿಭಾಗ ಮತ್ತು ಶಿಕ್ಷೆಯ ವಿಭಾಗ...
ರಹ್ಮತಿನ ಮಲಕುಗಳು ರಾತ್ರಿ ಹಗಲು ಬೇರೆ ಬೇರೆ ಗುಂಪುಗಳಾಗಿ ಬಂದು ಮನುಷ್ಯರನ್ನು ಅವಘಡ, ಮುಸೀಬತುಗಳಿಂದ ಕಾಪಾಡಿ ಸಂರಕ್ಷಣೆ ನೀಡುತ್ತಾರೆ....

*ಪ್ರವಾದಿ (ಸ.ಅ) ಹೇಳುತ್ತಾರೆ....*

ನಿಮ್ಮೆಡೆಗೆ ಮಲಕುಗಳಲ್ಲಿ ಒಂದು ಗುಂಪು ರಾತ್ರಿಗಳಲ್ಲಿ ತಮ್ಮೊಂದಿಗಿರುವರು.ಮತ್ತೊಂದು ಗುಂಪು ಹಗಲಿನಲ್ಲಿ ತಮ್ಮೊಮದಿಗಿರುವರು..ರಾತ್ರಿ ತಮ್ಮೊಂದಿಗಿರುವ ಮಲಕುಗಳು ಅಸರ್ ನಮಾಜಿಗೆ ಮುಂಚೆ ಭೂಮಿಗೆ ಇಳಿದು ಬರುವರು..ಹಗಲು ತಮ್ಮೊಂದಿಗಿರುವ ಮಲಕುಗಳು ಸುಬಹ್ ನಮಾಜಿಗೆ ಮುಂಚೆ ಭೂಮಿಗೆ ಇಳಿದು ಬರುವರು..ಈ ಎರಡೂ ನಮಾಜುಗಳಲ್ಲೂ ಈ ಎರಡು ಗುಂಪುಗಳು ಒಗ್ಗೂಡುತ್ತಾರೆ.
(ಸುಬಹ್ ನಮಾಜಿನ ಮುಂಚೆ ಬರುವ ಮಲಕುಗಳು ಅಸರ್ ನಮಾಜಿನ ನಂತರ ಹೋಗಲಿರುವರು.ಅಸರ್ ನಮಾಜಿನ ಮುಂಚೆ ಬರುವ ಮಲಕುಗಳು ಸುಬಹ್ ನಮಾಜಿನ ನಂತರ ಹೋಗಲಿರುವರು.ಈ ಎರಡು ನಮಾಜುಗಳಲ್ಲಿ ಎರಡು ಗುಂಪುಗಳು ಇರುತ್ತವೆ..ಇಳಿದು ಬಂದ ಒಂದು ವಿಭಾಗ ಮತ್ತು  ಆಕಾಶರೋಹಣಗೈಯ್ಯಲಿರುವ ಮತ್ತೊಂದು ವಿಭಾಗ)
ಅಲ್ಲಾಹನು ಈ ಮಲಕುಗಳೊಂದಿಗೆ ತನ್ನ ದಾಸರ ಕುರಿತು ಕೇಳುವನು..
(ಅಲ್ಲಾಹನು ಮಲಕುಗಳಿಗಿಂತ ತನ್ನ ದಾಸರ ಸ್ಥಿತಿಗತಿ ಉತ್ತಮವಾಗಿ ತಿಳಿಯುವವನಾಗಿದ್ದಾನೆ)
ಮಲಕುಗಳೇ....ತನ್ನ ದಾಸರನ್ನು ಸಂದರ್ಶಿಸಿ ಬಂದಿದ್ದೀರಿ ತಾನೇ?
ತನ್ನ ದಾಸರು ಏನು ಮಾಡುತ್ತಿದ್ದಾರೆ?
ಆಗ ಮಲಕುಗಳು ಹೇಳುವರು....
ಅಲ್ಲಾಹುವೇ ತನ್ನ ದಾಸರ ಬಳಿ ಹೋಗುವಾಗಲೂ ಅಲ್ಲಿಂದ ನಿರ್ಗಮಿಸುವಾಗಲೂ ತನ್ನ ದಾಸರು ನಮಾಜು ಮಾಡುತ್ತಿದ್ದಾರೆ.ಅವರ ಪಾಪಗಳನ್ನು ಮನ್ನಿಸು ಅಲ್ಲಾಹುವೇ.....

