ಪವಿತ್ರ ಭೂಮಿ ಸಲಾಲಃಕ್ಕೆ ಒಂದು ಯಾತ್ರೆ
KCF ಒಮಾನ್ ಸಲಾಲ ಯಾತ್ರೆ- 2019
🌹🌹🌹🌹
🌹🌹🌹🌹
ಭಾಗ-೧
✍✍✍
MHB Ullal.
ದುಬೈನಲ್ಲಿ ಇರುವಾಗ ಸಲಾಲ:ದ ಬಗ್ಗೆ, ಇಲ್ಲಿ ಇರುವ ಅಂಬಿಯಾ ಮುರ್ಸಲುಗಳ ಮಖ್ಬರಗಳ ಬಗ್ಗೆ ಕೇಳಿದ್ದೆ. KCF UAE ರಾಷ್ಟ್ರೀಯ ಸಮಿತಿಯವರು ಹಲವು ಬಾರಿ ಸಲಾಲ ಯಾತ್ರೆ ಆಯೋಜಿಸಿದ್ದರು. ಆದರೆ ಹೋಗಲು ಭಾಗ್ಯ ಸಿಗಲಿಲ್ಲ. ಆದರೆ ಮನಸ್ಸಿನಲ್ಲಿ ಸಲಾಲಕ್ಕೆ ಝಿಯಾರತ್ ತೆರಳಬೇಕೆಂಬ ಆಸೆಯು ಇತ್ತು.
ಒಮಾನ್ ಗೆ ಬರಲು ಮುಖ್ಯ ಕಾರಣ ಕೂಡಾ ಅದೇ ಆಗಿತ್ತು. ಈ ಪುಣ್ಯ ಭೂಮಿಯ ಬರಕತ್ ಪಡೆಯಲು. *ಅಲ್ ಹಂದುಲಿಲ್ಲಾ..* ಆ ಆಸೆಯು ಮುನ್ನೆ ಕೆ.ಸಿ.ಎಫ್ ಈಡೇರಿಸಿತು. ನನ್ನ ಜೀವನದಲ್ಲಿ ಅಲ್ಲಾಹನ ಪ್ರವಾದಿಗಳ ಮಕ್ಬರ ಝಿಯಾರತ್ ಮಾಡಲು ಸಾಧ್ಯವಾಯಿತು. ನನ್ನ ಜೀವನದಲ್ಲಿ ಹಲವು ಬಾರಿ ಹಲವು ಸ್ಥಳಗಳಿಗೆ ಝಿಯಾರತ್ ಯಾತ್ರೆ ಹೋಗಿದ್ದೇನೆ. ಆದರೆ ಈ ಯಾತ್ರೆಯು ನನ್ನ ಜೀವನದಲ್ಲಿ ಎಂದಿಗೂ ಮರೆಯದ ಅನುಭವ ನೀಡಿದೆ.
ಅಲ್ ಹಂದುಲಿಲ್ಲಾಹ್
🤲🤲🤲
ಅಲ್ ಹಂದುಲಿಲ್ಲಾಹ್
🤲🤲🤲
ನಾನು ಒಮಾನ್ ಗೆ ಬಂದು 3-4 ತಿಂಗಳಾಗಿತ್ತು ಅಷ್ಟೇ. ಯಾರ ಪರಿಚಯವೂ ಇರಲಿಲ್ಲ. ಆದರೆ KCF ಸೋಹಾರ್ ನ ನಾಯಕರು, ನಮ್ಮ ಊರಿನವರಾದ *ಅಶ್ರಫ್ ಕುತ್ತಾರ್* ರವರು ಜೊತೆ ಇದ್ದಾರೆ ಎಂದು ತಿಳಿದು ಈ ಯಾತ್ರೆಗೆ ಹೆಸರು ಕೊಟ್ಟೆ.
