Skip to main content

ಎಪ್ಪತ್ತು ಸಾವಿರ ತಹ್ಲೀಲ್

ತಹ್ಲೀಲ್ ನ ಮಹತ್ವ

      ಎಪ್ಪತ್ತು ಸಾವಿರ ತಹ್ಲೀಲ್

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ.............

ಮರಣ ಹೊಂದಿದವರಿಗಾಗಿ  70,000 ತಹ್ಲೀಲ್ ಹೇಳಿ ಅವರ ಮೇಲೆ ಹದಿಯಾ ಮಾಡಿ ಪ್ರಾರ್ಥನೆ ನಡೆಸುವ ವಾಡಿಕೆ ಸುನ್ನೀ ಮುಸಲ್ಮಾನರೆಡೆಯಲ್ಲಿ ನಾವು ಕಾಣುತ್ತಿದ್ದೇವೆ..ಇದು ಒಂದು ಉತ್ತಮ ಸತ್ಕರ್ಮವಾಗಿದೆ...ತಹ್ಲೀಲ್ ಹೇಳಿದವನ ಮತ್ತು ಯಾರ ಮೇಲೆ ತಹ್ಲೀಲ್ ಹದಿಯಾ ಮಾಡಲಾಗಿದೆಯೋ ಅವರ ಪಾಪಗಳನ್ನು ಆಲ್ಲಾಹನು ಕ್ಷಮಿಸುತ್ತಾನೆ.ಮಾತ್ರವಲ್ಲ ಅವರನ್ನು ನರಕದಿಂದ ವಿಮುಕ್ತಿಗೊಳಿಸುತ್ತಾನೆ ಎಂಬ ಹದೀಸಿನ ಆಧಾರದಲ್ಲಿ ಹೇಳಲಾಗುತ್ತಿದೆ.....
ವಿಶ್ವ ಪ್ರಸಿದ್ಧ ಆತ್ಮೀಯ ವಿದ್ವಾಂಸರಾಗಿದ್ದ ಅಶ್ಶೈಖ್ ಮುಹ್ಯಿದ್ದೀನ್ ಇಬ್ನು ಅರಬಿ ರಳಿಯಲ್ಲಾಹು ಅನ್ಹು ರವರು 70,000 ತಹ್ಲೀಲ್ ನಿಶ್ಚಿತ ಸಮಯದ ಒಳಗೆ ಯಾರ ಮೇಲೂ ಹದಿಯಾ ಮಾಡದೇ ಹೇಳಿ ಮುಗಿಸಿದರು.
ಅವರು ಹೇಳುತ್ತಾರೆ.ನಾನು ನನ್ನ ಕೆಲವು ಅನುಯಾಯಿಗಳೊಂದಿಗೆ ಒಂದು ಔತನಕೂಟದಲ್ಲಿ ಭಾಗವಹಿಸಿದೆ.ಹಲವಾರು ಕಶ್ಫ್ ಕರಾಮತ್ ಗಳಿಂದ ಪ್ರಸಿದ್ಧಿ ಪಡೆದ ಓರ್ವ ಯುವಕನೊಂದಿಗೆ ಆ ಔತನಕೂಟದಲ್ಲಿ ಜತೆಯಾದೆ.ಬಳಿಕ ಜತೆಯಾಗಿ ಕುಳಿತು ಆಹಾರ ಸೇವಿಸುತ್ತಿರುವ ಮಧ್ಯೆ ಆ ಯುವಕನು ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಂಡ ನಾನು ಅವನೊಂದಿಗೆ ವಿಚಾರಿಸಿದಾಗ  ಕರಾಮತ್ ಗಳ ಮೂಲಕ ಪ್ರಸಿದ್ಧಿ ಪಡೆದ ಆ ಯುವಕ ಹೇಳಿದ್ದು ನನ್ನ ತಾಯಿ ಮರಣ ಹೊಂದಿದ್ದಾರೆ.ನನ್ನ ತಾಯಿ ನರಕ ಶಿಕ್ಷೆಯನ್ನು ಅನುಭವಿಸುತ್ತಿರುವ ಸನ್ನಿವೇಶವನ್ನು ನಾನು ಕಾಣುತ್ತಿದ್ದೇನೆ..ಶೈಖ್ ಮುಹ್ಯಿದ್ದೀನ್ ಇಬ್ನು ಅರಬಿ ರಳಿಯಲ್ಲಾಹು ಅನ್ಹು ಹೇಳುತ್ತಾರೆ..ನಾನು ಮತ್ತೇನೂ ಯೋಚಿಸದೇ ತಾನು ಹೇಳಿದ 70,000 ತಹ್ಲೀಲಿನ ಪ್ರತಿಫಲವನ್ನು ತನ್ನ ಮನಸ್ಸಿನಲ್ಲಿಯೇ ಆ ಯುವಕನ ಮರಣಹೊಂದಿದ ತಾಯಿಯ ಮೇಲೆ ಹದಿಯಾ ಮಾಡಿ ಬಿಟ್ಟೆ....
ಕ್ಷಣ ಮಾತ್ರದಲ್ಲಿ ಆ ಯುವಕನ ಮೊಗದಲ್ಲಿ ಸಂತೋಷದ ಮುಗುಳ್ನಗುವನ್ನು ಕಂಡೆ....ಮತ್ತೆಯೂ ಕೇಳಿದೆ.ಈಗ ನೀನು ಬಹಳ ಮಂದಹಾಸಭರಿತನಾಗಿ ಕಾಣುತ್ತಿದ್ದೀಯಲ್ಲಾ...ಕಾರಣವೇನು?
ಯುವಕನು ಹೇಳಿದನು..ಈಗ ನನ್ನ ತಾಯಿ ಸಂತೋಷ ಹಾಗೂ ಸುಖಾಡಂಭರಗಳಲ್ಲಿ ಉಲ್ಲಸಿತರಾಗಿ ಸ್ವರ್ಗೀಯ ಜೀವನವನ್ನು ಅನುಭವಿಸುತ್ತಿರುವ ಆನಂದದಾಯಕವಾದ ದ್ರಶ್ಯವನ್ನು ಕಾಣುತ್ತಿದ್ದೇನೆ......

�����������

ಈ ಮೇಲೆ ಸೂಚಿಸಿದ ಹದೀಸ್ ಸ್ವಹೀಹಾದ ಪ್ರಬಲವಾದ ಹದೀಸೆಂಬ ಸತ್ಯವೂ ಕರಾಮತುಗಳ ಮೂಲಕ ಪ್ರಸಿದ್ಧಿ ಪಡೆದ ಯುವಕನ ಘಟನೆಯ ಮೂಲಕ ನಾನು ಅರಿತುಕೊಂಡೆ ಎಂದು ಶೈಖ್ ಮುಹ್ಯಿದ್ದೀನ್ ಇಬ್ನು ಅರಬಿ ಹೇಳುತ್ತಾರೆ.
( ಮಿರ್ಖಾತುಲ್ ಮಫಾತೀಹ್ 2/102 )

�������������

ಅಲ್ಲಾಹು ನಮ್ಮೆಲ್ಲರನ್ನು ನರಕ ಶಿಕ್ಷೆಯಿಂದ ಕಾಪಾಡಲಿ.ಸುಖ ಸುಖಾಡಂಭರಗಳಿಂದ ತುಂಬಿಸಲ್ಪಟ್ಟ ಸ್ವರ್ಗೋದ್ಯಾನವನ್ನು ನೀಡಲಿ...
ಆಮೀನ್.......

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...