Skip to main content

ಸುಬಹಿ ನಮಾಜಿನಲ್ಲಿ ಕುನೂತ್..ಭಾಗ 15

*ಸುಬಹಿ* *ನಮಾಝಿನಲ್ಲಿ* *ಖುನೂತ್.*

*ಭಾಗ* *--15*
�� *ಮುನೀರ್* *ಸಖಾಫಿ,* *ಸಾಲೆತ್ತೂರು.*
*-----------------------------------*

ಸುಬಹಿ ನಮಾಝಿನಲ್ಲಿ ಖುನೂತ್ ಇದೆಯೆಂದು ಪವಿತ್ರ ಖುರ್ ಆನಿನ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮರುಗಳು ಹೇಳಿದ್ದನ್ನು,ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಸ್ವಹಾಬಿಗಳು ಖುನೂತ್ ಓದಿದ ಬಗ್ಗೆ ಇದಕ್ಕಿಂತ ಮುಂಚಿನ ಭಾಗಗಳಲ್ಲಿ  ಹದೀಸುಗಳಿಂದ ಓದುಗರು ಓದಿದ್ದೀರಿ.
ಖುನೂತ್ ಸುನ್ನತ್ತಿದೆಯೆಂದು ಶಾಫಿಈ ಮದ್ಸ್ ಹಬಿನ ಎಲ್ಲಾ ವಿಧ್ವಾಂಸರು ಹೇಳಿದ್ದನ್ನು ಈಗಾಗಗಲೇ ವಿವರಿಸಿಯಾಗಿದೆ.ಖುನೂತ್ ಓದುವುದಕ್ಕೆ ವಿರುದ್ಧವಾದವೆಂದು ಪ್ರತ್ಯಕ್ಷದಲ್ಲಿ ತೋಚುತ್ತಿರುವ ಹದೀಸುಗಳಿಗೆ ಇಮಾಮರುಗಳು ಹೇಳಿದ ವ್ಯಾಖ್ಯಾನವನ್ನು ಗ್ರಂಥಗಳ ಉದ್ಧರಣೆ ಸಹಿತ ವಿವರಿಸಿದ್ದೇನೆ.
ಇದೆಲ್ಲವನ್ನೂ ಕಲಿತರೆ ಒಮ್ಮೆಯೂ ಕೂಡಾ ಆತನಿಗೆ ಖುನೂತ್ ನಿಷೇಧಿಸಲು ಸಾಧ್ಯವಿಲ್ಲ.ಖುನೂತ್ ನ ಬಗ್ಗೆ ಲೇಖನ ಆರಂಭಿಸಿದ್ದನಿಂದಲೇ ವಹ್ಹಾಬಿಗಳೊಂದಿಗೆ ಕೇಳುತ್ತಾ ಬಂದಿದ್ದೇನೆ.
" ಸುಬಹಿ ನಮಾಝಿನಲ್ಲಿ ಖುನೂತ್ ಓದುವುದು ಬಿದ್ ಅತ್ ಎಂದು, ಅದು ವ್ಯಭಿಚಾರಕ್ಕಿಂತಲೂ ಮಹಾಪಾಪವೆಂದೂ ನಿಮ್ಮ ಬಡಾ ಮೌಲವಿಗಳು ಹೇಳಿದ ಕ್ಲಿಪ್ ಗಳು ನಮ್ಮ ಕೈಯ್ಯಲ್ಲಿದೆ.ಇದನ್ನು ಪ್ರಮಾಣಗಳ ಆಧಾರದಲ್ಲಿ ನಿಮಗೆ ಸಾಬೀತುಪಡಿಸಲು ಸಾಧ್ಯವೇ?"
ಇದು ವರೆಗೂ ಆ ಧೈರ್ಯವನ್ನು ವಹ್ಹಾಬಿಗಳು ತೋರ್ಪಡಿಸಲಿಲ್ಲ.
ಮುಂದೆಯೂ ಅದು ಅವರಿಂದ ಸಾಧ್ಯವಿಲ್ಲ.
ಖುನೂತ್ ಬಗ್ಗೆ ನಾನು  ಇಷ್ಟೆಲ್ಲಾ ಬರೆಯಲು ಕಾರಣ "ಝೀ " ಎಂಬ ಪಡು ಜಾಹಿಲ್ ನ ಲೇಖನವಾಗಿದೆ.ಸುನ್ನಿಗಳಿಗೆ ಖುನೂತ್ ನ ಬಗ್ಗೆ ಇಷ್ಟೆಲ್ಲಾ  ಕಲಿಯಲು ಕಾರಣಕರ್ತನಾದ  ಆ ತಿಳಿಗೇಡಿ ಗೆ ಸಾವಿರಾರು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.ಜತೆಗೆ ನೀನು ಇನ್ನೂ ಕೂಡಾ ಇಂತಹಾ ಗೊಡ್ಡು ಲೇಖನಗಳನ್ನು ಬರೆಯಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.ನೀನು ಬರೆಯುವುದರಿಂದಲೇ ನಿನ್ನ ಜಹಾಲತ್ ಜನರಿಗೆ ತಿಳಿಯುತ್ತದೆ.
ಖುನೂತ್ ಬಗ್ಗೆ ಇನ್ನೂ ಕೂಡಾ ಬರೆಯಲು ಬಾಕಿ ಇದೆ.ವಹ್ಹಾಬಿಗಳು ಇದಕ್ಕೆ ಉತ್ತರಿಸಿದ ನಂತರ ಬಾಕಿ ಭಾಗಗಳನ್ನು ಬರೆಯುವೆನು ಎಂಬ   ಆಶ್ವಾಸನೆಯೊಂದಿಗೆ ಇಲ್ಲಿಗೆ ಕೊನೆಗೊಳಿಸುತ್ತೇನೆ.

ಎಲ್ಲರ ದುಆ ನಿರೀಕ್ಷೆಯೊಂದಿಗೆ ....

ಮುಕ್ತಾಯ..

--------------------------------
♻♻♻♻♻♻♻♻

    *ಸರಿ ಸಾಟಿಯಿಲ್ಲದ ದ  ಅವಾ ವಿಂಗ್*

*THE* *HERITAGE* *,manglore*
         *Run* *by*
*Darul* *musthafa* *moral* *academy* , *nechabettu.*

Comments

Br.Taslim said…
366) Can pray behind someone who recites Qunoot in Fajr? ಸುಬಹಿ ನಮಾಝಿನಲ್ಲಿ ಕುನೂತು ನಿರ್ವಹಿಸುವವರ ಹಿಂದೆ ನಮಾಝ್ ಮಾಡಬಹುದೇ?
http://brtaslim.com/wp-content/uploads/2016/03/887acd74dace824a2ca2180a8815ddbc.mp3

424) Raising hands for witr qunoot? ವಿತ್ರಿನ ಕುನೂತಿಗೆ ಕೈ ಎತ್ತುವುದರ ಬಗ್ಗೆ?
http://brtaslim.com/wp-content/uploads/2016/10/2016-08-22-AUDIO-00000041.mp3

433) Qunoot in Witr and Dua? ವಿತ್ರ್’ನ ಕುನೂತ್ ಮತ್ತು ಅದರ ದುಆ?
http://brtaslim.com/wp-content/uploads/2016/10/2016-08-22-AUDIO-00000022.mp3

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...