ದಿನಾಂಕ 05/06/19, ಈದ್ ದಿವಸ ಬೆಳಿಗ್ಗೆ 11:30 ಕ್ಕೆ ಅಶ್ರಫ್, ಮಝೀರ್ ಬಜ್ಪೆ ಮತ್ತು ಝಾಕೀರ್ ಜೋಕಟ್ಟೆಯವರ ಜೊತೆ ಫಲಜ್ ಎಂಬ ಸ್ಥಳದಿಂದ ಒಟ್ಟಿಗೆ ಕಾರಿನಲ್ಲಿ ಮಸ್ಕತ್ ಗೆ ಹೊರಟೆವು. ಮಸ್ಕತ್ ನ ರುವಿ ಎಂಬ ಸ್ಥಳದಿಂದ ಆಗಿತ್ತು ನಮ್ಮ *ಪವಿತ್ರ ಸಲಾಲ: ಯಾತ್ರೆ* ಹೊರಡಲಿದ್ದದ್ದು.
ಮಧ್ಯಾಹ್ನ 3 ಗಂಟೆ ಆಗುವಷ್ಟಕ್ಕೆ ನಾವು ರುವಿಗೆ ತಲುಪಿದೆವು. ಅಲ್ಲಿ ಲುಹರ್ ಮತ್ತು ಅಸರ್ ನಮಾಝ್ ಒಟ್ಟಿಗೆ ನಿರ್ವಹಿಸಿದೆವು.
ಮಧ್ಯಾಹ್ನ 3 ಗಂಟೆ ಆಗುವಷ್ಟಕ್ಕೆ ನಾವು ರುವಿಗೆ ತಲುಪಿದೆವು. ಅಲ್ಲಿ ಲುಹರ್ ಮತ್ತು ಅಸರ್ ನಮಾಝ್ ಒಟ್ಟಿಗೆ ನಿರ್ವಹಿಸಿದೆವು.
ಅಸರ್ ನಮಾಝ್ ನ ನಂತರ ಯಾತ್ರಾ ಅಮೀರ್ ಗಳಾದ ನನಗೆ ಪರಿಚಿತರಾದ, ಕರ್ನಾಟಕ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷರಾದ ಕಂಕನಾಡಿ ಉಸ್ತಾದರ ಮಗ *ಉಬೈದುಲ್ಲಾ ಸಖಾಫಿ* ಮತ್ತು ಇಹ್ಸಾನ್ ರಿಸೀವರ್ ಆದ *ಕಲಂದರ್ ಬಾವ* ಉಸ್ತಾದರುಗಳ ಹಾಗೂ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ *ಅಯ್ಯೂಬ್ ಕೋಡಿ* ರವರ ನೇತೃತ್ವದಲ್ಲಿ ನಮ್ಮ ಪುಣ್ಯ ಸಲಾಲ ಯಾತ್ರೆ ಹೊರಟಿತು.
ಅಲ್ಲಿಂದ ಗೊಬ್ರಾ ಹಾಗೂ ರುಸೈಲ್ ಸ್ಟೇಷನ್ ನಲ್ಲಿ ಜನರನ್ನು ಹತ್ತಿಸಿ ನಮ್ಮ ಯಾತ್ರೆ ಆರಂಭವಾಯಿತು.
ಯಾತ್ರೆಯ ಆರಂಭದಲ್ಲಿ ಕೆಲವು ಜನರ ಪರಿಚಯ ಮಾತ್ರ ಇತ್ತು. ಯಾತ್ರೆಯಲ್ಲಿ ತುಮಕೂರಿನ 3 ಜನ, ಕೇರಳದ 3 ಜನ ಹಾಗೂ MP, Rajasthan, UP ಯ 6 ಯುವಕರು ಕೂಡಾ ಇದ್ದರು. ಒಟ್ಟಾರೆ ಅರ್ಧ ಭಾರತವೇ ಇತ್ತು. ತುಂಬಾ ಸಂತೋಷವಾಯಿತು ಅವರನ್ನೆಲ್ಲ ಕಂಡು.
