*ಸುಬಹಿ* *ನಮಾಝಿನಲ್ಲಿ* *ಖುನೂತ್.*
*ಭಾಗ* *--15*
*ಮುನೀರ್* *ಸಖಾಫಿ,* *ಸಾಲೆತ್ತೂರು.*
*-----------------------------------*
ಸುಬಹಿ ನಮಾಝಿನಲ್ಲಿ ಖುನೂತ್ ಇದೆಯೆಂದು ಪವಿತ್ರ ಖುರ್ ಆನಿನ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮರುಗಳು ಹೇಳಿದ್ದನ್ನು,ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಸ್ವಹಾಬಿಗಳು ಖುನೂತ್ ಓದಿದ ಬಗ್ಗೆ ಇದಕ್ಕಿಂತ ಮುಂಚಿನ ಭಾಗಗಳಲ್ಲಿ ಹದೀಸುಗಳಿಂದ ಓದುಗರು ಓದಿದ್ದೀರಿ.
ಖುನೂತ್ ಸುನ್ನತ್ತಿದೆಯೆಂದು ಶಾಫಿಈ ಮದ್ಸ್ ಹಬಿನ ಎಲ್ಲಾ ವಿಧ್ವಾಂಸರು ಹೇಳಿದ್ದನ್ನು ಈಗಾಗಗಲೇ ವಿವರಿಸಿಯಾಗಿದೆ.ಖುನೂತ್ ಓದುವುದಕ್ಕೆ ವಿರುದ್ಧವಾದವೆಂದು ಪ್ರತ್ಯಕ್ಷದಲ್ಲಿ ತೋಚುತ್ತಿರುವ ಹದೀಸುಗಳಿಗೆ ಇಮಾಮರುಗಳು ಹೇಳಿದ ವ್ಯಾಖ್ಯಾನವನ್ನು ಗ್ರಂಥಗಳ ಉದ್ಧರಣೆ ಸಹಿತ ವಿವರಿಸಿದ್ದೇನೆ.
ಇದೆಲ್ಲವನ್ನೂ ಕಲಿತರೆ ಒಮ್ಮೆಯೂ ಕೂಡಾ ಆತನಿಗೆ ಖುನೂತ್ ನಿಷೇಧಿಸಲು ಸಾಧ್ಯವಿಲ್ಲ.ಖುನೂತ್ ನ ಬಗ್ಗೆ ಲೇಖನ ಆರಂಭಿಸಿದ್ದನಿಂದಲೇ ವಹ್ಹಾಬಿಗಳೊಂದಿಗೆ ಕೇಳುತ್ತಾ ಬಂದಿದ್ದೇನೆ.
" ಸುಬಹಿ ನಮಾಝಿನಲ್ಲಿ ಖುನೂತ್ ಓದುವುದು ಬಿದ್ ಅತ್ ಎಂದು, ಅದು ವ್ಯಭಿಚಾರಕ್ಕಿಂತಲೂ ಮಹಾಪಾಪವೆಂದೂ ನಿಮ್ಮ ಬಡಾ ಮೌಲವಿಗಳು ಹೇಳಿದ ಕ್ಲಿಪ್ ಗಳು ನಮ್ಮ ಕೈಯ್ಯಲ್ಲಿದೆ.ಇದನ್ನು ಪ್ರಮಾಣಗಳ ಆಧಾರದಲ್ಲಿ ನಿಮಗೆ ಸಾಬೀತುಪಡಿಸಲು ಸಾಧ್ಯವೇ?"
ಇದು ವರೆಗೂ ಆ ಧೈರ್ಯವನ್ನು ವಹ್ಹಾಬಿಗಳು ತೋರ್ಪಡಿಸಲಿಲ್ಲ.
ಮುಂದೆಯೂ ಅದು ಅವರಿಂದ ಸಾಧ್ಯವಿಲ್ಲ.
ಖುನೂತ್ ಬಗ್ಗೆ ನಾನು ಇಷ್ಟೆಲ್ಲಾ ಬರೆಯಲು ಕಾರಣ "ಝೀ " ಎಂಬ ಪಡು ಜಾಹಿಲ್ ನ ಲೇಖನವಾಗಿದೆ.ಸುನ್ನಿಗಳಿಗೆ ಖುನೂತ್ ನ ಬಗ್ಗೆ ಇಷ್ಟೆಲ್ಲಾ ಕಲಿಯಲು ಕಾರಣಕರ್ತನಾದ ಆ ತಿಳಿಗೇಡಿ ಗೆ ಸಾವಿರಾರು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.ಜತೆಗೆ ನೀನು ಇನ್ನೂ ಕೂಡಾ ಇಂತಹಾ ಗೊಡ್ಡು ಲೇಖನಗಳನ್ನು ಬರೆಯಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.ನೀನು ಬರೆಯುವುದರಿಂದಲೇ ನಿನ್ನ ಜಹಾಲತ್ ಜನರಿಗೆ ತಿಳಿಯುತ್ತದೆ.
ಖುನೂತ್ ಬಗ್ಗೆ ಇನ್ನೂ ಕೂಡಾ ಬರೆಯಲು ಬಾಕಿ ಇದೆ.ವಹ್ಹಾಬಿಗಳು ಇದಕ್ಕೆ ಉತ್ತರಿಸಿದ ನಂತರ ಬಾಕಿ ಭಾಗಗಳನ್ನು ಬರೆಯುವೆನು ಎಂಬ ಆಶ್ವಾಸನೆಯೊಂದಿಗೆ ಇಲ್ಲಿಗೆ ಕೊನೆಗೊಳಿಸುತ್ತೇನೆ.
ಎಲ್ಲರ ದುಆ ನಿರೀಕ್ಷೆಯೊಂದಿಗೆ ....
ಮುಕ್ತಾಯ..
--------------------------------
♻♻♻♻♻♻♻♻
*ಸರಿ ಸಾಟಿಯಿಲ್ಲದ ದ ಅವಾ ವಿಂಗ್*
*THE* *HERITAGE* *,manglore*
*Run* *by*
*Darul* *musthafa* *moral* *academy* , *nechabettu.*
Comments
http://brtaslim.com/wp-content/uploads/2016/03/887acd74dace824a2ca2180a8815ddbc.mp3
424) Raising hands for witr qunoot? ವಿತ್ರಿನ ಕುನೂತಿಗೆ ಕೈ ಎತ್ತುವುದರ ಬಗ್ಗೆ?
http://brtaslim.com/wp-content/uploads/2016/10/2016-08-22-AUDIO-00000041.mp3
433) Qunoot in Witr and Dua? ವಿತ್ರ್’ನ ಕುನೂತ್ ಮತ್ತು ಅದರ ದುಆ?
http://brtaslim.com/wp-content/uploads/2016/10/2016-08-22-AUDIO-00000022.mp3