ಮಲಕುಗಳು ರಾತ್ರಿ ಹಾಗು ಹಗಲು ವಿಭಿನ್ನ ಗುಂಪುಗಳಾಗಿ ಜನರೆಡೆಗೆ ಇಳಿದು ಬರುವರು ಹಾಗೂ ಪಾಪಗಳನ್ನು ಮನ್ನಿಸಲು ಅಲ್ಲಾಹನೊಂದಿಗೆ ಬೇಡುವರೆಂಬುದು ಈ ಹದೀಸಿನಿಂದ ಸಾಬೀತಾಗುತ್ತದೆ....

ಸತ್ಯ ನಿಷೇಧಿಗಳೊಂದಿಗಿನ ಯುದ್ಧದ ಸಂದರ್ಭದಲ್ಲೂ ಮುಸ್ಲಿಮರಿಗೆ ಶಕ್ತಿ ತುಂಬಿ ಇಸ್ಲಾಂ ಧರ್ಮವನ್ನು ಸಂರಕ್ಷಿಸಲು ಮಲಕುಗಳು ಆಕಾಶದಿಂದ ಇಳಿದುಬರುವರು..ಇದಕ್ಕೆ ಬದರ್, ಖಂದಕ್,ಹುನೈನ್ ಯುದ್ಧಗಳಲ್ಲಿ ಮಲಕುಗಳು ಪಾಲ್ಗೊಂಡಿದ್ದಾರೆ ಎಂಬ ಅಲ್ಲಾಹನ ಆಯತುಗಳು ಸ್ಪಷ್ಟ ಪುರಾವೆಯಾಗಿದೆ......

ಬದರ್ ಯುದ್ಧದ ಸಂದರ್ಭದಲ್ಲಿ ಮಲಕುಗಳು ಇಳಿದು ಬಂದುದರ ಕುರಿತು ಅಲ್ಲಾಹನು ಹೇಳುತ್ತಾನೆ...

إذ تستغيثون ربكم فاستجاب لكم أني ممدكم بالف من الملئكة مردفين

ನೀವು ನಿಮ್ಮ ರಕ್ಷಕನೊಂದಿಗೆ ಸಹಾಯ ಬೇಡಿದ ಸಂದರ್ಭ ನೆನೆಸಿರಿ.ನಿರಂತರ ಸಾವಿರ ಮಲಕುಗಳನ್ನು ಕಳುಹಿಸಿ ನಾನು ನಿಮಗೆ ಸಹಾಯ ನೀಡುವೆನೆಂದು ಅವನು ಆಗ ನಿಮಗೆ ಉತ್ತರ ನೀಡಿದ.

ಖಂದಕ್ ಯುದ್ಧದ ಸಮಯದಲ್ಲಿ ಮಲಕುಗಳು ಇಳಿದು ಬಂದುದರ ಕುರಿತು ಅಲ್ಲಾಹನು ಹೇಳುತ್ತಾನೆ....

يأيها ٱلذين ءامنواٱذكروا نعمة الله عليكم إذ جاءتكم جنود فأرسلنا عليهم ريحا وجنودا لم تروها وكان ٱلله بما تعملون بصيرا

*ಸತ್ಯ ವಿಶ್ವಾಸಿಗಳೇ....ನಿಮ್ಮ ಬಳಿ ಬ್ರಹತ್ ಸೈನ್ಯವು ಬಂದಾಗ ಅವರನ್ನು ಎದುರಿಸಲು ಗಾಳಿಯೊಂದನ್ನು ಮತ್ತು ನೀವು ಕಾಣಲು ಅಸಾಧ್ಯವಾದ ಸೈನ್ಯವನ್ನು ಕಳುಹಿಸಿದ ಸಂದರ್ಭದಲ್ಲಿ ಅಲ್ಲಾಹು ನಿಮಗೆ ನೀಡಿದ ಅನುಗ್ರಹಗಳನ್ನು ನೀವು ನೆನಪಿಸಿರಿ....*

ಹುನೈನ್ ಯುದ್ಧದ ಸಂದರ್ಭದಲ್ಲಿ ಅಲ್ಲಾಹನ ಮಲಕುಗಳು ಇಳಿದು ಬಂದುದರ ಕುರಿತು ಅಲ್ಲಾಹನು ಹೇಳುತ್ತಾನೆ.....