ಹಾಗೇ ನಮ್ಮ ಯಾತ್ರೆ ಮುಂದುವರಿದು 06/06/2019 ಗುರುವಾರ ಬೆಳಿಗ್ಗೆ ೭ ಗಂಟೆಗೆ ಪುಣ್ಯ ಭೂಮಿ ಸಲಾಲ ತಲುಪಿತು. ಅಲ್ಲಿ ಸಲಾಲ KCF ನ ನಾಯಕರಾದ *ಕಮಾಲ್* ರವರ ಮುಖಾಂತರ ರೂಮ್ ಬುಕ್ಕಿಂಗ್ ಮಾಡಿದ್ದರು. ಅಲ್ಲಿ ನಾವೆಲ್ಲ ಸ್ನಾನ ಮಾಡಿ, ಅಲ್ಲಿಯೇ ಬೆಳಿಗ್ಗಿನ ಉಪಹಾರ ಸವಿಸಿ 9 ಗಂಟೆಗೆ ಅಲ್ಲಿಂದ ನಮ್ಮ ಪ್ರಥಮ ಝಿಯಾರತ್ ನಡೆಸಲು ಹೊರಟೆವು. ಅಲ್ಲಾಹನ ಪ್ರವಾದಿಗಳಲ್ಲಿ ಒಬ್ಬರಾದ *ಸ್ವಾಲಿಹ್ ನೆಬಿ* ಅಲೈಹಿಸ್ಸಲಾಮ್ ರವರ ಮಖ್ಬರ ಇರುವ ಆಶಿಖ್ ಎಂಬಲ್ಲಿಗೆ.
ಹೋಗುವ ದಾರಿ ಮಧ್ಯೆ ಅಲ್ಲಿ ಮತ್ತೊಂದು ಮಖ್ಬರ ನಮಗೆ ಸಿಗುತ್ತದೆ. ಅಲ್ಲಾಹನ ಅಂಬಿಯಾಗಳಲ್ಲಿ ಪ್ರಮುಖರಾದ *ಸುಲೈಮಾನ್ ನೆಬಿ* ಅಲೈಹಿಸ್ಸಲಾಮರ ಆಸ್ಥಾನದಲ್ಲಿದ್ದ ಪ್ರಮುಖ ಗ್ರಂಥಕರ್ತರೂ ಅಲ್ಲಾಹನ ಇಷ್ಟದಾಸರಲ್ಲೋರ್ವರಾದ *ಆಸಫ್ ಇಬ್ನು ಬರ್ಖಿಯ್ಯಾ* ರವರ ಮಖ್ಬರ ಅರಬಿ ಕಡಲ ತಟದಲ್ಲಿ.
*ಆಸಫ್ ಇಬ್ನು ಬರ್ಖಿಯ್ಯಾ* ರವರ ಬಗ್ಗೆ ನಿಮಗೆಲ್ಲರಿಗೂ ತಿಳಿದಿರ ಬಹುದು.
ಒಮ್ಮೆ *ಸುಲೈಮಾನ್ ನೆಬಿ* ಯವರು ತಮ್ಮ ಅನುಚರರೊಂದಿಗೆ *ಬಿಲ್ಕೀಸ್ ರಾಣಿಯ* ಕೊಟ್ಟಾರ ತೆಗೆದುಕೊಂಡು ಬರಲು ಹೇಳಿದರು. ಆಗ ಅಲ್ಲಿ ಇದ್ದ *ಇಫ್ರೀತ್* ಎಂಬ ಜಿನ್ನ್ ಹೇಳುತ್ತದೆ *"ಈ ಸಭೆಯ ಮುಗಿಯುವುದರ ಒಳಗೆ ನಾನು ಕೊಂಡು ಬರುತ್ತೇನೆ."* ಆಗ *ಸುಲೈಮಾನ್ ನೆಬಿ* ಯವರು ಹೇಳಿದರು ಅದು ತುಂಬಾ ಲೇಟ್ ಆಯ್ತು ಅಂತ.
ಆಗ ಮತ್ತೊಂದು ಜಿನ್ನ್ ಹೇಳಿತು *ನೀವು ನಿಂತ ಸ್ಥಳದಿಂದ ಕೂರುವ ಮುಂಚೆ ನಾನು ತರುತ್ತೇನೆ ಅಂತ*. ಅದೂ ಅವರಿಗೆ ಇಷ್ಟ ಆಗಲಿಲ್ಲ. ಕೊನೆಗೆ ಅಲ್ಲಿ ಇದ್ದ. ಆ ಕಾಲದ ಪ್ರಮುಖ ಪಂಡಿತರೂ, ವಲಿಯ್ಯ್ ಕೂಡಾ ಆಗಿದ್ದ *ಆಸಫ್ ಇಬ್ನು ಬರ್ಖಿಯ್ಯಾ* ರವರು ಹೇಳಿದರ, *"ನೀವು ನಿಮ್ಮ ಕಣ್ಣಿನ ರೆಪ್ಪೆಗಳು ಮುಚ್ಚಿ ತೆರೆಯುವುದರ ಒಳಗೆ ನಾನು ಆ ಕೊಟ್ಟಾರವನ್ನು ತರುತ್ತೇನೆ"*.
ಸುಬ್ಹಾನಲ್ಲಾಹ್ ಅವರು ಹಾಗೇ ಮಾಡಿದರೂ ಕೂಡಾ...
ಸುಬ್ಹಾನಲ್ಲಾಹ್ ಅವರು ಹಾಗೇ ಮಾಡಿದರೂ ಕೂಡಾ...
ಇದಾಗಿದೆ ಅಲ್ಲಾಹನ ವಲಿಯ್ಯ್ ಗಳ ಕರಾಮತ್..
ಅವರ ಬರಕತ್ ನಿಂದ ಅಲ್ಲಾಹು ನಮ್ಮೆಲ್ಲರ ಈಮಾನ್ ಗಟ್ಟಿಯಾಗಿಸಲಿ. ಆಮೀನ್
🤲🤲🤲
🤲🤲🤲
ನಮ್ಮ ಯಾತ್ರೆ ಮುಂದುವರಿಯಿತು. ರಸ್ತೆ ಉದ್ದಕ್ಕೂ ಒಂದು ಕಡೆ ಪರ್ವತಗಳು ಮತ್ತೊಂದು ಕಡೆ ಅರಬೀ ಸಮುದ್ರ. ಸಮುದ್ರ ಕಾಣುವಾಗ ಸ್ವಲ್ಪ ನಿಲ್ಲಿಸಿ ನಾವು ಫೋಟೋ ತೆಗೆಯುವ ಅಂತ ನಮ್ಮಂತಹ ಯುವಕರು ಆಸೆ ಆಗುತ್ತಿತ್ತು. ಸ್ವಲ್ಪ ಕಿರಿಕಿರಿ ಕೂಡಾ ಮಾಡಿದೆವು. ಆದರೆ ನಮ್ಮ ಅಮೀರ್ ತುಂಬಾ ಜೋರಾಗಿದ್ದರು. 😘😁
ಕೊನೆಗೆ ಎಲ್ಲಾ ಕಿರಿಕಿರಿಯ ನಡುವೆ ನಾವು ಸಲಾಲದ *ಆಶಿಕ್* ಎಂಬಲ್ಲಿರುವ ಅಲ್ಲಾಹನ ಪ್ರವಾದಿಗಳಾದ ಪರಿಶುದ್ಧ ಖುರಾನ್ ನಲ್ಲಿ ಹೆಸರಿಸಲ್ಪಟ್ಟ *ಸಮೂದ್ ಗೋತ್ರಕ್ಕೆ* ನೇಮಿಸಲ್ಪಟ್ಟ *ಸ್ವಾಲಿಹ್ ನಬಿ(ಅ.ಸ) ರವರ* ಮಖ್ಬರ ತಲುಪಿದೆವು.