ثم أنزل الله سكينته على رسوله وعلى المؤمنين وأنزل جنودا لم تروها وعذب اللذين كفروا وذلك جزاء الكفرين..

*ನಂತರ ಅಲ್ಲಾಹು ಅವನ ದೂತನಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಮನಸ್ಸಮಾಧಾನ ನೀಡಿ-ನೀವು ಕಾಣದ ಕೆಲವು ಸೈನ್ಯವನ್ನೂ ಇಳಿಸಿ ಸತ್ಯನಿಷೇಧಿಗಳನ್ನು ಅವನು ಶಿಕ್ಷಿಸಿದನು...ಅದು ಸತ್ಯನಿಷೇಧಿಗಳ ಪ್ರತಿಫಲವಾಗಿದೆ...*

ಅವಘಡ,ಮುಸೀಬತ್,ಕಷ್ಟಗಳಲ್ಲಿ ಮನುಷ್ಯರು ಸಿಲುಕಿದಾಗ ಅವರನ್ನು ಸಂರಕ್ಷಿಸಲು ಅಲ್ಲಾಹನ ಮಲಕುಗಳು ಇಳಿದು ಬರುವರು ಎಂದು ಮೇಲಿನ ಆಯತುಗಳಿಂದ ತಿಳಿಯುತ್ತದೆ...

ಮಲಕುಗಳ ಸಂಖ್ಯೆ ಅಲ್ಲಾಹನಲ್ಲದೆ ಬೇರಾರು ತಿಳಿದಿಲ್ಲ..
ನೆಬಿ ಸ.ಅ ಹೇಳುತ್ತಾರೆ...ನೀವು ಕಾಣದ್ದನ್ನು ನಾನು ಕಾಣುತ್ತೇನೆ.ನೀವು ಕೇಳದ್ದನ್ನು ನಾನು ಕೇಳುತ್ತೇನೆ...ಆಕಾಶದಲ್ಲಿ ಯಾವುದೇ ಒಂದು ಮಲಕ್ ಸುಜೂದ್ ನಿರ್ವಹಿಸದ ನಾಲ್ಕು ಬೆರಳಿಡಲು ಬೇಕಾಗುವಷ್ಟು ಜಾಗ ಕೂಡಾ ಕಾಣಲು ಸಾಧ್ಯವಿಲ್ಲ...

ಮತ್ತೊಂದು ಹದೀಸಿನಲ್ಲಿ ಕಾಣಬಹುದು....

ಮಿಹ್ರಾಜಿನ ರಾತ್ರಿ ನೆಬಿ (ಸ.ಅ) ಏಳನೇ ಆಕಾಶದಲ್ಲಿ ಬೈತುಲ್ ಮಹಮೂರ್ ಎಂಬ ವಿಶಿಷ್ಠ ಕಟ್ಟಡವನ್ನು ಕಂಡರು..ಇಬ್ರಾಹಿಂ ನೆಬಿ (ಅ.ಸ) ಅದಕ್ಕೆ ಒರಗಿ ಕುಳಿತುಕೊಂಡಿದ್ದರು..ಆ ಬೈತುಲ್ ಮಹಮೂರ್ ಎಂಬ ವಿಶಿಷ್ಠ ಕಟ್ಟಡದೊಳಗೆ ದಿನಾಲೂ ಎಪ್ಪತ್ತು ಸಾವಿರ ಮಲಕುಗಳು ಪ್ರವೇಶಿಸುತ್ತಾರೆ....ಒಮ್ಮೆ ಪ್ರವೇಶಿಸಿ ಹೊರ ಹೋದ ಮಲಕುಗಳು ಮತ್ತೆ ಆ ಬೈತುಲ್ ಮಹಮೂರಿನೊಳಗೆ ಪ್ರವೇಶಿಸುವುದಿಲ್ಲ..
ಮಲಕುಗಳ ಸಂಖ್ಯೆ ಎಷ್ಟಿದೆಯೆಂದು ಮನುಷ್ಯನ ಊಹೆಗೂ ನಿಲುಕದ ಕಾರ್ಯವಾಗಿದೆ. ಎಂದು ಮೇಲಿನ ಹದೀಸ್ ಗಳಿಂದ ತಿಳಿಯುತ್ತದೆ....

✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

+918105745760

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...