ಕೊನೆಗೆ ಎಲ್ಲಾ ಕಿರಿಕಿರಿಯ ನಡುವೆ ನಾವು ಸಲಾಲದ *ಆಶಿಕ್* ಎಂಬಲ್ಲಿರುವ ಅಲ್ಲಾಹನ ಪ್ರವಾದಿಗಳಾದ ಪರಿಶುದ್ಧ ಖುರಾನ್ ನಲ್ಲಿ ಹೆಸರಿಸಲ್ಪಟ್ಟ *ಸಮೂದ್ ಗೋತ್ರಕ್ಕೆ* ನೇಮಿಸಲ್ಪಟ್ಟ *ಸ್ವಾಲಿಹ್ ನಬಿ(ಅ.ಸ) ರವರ* ಮಖ್ಬರ ತಲುಪಿದೆವು.
ಸುತ್ತಲೂ ದೊಡ್ಡ ದೊಡ್ಡ ಪರ್ವತಗಳು ಮತ್ತೊಂದು ಕಡೆ ರಸ್ತೆಯ ಆ ಬದಿಗೆ ಅರಬೀ ಸಮುದ್ರ. ಇದರ ಮಧ್ಯೆ ಅಂದರೆ ಪರ್ವತಗಳ ನಡುವೆ ಅವರ ಮಖ್ಬರ ಇರುವುದು.
ಇಲ್ಲಿ ಸ್ವಲ್ಪ ರಸ್ತೆ ಹದಗೆಟ್ಟಿದೆ. ಮಖ್ವರ ಇರುವಲ್ಲಿಗೆ ಸ್ವಲ್ಪ ನಡೆಯಬೇಕು. ಕಳೆದ ವರ್ಷ ನೆರೆ ಬಂದು ಈ ತರಹ ಆಗಿದೆ ಅಂತ ಹೇಳಿದರು.
*ಮಖ್ಬರದ ಒಳಗೆ ಹೋಗುವಾಗ ಮನಸ್ಸಿನಲ್ಲಿ ಏನೋ ಒಂದು ಸಾಧಿಸಿದ ತೃಪ್ತಿ. ಅಲ್ಲಾಹನಿಗೆ ಎಷ್ಟು ಶುಕ್ರ್ ಹೇಳಿದರು ಸಾಲದು. ಅವನ ಪ್ರವಾದಿಗಳಾದ ಒಬ್ಬರನ್ನು ಝಿಯಾರತ್ ಮಾಡಲು ಸಿಕ್ಕಿತ್ತಲ್ಲ. ಅದು ಒಂದು ಭಾಗ್ಯ ತಾನೇ... ಅಲ್ ಹಂದುಲಿಲ್ಲಾಹ್*
🤲🤲🤲
🤲🤲🤲
*ಅಲ್ ಹಂದುಲಿಲ್ಲಾಹ್*
ಅಲ್ಲಾಹು ಮಹಾನರ ಬರಕತ್ ನಿಂದ ನಮ್ಮ ಈಮಾನ್ ಸಲಾಮತ್ ಮಾಡಲಿ. ಅವರೊಂದಿಗೆ ಅಲ್ಲಾಹನ ಹಬೀಬರಾದ *ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಮರ* ಜೊತೆ ನಮ್ಮನ್ನೂ, ನಮ್ಮ ಕುಟುಂಬದವರನ್ನೂ, ನಮ್ಮ ಸಂಘ ಕುಟುಂಬದವರನ್ನೂ ಒಟ್ಟಿಗೆ ಸೇರಿಸಲಿ.
ಆಮೀನ್ ಯಾ ರಬ್ಬಲ್ ಆಲಮೀನ್.
🤲🤲🤲
ಆಮೀನ್ ಯಾ ರಬ್ಬಲ್ ಆಲಮೀನ್.
🤲🤲🤲
ಅಲ್ಲಿ *ಸ್ವಾಲಿಹ್ ನೆಬಿ ಅಲೈಹಿಸ್ಸಲಾಮ್* ರವರ ಝಿಯಾರತ್ ನಡೆಸಿ ಅಲ್ಲಿಂದ *ಮ್ಯಾಗ್ನೆಟ್ ರಸ್ತೆ* ಕಡೆ ಪ್ರಯಾಣ ಮುಂದುವರಿಸಿದೆವು.
ಅಲ್ಲಾಹನು ಈ ಭೂಮಿಯಲ್ಲಿ ಅನೇಕ ವಿಚಿತ್ರಗಳನ್ನು ಸೃಷ್ಟಿಸಿದ್ದಾನೆ. ಅಂತ ವಿಚಿತ್ರಗಳಲ್ಲಿ ಈ *ಮಾಗ್ನೆಟ್ ರಸ್ತೆ* ಕೂಡಾ ಒಂದು. ತಗ್ಗು ರಸ್ತೆಯಿಂದ ಎತ್ತರದ ಕಡೆಗೆ ವಾಹನವು ನ್ಯೂಟ್ರಾಲ್ ನಲ್ಲಿ ಚಲಿಸುವುದು. ಅದು ಕೂಡಾ *೨೦-೩೦ ವೇಗದಲ್ಲಿ!!*
ಮ್ಯಾಗ್ನೆಟ್ ರಸ್ತೆಯ ವಿಚಿತ್ರ ಕಂಡು ಆಶ್ಚರ್ಯವಾಯಿತು.
ಅಲ್ಲಿಂದ ನಮ್ಮ ಯಾತ್ರೆ ಮುಂದುವರಿದು *ಮಿರ್ಬಾತ್* ನಲ್ಲಿ ಅಂತ್ಯ ವಿಶ್ರಮಿಸುತ್ತಿರುವ ನಾವು ದಿನಾಲೂ ಓದುವ ಹದ್ದಾದ್ ರಾತೀಬ್ ರಚಿಸಿದ *ಹದ್ದಾದ್(ರ)ರವರ ತಾತ ಮುಹಮ್ಮದ್ ಇಬ್ನು ಅಲೀ ಬಾಅಲವಿಯವರ (ರ.ಅ)* ರವರ ಮಕ್ಬರ ಝಿಯಾರತ್ ನಡೆಸಿದೆವು. ಆ ದರ್ಗಾ ನಮ್ಮ ಊರಿನಲ್ಲಿ ಇರುವ ದರ್ಗಾಗಳ ತರಹ ಇದೆ.
ಅಲ್ಲಿಂದ ನಮ್ಮ ಯಾತ್ರೆ ಮುಂದುವರಿದು *ಮಿರ್ಬಾತ್* ನಲ್ಲಿ ಅಂತ್ಯ ವಿಶ್ರಮಿಸುತ್ತಿರುವ ನಾವು ದಿನಾಲೂ ಓದುವ ಹದ್ದಾದ್ ರಾತೀಬ್ ರಚಿಸಿದ *ಹದ್ದಾದ್(ರ)ರವರ ತಾತ ಮುಹಮ್ಮದ್ ಇಬ್ನು ಅಲೀ ಬಾಅಲವಿಯವರ (ರ.ಅ)* ರವರ ಮಕ್ಬರ ಝಿಯಾರತ್ ನಡೆಸಿದೆವು. ಆ ದರ್ಗಾ ನಮ್ಮ ಊರಿನಲ್ಲಿ ಇರುವ ದರ್ಗಾಗಳ ತರಹ ಇದೆ.
ನಂತರ ಅಲ್ಲಿ ನಮಾಝ್ ನಿರ್ವಹಿಸಿ, ಅಲ್ಲೇ ಹತ್ತಿರದಲ್ಲಿ ಒಂದು ಕಡೆ ಕುಳಿತು ಮಧ್ಯಾಹ್ನದ ಭೋಜನ ಮುಗಿಸಿ ನೇರವಾಗಿ *ಆಶಿಖುರ್ರಸೂಲ್ ಆದ ಝುಹೈರ್ ರ.ಅ* ರವರ ಮಖ್ಬರದ ಕಡೆ ಪ್ರಯಾಣ ಬೆಳೆಸಿದೆವು.
*ಇನ್ಶಾ ಅಲ್ಲಾಹ್ ಮುಂದಿನ ಭಾಗದಲ್ಲಿ ಮುಂದುವರಿಯುವುದು...*























Comments